Breakfast Recipe: ಅಮ್ಮಂದಿರೇ, ಮಕ್ಕಳಿಗೆ ತಿಂಡಿ ಏನ್‌ ಹಾಕೋದು ಅಂತಾ ತಲೆ ಓಡ್ತಿಲ್ವಾ? ಡೋಂಟ್​​ ವರಿ ಈ ರೆಸಿಪಿ ಟ್ರೈ ಮಾಡಿ


 ಸಂಗ್ರಹ ಚಿತ್ರ

ಅಮ್ಮಂದಿರಿಗೆ ಬೆಳಗ್ಗೆಗೆ ಏನಪ್ಪಾ ತಿಂಡಿ ಮಾಡೋದು ಅನ್ನೋದೆ ದಿನದ ಮೊದಲು ಸವಾಲು. ಅದಕ್ಕಾಗಿ ಇಲ್ಲಿದೆ ನೋಡಿ ಸಿಂಪಲ್ ರೆಸಿಪಿ ಅಮ್ಮಂದಿರಿಗೆ ಬೆಳಗ್ಗೆಗೆ ಏನಪ್ಪಾ ತಿಂಡಿ (Food) ಮಾಡೋದು ಅನ್ನೋದೆ ದಿನದ ಮೊದಲು ಸವಾಲು. ಹಿಂದಿನ ದಿನವೇ ಏನ್‌ ಮಾಡೋದು ಅಂತಾ ಪ್ಲ್ಯಾನ್ ಆಗಿದ್ರೆ ಸ್ವಲ್ಪ ನಿರಾಳ, ಇಲ್ಲದಿದ್ದರೆ ಏನ್‌ ಮಾಡೋದು ಅನ್ನೋದ್ರಲ್ಲಿಯೇ ಸುಮಾರು ಹೊತ್ತು ಕಳೆದಿರುತ್ತದೆ. ಹೀಗೆ ಬೆಳಗ್ಗೆ ಮನೆಯವರಿಗೆಲ್ಲಾ ಏನ್ ತಿಂಡಿ ಮಾಡೋದು ಅನ್ನೋದು ಒಂದು ಸಮಸ್ಯೆಯಾದ್ರೆ, ಇದಕ್ಕೂ ಮೇಲಾದ ಮತ್ತೊಂದು ಚಾಲೆಂಜ್‌ ಅಮ್ಮಂದಿರಿಗಿದೆ.ಮಕ್ಕಳ ಲಂಚ್‌ಬಾಕ್ಸ್‌… ಅಮ್ಮಂದಿರಿಗೆ ಟೆನ್ಷನ್ಹೌದು, ಬೆಳಗ್ಗಿನ ಬ್ರೇಕ್‌ಫಾಸ್ಟ್‌ ಜೊತೆ ಜೊತೆಯೇ ಶಾಲೆಗೆ ಹೋಗೋ ಮಕ್ಕಳಿದ್ರೆ ಅವರು ಬಾಕ್ಸಿಗೇನೂ ಕಳಿಸೋದು ಅನ್ನೋದು ಮತ್ತೊಂದು ಬಿಗ್‌ ಟಾಸ್ಕ್.‌ದಿನವಿಡೀ ಉಲ್ಲಾಸದಿಂದ ಇರಬೇಕಂದ್ರೆ ಈ ಆರೋಗ್ಯಕರ ಚಹಾ ಕುಡಿಯಿರಿ!Weight Loss: ಒಂದು ವಾರಕ್ಕೆ 2 ಕೆಜಿ ತೂಕ ಇಳಿಕೆ, 7 ದಿನಗಳ ಬ್ರೇಕ್​ಫಾಸ್ಟ್ ಪ್ಲಾನ್ತುಂಬಾ ಎತ್ತರಕ್ಕೆ ಬೆಳೆಯಬೇಕೆನ್ನುವ ಕನಸಿದೆಯಾ? ಹಾಗಿದ್ದರೆ ಈ ಪಾಯಿಂಟ್ ಯಾವಾಗಲೂ ನೆನಪಿಡಿHealth Benefits: ಪ್ರತಿದಿನ ಬೆಳಗ್ಗೆ ಬೆಚ್ಚಗಿನ ಉಪ್ಪು ನೀರು ಕುಡಿಯೋದ್ರಿಂದ ಸಿಗುತ್ತೆ ನೂರಾರು ಪ್ರಯೋಜನಮಕ್ಕಳಿಗೆ ಏನೇನೋ ಹಾಕಿಕೊಡುವುದಕ್ಕಿಂತ ಅವರಿಷ್ಟದ ಮತ್ತು ಆರೋಗ್ಯಕರವಾದ ಊಟವನ್ನು ಪ್ಯಾಕ್‌ ಮಾಡಿ ಕೊಡುವುದು ಅವರಿಗೂ ಇಷ್ಟವಾಗುತ್ತದೆ ಮತ್ತು ಹೊಟ್ಟೆಯೂ ತುಂಬುತ್ತದೆ.ಇದನ್ನೂ ಓದಿ: ನಿಮ್ಮ ಮೇಲೆ ನಿಮಗೇ ಕೋಪನಾ? ಅತಿಯಾದ ಸ್ವಯಂ ದೂಷಣೆಯಿಂದ ಈ ರೀತಿ ಹೊರಬನ್ನಿಮಕ್ಕಳಿಗೆ ಬೆಳಗ್ಗೆ ಮಾಡಿದ ತಿಂಡಿಯನ್ನೇ ಮಧ್ಯಾಹ್ನ ತಿನ್ನೋದು ಬೋರ್‌ ಆಗಬಹುದು. ಹೀಗಾಗಿ ಮಕ್ಕಳಿಗೆ ಲಂಚ್‌ ಬಾಕ್ಸ್‌ ಅನ್ನು ಉತ್ತಮ ರೀತಿಯಲ್ಲಿ ಕೊಡುವುದರಿಂದ ಮನೆಗೆ ಬರುವವರೆಗೂ ಅವರು ಎನರ್ಜಿಟಿಕ್‌ ಆಗಿ ಇರಬಹುದು.ಎಲ್ಲಾ ತಾಯಂದಿರು ಮಕ್ಕಳ ಸ್ನ್ಯಾಕ್ಸ್‌ ಬಾಕ್ಸ್‌ ಅನ್ನು ಹೇಗೋ ಮ್ಯಾನೇಜ್‌ ಮಾಡುತ್ತಾರೆ, ಆದರೆ ಲಂಚ್‌ ಬಾಕ್ಸ್‌ ಕಳಿಸೋ ವಿಚಾರ ಅವರಿಗೆ ಕಷ್ಟ.ನೀವು ಹೀಗೆ ಮಕ್ಕಳಿಗೆ ಊಟ ಕಳುಹಿಸಿ ಕೊಡಲು ತುಂಬಾ ಯೋಚಿಸುವ ತಾಯಂದಿರಾಗಿದ್ದರೆ, ನಿಮಗೆ ಈಸಿಯಾಗುವ ಒಂದು ರೆಸಿಪಿಯನ್ನು ಕಲಿಸಿ ಕೊಡುತ್ತಿದ್ದೇವೆ ನೋಡಿ. ಇದು ಸಖತ್‌ ಈಸಿ ಮತ್ತು ಟೇಸ್ಟಿ, ನಿಮ್ಮ ಮಕ್ಕಳ ಲಂಚ್‌ ಬಾಕ್ಸ್‌ಗೆ ಹೇಳ್‌ ಮಾಡಿಸಿದ್ದು, ರುಚಿಯಾಗಿಯೂ ಇರುತ್ತದೆ.ಮಕ್ಕಳ ಲಂಚ್‌ ಬಾಕ್ಸ್‌ ರೆಸಿಪಿ: ಆಲೂಗಡ್ಡೆ ಮತ್ತು ಕಡಲೆ ರೋಲ್ಈ ರೋಲ್‌ ಮಾಡಲು ಬೇಕಾಗುವ ಪದಾರ್ಥಗಳು

ಆಲೂಗಡ್ಡೆ

ಆಲಿವ್ ಎಣ್ಣೆ

ಈರುಳ್ಳಿ

ಜೀರಿಗೆ

ಅರಿಶಿನ

ಗರಂ ಮಸಾಲೆ

ಕಡಲೆ

ಹನಿ

ಬಟಾಣಿ

ಕೊತ್ತಂಬರಿ ಎಲೆಗಳು

ಟೋರ್ಟಿಲ್ಲಾಗಳು

ಆಯಿಲ್ ಸ್ಪ್ರೇ

ಕಪ್ಪು ಎಳ್ಳು ಬೀಜಗಳು


ತಯಾರಿ ವಿಧಾನ

- ಮೊದಲಿಗೆ ಓವೆನ್‌ ಅನ್ನು 180 ° C ಗೆ ಪೂರ್ವಭಾವಿಯಾಗಿ ಕಾಯಿಸಿ. ಬೇಕಿಂಗ್ ಪೇಪರನ್ನು ಬೇಕಿಂಗ್ ಟ್ರೇ ಮೇಲೆ ಇರಿಸಿ. ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿ ಚೆನ್ನಾಗಿ ಮ್ಯಾಶ್ ಮಾಡಿ. ಅವುಗಳನ್ನು ಸ್ವಲ್ಪ ಸಮಯದವರೆಗೆ ಪಕ್ಕಕ್ಕೆ ಇರಿಸಿ.- ಈಗ ಬಾಣಲೆಗೆ, ಆಲಿವ್ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ- ಇದಕ್ಕೆ ಒಂದು ಕತ್ತರಿಸಿದ ಈರುಳ್ಳಿ ಸೇರಿಸಿ ಅದನು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಆಮಲೆ ಇದಕ್ಕೆ 1 ಟೀಚಮಚ ಜೀರಿಗೆಯನ್ನು ½ ಟೀಚಮಚ ಅರಿಶಿನ ಪುಡಿ ಮತ್ತು 2 ಚಮಚ ಗರಂ ಮಸಾಲಾ ಹಾಕಿ, ಈರುಳ್ಳಿಯನ್ನು ಮಸಾಲಾದೊಂದಿಗೆ ಒಂದು ನಿಮಿಷ ಚೆನ್ನಾಗಿ ಹುರಿಯಿರಿ.ಈಗ ಹಿಸುಕಿದ ಆಲೂಗಡ್ಡೆಯನ್ನು ಈರುಳ್ಳಿ ಮಿಶ್ರಣಕ್ಕೆ ವರ್ಗಾಯಿಸಿ. 3 ಟೇಬಲ್ಸ್ಪೂನ್ ನೀರು ಸೇರಿಸಿ. ಬೇಯಿಸಿದ ಕಡಲೆ, 1 ಚಮಚ ಜೇನುತುಪ್ಪ, 1 ಕಪ್ ಬಟಾಣಿ ಮತ್ತು ಕತ್ತರಿಸಿದ ತಾಜಾ ಕೊತ್ತಂಬರಿ ಸೇರಿಸಿ. ಇವನ್ನೆಲ್ಲಾ 2 ನಿಮಿಷಗಳ ಕಾಲ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈಗ ಟೋರ್ಟಿಲ್ಲಾ ನಡುವೆ ಆಲೂಗಡ್ಡೆ-ಕಡಲೆ ಮಿಶ್ರಣವನ್ನು ಹಾಕಿ, ಸ್ಟಫ್ಡ್ ಟೋರ್ಟಿಲ್ಲಾವನ್ನು ಆಗಾಲೇ ಬಿಸಿ ಮಾಡಿಕೊಂಡಿರುವ ಟ್ರೇ ಮೇಲೆ ಇರಿಸಿ.ಅದಕ್ಕೆ ಎಣ್ಣೆಯನ್ನು ಮೇಲಕ್ಕೆ ಸಿಂಪಡಿಸಿ ಜೊತೆಗೆ ಎಳ್ಳು ಬೀಜಗಳನ್ನು ಸಹ ಹಾಕಿ. ಎಳ್ಳನ್ನು ಮೇಲೆ ಸಿಂಪಡಿಸುವುದರಿಂದ ರೋಲ್‌ ನೋಡಲು ಚೆನ್ನಾಗಿ ಕಾಣುತ್ತದೆ. ಈಗ ಚೆನ್ನಾಗಿ 10 ನಿಮಿಷ ಬೇಯಿಸಿ. ಇಷ್ಟಾದರೆ ಮಕ್ಕಳಿಗಿಷ್ಟವಾಗುವ ರೋಲ್‌ ರೆಡಿ. ಇದರ ಜೊತೆ ಹಣ್ಣು ಇಲ್ಲಾ ಡ್ರೈಪ್ರೂಟ್ಸ್‌ ಹಾಕಿ ಕಳುಹಿಸಿದರೆ ದಿನದ ಲಂಚ್‌ ಬಾಕ್ಸ್‌ ಕೆಲಸ ಯಶಸ್ವಿಯಾಗುತ್ತದೆ.

Post a Comment

Previous Post Next Post