ಪ್ರಾತಿನಿಧಿಕ ಚಿತ್ರ
ಘಟನೆ ನಡೆದಾಗ ಮೃತ ಜೀತುಭಾಯಿ ಅವರ ಪತ್ನಿ ಮನೆಯಿಂದ ಹೊರಗಿದ್ದರು. ಆರೋಪಿ ಜಯಂತಿಭಾಯ್ ಬಾಲುಸಿಂಗ್ ವಂಜಾರ ಎಂಬಾತ ಆಟೋರಿಕ್ಷಾದಲ್ಲಿ ಮನೆಗೆ ಪಾರ್ಸೆಲ್ ಕಳುಹಿಸಿದ್ದಾನೆ. ವಡಾಲಿ (ಗುಜರಾತ್): ಮನೆ ಬಂದ ಪಾರ್ಸೆಲ್ ತೆಗದು ನೋಡಿದ ವ್ಯಕ್ತಿ ಹಾಗೂ ಆತನ ಮಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯ ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದವನು ಬಾಂಬ್ ಅನ್ನು ಪಾರ್ಸೆಲ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಕುಟುಂಬವು ಪಾರ್ಸೆಲ್ ಅನ್ನು ತೆರೆದಾಗ ಅದು ಸ್ಫೋಟಗೊಂಡಿದ್ದು, 32 ವರ್ಷದ ಜೀತುಭಾಯ್ ಹೀರಾಭಾಯಿ ವಂಜಾರಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆತನ 12 ವರ್ಷದ ಮಗಳು ಭೂಮಿಕಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾಳೆ. ಗುಜರಾತ್ನ ವಡಾಲಿಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆ ನಡೆದಾಗ ಮೃತ ಜೀತುಭಾಯಿ ಅವರ ಪತ್ನಿ ಮನೆಯಿಂದ ಹೊರಗಿದ್ದರು. ಆರೋಪಿ ಜಯಂತಿಭಾಯ್ ಬಾಲುಸಿಂಗ್ ವಂಜಾರ ಎಂಬಾತ ಆಟೋರಿಕ್ಷಾದಲ್ಲಿ ಮನೆಗೆ ಪಾರ್ಸೆಲ್ ಕಳುಹಿಸಿದ್ದಾನೆ. ಟೇಪ್ ರೆಕಾರ್ಡರ್ ರೀತಿಯಲ್ಲಿ ಕಾಣಿಸಿಕೊಂಡಿದ್ದ ಪಾರ್ಸೆಲ್ ಅನ್ನು ಜೀತುಭಾಯ್ ಪ್ಲಗ್ ಇನ್ ಮಾಡಲು ಪ್ರಯತ್ನಿಸಿದಾಗ ಸ್ಫೋಟಗೊಂಡಿದೆ. ಪಾರ್ಸೆಲ್ನಲ್ಲಿ ಸ್ಫೋಟಗಳಾದ ಜಿಲೆಟಿನ್ ಸ್ಟಿಕ್ಗಳನ್ನು, ಡಿಟೋನೇಟರ್ ಅನ್ನು ಬಳಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ವಿಜಯ್ ಪಟೇಲ್ ತಿಳಿಸಿದ್ದಾರೆ.ಸಂಬಂಧಿತ ಸುದ್ದಿDrugs: ಬರೋಬ್ಬರಿ ₹602 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ! ಗುಜರಾತ್ನಲ್ಲಿ 14 ಪಾಕ್ ಪ್ರಜೆಗಳ ಬಂಧನUS Accident: 20 ಅಡಿ ಎತ್ತರಕ್ಕೆ ಹಾರಿ ಮರಕ್ಕೆ ಅಪ್ಪಳಿಸಿದ ಕಾರು! ಮೂವರು ಭಾರತೀಯ ಮಹಿಳೆಯರ ಸಾವು10 ದಿನ NIA ಕಸ್ಟಡಿಗೆ ಶಂಕಿತ ಉಗ್ರರು, ಮಡಿವಾಳ ಟೆಕ್ನಿಕಲ್ ಸೆಲ್‌ನಲ್ಲಿ ಬಾಂಬರ್ಸ್ ವಿಚಾರಣೆRameshwaram Cafe Blast: ರಾಮೇಶ್ವರಂ ಕೆಫೆ ಸ್ಪೋಟ ಕೇಸ್, ಶಂಕಿತ ಉಗ್ರ ಮುಸಾವಿರ್ ಹುಸೇನ್ ಅರೆಸ್ಟ್ ಆರೋಪಿ ಸುಧಾರಿತ ಬಾಂಬ್ ತಯಾರಿಸಲು ಸಾಮಗ್ರಿಗಳನ್ನು ಪಡೆಯಲು ರಾಜಸ್ಥಾನಕ್ಕೆ ಪ್ರಯಾಣಿಸಿದ್ದನು.

Post a Comment