Wayanad Landslide: ಕೇವಲ 20 ಗಂಟೆಯಲ್ಲಿ 190 ಅಡಿ ಉದ್ದದ ಸೇತುವೆ ನಿರ್ಮಿಸಿದ 140 ಯೋಧರು; ಹೇಗಿತ್ತು ಗೊತ್ತಾ ಕಾರ್ಯಾಚರಣೆ?


  ಸೇನೆಯಿಂದ 190 ಅಡಿ ಉದ್ದದ ಸೇತುವೆ ನಿರ್ಮಾಣ

 ಭೂಕುಸಿತ ಪೀಡಿತ ವಯನಾಡು ಜಿಲ್ಲೆಯಲ್ಲಿ 40 ರಕ್ಷಣಾ ತಂಡಗಳು ಶುಕ್ರವಾರ ನಾಲ್ಕನೇ ದಿನ ಶೋಧ ಕಾರ್ಯಾಚರಣೆ ಆರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 40 ತಂಡಗಳು ಭೂಕುಸಿತ ಪೀಡಿತ ಪ್ರದೇಶಗಳ ಆರು ವಲಯಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಿವೆ. ಕೇರಳ: ಭಾರತೀಯ ಸೇನೆ (Indian Army), ಎನ್‌ಡಿಆರ್‌ಎಫ್ (NDRF) ಸೇರಿದಂತೆ ಸ್ಥಳೀಯ ರಕ್ಷಣಾ ತಂಡಗಳು ಸೇರಿ ಸಾವಿರಾರು ಸ್ವಯಂ ಸೇವಕರು ಕೇರಳದ (Kerala) ವಯನಾಡಿನಲ್ಲಿ (Wayanad) ರಕ್ಷಣ ಕಾರ್ಯಾಚರಣೆ ನಡೆಸುತ್ತಿವೆ. ಗುಡ್ಡಗಾಡು ಜಿಲ್ಲೆಯಲ್ಲಿ ಭಾರಿ ಭೂಕುಸಿತ (Landslide) ಸಂಭವಿಸಿದ ಮೂರು ದಿನಗಳ ನಂತರವೂ ಕುಸಿದ ಕಟ್ಟಡಗಳಲ್ಲಿ ಬದುಕುಳಿದವರಿಗಾಗಿ ಹುಡುಕಾಟ ಮುಂದುವರೆಸಿವೆ. ಮಂಗಳವಾರ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಇಲ್ಲಿಯವರೆಗೆ ಕನಿಷ್ಠ 291 ಜನರು ಸಾವನ್ನಪ್ಪಿದ್ದು, ಮತ್ತು 206 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.190 ಅಡಿ ಉದ್ದದ ಸೇತುವೆ ನಿರ್ಮಾಣಕೆಸರಿನಲ್ಲಿ ಕೈ-ಕಾಲು, ತಲೆಯಿಲ್ಲದ ದೇಹಗಳು ಪತ್ತೆ! ಭೂಕುಸಿತದಲ್ಲಿ ಮೃತರ ಸಂಖ್ಯೆ 267ಕ್ಕೆ ಏರಿಕೆ!ಮತ್ತೊಂದು ಗುಡ್ಡ ಕುಸಿತ! ಸಕಲೇಶಪುರ ಸಮೀಪ ಮಣ್ಣಿನಲ್ಲಿ ಸಿಲುಕಿದ ಎರಡು ಕಂಟೇನರ್, ಒಂದು ಟ್ಯಾಂಕರ್

ಶಿರೂರು, ವಯನಾಡ್ ಭೂಕುಸಿತ, 14 ವರ್ಷದ ಹಿಂದೇ ಎಚ್ಚರಿಕೆ ಕೊಟ್ಟಿದ್ದ ಮಾಧವ್ ಗಾಡ್ಗಿಲ್ ವರದಿ

ಕೇರಳ ಸರ್ಕಾರಕ್ಕೆ ಪ್ರಕೃತಿ ವಿಕೋಪ ಸಂಭವದ ಬಗ್ಗೆ 7 ದಿನ ಮೊದಲೇ ಎಚ್ಚರಿಸಲಾಗಿತ್ತು! ಅಮಿತ್​ ಶಾ

ಹಾಳಾದ ರಸ್ತೆಗಳು ಮತ್ತು ಸೇತುವೆಗಳ ಕಾರಣದಿಂದಾಗಿ ಕುಸಿಯುತ್ತಿರುವ ಭೂಮಿ, ಮತ್ತು ದೊಡ್ಡ ಸಲಕರಣೆಗಳ ಕೊರತೆ ಸೇರಿದಂತೆ ಹಲವಾರು ಸವಾಲುಗಳಿಂದ ರಕ್ಷಣಾ ಪ್ರಯತ್ನಗಳಿಗೆ ಅಡ್ಡಿಯಾಗಿದೆ. ಮನೆಗಳು ಮತ್ತು ಇತರ ಕಟ್ಟಡಗಳ ಮೇಲೆ ಬಿದ್ದ ಮಣ್ಣು ಮತ್ತು ಬೃಹತ್ ಮರಗಳನ್ನು ತೆರವುಗೊಳಿಸಲು ರಕ್ಷಣಾ ತಂಡಗಳಿಗೆ ಕಷ್ಟಕರವಾಗಿದೆ. ಈ ನಡುವೆ ಭಾರತೀಯ ಸೇನೆಯು 119 ಅಡಿ ಉದ್ದದ ತಾತ್ಕಾಲಿಕ ಸೇತುವೆಯ ನಿರ್ಮಾಣವನ್ನು ದಾಖಲೆ ಸಮಯದಲ್ಲಿ ಪೂರ್ಣಗೊಳಿಸಿದೆ.6 ವಲಯಗಳಲ್ಲಿ 40 ತಂಡಗಳಿಂದ ಕಾರ್ಯಾಚರಣೆ

ಚೂರಲ್ಮಲ ಹಾಗೂ ಮುಂಡಕ್ಕೈ ಗ್ರಾಮಕ್ಕೆ ಸುಲಭವಾಗಿ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಇರುವಂಜಿಪ್ಪುಳ ನದಿಗೆ ಅಡ್ಡಲಾಗಿ ಈ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಮಂಗಳವಾರ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಈ ಎರಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿ ಹೋಗಿತ್ತು. ಭೂಕುಸಿತ ಪೀಡಿತ ವಯನಾಡು ಜಿಲ್ಲೆಯಲ್ಲಿ 40 ರಕ್ಷಣಾ ತಂಡಗಳು ಶುಕ್ರವಾರ ನಾಲ್ಕನೇ ದಿನ ಶೋಧ ಕಾರ್ಯಾಚರಣೆ ಆರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 40 ತಂಡಗಳು ಭೂಕುಸಿತ ಪೀಡಿತ ಪ್ರದೇಶಗಳ ಆರು ವಲಯಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಿವೆ. ಅಟ್ಟಮಲ ಮತ್ತು ಆರನ್ಮಲ, ಮುಂಡಕ್ಕೈ, ಪುಂಚಿರಿಮಟ್ಟಂ, ವೆಳ್ಳರಿಮಲ ಗ್ರಾಮ, ಜಿವಿಎಚ್‌ಎಸ್‌ಎಸ್ ವೆಳ್ಳರಿಮಲ, ಮತ್ತು ನದಿ ದಂಡೆ ಈ ಆರೂ ವಲಯಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.ಇದನ್ನೂ ಓದಿ: ನಾವು ಇದನ್ನೂ ಮೀರಿ ಬದುಕುತ್ತೇವೆ, ಕಾರ್ಯಕರ್ತರಿಗೆ ಸೆಲ್ಯೂಟ್! ವಯನಾಡಿನ ಬಗ್ಗೆ ಮೋಹನ್​ಲಾಲ್ ಭಾವುಕ ಪೋಸ್ಟ್ಸೇತುವೆಯಿಂದ ರಕ್ಷಣಾ ಕಾರ್ಯ ಚುರುಕು190 ಅಡಿ ಉದ್ದದ ಬೈಲಿ ಸೇತುವೆಯ ನಿರ್ಮಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದರೊಂದಿಗೆ ಭಾರತೀಯ ಸೇನೆಯು ಒಂದು ಪ್ರಮುಖ ಸಾಧನೆಯನ್ನು ಸಾಧಿಸಿದೆ. ಇದು ಮುಂಡಕ್ಕೈ ಮತ್ತು ಚೂರಲ್ಮಾಲಾ ಪ್ರದೇಶಗಳನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. ಸೇತುವೆ ನಿರ್ಮಾಣ ಕಾಮಗಾರಿ ಬುಧವಾರ ರಾತ್ರಿ 9.30ಕ್ಕೆ ಆರಂಭವಾಗಿದ್ದು, ಗುರುವಾರ ಸಂಜೆ 5.30ಕ್ಕೆ ಪೂರ್ಣಗೊಂಡಿದೆ. ಕಮಾಂಡರ್ ವಾಹನವನ್ನು ಅನುಸರಿಸಿ, ಸೇನಾ ವೈದ್ಯಕೀಯ ಘಟಕ ಮತ್ತು ಮಿಲಿಟರಿ ಟ್ರಕ್ ಸೇತುವೆಯ ಮೂಲಕ ಹಾದುಹೋಗಲಿವೆ.ಆಗಸ್ಟ್ 5ರವರೆಗೂ ಮಳೆ ಸಾಧ್ಯತೆಭಾರತೀಯ ಹವಾಮಾನ ಇಲಾಖೆಯು ವಯನಾಡು ಮತ್ತು ಕೇರಳದ ಇತರ ಹಲವು ಜಿಲ್ಲೆಗಳಲ್ಲಿ ಆಗಸ್ಟ್ 5 ರವರೆಗೆ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಮಳೆ ಮುನ್ಸೂಚನೆಯ ಹಿನ್ನೆಲೆಯಲ್ಲಿ ತ್ರಿಶೂರ್, ಮಲಪ್ಪುರಂ, ಕೋಯಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳು ಮತ್ತು ಟ್ಯೂಷನ್ ಸೆಂಟರ್‌ಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಶುಕ್ರವಾರ ರಜೆ ನೀಡಲಾಗಿದೆ. ರಕ್ಷಣಾ ತಂಡಗಳು, ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರ ನಡುವೆ ಸಂವಹನಕ್ಕಾಗಿ ಟೆಲಿಕಾಂ ಆಪರೇಟರ್‌ಗಳು ಭೂಕುಸಿತ ಪೀಡಿತ ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಪರ್ಕವನ್ನು ಮರುಸ್ಥಾಪಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ಗುರುವಾರ ತಿಳಿಸಿದೆ. Reliance Jio, BSNL, Airtel, ಮತ್ತು Vodafone Idea ನಿರ್ವಾಹಕರು ವಯನಾಡಿನಲ್ಲಿ ನಿರಂತರ ಸಂಪರ್ಕಕ ಒದಗಿಸಲು ಟೆಲಿಕಾಂ ಮೂಲಸೌಕರ್ಯವನ್ನು ಪುನಃಸ್ಥಾಪಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

Post a Comment

Previous Post Next Post