ಡಿಕೆ ಸಹೋದರರು
ಇಂದಿನ ಬಜೆಟ್‌ನಲ್ಲಿ ಹೊಸತೇನು ಇಲ್ಲ. ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಆಗುತ್ತಿದೆ. ಹೀಗೆ ಅನ್ಯಾಯ ಆದ್ರೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂದು ಸಂಸದ ಡಿಕೆ ಸುರೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು: ಸಂಸದ ಡಿ.ಕೆ ಸುರೇಶ್ (MP DK Suresh) ಪ್ರತ್ಯೇಕ ರಾಷ್ಟ್ರದ ಹೇಳಿಕೆಯನ್ನ ಕಾಂಗ್ರೆಸ್ ನಾಯಕರು (Congress Leader) ಸಮರ್ಥಿಸಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಮಾತನಾಡಿ, ನಾವು ಅಖಂಡ ಭಾರತದವರು. ಡಿಕೆ ಸುರೇಶ್ (DK Suresh) ಜನರ ಅಭಿಪ್ರಾಯ ಹೇಳಿದ್ದಾರೆ ಅಷ್ಟೇ ಎಂದಿದ್ದಾರೆ. ಇತ್ತ ಸಿಎಂ ಮಾತನಾಡಿ, ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ ಆಗಿದೆ. ಆದರೆ ಪ್ರತ್ಯೇಕ ರಾಷ್ಟ್ರ ಕೇಳಬಾರದು. ಕರ್ನಾಟಕಕ್ಕೆ (Karnataka) ಏನಾದರೂ ಅನ್ಯಾಯವಾಗಿದ್ದರೆ ಅದು ಬಿಜೆಪಿಗರಿಂದ (BJP) ಮಾತ್ರ ಅಂತ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ನಾನು ಅಖಂಡ ಭಾರತದವನು, ಅವರು ಜನರ ಅಭಿಪ್ರಾಯ ಹೇಳಿದ್ದಾರೆ ಅಷ್ಟೇ. ಜನರ ಆ ರೀತಿ ಯೋಚನೆ ಮಾಡುತ್ತಿದ್ದಾರೆ, ನಮ್ಮನ್ನು ಕಡೆಗಣನೆ ಮಾಡುತ್ತಿದ್ದಾರೆ ಎಂದು. ನಾನು ಭಾರತದವನು, ಒಂದೇ ಭಾರತ. ನಮಗೆ ಅನ್ಯಾಯ ಆಗಿದೆ ಎಂದು ಜನರ ಭಾವನೆ ತಿಳಿಸಿದ್ದಾರೆ. ಭಾರತ ಒಗ್ಗಟು ಇರಬೇಕು, ನಾವೆಲ್ಲ ಭೂತಾಯಿ ಮಕ್ಕಳು. ಕಾಶ್ಮೀರದಿಂದ ಕನ್ಯಾಕುಮಾರಿಯವರಗೆ ಒಂದೇ, ಹಿಂದಿ ಬೆಲ್ಟ್ ಸೇರಿದಂತೆ ಯಾವ ಹಳ್ಳಿಗೂ ಅನ್ಯಾಯ ಆಗಬಾರದು ಎಂದು ಸಹೋದರನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.ಸಂಬಂಧಿತ ಸುದ್ದಿBudget 2024: ಮಾಲ್ಡೀವ್ಸ್‌ಗೆ 770 ಕೋಟಿ ಹೆಚ್ಚಿನ ಅನುದಾನ! ಇದರ ಹಿಂದಿದ್ಯಾ ಕೇಂದ್ರ ಸರ್ಕಾರದ ಪ್ಲಾನ್?ದಕ್ಷಿಣ ಭಾರತದ ಕೂಗು ಎತ್ತಬೇಕಾದ ಅನಿವಾರ್ಯತೆ ಬರಲಿದೆ; ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಿದ ಡಿಕೆ ಸುರೇಶ್ಕಾಂಗ್ರೆಸ್ಗೆ ಒಂದೇ ಒಂದು ಸೀಟ್ ಬಿಟ್ಟು ಕೊಡೋದಿಲ್ಲ! I.N.D.I.A. ನಾಯಕರಿಗೆ ಮಮತಾ ಬ್ಯಾನರ್ಜಿ ಶಾಕ್!Union Budget 2024 ದೇಶದ ನಾಲ್ಕು ಸ್ತಂಭಗಳನ್ನು ಬಲಪಡಿಸುತ್ತದೆ: ಪ್ರಧಾನಿ ನರೇಂದ್ರ ಮೋದಿಇದನ್ನೂ ಓದಿ: Lok Sabha Election: ಸಿದ್ದು ಸರ್ಕಾರ ಪತನಕ್ಕೆ ಬೊಮ್ಮಾಯಿ ಗ್ಯಾರಂಟಿ! ಆಪರೇಷನ್ ಬಾಂಬ್ ಸಿಡಿ
ಸಿದ ಬಿವೈವಿ ಸಂಸದ ಡಿಕೆ ಸುರೇಶ್ ಹೇಳಿದ್ದೇನು?ಇಂದಿನ ಬಜೆಟ್‌ನಲ್ಲಿ ಹೊಸತೇನು ಇಲ್ಲ. ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಆಗುತ್ತಿದೆ. ಹೀಗೆ ಅನ್ಯಾಯ ಆದ್ರೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂದು ಸಂಸದ ಡಿಕೆ ಸುರೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸುರೇಶ್ ಹೇಳಿಕೆಗೆ ಬಿವೈವಿ ಕಿಡಿಸುರೇಶ್ ಹೇಳಿಕೆ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಎಕ್ಸ್‌ನಲ್ಲಿ ಕಿಡಿಕಾರಿದ್ದಾರೆ. ವಿದ್ರೋಹದ ಮನಸ್ಥಿತಿಯವರು ಮಾತ್ರ ದೇಶ ವಿಭಜನೆಯ ಮಾತನಾಡಲು ಸಾಧ್ಯ. ಪ್ರತ್ಯೇಕ ರಾಷ್ಟ್ರದ ರಾಷ್ಟ್ರದ ಕೂಗು ಎತ್ತಿರುವುದು ಅತಿರೇಕದ ಪರಮಾವಧಿಯಾಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Post a Comment