ಡಿಕೆ ಶಿವಕುಮಾರ್, ಡಿಸಿಎಂ
Disproportionate Assets Case: ತನಿಖೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ರೂ ಲೋಕಾಯುಕ್ತ ಪೊಲೀಸರು ಇದುವರೆಗೂ ಎಫ್ಐಆರ್ (FIR) ದಾಖಲಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಅವರಿಗ ಮತ್ತೊಂದು ತನಿಖೆಯ ಶಾಕ್ ಎದುರಾಗಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣ ಲೋಕಾಯುಕ್ತ ತನಿಖೆ (Lokayukta Investigation) ನಡೆಸಲು ರಾಜ್ಯ ಸರ್ಕಾರ (Government of Karnataka) ಆದೇಶ ಹೊರಡಿಸಿದೆ. ಈ ಸಂಬಂಧ ಲೋಕಾಯುಕ್ತ ಡಿಜಿಪಿಗೆ ಆದೇಶದ ಪತ್ರವನ್ನು ರಾಜ್ಯ ಸರ್ಕಾರ ರವಾನಿಸಿದೆ. ಈಗಾಗಲೇ ಅಕ್ರಮ ಆಸ್ತಿ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಸರ್ಕಾರದ ಪೂರ್ವಾನುಮತಿ ವಾಪಸ್ಸು ಬಳಿಕ ಲೋಕಾಯುಕ್ತಕ್ಕೆ ಪ್ರಕರಣ ವರ್ಗಾವಣೆಯಾಗಿದೆ. ಡಿಸೆಂಬರ್ 22 ನೇ ತಾರೀಖಿನ ದಿನಾಂಕದಲ್ಲಿ ಆದೇಶ ಹೊರಡಿಸಲಾಗಿದೆ. ತನಿಖೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ರೂ ಲೋಕಾಯುಕ್ತ ಪೊಲೀಸರು ಇದುವರೆಗೂ ಎಫ್ಐಆರ್ (FIR) ದಾಖಲಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.ಕರಸೇವಕನ ಬಂಧನದ ಬೆಂಕಿಸಂಬಂಧಿತ ಸುದ್ದಿಭಾರತ ಹಿಂದೂ ರಾಷ್ಟ್ರವಾದರೆ ಮತ್ತೊಂದು ಪಾಕ್, ಅಫ್ಘಾನಿಸ್ತಾನದಂತಾಗುತ್ತೆ; ಯತೀಂದ್ರ ಸಿದ್ಧರಾಮಯ್ಯCM Siddaramaiah: ನಿತ್ಯಾನಂದನ ರೀತಿ ಸಿದ್ದರಾಮಯ್ಯರಿಗೂ ಭಕ್ತರಿದ್ದಾರೆ ಎಂದ ಕಾಂಗ್ರೆಸ್ ಎಂಎಲ್ಸಿಗೋಧ್ರಾ ದುರಂತ ರೀತಿ ಸಂಭವಿಸಬಹುದು, ಅಯೋಧ್ಯೆಗೆ ಹೋಗೋರಿಗೆ ರಕ್ಷಣೆ ಕೊಡಿ; BKH ಸ್ಫೋಟಕ ಹೇಳಿಕೆSiddaramaiah: ಬಿಎಸ್ವೈ ಬಂಧನವಾದಾಗ ಯಾಕೆ ಪ್ರತಿಭಟನೆ ಮಾಡಲಿಲ್ಲ; ಸಿಎಂ ಪ್ರಶ್ನೆ31 ವರ್ಷಗಳ ಹಿಂದೆ ರಾಮಜನ್ಮಭೂಮಿ ಹೋರಾಟದ ವೇಳೆ ನಡೆದಿದ್ದ ಗಲಭೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಡಿ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಈಗ ರಾಜ್ಯ ರಾಜಕೀಯದಲ್ಲಿ ಭಾರೀ ವಿವಾದ ಹುಟ್ಟುಹಾಕಿದೆ.ಹುಬ್ಬಳ್ಳಿಯಲ್ಲಿ ಭಾರೀ ಪ್ರತಿಭಟನೆಕೇಸ್ ರೀಓಪನ್ ಮಾಡಿರೋದು ಬಿಜೆಪಿ ಸಿಟ್ಟಿಗೆ ಕಾರಣವಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ ಮುಂದಾಗಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಹೋರಾಟಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕರೆ ಕೊಟ್ಟಿದ್ದಾರೆ. ವಿಜಯೇಂದ್ರ ನೇತೃತ್ವದಲ್ಲಿ ಬೆಂಗಳೂರಲ್ಲಿ ಹಾಗೂ ಅಶೋಕ್ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಭಾರೀ ಪ್ರತಿಭಟನೆ ನಡೆಯಲಿದೆ.ಕಾಂಗ್ರೆಸ್ ನಾಯಕರ ತಿರುಗೇಟುಶ್ರೀಕಾಂತ್ ಪೂಜಾರಿಯನ್ನ ಬಂಧಿಸಿ ಹಿಂದೂ ಭಾವನೆಯನ್ನ ಕಾಂಗ್ರೆಸ್ ನಾಯಕರು ಕೆರಳಿಸಿದ್ದಾರೆ ಅಂತ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಇದಕ್ಕೆ ಸಿಎಂ ಆದಿಯಾಗಿ ಕಾಂಗ್ರೆಸ್ ನಾಯಕರು ಕೂಡ ತಿರುಗೇಟು ಕೊಟ್ಟಿದ್ದು ತಪ್ಪು ಮಾಡಿದವರನ್ನ ಬಿಡ್ಬೇಕ ಅಂತಾ ಪ್ರಶ್ನಿಸಿದ್ದಾರೆ.ಇದನ್ನೂ ಓದಿ: Liquor Price Hike; ಹೊಸ ವರ್ಷದ ಎಣ್ಣೆ ಗುಂಗು ಇಳಿಸಿದ ಸರ್ಕಾರ; ಮದ್ಯದ ಬೆಲೆಯಲ್ಲಿ ಭಾರೀ ಹೆಚ್ಚಳಈ ಕೇಸ್ ಸಂಬಂಧ, ಬಂಧಿತ ಶ್ರೀಕಾಂತ್ ಪೂಜಾರಿ ಬಿಡುಗಡೆಗೆ ಹುಬ್ಬಳ್ಳಿ ಜಿಲ್ಲಾ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಬಿಜೆಪಿ ಸಿದ್ಧತೆ ನಡೆಸಿದೆ.

Post a Comment