ಬಿಕೆ ಹರಿಪ್ರಸಾದ್, ಯತೀಂದ್ರ , ಸಿಎಂ ಸಿದ್ದರಾಮಯ್ಯ
ರಾಮಮಂದಿರ ಎಲ್ಲರಿಗೂ ಸೇರಿದ್ದಾಗಿದೆ. ಇದು ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ. ರಾಮ ಮಂದಿರ ಉದ್ಘಾಟನೆಯನ್ನು ತಮ್ಮ ಪಕ್ಷದ ಕಾರ್ಯಕ್ರಮ ರೀತಿ ಮಾಡಿಕೊಂಡು, ತಾವೇ ಈ ಮಂದಿರವನ್ನು ನಿರ್ಮಿಸಿದ್ದೇವೆ ಎಂಬಂತೆ ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬೆಂಗಳೂರು: ಕರ್ನಾಟಕದಲ್ಲಿ (Karnataka) ಗೋದ್ರಾ ಹತ್ಯಾಕಾಂಡ ದಂತಹ (Godhra-Like incident) ಘಟನೆ ನಡೆಯುವ ಸಾಧ್ಯತೆ ಇದೆ. ಹಾಗಾಗಿ ಅಯೋಧ್ಯೆಗೆ (Ayodhya) ಹೋಗುವವರೆಗೆ ಸರ್ಕಾರವೇ ರಕ್ಷಣೆ ಒದಗಿಸಿಕೊಡಬೇಕು ಎಂದು ಎಂಎಲ್ಸಿ ಬಿಕೆ ಹರಿಪ್ರಸಾದ್ (BK Hariprasad) ಆಗ್ರಹಿಸಿದ್ದರು. ನನಗೆ ಮಾಹಿತಿ ಇದೆ, ಅದಕ್ಕೆ ಹೇಳುತ್ತಿದ್ದೇನೆ ಎಂದು ಹೇಳಿದ್ದರು. ಈ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಮಾಜಿ ಶಾಸಕ ಹಾಗೂ ಸಿದ್ದರಾಮಯ್ಯ ಪುತ್ರ ಯತೀಂದ್ರ ಬಿಜೆಪಿಯವರು ಪ್ರತಿ ಚುನಾವಣೆ ಸಂದರ್ಭದಲ್ಲಿ ಈ ರೀತಿ ಏನಾದರೂ ಘಟನೆ ಇಟ್ಕೊಂಡು ಬರುತ್ತಾರೆ. ಅದನ್ನ ನೋಡಿರುವ ಬಿಕೆ ಹರಿಪ್ರಸಾದ್ಗೆ ಆ ಹೇಳಿಕೆ ನೀಡಿರಬಹುದು ಎಂದು ಸಮರ್ಥಿಸಿಕೊಂಡಿದ್ದಾರೆ.ಬಿಜೆಪಿ ಗಿಮಿಕ್ ಮಾಡುತ್ತೆಸಂಬಂಧಿತ ಸುದ್ದಿಭಾರತ ಹಿಂದೂ ರಾಷ್ಟ್ರವಾದರೆ ಮತ್ತೊಂದು ಪಾಕ್, ಅಫ್ಘಾನಿಸ್ತಾನದಂತಾಗುತ್ತೆ; ಯತೀಂದ್ರ ಸಿದ್ಧರಾಮಯ್ಯCM Siddaramaiah: ನಿತ್ಯಾನಂದನ ರೀತಿ ಸಿದ್ದರಾಮಯ್ಯರಿಗೂ ಭಕ್ತರಿದ್ದಾರೆ ಎಂದ ಕಾಂಗ್ರೆಸ್ ಎಂಎಲ್ಸಿಅಂದು ಉದ್ಧವ್ ಠಾಕ್ರೆ, ಇಂದು ಬಿಕೆ ಹರಿಪ್ರಸಾದ್! INDIA ನಾಯಕರಿಗೆ ಇನ್ನೂ ಏನೆಲ್ಲ ರಹಸ್ಯ ಗೊತ್ತು?ಗೋಧ್ರಾ ದುರಂತ ರೀತಿ ಸಂಭವಿಸಬಹುದು, ಅಯೋಧ್ಯೆಗೆ ಹೋಗೋರಿಗೆ ರಕ್ಷಣೆ ಕೊಡಿ; BKH ಸ್ಫೋಟಕ ಹೇಳಿಕೆಮೈಸೂರಿನಲ್ಲಿ ಮಾತನಾಡಿದ ಯತೀಂದ್ರ, ಪ್ರತಿ ಸಾರಿ ಲೋಕಸಭಾ ಚುನಾವಣೆ ಹತ್ತಿರಬಂದಾಗ ಏನಾದರೂ ಒಂದು ಗಿಮಿಕ್ ಮಾಡ್ತಾರೆ, ಕಳೆದ ಚುನಾವಣೆಯಲ್ಲಿ ಪುಲ್ವಾಮ ದುರಂತವನ್ನು ಇಟ್ಕೊಂಡು ಚುನಾವಣೆ ಮಾಡಿದ್ದರು. ಗೋಧ್ರಾ ಹತ್ಯಾಕಂಡ ದುರಂತವನ್ನ 2014ರ ಚುನಾವಣೆಗೆ ಬಳಸಿಕೊಂಡರು ರಾಜಕೀಯ ಲಾಭ ಪಡೆದುಕೊಂಡು ಅಧಿಕಾರ ಪಡೆದಿದ್ದಾರೆ. ಪ್ರತೀ ಬಾರಿ ಬಿಜೆಪಿಯವರು ಆ ರೀತಿ ಮಾಡಿರೋದನ್ನ ನೋಡಿ ಹರಿಪ್ರಸಾದ್ ಅವರು ಅಂತಹ ಘಟನೆ ನಡೆಯಬಹುದು ಎಂದು ಹೇಳಿರಬಹುದು ಎಂದರು.ಇದನ್ನೂ ಓದಿ: Yathindra Siddaramaiah: ಭಾರತ ಹಿಂದೂ ರಾಷ್ಟ್ರವಾದರೆ ಮತ್ತೊಂದು ಪಾಕ್, ಅಫ್ಘಾನಿಸ್ತಾನದಂತಾಗುತ್ತೆ; ಯತೀಂದ್ರ ಸಿದ್ಧರಾಮಯ್ಯ ರಾಮಮಂದಿರ ಹಿಂದೂಗಳಿಗೆ ಸೇರಿದ್ದುರಾಮಮಂದಿರ ಎಲ್ಲರಿಗೂ ಸೇರಿದ್ದಾಗಿದೆ. ಇದು ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ. ರಾಮ ಮಂದಿರ ಉದ್ಘಾಟನೆಯನ್ನು ತಮ್ಮ ಪಕ್ಷದ ಕಾರ್ಯಕ್ರಮ ರೀತಿ ಮಾಡಿಕೊಂಡು, ತಾವೇ ಈ ಮಂದಿರವನ್ನು ನಿರ್ಮಿಸಿದ್ದೇವೆ ಎಂಬಂತೆ ರಾಜಕೀಯ ಲಾಭ ಪಡೆಯುತ್ತಿದ್ದಾರೆ. ಇದು ತಪ್ಪು. ಯಾವುದೇ ಕಾಣಕ್ಕೂ ದೇವರು ಮತ್ತು ಧರ್ಮವನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳಬಾರದು. ಆದರೆ ಬಿಜೆಪಿಯವರು ಇದರ ಲಾಭವನ್ನು ಪಡೆಯುತ್ತಿದ್ದಾರೆ ಎಂದರು.ಬಿಜೆಪಿಯವರು ರಾಜಕೀಯ ಕಾರ್ಯಕ್ರಮವಾಗಿ ಮಾಡಿಕೊಂಡಿರುವುದರಿಂದ ಅವರು ತಮಗೆ ಬೇಕಾದವರಿಗೆ ಆಹ್ವಾನ ನೀಡಿ ಕಾರ್ಯಾಕ್ರಮ ಮಾಡುತ್ತಿದ್ದಾರೆ. ಮಾಡಿಕೊಳ್ಳಲಿ ಜನ ನೋಡುತ್ತಿದ್ದಾರೆ, ಧರ್ಮ ಮುಖ್ಯವಲ್ಲ, ಜನರಿಗೆ ಯಾರು ಕೆಲಸ ಮಾಡುತ್ತಾರೋ ಅವರೇ ಮುಖ್ಯ ಎಂದರು. ಪ್ರತಿಕ್ರಿಯಿಸದ ಸಿದ್ದರಾಮಯ್ಯಬಿಕೆ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ಅನುಮಾನ ಊಹೆಗಳಿಗೆ ನಾನು ಉತ್ತರ ಕೊಡಲ್ಲ ಎಂದು ಹೇಳಿದ್ದಾರೆ.ಈ ವಿಚಾರವಾಗಿ ಮಾಜಿ ಸಂಸದ ಉಗ್ರಪ್ಪ ಪ್ರತಿಕ್ರಿಯೆ ನೀಡಿದ್ದು, ಬಿ.ಕೆ.ಹರಿಪ್ರಸಾದ್ ಹಿರಿಯರು ಅವರಿಗೆ ಮಾಹಿತಿ ಇರಬಹುದು. ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಪ್ರಧಾನಮಂತ್ರಿ, ಕೇಂದ್ರ ಗೃಹಸಚಿವರು ಏನು ಬೇಕಾದರೂ ಮಾಡಬಹುದು. ಅವರು ವಿಚ್ಛಿದ್ರಕಾರಿ ಮನಸ್ಥಿತಿಯವರು ಸಮಯ ಸಾಧಕರು, ಇದಕ್ಕೆ ಉದಾಹರಣೆ ಹುಬ್ಬಳ್ಳಿ ಪ್ರಕರಣ ಎಂದು ಕಿಡಿ ಕಾರಿದರು.

Post a Comment