Shiva Rajkumar: ಪತ್ನಿ ಪರ ಶಿವಣ್ಣ ಚುನಾವಣಾ ಪ್ರಚಾರ, ಕೊಂಚ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು


ಮೊದಲ ಹಂತದ ಚುನಾವಣಾ ಪ್ರಚಾರ ಮುಗಿಸಿ ಬೆಂಗಳೂರಿಗೆ ಹಿಂತಿರುಗಿರುವ ನಟ ಶಿವರಾಜ್‌ ಕುಮಾರ್ ಅವರಿಗೆ ಅನಾರೋಗ್ಯ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.ರಾಜ್ಯದಲ್ಲಿ ಲೋಕಸಭೆ ಚುನಾವಣೆ (Lok Sabha Elections) ಪ್ರಚಾರ ಅಬ್ಬರದಿಂದ ಸಾಗಿದೆ. ಸ್ಯಾಂಡಲ್ವುಡ್ ನಟ ಶಿವರಾಜ್ಕುಮಾರ್ ಪತ್ನಿ ಗೀತಾ ಶಿವರಾಜ್ಕುಮಾರ್ (Geetha Shivarajkumar) ಶಿವಮೊಗ್ಗದ ಕಾಂಗ್ರೆಸ್ ಅಭ್ಯರ್ಥಿಯಾಗಿ (Congress Candidate) ಅಖಾಡಕ್ಕೆ ಇಳಿದಿದ್ದಾರೆ. ಈ ಬಾರಿ ಗೀತಾ ಅವರನ್ನು ಗೆಲ್ಲಿಸಲೇಬೇಕು ಎಂದು ಪಣ ತೊಟ್ಟಿರುವ ಶಿವಣ್ಣ ಭರ್ಜರಿ ಪ್ರಚಾರ ಮಾಡ್ತಿದ್ದಾರೆ. ಬಿಸಿಲಿನಲ್ಲಿ ವಿಶ್ರಾಂತಿ ಇಲ್ಲದೆ ನಡೆದಿದ ಹಿನ್ನೆಲೆ ನಟ ಶಿವರಾಜ್ಕುಮಾರ್ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.   ಶಿವರಾಜ್ಕುಮಾರ್ಗೆ ಅನಾರೋಗ್ಯ, ಆಸ್ಪತ್ರೆಗೆ ದಾಖಲುಸಂಬಂಧಿತ ಸುದ್ದಿಅಮೆರಿಕಾದಲ್ಲಿರುವ ಆರತಿಗೂ ಕೋಲಾರಕ್ಕೂ ಏನಿದೆ ನಂಟು? ಆಗಾಗ ಈ ಗ್ರಾಮಕ್ಕೆ ಬರೋದ್ಯಾಕೆ 'ರಂಗನಾಯಕಿ'?ಅನುಚಿತ ವರ್ತನೆ ಆರೋಪ! ಶಿವರಾಜ್ ಕೆಆರ್ ಪೇಟೆ ವಿರುದ್ಧ ಮಹಿಳೆ ದೂರುರಾಧಿಕಾ ಪಂಡಿತ್ ಬರ್ತ್ ಡೇ ಪಾರ್ಟಿ ಜೋರು, ಪತ್ನಿಗೆ ಪ್ರೀತಿಯ ಮುತ್ತಿಟ್ಟ ಯಶ್!ಬಿಗ್ ಬಾಸ್ ಡ್ಯಾನ್ಸರ್ ಕಿಶನ್ ಬೆಳಗಲಿ ಮಸ್ತ್ ಲುಕ್; ವೈಟ್ ಆ್ಯಂಡ್ ವೈಟ್ ಡ್ರೆಸ್‌ನಲ್ಲಿ ಸೂಪರ್ ಕೂಲ್!ಶಿವಮೊಗ್ಗದಲ್ಲಿ ನಿರಂತರವಾಗಿ ಸಭೆ ನಡೆಸಿದ ಗೀತಾ ಶಿವರಾಜ್ಕುಮಾರ್ ಬೀದಿಗಿಳಿದು ಪ್ರಚಾರ ನಡೆಸುತ್ತಿದ್ದಾರೆ. ಹಂತ ಹಂತವಾಗಿ ಕ್ಯಾಂಪೇನ್ ನಡೆಸಲಾಗ್ತಿದೆ. ಮೊದಲ ಹಂತದ ಚುನಾವಣಾ ಪ್ರಚಾರ ಮುಗಿಸಿ ಶಿವರಾಜ್‌ಕುಮಾರ್ ಬೆಂಗಳೂರಿಗೆ ಹಿಂತಿರುಗಿದ್ದಾರೆ. ಈ ವೇಳೆ ಶಿವಣ್ಣ ಅವರಿಗೆ ಅನಾರೋಗ್ಯ ಉಂಟಾಗಿದ್ದು, ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಆಗಿದೆ.ಗಂಭೀರ ಸಮಸ್ಯೆಯಿಲ್ಲ, ಜನರಲ್ ಚೆಕಪ್‌ ಅಷ್ಟೆನಿರಂತರ ಪ್ರಚಾರದ ಕೆಲಸದಿಂದ ನಟ ಶಿವರಾಜ್‌ ಕುಮಾರ್‌ ದಣಿದಿದ್ದಾರೆ. ಯಾವುದೇ ಗಂಭೀರ ಸಮಸ್ಯೆಯಿಲ್ಲ ಎನ್ನಲಾಗ್ತಿದೆ. ಜನರಲ್ ಚೆಕಪ್‌ಗಾಗಿ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ಶಿವಣ್ಣ ದಾಖಲಾಗಿದ್ದರು ಎನ್ನಲಾಗುತ್ತಿದೆ. ಇಂದೇ ಶಿವರಾಜ್ ಕುಮಾರ್ ಅವರು ಡಿಸ್ಜಾರ್ಜ್ ಆಗಿ ಮನೆಗೆ ಮರಳಲಿದ್ದಾರೆ ಎನ್ನಲಾಗ್ತಿದೆ.ಗೀತಾರನ್ನ ಒಮ್ಮೆ MP ಆಗಿ ನೋಡ್ಬೇಕುಬಂಗಾರಪ್ಪನ‌ ವರ್ಚಸ್ಸು ಇರೋ ಶಿವಮೊಗ್ಗದಿಂದ ಗೀತಾ ಶಿವರಾಜ್ ಕುಮಾರ್ ಕಣಕ್ಕಿಳಿದಿದ್ದಾರೆ. ಗೀತಾರನ್ನ ಒಮ್ಮೆ MP ಆಗಿ ನೋಡ್ಬೇಕು ಎಂದು ಶಿವರಾಜ್ ಕುಮಾರ್ ಹೇಳಿದ್ರು. ಇದೀಗ ಪತ್ನಿಯನ್ನು ಗೆಲ್ಲಿಸಲು ಪಣ ತೊಟ್ಟ ಶಿವಣ್ಣ, ಗೀತಾ ಪರ ಅಬ್ಬರ ಪ್ರಚಾರ ಮಾಡ್ತಿದ್ದಾರೆ.ಗೀತಾಗೆ ಸಿಕ್ಕಿದೆ ನಿರ್ಮಾಪಕರ ಬೆಂಬಲಪತ್ನಿ ಗೀತಾ ಶಿವರಾಜ್ಕುಮಾರ್ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದು ಅವರ ಪತ್ನಿಗೆ ಸಾಥ್ ನೀಡುತ್ತಿರುವ ಶಿವರಾಜ್ ಕುಮಾರ್ ಅವರಿಗೆ ಕನ್ನಡ ಚಿತ್ರರಂಗದ ಚಲನಚಿತ್ರ ನಿರ್ಮಾಪಕರು ಬೆಂಬಲವಾಗಿ ನಿಂತಿದ್ದಾರೆ. ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಪರ ಪ್ರಚಾರ ಮಾಡಲು ನಿರ್ಮಾಪಕರು ನಿರ್ಧಾರ ಮಾಡಿದ್ದಾರೆ. ನಟ ಶಿವರಾಜ್ ಕುಮಾರ್ ವಿರುದ್ಧ ದಾಖಲಾಗಿತ್ತು ದೂರುಪತ್ನಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಟ ಶಿವರಾಜ್ ಕುಮಾರ್ ವಿರುದ್ಧ ಬಿಜೆಪಿ ಒಬಿಸಿ ಯುವ ಮೋರ್ಚಾ ಚುನಾವಣಾ ಆಯೋಗದಲ್ಲಿ ದೂರು ನೀಡಿತ್ತು. ಶಿವರಾಜ್ ಕುಮಾರ್, ರಾಜ್ಯದಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದು, ಪ್ರಸ್ತುತ ಕಾಂಗ್ರೆಸ್ ಪಕ್ಷದ ಪರ ರಾಜ್ಯಾದ್ಯಂತ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸಿನಿಮೀಯ ಕೆಲಸ ಮತ್ತು ಸಾರ್ವಜನಿಕ ವ್ಯಕ್ತಿತ್ವದ ಮೂಲಕ ಗಮನಾರ್ಹ ಪ್ರಭಾವ ಬೀರುವವರಾಗಿದ್ದಾರೆ. ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅವರ ಹಕ್ಕನ್ನು ನಾವು ಗೌರವಿಸುತ್ತೇವೆ ಆದರೆ, ಚುನಾವಣಾ ಅವಧಿಯಲ್ಲಿ ಅನಗತ್ಯ ಲಾಭ ಅಥವಾ ಪ್ರಭಾವವನ್ನು ತಡೆಯುವುದು ಕಡ್ಡಾಯವಾಗಿದೆ ಎಂದು ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಆರ್ ರಘು ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆಇದನ್ನೂ ಓದಿ: Geetha Shivarajkumar: ಗೀತಾ ಶಿವರಾಜ್ ಕುಮಾರ್ಗೆ ಸಿಕ್ತು ನಿರ್ಮಾಪಕರ ಬೆಂಬಲ! ಶಿವಮೊಗ್ಗದಲ್ಲಿ ನಡೆಯಲಿದೆ ಭರ್ಜರಿ ಕ್ಯಾಂಪೇನ್ಶಿವರಾಜ್ ಕುಮಾರ್ ಅವರ ಜನಪ್ರಿಯತೆ ಹಾಗೂ ಗಮನಾರ್ಹ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು, ಚಿತ್ರಮಂದಿರಗಳು, ಟಿವಿ ಚಾನೆಲ್‌ ಗಳು, ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಸ್ಥಳೀಯ ಕಾರ್ಯಕ್ರಮಗಳಲ್ಲಿ ಯಾವುದೇ ಚಲನಚಿತ್ರಗಳು, ಜಾಹೀರಾತುಗಳು ಅಥವಾ ಜಾಹೀರಾತು ಫಲಕವನ್ನು ಚುನಾವಣೆ ಮುಕ್ತಾಯದವರೆಗೂ ಪ್ರದರ್ಶಿಸದಂತೆ ಆದೇಶವನ್ನು ಹೊರಡಿಸುವ ಮೂಲಕ ತಕ್ಷಣ ಕ್ರಮ ಕೈಗೊಳ್ಳುವಂತೆ ಅವರು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದರು.

Post a Comment

Previous Post Next Post