ಸಾಂದರ್ಭಿಕ ಚಿತ್ರಇತ್ತೀಚೆಗೆ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಮಾರ್ಷಲ್ ಗಳು ವೃದ್ಧ ವ್ಯಾಪಾರಿಗೆ ಥಳಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಿ ಬಿಬಿಎಂಪಿ ನೌಕರರ ಸಂಘ ಮಾರ್ಷಲ್ ಗಳನ್ನು ರದ್ದು ಮಾಡುವಂತೆ ಪಾಲಿಕೆಗೆ ಪತ್ರ ಬರೆದಿದೆ. ಬೆಂಗಳೂರು: ಕೋವಿಡ್ ಸಮಯದಲ್ಲಿ ಬಿಬಿಎಂಪಿಯಿಂದ (BBMP) ನೇಮಕಗೊಂಡಿರುವ ಮಾರ್ಷಲ್ಗಳನ್ನು (Marshals) ರದ್ದು ಮಾಡುವಂತೆ ಒತ್ತಡ ಹೆಚ್ಚಿದೆ. ಇತ್ತೀಚೆಗೆ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಮಾರ್ಷಲ್ ಗಳು ವೃದ್ಧ ವ್ಯಾಪಾರಿಗೆ ಥಳಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಿ ಬಿಬಿಎಂಪಿ ನೌಕರರ ಸಂಘ ಮಾರ್ಷಲ್ ಗಳನ್ನು ರದ್ದು ಮಾಡುವಂತೆ ಪಾಲಿಕೆಗೆ ಪತ್ರ ಬರೆದಿದೆ.ಮಾರ್ಷಲ್ಗಳ ಅವಾಂತರಜಯನಗರದಲ್ಲಿ ವೃದ್ಧ ವ್ಯಾಪಾರಿ ಥಳಿತದ ಘಟನೆಗೂ ಮುನ್ನ ಯಲಹಂಕ ವಲಯದಲ್ಲಿ ಮಾರ್ಷಲ್ ಗಳ ಓಡಾಟಕ್ಕೆ ನೀಡಲಾಗಿದ್ದ ಗಸ್ತು ವಾಹನದಲ್ಲಿ ಮದ್ಯ ಸಾಗಾಟ ಮಾಡಿ ಜನರಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಹೀಗೆ ಬಿಬಿಎಂಪಿ ಮಾರ್ಷಲ್ ಗಳು ಮಾಡಿರುವ ಯಡವಟ್ಟು ಒಂದಲ್ಲ ಎರಡಲ್ಲ. ಹೀಗಾಗಿ ಮಾರ್ಷಲ್ಸ್ ಅನ್ನು ರದ್ದು ಮಾಡುಂತೆ ಬಿಬಿಎಂಪಿ ನೌಕರರ ಸಂಘ ಚೀಫ್ ಕಮಿಷನರ್ ಗೆ ಪತ್ರ ಬರೆದು ಮನವಿ ಮಾಡಿದೆ.ಸಂಬಂಧಿತ ಸುದ್ದಿBengaluru: ರಾಜೀವ್ ಗಾಂಧಿ ಕಂಚಿನ ಪ್ರತಿಮೆಗಾಗಿ ಬಸ್ ನಿಲ್ದಾಣಕ್ಕೆ ಕೊಕ್; ರಣ ಬಿಸಿಲಿಗೆ ಹೈರಾಣಾದ ಜನರುBengaluru Karaga: ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಕರಗ ಶಕ್ತ್ಯೋತ್ಸವ ಆಚರಣೆಗೆ ಬಿಬಿಎಂಪಿ ಸೂಚನೆBengaluru News: ಪಕ್ಷಿಗಳಿಗೆ ಆಹಾರ ಹಾಕಿದ್ರೆ 200 ರೂಪಾಯಿ ದಂಡ; ಬಿಬಿಎಂಪಿ ನೋಟೀಸ್ ಕಂಡು ದಂಗಾದ ಜನ!ಬೆಂಕಿ ಅವಘಡದಲ್ಲಿ ಇಂಜಿನಿಯರ್ ಸಾವು ಪ್ರಕರಣ; ‘ಆ’ ಕೊಠಡಿಯ ನವೀಕರಣಕ್ಕೆ ಮುಂದಾದ ಪಾಲಿಕೆಮಾರ್ಷಲ್ಸ್ ರದ್ದು ಮಾಡುವಂತೆ ಪತ್ರಮಾರ್ಷಲ್ ಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸದೆ, ದರ್ಪದಿಂದ ನಡೆದುಕೊಳ್ಳುತ್ತಿದ್ದಾರೆ. ಆಗ್ಗಾಗ್ಗೆ ಒಂದಿಲ್ಲೊಂದು ಯಡವಟ್ಟು ಮಾಡಿಕೊಂಡು ಬಿಬಿಎಂಪಿಗೆ ಮುಜುಗರ ಉಂಟು ಮಾಡುತ್ತಿದ್ದಾರೆ. ಇವರ ವರ್ತನೆಗಳ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಿಂದ ಬಿಬಿಎಂಪಿಗೆ ಕೆಟ್ಟ ಹೆಸರು ಬರುತ್ತಿದೆ. ಅಲ್ಲದೆ ಸುಖಾಸುಮ್ಮನೆ ಇವರ ನಿರ್ವಹಣೆಗೆ ಕೋಟ್ಯಾಂತರ ರೂಪಾಯಿ ಪಾಲಿಕೆ ವ್ಯಯಿಸುತ್ತಿದೆ. ಹೀಗಾಗಿ ಮಾರ್ಷಲ್ಸ್ ಅನ್ನು ಸೇವೆಯಿಂದ ರದ್ದು ಮಾಡಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.ಇದನ್ನೂ ಓದಿ: Bengaluru: ರಾಜೀವ್ ಗಾಂಧಿ ಕಂಚಿನ ಪ್ರತಿಮೆಗಾಗಿ ಬಸ್ ನಿಲ್ದಾಣಕ್ಕೆ ಕೊಕ್; ರಣ ಬಿಸಿಲಿಗೆ ಹೈರಾಣಾದ ಜನರುಬಿಬಿಎಂಪಿ ಚೀಫ್ ಮಾರ್ಷಲ್ ರಾಜ್ಬೀರ್ ಸಿಂಗ್, ಪಾಲಿಕೆ ಅಧಿಕಾರಿಗಳು ಹೇಳುವ ಕೆಲಸವನ್ನು ನಮ್ಮ ಮಾರ್ಷಲ್ ಗಳು ಶ್ರದ್ಧೆಯಿಂದ ನಿರ್ವಹಿಸುತ್ತಿದ್ದಾರೆ. ನಗರದಲ್ಲಿ ಕಸದ ರಾಶಿ ಎಲ್ಲೆಂದರಲ್ಲಿ ಕಂಡು ಬರುತ್ತಿತ್ತು. ನಮ್ಮ ಮಾರ್ಷಲ್ ಗಳು ಅದನ್ನು ಹತೋಟಿಗೆ ತಂದಿದ್ದಾರೆ. ಹಗಲಿರುಳು ಮಾರ್ಷಲ್ ಗಳು ಬಿಬಿಎಂಪಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಎದ್ದಿರುವ ಬೇಡಿಕೆ ಚೀಫ್ ಕಮಿಷನರ್ ಗೆ ಬಿಟ್ಟಿರುವ ವಿಚಾರ ಎಂದಿದ್ದಾರೆ.ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 500ಕ್ಕಿಂತಲೂ ಅಧಿಕ ಮಾರ್ಷಲ್ ಗಳು ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಪರಿಸ್ಥಿತಿ ನಿರ್ವಹಣೆಗೆಂದು ಗುತ್ತಿಗೆ ಆಧಾರದ ಮೇಲೆ ಮಾರ್ಷಲ್ ಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಕೋವಿಡ್ ಬಳಿಕ ತ್ಯಾಜ್ಯ, ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಹಾಗೂ ಒಂದು ವಾರ್ಡ್ ಗೆ ಒಬ್ಬ ಮಾರ್ಷಲ್ ಗಳನ್ನು ವಾರ್ಡ್ ನಿರ್ವಹಣೆಗೆಂದು ನೇಮಿಸಿಕೊಳ್ಳಲಾಗಿದೆ. ಇದೀಗ ಮಾರ್ಷಲ್ಸ್ ಅನ್ನು ರದ್ದು ಮಾಡುವಂತೆ ಬಿಬಿಎಂಪಿ ನೌಕರರ ಸಂಘ ಬೇಡಿಕೆ ಇಟ್ಟಿದೆ.

Post a Comment