ದ್ಧವ್ ಠಾಕ್ರೆ, ಹರಿಪ್ರಸಾದ್
ಈ ಹೇಳಿಕೆ ನೋಡಿದೆ ಈ INDIA ನಾಯಕರ ಬಳಿ ಇನ್ಯಾವೆಲ್ಲ ಮಾಹಿತಿ ಇರಬಹುದು ಅಂತ ನೆಟ್ಟಿಗರು ಕೇಳುತ್ತಿದ್ದಾರೆ. ಯಾರಿಗೂ ತಿಳಿಯದ್ದು, ನಿಮಗೆ ಮಾತ್ರ ಹೇಗೆ ತಿಳಿತು ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯವಾದ ಶ್ರೀರಾಮಮಂದಿರದ (Ayodhya Ram Mandir) ಲೋಕಾರ್ಪಣೆಗೆ ಕೌಂಟ್‌ಡೌನ್ ಶುರುವಾಗಿದ್ದು, ಇದೇ ಜನವರಿ 22ರಂದು ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭ ನಡೆಯಲಿದೆ. ಬರೋಬ್ಬರಿ 500 ವರ್ಷಗಳ ಕಾಯುವಿಕೆಯ ನಂತರ, ರಾಮಲಲ್ಲಾ ತನ್ನ ಭವ್ಯವಾದ ದೇಗುಲಕ್ಕೆ ಮರಳಲಿದ್ದಾನೆ. ಈ ನಿಟ್ಟಿನಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಶಂಕುಸ್ಥಾಪನೆಗೂ ಮುನ್ನ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳಲಿದೆ.ಪ್ರಧಾನಿ ಮೋದಿ (PM Modi) ಸೇರಿದಂತೆ ಗಣ್ಯಾತಿಗಣ್ಯರೆ ಈ ರಾಮ ಮಂದಿರದ ಉದ್ಘಾಟನೆಗೆ ಆಗಮಿಸಲಿದ್ದಾರೆ. ವಿಐಪಿ, ವಿವಿಐಪಿಗಳಿಗೆ ಈಗಾಗಲೇ ಆಹ್ವಾನ (Invite) ಕಳುಹಿಸಲಾಗಿದೆ. ಇದೆಲ್ಲದರ ನಡುವೆ ಇಂಡಿಯಾ ನಾಯಕರು ಕೊಟ್ಟಿರುವ ಹೇಳಿಕೆ ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.‘ಗೋಧ್ರಾ ದುರಂತ ರೀತಿ ಸಂಭವಿಸಬಹುದು ಎಂದ ಹರಿಪ್ರಸಾದ್!ಸಂಬಂಧಿತ ಸುದ್ದಿರಾಜ್ಯದಲ್ಲಿ ಗೋಧ್ರಾ ರೀತಿ ದುರಂತ ಹೇಳಿಕೆ! ಬಿಕೆ ಹರಿಪ್ರಸಾದ್ ಬೆಂಬಲಕ್ಕೆ ಯತೀಂದ್ರ, ಪ್ರತಿಕ್ರಿಯಿಸದ ಸಿಎಂಮೈದಾನದಲ್ಲಿಯೇ ರಾಮನನ್ನು ಸ್ಮರಿಸಿದ ಕೊಹ್ಲಿ, ‘ವಿರಾಟ್‘ ರೂಪಕ್ಕೆ ಫ್ಯಾನ್ಸ್ ಫಿದಾRamayan: ಶ್ರೀಲಂಕಾದಲ್ಲಿದೆ ರಾಮಾಯಣದಲ್ಲಿ ಉಲ್ಲೇಖವಾಗೋ 50 ಸ್ಥಳಗಳು!ಭಾರತ ಹಿಂದೂ ರಾಷ್ಟ್ರವಾದರೆ ಮತ್ತೊಂದು ಪಾಕ್, ಅಫ್ಘಾನಿಸ್ತಾನದಂತಾಗುತ್ತೆ; ಯತೀಂದ್ರ ಸಿದ್ಧರಾಮಯ್ಯಕಾಂಗ್ರೆಸ್ ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್ (Congress MLC BK Hariprasad) ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಕರಸೇವಕರು ಹಿಂದಿರುಗುವಾಗ ಗೋದ್ರಾ ದುರಂತ ನಡೆದಿತ್ತು. ಆದ್ದರಿಂದ ಅಯೋಧ್ಯೆಗೆ ತೆರಳುವ ಭಕ್ತರಿಗೆ ರಕ್ಷಣೆ ನೀಡಬೇಕು. ಈ ಬಗ್ಗೆ ನನಗೆ ಮಾಹಿತಿ ಸಿಗುತ್ತಿದೆ. ಆದ್ದರಿಂದ ಈ ಮಾತು ಹೇಳುತ್ತಿದ್ದೇನೆ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ ಎಂದು ಸುವರ್ಣ ನ್ಯೂಸ್ ವರದಿ ಮಾಡಿದೆ.ಅಂದು ಇದೇ ಮಾತನ್ನು ಹೇಳಿದ್ದ ಉದ್ಧವ್ ಠಾಕ್ರೆ! ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ (Chief Minister) ಮತ್ತು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ (Uddhav Thackeray) ಇದೇ ರೀತಿಯ ಸ್ಫೋಟಕ ಹೇಳಿಕೆ ನೀಡಿದ್ದರು. ದೇಶದಲ್ಲಿ ಗೋಧ್ರಾ ಹತ್ಯಾಕಾಂಡದಂತಹ (Godhra Incident) ಘಟನೆ ಮತ್ತೆ ಮರುಕಳಿಸಬಹುದು ಎಂದು ಹೇಳಿದ್ದರು.ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯಲ್ಲಿ ರಾಮಮಂದಿರ (Ram Mandir) ಉದ್ಘಾಟನಾ ಸಮಾರಂಭಕ್ಕೆ ದೇಶಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯಿದೆ, ಆದರೆ ವಾಪಸಾತಿ ಸಮಯದಲ್ಲಿ ಗೋದ್ರಾ ರೀತಿಯ ಘಟನೆ ಸಂಭವಿಸಬಹುದು ಎಂದು ಉದ್ಧವ್ ಠಾಕ್ರೆ ಭವಿಷ್ಯ ನುಡಿದಿದ್ದಾರೆ.ಇದನ್ನೂ ಓದಿ: ಗೋಧ್ರಾ ದುರಂತ ರೀತಿ ಸಂಭವಿಸಬಹುದು, ಅಯೋಧ್ಯೆಗೆ ಹೋಗೋರಿಗೆ ರಕ್ಷಣೆ ಕೊಡಿ; BKH ಸ್ಫೋಟಕ ಹೇಳಿಕೆINDIA ನಾಯಕರ ಬಳಿ ಇನ್ನೇನೆಲ್ಲಾ ಮಾಹಿತಿ ಇದೆ!ಅಂದು ಉದ್ಧವ್ ಠಾಕ್ರೆ ಹೇಳಿಕೆಗಳು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಕರ್ನಾಟಕ ಕಾಂಗ್ರೆಸ್ ಎಂಎಲ್‌ಸಿ ಈ ರೀತಿ ಹೇಳಿಕೆ ನೀಡಿರೋದು ಮತ್ತಷ್ಟು ಆಶ್ಚರ್ಯವಾಗಿದೆ. ಕರ್ನಾಟಕ ಸರ್ಕಾರ ಸಹ ರಾಜ್ಯದಲ್ಲಿ ಕಟ್ಟೆಚ್ಚರವಹಿಸಬೇಕು. ಇಂತಹದ್ದೇ ವೇಳೆ ಗುಜರಾತಿನ ಗೋಧ್ರಾದಲ್ಲಿ ಕರಸೇವಕರ ದಹನ ನಡೆದಿತ್ತು. ಅದೇ ರೀತಿಯ ವಾತಾವರಣ ಸೃಷ್ಟಿ ಮಾಡೋಕೆ ಪ್ರಯತ್ನಗಳು ನಡೆಯುತ್ತಿವೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.ಈ ಹೇಳಿಕೆ ನೋಡಿದೆ ಈ INDIA ನಾಯಕರ ಬಳಿ ಇನ್ಯಾವೆಲ್ಲ ಮಾಹಿತಿ ಇರಬಹುದು ಅಂತ ನೆಟ್ಟಿಗರು ಕೇಳುತ್ತಿದ್ದಾರೆ. ಯಾರಿಗೂ ತಿಳಿಯದ್ದು, ನಿಮಗೆ ಮಾತ್ರ ಹೇಗೆ ತಿಳಿತು ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಮತ್ತೆ ಕೆಲವರು ದೇವರ ಕೆಲಸದಲ್ಲೂ ರಾಜಕೀಯ ಮಾಡೋಕೆ ಬರಬೇಡಿ. ಭಯದ ವಾತಾವರಣ ಸೃಷ್ಟಿಸೋಕೆ ಪ್ರಯ್ನತಿಸಬೇಡಿ ಅಂತ ಕ್ಲಾಸ್ ತೆಗೆದುಕೊಳ್ತಿದ್ದಾರೆ.

Post a Comment