ಭೂಕುಸಿತದಲ್ಲಿ ಬಚಾವ್ ಆದ ವೃದ್ಧೆ ಸುಜಾತ
ಮೊಮ್ಮಗನ ಕಿರುಬೆರಳು ಕಾಣಿಸಿತು, ಕೂಡಲೇ ಅವನನ್ನು ಹೊರ ಎಳೆದುಕೊಂಡೆ. ಅಷ್ಟರಲ್ಲಾಗಲೇ ಎರಡಂತಸ್ತಿನ ಮನೆ ಕುಸಿದು ಬಿತ್ತು. ಬಚಾವ್ ಆಗಲು ನಾನು-ಮೊಮ್ಮಗ ದೂರಕ್ಕೆ ಓಡಿದೆವು’. ವಯನಾಡು: ಭಯಾನಕ ಭೂಕುಸಿತದ ಬಾಯಿಯಿಂದ ಕೆಲವರು ಕೂದಲೆಳೆ ಅಂತರದಲ್ಲಿ ಪವಾಡವೆಂಬಂತೆ ಬಚಾವ್ ಆಗಿದ್ದಾರೆ. ಅಂತಹವರಲ್ಲಿ ಮುಂಡಕೈ ನಿವಾಸಿ ವೃದ್ಧೆ ಸುಜಾತ ಹಾಗೂ ಅವರ ಮೊಮ್ಮಗನೂ ಸೇರಿದ್ದಾರೆ. ಕುಟುಂಬದಲ್ಲಿರುವ ಎಲ್ಲರನ್ನೂ ಮಣ್ಣುಪಾಲಾಗಿದ್ದು, ಅಜ್ಜಿ-ಮೊಮ್ಮಗ ಬದುಕುಳಿದಿರುವುದು ನಿಜಕ್ಕೂ ಅಶ್ವರ್ಯಕರ. ಭೂಕುಸಿತ ಸಂಭವಿಸಿದಾಗ ಕುಸಿದು ಬಿದ್ದ ಮನೆಯಿಂದ ಹೊರ ಬಿದ್ದ ಅಜ್ಜಿ-ಮೊಮ್ಮಗ ಕಾಡಾನೆಗಳ ಹಿಂಡಿನ ಮಧ್ಯೆ ಅವಿತು ಕುಳಿತು ಇಡೀ ರಾತ್ರಿ ಕಳೆದಿದ್ದಾರೆ. ಆ ಬಗ್ಗೆ ಮೆಪ್ಪಾಡಿ ಮೂಲದ ವೃದ್ಧೆ ಸುಜಾತ ಅವರು ಮಲೆಯಾಳಂನ ಏಷ್ಯಾನೆಟ್ ಜೊತೆ ಮಾತನಾಡಿದ್ದಾರೆ. ಕೇವಲ 20 ಗಂಟೆಯಲ್ಲಿ 190 ಅಡಿ ಉದ್ದದ ಸೇತುವೆ ನಿರ್ಮಿಸಿದ 140 ಯೋಧರು; ಹೇಗಿತ್ತು ಗೊತ್ತಾ ಕಾರ್ಯಾಚರಣೆ?ಕೆಸರಿನಲ್ಲಿ ಕೈ-ಕಾಲು, ತಲೆಯಿಲ್ಲದ ದೇಹಗಳು ಪತ್ತೆ! ಭೂಕುಸಿತದಲ್ಲಿ ಮೃತರ ಸಂಖ್ಯೆ 267ಕ್ಕೆ ಏರಿಕೆ!ಮತ್ತೊಂದು ಗುಡ್ಡ ಕುಸಿತ! ಸಕಲೇಶಪುರ ಸಮೀಪ ಮಣ್ಣಿನಲ್ಲಿ ಸಿಲುಕಿದ ಎರಡು ಕಂಟೇನರ್, ಒಂದು ಟ್ಯಾಂಕರ್ಶಿರೂರು, ವಯನಾಡ್ ಭೂಕುಸಿತ, 14 ವರ್ಷದ ಹಿಂದೇ ಎಚ್ಚರಿಕೆ ಕೊಟ್ಟಿದ್ದ ಮಾಧವ್ ಗಾಡ್ಗಿಲ್ ವರದಿಇಡೀ ಘಟನೆಯಲ್ಲಿ ಬಗ್ಗೆ ವಿವರಿಸಿರುವ ವೃದ್ಧೆ ಸುಜಾತ, ‘ಅಂದು ಮುಂಡಕೈಯಲ್ಲಿನ ಮನೆಯಲ್ಲಿ ಗಾಢ ನಿದ್ದೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಭಯಾನಕ ಶಬ್ಧ ಕೇಳಿ ಎಚ್ಚರವಾಯಿತು. ಸಮುದ್ರದಂತೆ ಸುತ್ತಲೂ ನೀರು ಕಾಣಿಸಿತು. ದೊಡ್ಡ ಮರಗಳು ಮತ್ತು ಬಂಡೆಗಳು ಮನೆಯ ಮೇಲೆ ಬಿದ್ದು ಗೋಡೆಗಳು ನೆಲಸಮವಾದವು. ಏನಾಗುತ್ತಿದೆ ಎಂದು ಅರ್ಥವಾಗಲಿಲ್ಲ. ಆಗ ಮೊಮ್ಮಗನ ಕಿರುಚಾಟ ಕೇಳಿಸಿತು. ಅವನು ಹೇಗೋ ಮನೆಯ ಸ್ಲ್ಯಾಬ್ ಮೂಲಕ ಆಚೆ ಬಂದಿದ್ದನು. ಅವನ ಕಿರುಬೆರಳು ಕಾಣಿಸಿತು, ಕೂಡಲೇ ಅವನನ್ನು ಹೊರ ಎಳೆದುಕೊಂಡೆ. ಅಷ್ಟರಲ್ಲಾಗಲೇ ಎರಡಂತಸ್ತಿನ ಮನೆ ಕುಸಿದು ಬಿತ್ತು. ಬಚಾವ್ ಆಗಲು ನಾನು-ಮೊಮ್ಮಗ ದೂರಕ್ಕೆ ಓಡಿದೆವು’.ಕಾಡಾನೆಗಳ ಕಾಲಡಿಯಲ್ಲೇ ರಾತ್ರಿ ಕಳೆದರು!ಕುಸಿದು ಬಿದ್ದ ಮನೆಯಿಂದ ಪಾರಾದ ಸುಜಾತಾ ಮತ್ತು ಅವರ ಮೊಮ್ಮಗ ಓಡುತ್ತಾ ಕಾಡಾನೆಗಳ ಹಿಂಡಿಗೆ ನುಗ್ಗಿದ್ದಾರೆ. ‘ಓಡುತ್ತಿರುವಾಗ ನಾವು ಕಾಡಾನೆಗಳ ಹಿಂದಿನ ಮುಂದೆ ಬಂದು ನಿಂತೆವು. ಮೂರು ಆನೆಗಳು ಇದ್ದವು. ಅವು ಕೂಡ ಪ್ರಕೃತಿ ವಿಕೋಪದಿಂದ ಗಾಬರಿಗೊಂಡಂತೆ ಕಾಣುತ್ತಿದ್ದವು. ಆನೆಯ ಕಣ್ಣುಗಳಿಂದ ನೀರು ಬರುತ್ತಿತ್ತು. ಅವು ನಮಗೆ ಏನನ್ನೂ ಮಾಡಲಿಲ್ಲ. ನಾವು ಬೆಳಗಿನವರೆಗೆ ಕಾಡಾನೆಗಳ ಕಾಲುಗಳ ಕೆಳಗೆ ಇದ್ದೆವು. ಬೆಳಿಗ್ಗೆ ಯಾರೋ ಬಂದು ನನ್ನನ್ನು ರಕ್ಷಿಸಿದರು" ಎಂದು ಸುಜಾತಾ ಹೇಳಿದರು. ಮೊಮ್ಮಗನಿಗೆ ಈಜು ಗೊತ್ತಿದ್ದರಿಂದ ನಾನು ಹೇಗೋ ಪಾರಾದೆ. ಆದರೆ ಅಕ್ಕಪಕ್ಕದಲ್ಲಿಯೇ ವಾಸಿಸುವ ಏಳು ಮಕ್ಕಳಿರುವ ತನ್ನ ಕುಟುಂಬದಲ್ಲಿ ಯಾರೂ ಉಳಿದಿಲ್ಲ ಎಂದು ಸುಜಾತಾ ಕಣ್ಣೀರು ಹಾಕುತ್ತಿದ್ದಾರೆ. ಮನೆ ಇಲ್ಲ, ಯಾರೂ ಇಲ್ಲ, ಎಲ್ಲರೂ ಮಣ್ಣಾಗಿ ಹೋಗಿದ್ದಾರೆ ಮುಂದೆನೂ ತೋಚುತ್ತಿಲ್ಲ ಎಂದು ಸುಜಾತಾ ಅಳುವುದನ್ನು ನೋಡಿದ್ರೆ ಎಂತವರಿಗೆ ಕರುಳು ಹಿಂಡಿದಂತೆ ಆಗುತ್ತದೆ.

Post a Comment