ಸಾಂದರ್ಭಿಕ ಚಿತ್ರ
ದೇಶಾದ್ಯಂತ 3 ಹೊಸ ಕ್ರಿಮಿನಲ್ ಕಾನೂನುಗಳು ಜಾರಿಯಾದ ಬೆನ್ನಲ್ಲೇ ಹೊಸ ಕಾನೂನಿನ ಪ್ರಕಾರ ದೆಹಲಿಯಲ್ಲಿ ಮೊದಲ ಎಫ್‌ಐಆರ್ ದೆಹಲಿಯಲ್ಲಿ ದಾಖಲಾಗಿದೆ. ಏನದು ಪ್ರಕರಣ ಗೊತ್ತಾ? ಈ ಸುದ್ದಿ ಓದಿ.ನವದೆಹಲಿ: ಭಾರತೀಯ ಕಾನೂನು ಪದ್ದತಿಯಲ್ಲಿ ಇಂದಿನಿಂದ ಹೊಸ ಬದಲಾವಣೆ ಬಂದಿದೆ. ದೇಶಾದ್ಯಂತ ಮೂರು ಹೊಸ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ (Bharatiya Nyaya Sanhita (BNS), ಭಾರತೀಯ ನಾಗರಿಕ ರಕ್ಷಣಾ ಸಂಹಿತೆ (Bharatiya Nagarik Suraksha Sanhita (BNSS) ಮತ್ತು ಭಾರತೀಯ ಸಾಕ್ಷ್ಯ ಕಾಯಿದೆ (Bharatiya Sakshya Adhiniyam (BSA) ಜುಲೈ 1ರಿಂದ ಜಾರಿಗೆ ಬಂದಿದ್ದು, ಹೊಸ ಕಾನೂನಿನ ಪ್ರಕಾರ ದೆಹಲಿಯಲ್ಲಿ ಮೊದಲ ಎಫ್‌ಐಆರ್ ದೆಹಲಿಯಲ್ಲಿ ದಾಖಲಾಗಿದೆ.ಹೊಸ ಕಾನೂನು ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಸೆಂಟ್ರಲ್ ದೆಹಲಿಯ ಕಮಲಾ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಸೋಮವಾರ (ಜುಲೈ 1, 2024) ಮೊದಲ ಎಫ್‌ಐಆರ್ ದಾಖಲಾಗಿದೆ. ತಡರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರ ತಂಡವು ಹೊಸದಿಲ್ಲಿ ರೈಲು ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ರಸ್ತೆ ಮಧ್ಯದಲ್ಲಿ ಬೀದಿ ಬದಿ ವ್ಯಾಪಾರವನ್ನು ಮಾಡುತ್ತಿರುವುದನ್ನು ಕಂಡಿದ್ದು, ಇಲ್ಲಿ ನೀರು ಮತ್ತು ಗುಟ್ಖಾ ಮಾರಾಟ ಮಾಡುತ್ತಿದ್ದ. ಇದರಿಂದ ಜನರು ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ಆ ವ್ಯಕ್ತಿಯ ವಿರುದ್ಧ ಬಿಎನ್‌ಎಸ್ ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸಂಬಂಧಿತ ಸುದ್ದಿNew Criminal Laws: IPC ಸೆಕ್ಷನ್‌ಗೆ ಗುಡ್‌ಬೈ! ಇಂದಿನಿಂದ ದೇಶಾದ್ಯಂತ 3 ಹೊಸ ಕ್ರಿಮಿನಲ್ ಕಾನೂನು ಜಾರಿ!Actor Darshan Case: ದರ್ಶನ್ ವಿರುದ್ಧ ಗಂಭೀರ ಪ್ರಕರಣ, ಆರೋಪ ಸಾಬೀತಾದ್ರೆ ಇಷ್ಟು ವರ್ಷ ಜೈಲುಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ; ಸಿಎಂ ನಿವಾಸದಲ್ಲೇ ಕೇಜ್ರಿವಾಲ್ ಆಪ್ತ ಅರೆಸ್ಟ್!ದೂರು ದಾಖಲಿಸಿದ ಸ್ವಾತಿ ಮಲಿವಾಲ್, ಕೇಜ್ರಿವಾಲ್ ಆಪ್ತ ಕಾರ್ಯದರ್ಶಿಗೆ ಎದುರಾಯ್ತು ಸಂಕಷ್ಟ!ಇದನ್ನೂ ಓದಿ: New Criminal Laws: IPC ಸೆಕ್ಷನ್‌ಗೆ ಗುಡ್‌ಬೈ! ಇಂದಿನಿಂದ ದೇಶಾದ್ಯಂತ 3 ಹೊಸ ಕ್ರಿಮಿನಲ್ ಕಾನೂನು ಜಾರಿ!ಮಾಹಿತಿ ಪ್ರಕಾರ, ರಸ್ತೆಯನ್ನು ತೆರವುಗೊಳಿಸಿ ಜನರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಪೊಲೀಸರು ಬೀದಿಬದಿ ವ್ಯಾಪಾರಿಯನ್ನು ಅಲ್ಲಿಂದ ತೆರಳುವಂತೆ ಹಲವು ಬಾರಿ ಮನವಿ ಮಾಡಿದರು. ಆದರೆ, ಪೊಲೀಸರು ಹೇಳಿದ ಮಾತನ್ನು ನಿರ್ಲಕ್ಷಿಸಿ ಪುನಃ ಅಲ್ಲೇ ವ್ಯಾಪಾರ ಮಾಡಲು ಮುಂದುವರಿದಿದ್ದರಿಂದ ಪೊಲೀಸರು ಆ ವ್ಯಕ್ತಿಯ ಹೆಸರು ಮತ್ತು ವಿಳಾಸವನ್ನು ಪಡೆದುಕೊಂಡು ಹೊಸ ಕಾನೂನು BNS ನ ಸೆಕ್ಷನ್ 285 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದರು. ಅಂದಹಾಗೆ ದೇಶದಲ್ಲಿ ಜಾರಿಯಾದ ಹೊಸ ಕಾನೂನಿನ ಅಡಿಯಲ್ಲಿ ದಾಖಲಾದ ಮೊದಲ ಎಫ್‌ಐಆರ್ ಇದಾಗಿದೆ.ಹಳೆಯ ಕಾನೂನುಗಳು ಬದಲಾಗಿದ್ದು ಹೇಗೆ?ಅಂದಹಾಗೆ, ಭಾರತೀಯ ನ್ಯಾಯಾಂಗ ಸಂಹಿತೆ, ಭಾರತೀಯ ನಾಗರಿಕ ರಕ್ಷಣಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಗಳು ಜುಲೈ 1 ರಿಂದ ದೇಶಾದ್ಯಂತ ಜಾರಿಗೆ ಬಂದಿವೆ. ಇವುಗಳನ್ನು ಮೂರು ಹೊಸ ಕ್ರಿಮಿನಲ್ ಕಾನೂನುಗಳು ಎಂದು ಕರೆಯಲಾಗುತ್ತದೆ. ಈ ಕಾನೂನುಗಳು ಭಾರತೀಯ ದಂಡ ಸಂಹಿತೆ (IPC), ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (CrPC) ಮತ್ತು ಬ್ರಿಟಿಷರ ಕಾಲದ ಭಾರತೀಯ ಸಾಕ್ಷಿ ಕಾಯಿದೆಯನ್ನು ಬದಲಿಸಿವೆ. ಭಾರತೀಯ ದಂಡ ಸಂಹಿತೆಯು 163 ವರ್ಷಗಳಷ್ಟು ಹಳೆಯದಾದ ಕಾನೂನಾಗಿದ್ದು, ಅದನ್ನು ಈಗ BNS ಎಂದು ಬದಲಾಯಿಸಲಾಗಿದೆ. ವಂಚನೆಯಿಂದ ಹಿಡಿದು ಸಂಘಟಿತ ಕೃತ್ಯಗಳವರೆಗಿನ ಅಪರಾಧಗಳಿಗೆ BNS ನಲ್ಲಿ ಕಠಿಣ ಶಿಕ್ಷೆಗೆ ಅವಕಾಶವಿದೆ.ಜಾಹೀರಾತುಇದನ್ನೂ ಓದಿ: LPG Price Slashed: ಜುಲೈ ಮೊದಲ ದಿನವೇ ದೇಶದ ಜನತೆಗೆ ಗುಡ್‌ನ್ಯೂಸ್! ಇಂದಿನಿಂದ LPG ಸಿಲಿಂಡರ್ ಬೆಲೆ ಇಳಿಕೆ!ಭಾರತೀಯ ನ್ಯಾಯಾಂಗ ಸಂಹಿತೆಯ ವಿಶೇಷತೆ ಏನು?ಭಾರತೀಯ ನ್ಯಾಯಾಂಗ ಸಂಹಿತೆ ಅಂದರೆ ಬಿಎನ್‌ಎಸ್‌ನಲ್ಲಿ 358 ಸೆಕ್ಷನ್‌ಗಳಿವೆ, ಆದರೆ ಐಪಿಸಿಯಲ್ಲಿ 511 ಸೆಕ್ಷನ್‌ಗಳಿದ್ದವು. ಹೊಸ ಕಾನೂನಿನಲ್ಲಿ 21 ಹೊಸ ರೀತಿಯ ಅಪರಾಧಗಳನ್ನು ಸೇರಿಸಲಾಗಿದೆ. 41 ಅಪರಾಧಗಳಿಗೆ ಜೈಲು ಶಿಕ್ಷೆಯ ಅವಧಿಯನ್ನು ಹೆಚ್ಚಿಸಲಾಗಿದೆ. 82 ಅಪರಾಧಗಳಲ್ಲಿ ದಂಡದ ಮೊತ್ತವನ್ನೂ ಹೆಚ್ಚಿಸಲಾಗಿದೆ. BNS ನಲ್ಲಿ ಇಂತಹ 25 ಅಪರಾಧಗಳಿವೆ, ಇವುಗಳಿಗೆ ಕನಿಷ್ಠ ಶಿಕ್ಷೆಯನ್ನು ಒದಗಿಸಲಾಗಿದೆ. ಹೊಸ ಕಾನೂನಿನಲ್ಲಿ ಇಂತಹ 6 ಅಪರಾಧಗಳಿದ್ದು, ಸಅಲ್ಲದೆ, ಅಪರಾಧದ 19 ವಿಭಾಗಗಳನ್ನು ತೆಗೆದುಹಾಕಲಾಗಿದೆ.ಆದರೆ, ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಜುಲೈ 1 ರ ಮೊದಲು ಪ್ರಕರಣಗಳು ದಾಖಲಾಗಿದ್ದರೆ, ಐಪಿಸಿ, ಸಿಆರ್‌ಪಿಸಿ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಯಡಿಯಲ್ಲಿಯೇ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕೇಂದ್ರ ಸರ್ಕಾರ ಕಳೆದ ಫೆಬ್ರವರಿಯಲ್ಲಿಯೇ ಗೆಜೆಟ್ ಅಧಿಸೂಚನೆ ಹೊರಡಿಸಿ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಜುಲೈ 1ರಿಂದ ಜಾರಿಗೆ ತರುವುದಾಗಿ ಘೋಷಿಸಿತ್ತು.

Post a Comment