Bomb Threat: ಖಾಸಗಿ ಶಾಲೆಗೆ ರಾತ್ರೋರಾತ್ರಿ ಬಾಂಬ್‌ ಬೆದರಿಕೆ ಇಮೇಲ್! ಪೊಲೀಸರು ಬಂದ ಬಳಿಕ ಸಿಕ್ಕಿದ್ದೇನು?


 ಸಾಂದರ್ಭಿಕ ಚಿತ್ರ

School Bomb Threat: ಗ್ರೇಟರ್ ಕೈಲಾಶ್ ಪ್ರದೇಶದ ಸಮ್ಮರ್ ಫೀಲ್ಡ್ಸ್ ಸ್ಕೂಲ್ ಅನ್ನು ಸ್ಫೋಟಿಸುವ ಬೆದರಿಕೆಯ ಇಮೇಲ್ ಬಂದಿದ್ದು, ನಿನ್ನೆ ಶಾಲೆಯಲ್ಲಿ ಬಾಂಬ್ ಇಡಲಾಗಿದೆ ಎಂದು ಇಮೇಲ್ ನಲ್ಲಿ ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ನವದೆಹಲಿ: ಇತ್ತೀಚಿನ ದಿನಗಳಲ್ಲಿ ಹುಸಿ ಬಾಂಬ್‌ ಬೆದರಿಕೆ ಕರೆಗಳು ಹೆಚ್ಚುತ್ತಿದ್ದು, ಇದೀಗ ಮತ್ತೊಮ್ಮೆ ರಾಷ್ಟ್ರ ರಾಜಧಾನಿ ದೆಹಲಿಯ (Delhi School) ಶಾಲೆಯೊಂದಕ್ಕೆ ಬಾಂಬ್ ಸ್ಫೋಟಿಸುವ (Bomb Threat Mail) ಬೆದರಿಕೆ ಬಂದಿದೆ.ರಾಷ್ಟ್ರ ರಾಜಧಾನಿ ನವ ದೆಹಲಿಯ ಗ್ರೇಟರ್ ಕೈಲಾಶ್ ಪ್ರದೇಶದ ಸಮ್ಮರ್ ಫೀಲ್ಡ್ಸ್ ಸ್ಕೂಲ್ ಅನ್ನು ಸ್ಫೋಟಿಸುವ ಬೆದರಿಕೆಯ ಇಮೇಲ್ ಬಂದಿದ್ದು, ನಿನ್ನೆ ಶಾಲೆಯಲ್ಲಿ ಬಾಂಬ್ ಇಡಲಾಗಿದೆ ಎಂದು ಇಮೇಲ್ ನಲ್ಲಿ ಬರೆಯಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಪರಿಶೀಲನೆ ಮಾಡಿದ್ದು, ಆದರೆ ತನಿಖೆಯಲ್ಲಿ ಈವರೆಗೆ ಏನೂ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.7 ಕೋಟಿ ಮೌಲ್ಯದ ಜಮೀನು 4 ಲಕ್ಷ ರೂಗೆ ಡೀಲ್: ಇದು ಲಾಟರಿಯಲ್ಲ, ಖರೀದಿದಾರರಿಗೆ ಸಿಕ್ಕ ನ್ಯಾಯUPSC ಆಕಾಂಕ್ಷಿಗಳ ಸಿಟ್ಟು ಸುಮ್ಮನೆಯಲ್ಲ: 3 ವಿದ್ಯಾರ್ಥಿಗಳ ಸಾವಷ್ಟೇ ಅಲ್ಲ ಆ ಒಬ್ಬ ಬಾಲಕಿಯೂ ಕಾರಣ!Delhi Coaching Centre: ಭರವಸೆಯ ವಿದ್ಯಾರ್ಥಿಗಳು ದುರಂತ ಅಂತ್ಯ! ಇದು IAS ಕನಸು ಕಂಡವರ ಕಣ್ಣೀರ ಕಥೆವಿದ್ಯಾರ್ಥಿಗಳು ನೀರಿನಲ್ಲಿ ಸಿಲುಕಿದ್ದು ಹೇಗೆ? ಮಕ್ಕಳ ಜೀವಕ್ಕೆ ಮುಳುವಾಯ್ತಾ ಬಯೋಮೆಟ್ರಿಕ್?ಇದನ್ನೂ ಓದಿ: Central Govt Projects: 5 ರಾಜ್ಯಗಳು, 50 ಸಾವಿರ ಕೋಟಿಯ ಯೋಜನೆ! 55 ಕೋಟಿ ಜನರಿಗೆ ಲಾಭ! ಏನಿದು ಮೋದಿ ಸರ್ಕಾರದ ಯೋಜನೆ?ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಮ್ಮರ್ ಫೀಲ್ಡ್ಸ್ ಶಾಲೆಯ ಪ್ರಾಂಶುಪಾಲರಾದ ಶಾಲಿನಿ ಅಗರ್ವಾಲ್, ‘ನಮಗೆ ತಡರಾತ್ರಿ ಇಮೇಲ್ ಬಂದಿತು, ಅದನ್ನು ಇಂದು ಬೆಳಿಗ್ಗೆ ಪರಿಶೀಲಿಸಲಾಗಿದೆ. ಎಸ್‌ಒಪಿ ಪ್ರಕಾರ, ಇಮೇಲ್ ಸ್ವೀಕರಿಸಿದ 10 ನಿಮಿಷಗಳಲ್ಲಿ ನಾವು ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿದ್ದೇವೆ. ನಾವು ಪೊಲೀಸರನ್ನು ಸಂಪರ್ಕಿಸಿದ್ದೇವೆ. ಈ ಬಗ್ಗೆ ತಕ್ಷಣ ಜಿಲ್ಲಾಡಳಿತಕ್ಕೆ ತಿಳಿಸಲಾಗಿದೆ. ಮಾಹಿತಿ ನೀಡಿದ ತಕ್ಷಣ ಬಂದು ನಮಗೆ ಸಾಕಷ್ಟು ಸಹಾಯ ಮಾಡಿದ ಪೊಲೀಸರಿಗೆ ನಾವು ಕೃತಜ್ಞರಾಗಿರುತ್ತೇವೆ’ ಎಂದು ಹೇಳಿದ್ದಾರೆ.ಅಲ್ಲದೇ, ‘ಇಲ್ಲಿ ವಿದ್ಯಾರ್ಥಿಗಳು ಅಷ್ಟೇನೂ ಇಲ್ಲ, ಕೆಲವು ಪೋಷಕರು ಬಂದು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ ಎಂದು ನಾವು ಕಾಯುತ್ತಿದ್ದೇವೆ ಎಂದು ಹೇಳಿರುವ ಶಾಲೆಯ ಪ್ರಾಂಶುಪಾಲರಾದ ಶಾಲಿನಿ ಅಗರ್ವಾಲ್, ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಇಲ್ಲಿಗೆ ಆಗಮಿಸಿದ್ದು, ಅವರು ಆವರಣದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಪೋಷಕರಲ್ಲಿ ಯಾವ ಗಾಬರಿಯೂ ಪಡಬೇಕಾಗಿಲ್ಲ’ ಎಂದು ಹೇಳಿದ್ದಾರೆ.ತಡರಾತ್ರಿ ಕಳುಹಿಸಲಾದ ಇಮೇಲ್‌ನಲ್ಲಿ ಶಾಲೆಯ ಆವರಣದಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಲಾಗಿದೆ. ಬಾಂಬ್ ಪತ್ತೆ ತಂಡದಿಂದ ಸಂಪೂರ್ಣ ತಪಾಸಣೆ ನಡೆಸಲಾಗಿದ್ದು, ಯಾವುದೇ ಅನುಮಾನಾಸ್ಪದವಾಗಿ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತನಿಖೆ ನಡೆಯುತ್ತಿದೆ. ಇದನ್ನೂ ಓದಿ:   Prediction 2025: 2025ರಲ್ಲಿ ಜಗತ್ತಿನಲ್ಲಿ ಏನು ಕೆಟ್ಟದಾಗಲಿದೆ?! ಜನರ ನಿದ್ದೆ ಕೆಡಿಸುತ್ತಿವೆ ಇವರ ಭಯಾನಕ ಭವಿಷ್ಯವಾಣಿ!ಈ ಹಿಂದೆಯೂ ಬೆದರಿಕೆ ಹಾಕಲಾಗಿತ್ತುಇದಕ್ಕೂ ಮುನ್ನ ಏಪ್ರಿಲ್ 30 ರಂದು ದೆಹಲಿ ಮತ್ತು ನೋಯ್ಡಾದ ಹಲವು ಶಾಲೆಗಳಲ್ಲಿ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿತ್ತು. ಆದರೆ, ತನಿಖೆ ನಡೆಸಿದ ಪೊಲೀಸರಿಗೆ ಏನೂ ಸಿಕ್ಕಿರಲಿಲ್ಲ.

Post a Comment

Previous Post Next Post