ಡಿಕೆ ಶಿವಕುಮಾರ್, ಡಿಸಿಎಂ
ಟೀಕೆ ಮಾಡುವವರು ಏನು ಬೇಕಾದರೂ ಹೇಳಿಕೊಳ್ಳಲಿ, ಎಲೆಕ್ಷನ್ ಗೋಸ್ಕರವೇ ಬರ್ತಾರೆ ಅಂತ ಅಂದುಕೊಳ್ಳಲಿ. ಇಲ್ಲಿ ಚೇರ್ ಖಾಲಿ ಆಗಿರೋದಕ್ಕೆ ಬಂದು ಕೂತಿದ್ದೀನಿ, ನಮ್ಮ ಡ್ಯೂಟಿ ನಾವು ಮಾಡ್ತಿದ್ದೀವಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.ರಾಮನಗರ: ಚನ್ನಪಟ್ಟಣದಲ್ಲಿ (Channapatna) ಡಿಸಿಎಂ ಡಿ.ಕೆ ಶಿವಕುಮಾರ್ (DCM DK Shivakumar) ಜನಸಂಪರ್ಕ ಯಶಸ್ವಿಯಾಗಿ ನಡೆಯುತ್ತಿದ್ದು, 7 ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಮುಕ್ತಾಯವಾಗಿದೆ. ಇಂದು ನಗರದ 31 ವಾರ್ಡ್ ಗಳ ಪೈಕಿ 15 ರಿಂದ 16 ರಂತೆ ಎರಡು ಸೆಷನ್ ಜನಸಂಪರ್ಕ ಸಭೆ (Public relations meeting) ನಡೆಯಲು ಡಿಕೆ ಶಿವಕುಮಾರ್ ನಿರ್ಧರಿಸಿದ್ದಾರೆ. ಪ್ರಮುಖವಾಗಿ ಕಸದ ಸಮಸ್ಯೆ ಹಾಗೂ ಒಳಚರಂಡಿ ವ್ಯವಸ್ಥೆ ಬಗ್ಗೆ ಡಿಕೆ ಶಿವಕುಮಾರ್ ಅಧಿಕಾರಿಗಳಿಗೆ ಮಾಹಿತಿ ತರಲು ಸೂಚನೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ (Minister Ramalinga Reddy) ಸೇರಿ ಹಲವರು ಭಾಗವಹಿಸಲಿದ್ದಾರೆ. ವೇದಿಕೆಯಲ್ಲಿ ಎಚ್ಡಿಕೆ-ಸಿಪಿವೈಗೆ ಟಾಂಗ್ಸಂಬಂಧಿತ ಸುದ್ದಿ10 ವರ್ಷಗಳು ಕಳೆದಿವೆ, ಇನ್ನೂ 20 ಉಳಿದಿದೆ, ಮೂರನೇ ಒಂದು ಭಾಗದ ಸರ್ಕಾರ ಎಂದ ಕಾಂಗ್ರೆಸ್ಗೆ ಮೋದಿ ತಿರುಗೇDK Shivakumar: ನೀವು ಮಠಕ್ಕೆ ಕಾಲಿಡಬೇಡಿ! ಡಿಕೆಶಿಗೆ ಎಚ್ಚರಿಸಿದ್ರಾ ಪ್ರಣವಾನಂದ ಸ್ವಾಮೀಜಿ?KPCC President: ಸಿಎಂ ಆಪ್ತರಿಗೆ ಸಿಗುತ್ತಾ ಕೆಪಿಸಿಸಿ ಅಧ್ಯಕ್ಷ ಸ್ಥಾನ? ಮೂವರ ಮೇಲೆ ಸಿದ್ದರಾಮಯ್ಯ ಒಲವು!Karnataka Politics: ರಾಜ್ಯದಲ್ಲಿ ಹೆಚ್ಚುವರಿ ಡಿಸಿಎಂ ಇಲ್ಲ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಾಧ್ಯತೆ!ಚನ್ನಪಟ್ಟಣದ ಹೊಂಗನೂರು ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ನಮ್ಮ ಕಾರ್ಯಕ್ರಮದ ಬಗ್ಗೆ ಕೆಲವರು ಟೀಕೆ ಮಾಡ್ತಾರೆ ಮಾಡಲಿ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ನಾವು ಯೋಗೇಶ್ವರ್ - ಕುಮಾರಣ್ಣಗೆ ಈ ಕಾರ್ಯಕ್ರಮ ಮಾಡಬೇಡಿ ಎಂದಿದ್ವಾ? ಅವರು ಅಧಿಕಾರ ಇದ್ದಾಗ ಮಾಡಲಿಲ್ಲ, ನಾವು ಮಾಡ್ತಿದ್ದೇವೆ ಅಷ್ಟೇ. ನಿಮಗೆ ಕನಕಪುರದ ರೀತಿ ಸೈಟು-ಮನೆ ಕೊಡ್ತೇನೆ. ಹೆಂಗಸರ ಹೆಸರಿಗೆ ಸೈಟು, ಮನೆ ಕೊಡಲಾಗುತ್ತೆ. ಯಾರು ಸಹ ಆತಂಕಪಡುವುದು ಬೇಡ, ನಿಮ್ಮ ಜೊತೆಗೆ ನಾನು ಸದಾ ಇರಲಿದ್ದೇನೆ. ಜನರ ಮನೆ ಬಾಗಿಲಿಗೇ ಸರ್ಕಾರಚನ್ನಪಟ್ಟಣ ಇತಿಹಾಸದಲ್ಲೇ ಇಂತಹ ಕಾರ್ಯಕ್ರಮ ನಡೆದಿಲ್ಲ, ಜನರ ಮನೆ ಬಾಗಿಲಿಗೇ ಸರ್ಕಾರ ಬಂದಿರೋದು ಇದೇ ಮೊದಲು. ಪ್ರತಿ ಜಿಲ್ಲೆಯಲ್ಲೂ ಜನಸ್ಪಂದನಾ ಕಾರ್ಯಕ್ರಮ ಕ್ಕೆ ಸಿಎಂ ಸೂಚನೆ ನೀಡಿದ್ದರು. ಅದರಂತೆ ಚನ್ನಪಟ್ಟಣದಲ್ಲಿ ನಾನು ವಿಶೇಷ ಆದ್ಯತೆ ನೀಡಿ ಕಾರ್ಯಕ್ರಮ ಮಾಡ್ತಿದ್ದೇನೆ. ಜನರ ಸಮಸ್ಯೆಗಳನ್ನ ಬಗೆಹರಿಸಿ ತೊಂದರೆ ತಪ್ಪಿಸಬೇಕು, ಅರ್ಜಿ ವಿಲೇವಾರಿಗೆ ಅಧಿಕಾರಿಗಳಿಗೆ ಟೈಂ ಪಿಕ್ಸ್ ಮಾಡ್ತಿದ್ದೀವಿ. ಶೀಘ್ರದಲ್ಲೇ ಜನರ ಜನರ ಸಮಸ್ಯೆ ಬಗೆಹರಿಸಲು ಕ್ರಮ ಎಂದು ಡಿಕೆಶಿ ಅಶ್ವಾಸನೆ ನೀಡಿದರು. ಚೇರ್ ಖಾಲಿ ಆಗಿರೋದಕ್ಕೆ ಬಂದು ಕೂತಿದ್ದೀನಿಬೈಎಲೆಕ್ಷನ್ ಗೋಸ್ಕರ ಡಿಸಿಎಂ ಪ್ರವಾಸ ಆರೋಪ ವಿಚಾರ ಪ್ರತಿಕ್ರಿಯೆ ನೀಡಿದ ಡಿಕೆಶಿ, ಕ್ಷೇತ್ರಕ್ಕೆ ಜಮೀರ್, ಕೃಷ್ಣಭೈರೇಗೌಡರು ಬರ್ತಾರೆ, ಇಲ್ಲಿ ರಿವ್ಯೂ ಮೀಟಿಂಗ್ ಮಾಡಿ ಸಮಸ್ಯೆ ಆಲಿಸುತ್ತಾರೆ. ಮತ್ತಷ್ಟು ಇಲಾಖೆ ಸಚಿವರು ಬಂದು ಅಹವಾಲು ಸ್ವೀಕರಿಸುತ್ತಾರೆ. ಟೀಕೆ ಮಾಡುವವರು ಏನು ಬೇಕಾದರೂ ಹೇಳಿಕೊಳ್ಳಲಿ, ಎಲೆಕ್ಷನ್ ಗೋಸ್ಕರವೇ ಬರ್ತಾರೆ ಅಂತ ಅಂದುಕೊಳ್ಳಲಿ. ಇಲ್ಲಿ ಚೇರ್ ಖಾಲಿ ಆಗಿರೋದಕ್ಕೆ ಬಂದು ಕೂತಿದ್ದೀನಿ, ನಮ್ಮ ಡ್ಯೂಟಿ ನಾವು ಮಾಡ್ತಿದ್ದೀವಿ. ನಮಗೆ ರಾಜಕಾರಣ ಮುಖ್ಯ ಅಲ್ಲ, ಜನರ ಬದುಕು ಮುಖ್ಯ ಎಂದರು.ಮೂಡಾ ಹಗರಣ ಆರೋಪ, ಡಿಕೆಶಿ ಅಚ್ಚರಿಹಿಂದೆ ಬಿಜೆಪಿಯವರು, ದಳದವರು ಸ್ಪೆಷಲ್ ಗ್ರ್ಯಾಂಟ್ ಕೊಟ್ಟಿರಲಿಲ್ವಾ? ನಾವೂ ಹಾಗೆಯೇ ಕೊಡ್ತಿದ್ದೀವಿ, ಚನ್ನಪಟ್ಟಣ ಅಭ್ಯರ್ಥಿ ಯಾರೇ ಅಭ್ಯರ್ಥಿ ಆದರೂ ನನಗೆ ವೋಟ್ ಹಾಕಿ, ಅಭ್ಯರ್ಥಿ ನಾನೇ ಆದರೂ ನಾಮಿನಿ ಬೇರೆ ಇರ್ತಾರೆ. ನನಗೆ ವೋಟ್ ಹಾಕಿ ಅಂತ ಜನರಲ್ಲಿ ಕೇಳ್ತಿನಿ. ಯಾರೇ ಅಭ್ಯರ್ಥಿ ಆದರೂ ನನ್ನ ಮುಖ ನೋಡಿ ವೋಟ್ ಕೊಡಿ ಅಂತ ಕೇಳ್ತೀವಿ ಎಂದು ತಿಳಿಸಿದರು.ಇದನ್ನೂ ಓದಿ: Team India: ಬೇಸರದಲ್ಲಿದ್ದ ಕೊಹ್ಲಿ, ರೋಹಿತ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಜಯ್ ಶಾ ! ಮುಡಾದಲ್ಲಿ 4 ಸಾವಿರ ಕೋಟಿ ಅಕ್ರಮ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆಶಿ, 4 ಸಾವಿರ ಕೋಟಿ ಅಕ್ರಮನಾ? ಎಂದು ಅಚ್ಚರಿ ವ್ಯಕ್ತಪಡಿಸಿದರು. ಸಿಎಂ ಹೆಂಡತಿ ಯಾಕೆ ಅಕ್ರಮ ಮಾಡ್ತಾರೆ? ಅವರ ಆಸ್ತಿ ಮೂಡಾಗೆ ಭೂಸ್ವಾಧೀನ ಆಗಿದೆ. ಅದಕ್ಕೆ ಪರ್ಯಾಯ ಜಾಗ ಕೊಡಬೇಕು. ಹಾಗಾಗಿ ಅವರಿಗೆ ಸೈಟ್ ಕೊಟ್ಟಿರ್ತಾರೆ. ಬಿಜೆಪಿಯವರ ಆಡಳಿತದಲ್ಲೇ ಸೈಟ್ ಕೊಟ್ಟಿದ್ದಾರೆ. ಅವರು ಡಿನೋಟಿಫಿಕೇಷನ್ ಮಾಡಿಕೊಂಡಿಲ್ಲ, ಅದಕ್ಕಾಗಿ ಇನ್ಸೆಂಟಿವ್ ಸೈಟ್ ಕೊಟ್ಟಿದ್ದಾರೆ. ಅನುಪಾತದ ಆಧಾರದ ಮೇಲೆ ಸೈಟ್ ಕೊಡಲಾಗಿರುತ್ತೆ. ಅದರಲ್ಲಿ ತಪ್ಪೇನಿದೆ. ಡಿನೋಟಿಫಿಕೇಷನ್ ಮಾಡದೇ ಇನ್ಸೆಂಟಿವ್ ಸೈಟ್ ಪಡೆದಿರೋದಕ್ಕೆ ಖುಷಿ ಪಡಬೇಕು ಎಂದು ಹೇಳಿದರು.

Post a Comment