Rahul Gandhi: 'ಹಿಂದೂಗಳು ತಮ್ಮ ಧರ್ಮದ ಬಗ್ಗೆ ಹೆಮ್ಮೆ ಪಡುತ್ತಾರೆ'; ರಾಹುಲ್ ಗಾಂಧಿ ಕ್ಷಮೆಯಾಚನೆಗೆ ಅಮಿತ್ ಶಾ ಆಗ್ರಹ


 ರಾಹುಲ್ ಗಾಂಧಿ ರಾಹುಲ್ ಗಾಂಧಿಯವರ ಈ ಮಾತಿಗೆ ಅಡ್ಡಿಪಡಿಸಿದ ಪ್ರಧಾನಿ ನರೇಂದ್ರ ಮೋದಿ, “ರಾಹುಲ್ ಗಾಂಧಿ ಮಾತು ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ದೃಷ್ಟಿಯಲ್ಲಿ ಚಿತ್ರಣ ನೀಡುತ್ತದೆ. ಇದು ಗಂಭೀರ ವಿಷಯವಾಗಿದೆ” ಎಂದು ವಿರೋಧ ವ್ಯಕ್ತಪಡಿಸಿದರು.ದೆಹಲಿ: ತಮ್ಮನ್ನು ತಾವು ಹಿಂದೂಗಳು ಎಂದು ಕರೆದುಕೊಳ್ಳುವವರು “ಹಿಂಸೆ, ದ್ವೇಷ ಮತ್ತು ಸುಳ್ಳಿನ ಬಗ್ಗೆ ಮಾತ್ರ ಮಾತನಾಡುತ್ತಾರೆ” ಎಂದು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಪ್ರತಿಪಾದಿಸಿದ್ದು ಭಾರೀ ಕೋಲಾಹಲವನ್ನೇ ಉಂಟುಮಾಡಿದೆ.ರಾಹುಲ್ ಗಾಂಧಿಯವರ ಈ ಮಾತಿಗೆ ಅಡ್ಡಿಪಡಿಸಿದ ಪ್ರಧಾನಿ ನರೇಂದ್ರ ಮೋದಿ, “ರಾಹುಲ್ ಗಾಂಧಿ ಮಾತು ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ದೃಷ್ಟಿಯಲ್ಲಿ ಚಿತ್ರಣ ನೀಡುತ್ತದೆ. ಇದು ಗಂಭೀರ ವಿಷಯವಾಗಿದೆ” ಎಂದು ವಿರೋಧ ವ್ಯಕ್ತಪಡಿಸಿದರು.“ಕೋಟಿಗಟ್ಟಲೆ ಜನರು ಹಿಂದೂಗಳು ಎಂದು ಹೆಮ್ಮೆಪಡುತ್ತಾರೆ”ನಂತರ ಪ್ರತಿಪಕ್ಷಗಳು ಮತ್ತು ಆಡಳಿತಾರೂಢ ಎನ್‌ಡಿಎ ಸಂಸದರ ನಡುವಿನ ಮಾತಿನ ಚಕಮಕಿ ನಡೆದು, ಕೇಂದ್ರ ಸಚಿವ ಅಮಿತ್ ಶಾ, ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. “ಕೋಟಿಗಟ್ಟಲೆ ಜನರು ಹಿಂದೂಗಳು ಎಂದು ಹೆಮ್ಮೆಪಡುತ್ತಾರೆ. ಅವರೆಲ್ಲರೂ ಹಿಂಸಾತ್ಮಕರು ಎಂದು ರಾಹುಲ್ ಗಾಂಧಿ ಭಾವಿಸುತ್ತಾರೆಯೇ? ತಮ್ಮ ಹೇಳಿಕೆಗೆ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಿದರು.ಸಂಬಂಧಿತ ಸುದ್ದಿAmit Shah: ಹೊಸ ಕ್ರಿಮಿನಲ್ ಕಾನೂನಿನಲ್ಲಿ ಶಿಕ್ಷೆಯ ಬದಲಿಗೆ ನ್ಯಾಯಕ್ಕೆ ಆದ್ಯತೆ ನೀಡಲಾಗಿದೆ: ಅಮಿತ್ ಶಾರಾಹುಲ್ ಗಾಂಧಿ ಭುಜದ ಮೇಲೆ ಸಿದ್ದರಾಮಯ್ಯ ಕೈ! 'ಸಿಎಂ ಬದಲಾವಣೆ' ಕೂಗಿಗೆ ಟಾಂಗ್ ಕೊಡ್ತಾ ಈ ಫೋಟೋ?PM Modi: ಇಂದು ಸಿಎಂ, ಡಿಸಿಎಂ ಮೋದಿ ಭೇಟಿ; ಗೃಹ ಸಚಿವ ಅಮಿತ್ ಶಾ ಮುಂದೆ ಸಿದ್ದರಾಮಯ್ಯ 9 ಬೇಡಿಕೆ!ಟರ್ಮಿನಲ್ 1 ರಲ್ಲಿ ಸೇವೆಗಳು ಸ್ಥಗಿತ, 28 ವಿಮಾನಗಳು ರದ್ದು, ರಸ್ತೆಗಳೆಲ್ಲಾ ನೀರಿನಿಂದ ಆವೃತ!ಜಾಹೀರಾತು“ಇದು ಇಡೀ ಹಿಂದೂ ಸಮುದಾಯದ ಮೇಲಿನ ದಾಳಿ”: ಪ್ರಧಾನಿ ಮೋದಿರಾಹುಲ್ ಗಾಂಧಿ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಇದು ಇಡೀ ಹಿಂದೂ ಸಮುದಾಯದ ಮೇಲಿನ ದಾಳಿ ಎಂದು ವಾಗ್ದಾಳಿ ನಡೆಸಿದರು. ಹಿಂದೂ ಧರ್ಮವು ಭಯ, ದ್ವೇಷ ಮತ್ತು ಸುಳ್ಳುಗಳನ್ನು ಹರಡುವುದಿಲ್ಲ ಎಂದು ವ್ಯಾಖ್ಯಾನಿಸಿ ರಾಹುಲ್ ಗಾಂಧಿ ಮಾತಿಗೆ ತಿರುಗೇಟು ನೀಡಿದರು.ರಾಹುಲ್ ಗಾಂಧಿಯಿಂದ ಆರೋಪಗಳ ಸುರಿಮಳೆಬಿಜೆಪಿಯು ಸಂವಿಧಾನ ಮತ್ತು ಭಾರತದ ಮೂಲಭೂತ ಕಲ್ಪನೆಯ ಮೇಲೆ ವ್ಯವಸ್ಥಿತ ದಾಳಿಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಆಡಳಿತ ಪಕ್ಷವು ಪ್ರಸ್ತಾಪಿಸಿದ ವಿಚಾರಗಳನ್ನು ಲಕ್ಷಾಂತರ ಜನರು ವಿರೋಧಿಸಿದ್ದಾರೆ. ‘ಪ್ರಧಾನಿ ಮೋದಿಯವರ ಆದೇಶದ ಮೇರೆಗೆ ನನ್ನ ಮೇಲೆ ದಾಳಿ ನಡೆದಿದೆ. 20ಕ್ಕೂ ಹೆಚ್ಚು ಪ್ರಕರಣಗಳು ನನ್ನ ವಿರುದ್ಧ ದಾಖಲಾಗಿವೆ. ನನ್ನ ಮನೆಯನ್ನು ಕಿತ್ತುಕೊಳ್ಳಲಾಯಿತು, ಇ.ಡಿ 55 ಗಂಟೆಗಳ ವಿಚಾರಣೆ ನಡೆಸಿತು ಎಂದು ರಾಹುಲ್ ಗಾಂಧಿ ಆರೋಪ ವ್ಯಕ್ತಪಡಿಸಿದರು. ಈ ಹೇಳಿಕೆಯ ವಿರುದ್ಧ ರಾಹುಲ್ ಗಾಂಧಿ ಬಳಿ ಕ್ಷಮೆಯಾಚನೆಗೆ ಒತ್ತಾಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಈ ದೇಶದ ಕೋಟಿಗಟ್ಟಲೆ ಭಾರತೀಯರು ತಮ್ಮನ್ನು ತಾವು ಹಿಂದೂ ಎಂದು ಹೆಮ್ಮೆಯಿಂದ ಕರೆದುಕೊಳ್ಳುತ್ತಾರೆ ಎಂಬುದು ರಾಹುಲ್ ಗಾಂಧಿ ಅವರಿಗೆ ತಿಳಿದಿಲ್ಲ. ಪ್ರತಿಯೊಬ್ಬರೂ ಹಿಂಸೆಯ ಬಗ್ಗೆ ಮಾತನಾಡುತ್ತಾರೆ ಎಂದು ಅವರು ಹೇಳಲು ಪ್ರಯತ್ನಿಸುತ್ತಿದ್ದಾರೆಯೇ? ನೀವು ಯಾವುದೇ ಧರ್ಮದೊಂದಿಗೆ ಹಿಂಸೆಯನ್ನು ಸಂಯೋಜಿಸಲು ಸಾಧ್ಯವಿಲ್ಲ. ಅವರು ಕ್ಷಮೆ ಕೇಳಬೇಕೆಂದು ನಾನು ಒತ್ತಾಯಿಸುತ್ತೇನೆ" ಎಂದು ಒತ್ತಾಯಿಸಿದರು.

Post a Comment

Previous Post Next Post