Narendra Modi: ಪ್ರಧಾನಿ ಸಾಧನೆಗೆ 'ಶಿವ ಸಮ್ಮಾನ್' ಪ್ರಶಸ್ತಿ, ಛತ್ರಪತಿ ಶಿವಾಜಿ ವಂಶಸ್ಥರಿಂದ ಘೋಷಣೆ


 ಪ್ರಧಾನಿ ನರೇಂದ್ರ ಮೋದಿ

 ಮಹಾರಾಷ್ಟ್ರದ ಪ್ರತಿಷ್ಠಿತ ಶಿವ ಸಮ್ಮಾನ್ ಪ್ರಶಸ್ತಿ ಘೋಷಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಈ ಪ್ರಶಸ್ತಿಗೆ ಘೋಷಿಸಲಾಗಿದೆ. ರಾಜಕೀಯ ಹಾಗೂ ಸಾಮಾಜಿಕ ರಂಗದಲ್ಲಿ ಪ್ರಧಾನಿಯವರ ಕೊಡುಗೆ, ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರಿಗೆ ಪ್ರತಿಷ್ಠಿತ ಶಿವ ಸಮ್ಮಾನ್ ಪ್ರಶಸ್ತಿಯನ್ನು (Shiv Samman Award) ಘೋಷಿಸಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ (Chhatrapati Shivaji Maharaj) ವಂಶಸ್ಥರು ನೀಡುವ ಪ್ರತಿಷ್ಠಿತ ಪ್ರಶಸ್ತಿ ಇದಾಗಿದ್ದು, ಫೆಬ್ರವರಿ 19ರಂದು ಶಿವಾಜಿ ಜನ್ಮದಿನದಂದು (Shivaji’s birthday) ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇನ್ನು ಮಹಾರಾಷ್ಟ್ರ (Maharashtra) ಉಪ ಮುಖ್ಯಮಂತ್ರಿ (Deputy Chief Minister) ದೇವೇಂದ್ರ ಫಡ್ನವಿಸ್ (Devendra Fadnavis) ಅವರು ಪ್ರಧಾನಿ ಮೋದಿಯವರನ್ನು ಅಭಿನಂದಿಸಿದ್ದಾರೆ. ಇದು ಎಲ್ಲಾ ಶಿವ ಭಕ್ತರಿಗೆ ಸಂತೋಷ ಮತ್ತು ಹೆಮ್ಮೆಯ ಕ್ಷಣವಾಗಿದೆ ಎಂದು ಫಡ್ನವೀಸ್ ಸಂತಸ ವ್ಯಕ್ತಪಡಿಸಿದ್ದಾರೆ.ಪ್ರಧಾನಿ ಮೋದಿಗೆ ಪ್ರತಿಷ್ಠಿತ ಶಿವ ಸಮ್ಮಾನ್ ಪ್ರಶಸ್ತಿಸಂಬಂಧಿತ ಸುದ್ದಿBudget 2024: ಮಾಲ್ಡೀವ್ಸ್‌ಗೆ 770 ಕೋಟಿ ಹೆಚ್ಚಿನ ಅನುದಾನ! ಇದರ ಹಿಂದಿದ್ಯಾ ಕೇಂದ್ರ ಸರ್ಕಾರದ ಪ್ಲಾನ್?ಅಕ್ರಮ ಕಟ್ಟಡ ನೆಲಸಮ ತಪ್ಪಿಸಲು ಖತರ್ನಾಕ್ ಪ್ಲಾನ್; ರಾಮ, ಸೀತೆ, ಮೋದಿ, ಯೋಗಿ ಮೂರ್ತಿ ಪ್ರತಿಷ್ಠಾಪನೆUnion Budget 2024 ದೇಶದ ನಾಲ್ಕು ಸ್ತಂಭಗಳನ್ನು ಬಲಪಡಿಸುತ್ತದೆ: ಪ್ರಧಾನಿ ನರೇಂದ್ರ ಮೋದಿಮುಂದಿನ 10 ವರ್ಷದಲ್ಲಿ 517 ಹೊಸ ವಿಮಾನ ಮಾರ್ಗ, 149 ವಿಮಾನ ನಿಲ್ದಾಣಗಳ ನಿರ್ಮಾಣ; ನಿರ್ಮಲಾ ಸೀತಾರಾಮನ್ಮಹಾರಾಷ್ಟ್ರದ ಪ್ರತಿಷ್ಠಿತ ಶಿವ ಸಮ್ಮಾನ್ ಪ್ರಶಸ್ತಿ ಘೋಷಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಈ ಪ್ರಶಸ್ತಿಗೆ ಘೋಷಿಸಲಾಗಿದೆ. ರಾಜಕೀಯ ಹಾಗೂ ಸಾಮಾಜಿಕ ರಂಗದಲ್ಲಿ ಪ್ರಧಾನಿಯವರ ಕೊಡುಗೆ, ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.ಶಿವಾಜಿ ಜನ್ಮದಿನದಂದು ಪ್ರಶಸ್ತಿ ಪ್ರಧಾನಫೆಬ್ರವರಿ 19ರಂದು ಸತಾರಾದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಿವ ಸಮ್ಮಾನ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ಛತ್ರಪತಿ ಶಿವಾಜಿ ಮಹಾರಾಜರ 13ನೇ ವಂಶಸ್ಥರಾದ ಛತ್ರಪತಿ ಉದಯ್‌ರಾಜೇ ಭೋಸಲೆ ಅವರು ಈ ಪ್ರಶಸ್ತಿ ಬಗ್ಗೆ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: Gyanvapi: ಜ್ಞಾನವಾಪಿಯೊಳಗೆ ಪೂಜಾ ಸಂಭ್ರಮ, ಭಕ್ತರು ಭಾವುಕ! ಐತಿಹಾಸಿಕ ಕ್ಷಣಗಳ ಫೋಟೋ ಇಲ್ಲಿವೆಶಿವಾಜಿ ರಾಜವಂಶಸ್ಥರು ನೀಡುವ ಪ್ರಶಸ್ತಿಈ ಪ್ರಶಸ್ತಿಯನ್ನು ಸತಾರಾ ರಾಜಮನೆತನ ವಂಶಸ್ಥರು ಮತ್ತು ಶಿವಭಕ್ತರು ಸ್ಥಾಪಿಸಿದ್ದಾರೆ. ಸೈನಿಕ್ ಸ್ಕೂಲ್ ಮೈದಾನದಲ್ಲಿ ಅದ್ಧೂರಿ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಇನ್ನು ಇದರ ನೇತತ್ವ ವಹಿಸಿರುವ ಉದಯರಾಜೆ ಪ್ರಸ್ತುತ ಬಿಜೆಪಿ ರಾಜ್ಯಸಭಾ ಸಂಸದರಾಗಿದ್ದಾರೆ. ಪ್ರಧಾನಿ ಮೋದಿಗೆ ಅಭಿನಂದನೆ ತಿಳಿಸಿದ ಫಡ್ನವೀಸ್ಮೋದಿಯವರಿಗೆ ಪ್ರಶಸ್ತಿ ನೀಡುತ್ತಿರುವುದಕ್ಕೆ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಸಂತಸ ವ್ಯಕ್ತಪಡಿಸಿದ್ದಾರೆ. ಭಾರತದ ಶ್ರೇಷ್ಠ ಮತ್ತು ಆದರ್ಶ ರಾಜ ಛತ್ರಪತಿ ಶಿವಾಜಿ ಮಹಾರಾಜರ ಹೆಸರಿನಲ್ಲಿ ರಾಜಮನೆತನದವರು ನೀಡುವ `ಶಿವ ಸಮ್ಮಾನ್ ಪ್ರಶಸ್ತಿ’ಯನ್ನು ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾಗುವುದು. ಇದು ಎಲ್ಲಾ ಶಿವಭಕ್ತರಿಗೆ ಸಂತೋಷ ಮತ್ತು ಹೆಮ್ಮೆಯ ಕ್ಷಣವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಅವರು ತಮ್ಮ ಟ್ವಿಟರ್ ಪೊಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

Post a Comment

Previous Post Next Post