ವೈರಲ್ ದೃಶ್ಯ
ದಪ್ಪವಾಗಿರುವ ಮಕ್ಕಳಿಗೆ ಓಡಿಸಲು ಸೈಕಲ್ ತಂದುಕೊಡುತ್ತಾರೆ ಮತ್ತು ಅವರಿಗೆ ಸ್ವಿಮ್ಮಿಂಗ್ ಕಲಿಯಲು ಕಳುಹಿಸುತ್ತಾರೆ. ಆದ್ರೆ ಇಲ್ಲೊಬ್ಬ ತನ್ನ ಮಗ ದಪ್ಪವಾಗಿದ್ದಾನೆಂದು ಏನು ಮಾಡಿದ್ದಾನೆ ಗೊತ್ತಾ? ಇಲ್ಲಿದೆ ನೋಡಿ.ಎಷ್ಟೋ ಬಾರಿ ಬೆಳೆಯುವ ಮಕ್ಕಳು ಜಂಕ್ ಫುಡ್ (Junk Food) ಹೆಚ್ಚಾಗಿ ತಿಂದು ಜಡತ್ವ ಜೀವನಶೈಲಿಯನ್ನು ಅಳವಡಿಸಿಕೊಂಡು ವಯಸ್ಸಿಗೆ ಮೀರಿ ದಪ್ಪವಾದಾಗ ಪೋಷಕರು ಅವರಿಗೆ ತೂಕ ಕರಗಿಸುವ ವ್ಯಾಯಾಮಗಳನ್ನು ಅಭ್ಯಾಸ ಮಾಡಿಸುತ್ತಾರೆ. ಉದಾಹರಣೆಗೆ ದಪ್ಪವಾಗಿರುವ ಮಕ್ಕಳಿಗೆ ಓಡಿಸಲು ಸೈಕಲ್ ತಂದುಕೊಡುತ್ತಾರೆ ಮತ್ತು ಅವರಿಗೆ ಸ್ವಿಮ್ಮಿಂಗ್ ಕಲಿಯಲು ಕಳುಹಿಸುತ್ತಾರೆ. ಅಷ್ಟೇ ಅಲ್ಲದೆ ಅವರು ತಿನ್ನುವ ಆಹಾರದ ಮೇಲೆ ಮತ್ತು ಅವರನ್ನು ಸಕ್ರಿಯರನ್ನಾಗಿರಿಸುವಂತಹ ಚಟುವಟಿಕೆಗಳನ್ನು ಅಭ್ಯಾಸ ಮಾಡಿಸುತ್ತಾರೆ.ಆದರೆ ಇಲ್ಲಿ ಯಾವುದು ಸಹ ಮಗುವಿನ ಆರೋಗ್ಯಕ್ಕೆ ತೊಡಕಾಗಬಾರದು ಎಂಬ ಅಂಶವನ್ನು ನಾವೆಲ್ಲಾ ನೆನಪಿನಲ್ಲಿಟ್ಟುಕೊಳ್ಳುವುದು ತುಂಬಾನೇ ಅವಶ್ಯಕವಾಗಿರುತ್ತದೆ. ಮಗುವಿನ ವಯಸ್ಸಿಗೆ ತಕ್ಕಂತೆ ಅವರಿಗೆ ವ್ಯಾಯಾಮ ತಾಲೀಮು ಹೇಳಿಕೊಡುವುದು ಒಳ್ಳೆಯದು, ಅದು ಸಹ ಹೆಚ್ಚಾದರೆ ಬೇರೆ ರೀತಿಯ ಪರಿಣಾಮಗಳು ಮಕ್ಕಳ ದೇಹದ ಆರೋಗ್ಯದ ಮೇಲೆ ಬೀಳುತ್ತವೆ.ಸಂಬಂಧಿತ ಸುದ್ದಿಹೊಟ್ಟೆಯ ಕೊಬ್ಬನ್ನು ಕರಗಿಸಲು ಇಂದೇ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ!ನಿಮ್ಮ ಮಕ್ಕಳು ಯಶಸ್ವಿಯಾಗಬೇಕೇ? ಹಾಗಾದರೆ ಈ 7 ಸೂತ್ರಗಳನ್ನು ಅವರಲ್ಲಿ ಅಳವಡಿಸಿ!ಪೋಷಕರೇ ಗಮನಿಸಿ, ಮಕ್ಕಳ ಈ ನಡವಳಿಕೆಗಳು ಭಾವನಾತ್ಮಕ ಬೆಂಬಲದ ಅಗತ್ಯತೆಯನ್ನು ತೋರಿಸುತ್ತವೆ!ಅಕ್ಕನ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಲೇ ಕುಸಿದು ಬಿದ್ದು ಪ್ರಾಣ ಬಿಟ್ಟ 18ರ ಯುವತಿ! ಶಾಕಿಂಗ್ ವಿಡಿಯೋ6 ವರ್ಷದ ಮಗನಿಗೆ ಹೆಚ್ಚು ವ್ಯಾಯಾಮ ಮಾಡಿಸುತ್ತಿದ್ದರಂತೆ ಈ ಯುಎಸ್ ವ್ಯಕ್ತಿಇಲ್ಲಿಯೂ ಸಹ ಇಂತಹದೇ ಒಂದು ಘಟನೆ ನಡೆದಿದೆ ನೋಡಿ.. ನ್ಯೂಜೆರ್ಸಿಯ 31 ವರ್ಷ ವಯಸ್ಸಿನ ವ್ಯಕ್ತಿ ಕ್ರಿಸ್ಟೋಫರ್ ಗ್ರೆಗರ್ ಅವರು 2021 ರಲ್ಲಿ ತಮ್ಮ ಮಗ ಕೋರಿ ಮಿಕ್ಕಿಯೊಲೊನನ್ನು ಕೊಲೆ ಮಾಡಿದ ಆರೋಪದ ವಿಚಾರಣೆಯಲ್ಲಿದ್ದಾರೆ.ಇದನ್ನೂ ಓದಿ: ರಾಜಕೀಯ ಅಭ್ಯರ್ಥಿ ಹೆಸರಿನ ನಾಲ್ಕೈದು ಮಂದಿ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಆಕ್ಷೇಪ: ಸುಪ್ರೀಂ ಕೋರ್ಟ್ ಹೇಳಿದ್ದೇನು?ನ್ಯಾಯಾಲಯದಲ್ಲಿ ಸಾಕ್ಷಿಗೆ ಅಂತ ಪ್ರಸ್ತುತಪಡಿಸಲಾದ ಮನ ಕಲಕುವ ಒಂದು ವಿಡಿಯೋ ಈಗ ಹೊರಬಂದಿದೆ ನೋಡಿ. ಈ ಗೊಂದಲ ಸೃಷ್ಟಿಸುವ ವಿಡಿಯೋದಲ್ಲಿ ಆರು ವರ್ಷದ ಮಗುವನ್ನು ಟ್ರೆಡ್‌ಮಿಲ್ ಮೇಲೆ ಓಡುವಂತೆ ಗ್ರೆಗರ್ ಒತ್ತಾಯಿಸುವುದನ್ನು ತೋರಿಸುತ್ತದೆ. ಈ ಸುದ್ದಿಯನ್ನ ಈಗ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.ಮಾರ್ಚ್ 20, 2021 ರಂದು ಗ್ರೆಗರ್ ಮತ್ತು ಕೋರೆ ಅವರು ಅಟ್ಲಾಂಟಿಕ್ ಹೈಟ್ಸ್ ಕ್ಲಬ್‌ಹೌಸ್ ಫಿಟ್ನೆಸ್ ಸೆಂಟರ್‌ಗೆ ಪ್ರವೇಶಿಸುತ್ತಿರುವುದನ್ನು ಈ ದೃಶ್ಯಾವಳಿ ಸೆರೆ ಹಿಡಿಯುತ್ತದೆ. ಗ್ರೆಗರ್ ಕೋರೆಯನ್ನು ಟ್ರೆಡ್‌ಮಿಲ್ ಮೇಲೆ ಬಲವಂತವಾಗಿ ಕರೆದುಕೊಂಡು ಬಂದು ನಂತರ ಆ ಮಗು ಓಡಲು ಆಗದೆ ಅನೇಕ ಬಾರಿ ಅದರ ಮೇಲೆ ಬಿದ್ದ ನಂತರವೂ ಸಹ ಗ್ರೆಗರ್ ಮಾತ್ರ ಟ್ರೆಡ್‌ಮಿಲ್ ಸೆಟ್ಟಿಂಗ್‌ಗಳನ್ನು ಹೆಚ್ಚಿಸುವುದನ್ನು ಈ ವಿಡಿಯೋ ತೋರಿಸುತ್ತದೆ.ಅಧಿಕ ತೂಕ ಹೊಂದಿದ್ದ ಮಗುಆರು ವರ್ಷ ವಯಸ್ಸಿನ ಕೋರೆ ಅಧಿಕ ತೂಕ ಹೊಂದಿದ್ದಾನೆ ಅಂತ ತಂದೆ ಗ್ರೆಗರ್ ಈ ರೀತಿ ಅವನನ್ನು ಟ್ರೆಡ್‌ಮಿಲ್‌ನಲ್ಲಿ ಒಡಲು ಒತ್ತಾಯಿಸಿದ್ದು ಅಂತ ವರದಿಯಾಗಿದೆ. ಈ ಅಪರಾಧ ಸಾಬೀತಾದರೆ ಗ್ರೆಗರ್ ಜೀವಾವಧಿ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ನ್ಯಾಯಾಲಯದಲ್ಲಿ ಈಗಾಗಲೇ ಪ್ರಸ್ತುತಪಡಿಸಲಾದ ಈ ಗೊಂದಲದ ವಿಡಿಯೋ ತುಣುಕನ್ನು ವೀಕ್ಷಿಸುತ್ತಿರುವಾಗ ಕೋರೆ ಅವರ ತಾಯಿ ಬ್ರೆ ಮಿಕ್ಸಿಯೊಲೊ ಕಣ್ಣೀರು ಹಾಕಿದ್ದರಿಂದ ಈಗ ಈ ವಿಚಾರಣೆಯು ಭಾವನಾತ್ಮಕ ತಿರುವನ್ನು ಪಡೆದುಕೊಂಡಿದೆ.ಯುಎಸ್ ಸನ್ ಪ್ರಕಾರ, ಮಿಕ್ಸಿಯೊಲೊ ಅವರು ತಮ್ಮ ಮಗ ಸಾಯುವ ಕೆಲವೇ ದಿನಗಳ ಮೊದಲು ಮಕ್ಕಳ ರಕ್ಷಣಾ ಸೇವೆಗಳಿಗೆ ತನ್ನ ಮಗನ ಗಾಯಗಳನ್ನು ವರದಿ ಮಾಡಿದ್ದರಂತೆ. ಹೆಚ್ಚುವರಿಯಾಗಿ, ಅವರು ಏಪ್ರಿಲ್ 1 ರಂದು ಕೋರೆಯನ್ನು ವೈದ್ಯರ ಬಳಿಗೆ ಸಹ ಕರೆದೊಯ್ಯಲು ಗ್ರೆಗರ್ ಅವರನ್ನು ವಿನಂತಿಸಿದ್ದರಂತೆ.ಕೋರ್ಟ್ ಮಾಧ್ಯಮಗಳ ಸುದ್ದಿ ವರದಿಗಳು ವೈದ್ಯರ ಭೇಟಿಯ ಸಮಯದಲ್ಲಿ, ಕೋರೆ ತನ್ನ ಅಧಿಕ ತೂಕದ ಬಗ್ಗೆ ಕಳವಳದಿಂದ ತಂದೆ ಅವನನ್ನು ಟ್ರೆಡ್‌ಮಿಲ್‌ನಲ್ಲಿ ಓಡುವಂತೆ ಒತ್ತಾಯಿಸಿದರು ಎಂದು ಬಹಿರಂಗಪಡಿಸಿದ್ದರು.ಟ್ರೆಡ್‌ಮಿಲ್‌ನಲ್ಲಿ ಎಡವಿ ಬಿದ್ದು ಗಾಯಮಾಡಿಕೊಂಡ ಮಗುದುರಂತವೆಂದರೆ, ಮರುದಿನವೇ ಟ್ರೆಡ್‌ಮಿಲ್‌ನಲ್ಲಿ ಎಡವಿ, ಅಸ್ಪಷ್ಟವಾದ ಮಾತು, ವಾಕರಿಕೆ ಮತ್ತು ಉಸಿರಾಟದ ತೊಂದರೆ ಸೇರಿದಂತೆ ರೋಗಲಕ್ಷಣಗಳ ಕಾರಣದಿಂದ ಗ್ರೆಗರ್ ಕೋರೆಯನ್ನು ಆಸ್ಪತ್ರೆಗೆ ಸೇರಿಸಿದರು.ಸಿಟಿ ಸ್ಕ್ಯಾನ್ ಕೋರೆ ರೋಗಗ್ರಸ್ತವಾಗಿರುವುದನ್ನು ಬಹಿರಂಗಪಡಿಸಿತು, ಜೀವ ಉಳಿಸುವ ಕ್ರಮಗಳನ್ನು ತೆಗೆದುಕೊಳ್ಳಲು ವೈದ್ಯಕೀಯ ಸಿಬ್ಬಂದಿಯನ್ನು ಸಹ ಒತ್ತಾಯಿಸಿದರು, ಆದರೆ ಅವರು ಮಗುವನ್ನು ಬದುಕುಳಿಸುವಲ್ಲಿ ಯಶಸ್ವಿಯಾಗಲಿಲ್ಲ.ಆರಂಭಿಕ ಶವಪರೀಕ್ಷೆಯು ತೀವ್ರವಾದ ಉರಿಯೂತ ಮತ್ತು ಸೆಪ್ಸಿಸ್‌ನೊಂದಿಗೆ ಹೃದಯ ಮತ್ತು ಪಿತ್ತಜನಕಾಂಗದ ಮೂಗೇಟುಗಳೊಂದಿಗೆ ಬಲವಾದ ಗಾಯಗಳಾಗಿರುವುದರಿಂದ ಕೋರೆ ಸಾವನ್ನಪ್ಪಿದ್ದಾನೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.ಫಿಟ್ನೆಸ್ ಸೆಂಟರ್‌ನಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ತನಿಖಾಧಿಕಾರಿಗಳು ನಿರ್ಲಕ್ಷ್ಯದ ಆರೋಪದ ಮೇಲೆ ಜುಲೈ 2021 ರಲ್ಲಿ ಗ್ರೆಗರ್ ಅವರನ್ನು ಬಂಧಿಸಿದರು. ಈಗ ಈ ಆರೋಪಿಯನ್ನು ತನ್ನ ಮಗನ ಸಾವಿಗೆ ಕಾರಣ ಎಂದು ಓಷನ್ ಸಿಟಿ ಜೈಲಿನಲ್ಲಿ ಇರಿಸಲಾಗಿದೆ.

Post a Comment