Union Budget 2024: ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌! ಕೇಂದ್ರ ಬಜೆಟ್‌ನಲ್ಲಿ ಬಂಪರ್ ಉಡುಗೊರೆ ಸಾಧ್ಯತೆ


 ಕೇಂದ್ರ ಬಜೆಟ್‌-2024

 Union Budget 2024: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಲಿರುವ ಬಜೆಟ್ ಕೇವಲ ಮಧ್ಯಂತರವಾಗಿದ್ದರೂ, ಜನರು ತಮ್ಮ ನಿರೀಕ್ಷೆಗಳನ್ನು ಹೆಚ್ಚು ಇಟ್ಟುಕೊಂಡಿದ್ದಾರೆ. ಅದರಲ್ಲೂ ಸರ್ಕಾರಿ ನೌಕರರು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಅವರು ಇಂದು (ಫೆಬ್ರವರಿ 1) ಮೋದಿ ಸರ್ಕಾರದ ಈ ಅವಧಿಯ ಕೊನೆಯ ಬಜೆಟ್‌ ಅನ್ನು ಮಂಡನೆ ಮಾಡಲಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಬಜೆಟ್ ಮಂಡನೆಯಾಗಲಿದ್ದು, (Union Budget 2024) ಇದಕ್ಕಾಗಿ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ.ಇದನ್ನೂ ಓದಿ: Budget 2024: LPG ಗ್ಯಾಸ್‌ನಿಂದ ಹಣ ವರ್ಗಾವಣೆವರೆಗೆ, ಬಜೆಟ್ ಮಂಡನೆ ದಿನವೇ ದೇಶಾದ್ಯಂತ ಜಾರಿಯಾಗಲಿದೆ ಈ 6 ಮಹತ್ವದ ಬದಲಾವಣೆಗಳುಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗದ ಕಾರಣ ಇದು ಮಧ್ಯಂತರ ಬಜೆಟ್‌ ಆಗಿದ್ದರೂ ಜನರು ಹಣಕಾಸು ಸಚಿವರಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ವಿಶೇಷವಾಗಿ ಸರ್ಕಾರಿ ನೌಕರರ ಬಹುಕಾಲದ ಬೇಡಿಕೆ ಈ ಬಾರಿ ಈಡೇರುವ ವಿಶ್ವಾಸವನ್ನು ಸರ್ಕಾರಿ ನೌಕರರು ಹೊಂದಿದ್ದಾರೆ.ಸಂಬಂಧಿತ ಸುದ್ದಿUnion Budget 2024: ಇಂದು ಕೇಂದ್ರ ಬಜೆಟ್ ಮಂಡನೆ, ಕರ್ನಾಟಕದ ನಿರೀಕ್ಷೆಗಳುಇಂದು ಮೋದಿ 2.0 ಸರ್ಕಾರದ ಕೊನೆಯ ಬಜೆಟ್; ವಿಪಕ್ಷದವ್ರಿಗೆ ನಮೋ ಚಾಟಿ, ಬಂಪರ್​ ಸಿಗೋದು ಪಕ್ಕನಾ?ಹಳೆಯ ಮತ್ತು ಹೊಸ ತೆರಿಗೆ ಪದ್ಧತಿ, ಇವೆರಡರಲ್ಲಿ ಸಂಬಳ ಪಡೆಯುವ ಉದ್ಯೋಗಿಗಳಿಗೆ ಯಾವುದು ಉತ್ತಮ?PM Kisan: ರೈತರಿಗೆ ಕೇಂದ್ರ ಸರ್ಕಾರದಿಂದ ಗುಡ್​ನ್ಯೂಸ್​; ಪಿಎಂ ಕಿಸಾನ್ ಹಣ ಶೇಕಡಾ 50ರಷ್ಟು ಹೆಚ್ಚಳ!ಕೊರೊನಾ ಲಾಕ್‌ಡೌನ್‌ ಕಾರಣದಿಂದಾಗಿ, ಕಳೆದ 3 ವರ್ಷಗಳು ಸರ್ಕಾರಕ್ಕೂ ತುಂಬಾ ಸವಾಲಾಗಿ ಪರಿಣಮಿಸಿತ್ತು. ಇದೇ ಕಾರಣಕ್ಕೆ ಸರ್ಕಾರಿ ನೌಕರರ ಹಿತದೃಷ್ಟಿಯಿಂದ ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಈ ಬಾರಿ ಸರ್ಕಾರ ತನ್ನ ಖಜಾನೆಯನ್ನು ತೆರೆಯುವ ಸಾಧ್ಯತೆ ಇದ್ದು, ಹೀಗಾಗಿ ಸರ್ಕಾರಿ ನೌಕರರ ಹಿತದೃಷ್ಟಿಯಿಂದ ಮೂರು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ಮಾರುಕಟ್ಟೆ ತಜ್ಞರು ನಂಬಿದ್ದಾರೆ. ಇದು ಒಂದು ವೇಳೆ ನಿಜವಾದರೆ ಸರ್ಕಾರಿ ನೌಕರರ ಕೈಗೆ ಸಾಕಷ್ಟು ಹಣ ಬರುತ್ತದೆ, ಇದು ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸಲಿದೆ. 18 ತಿಂಗಳ ಬಾಕಿಸರ್ಕಾರಿ ನೌಕರರು ತಮ್ಮ 18 ತಿಂಗಳ ಫ್ರೀಜ್ ಬಾಕಿ ಪಾವತಿಗಾಗಿ ಹೆಚ್ಚು ಕಾಯುತ್ತಿದ್ದಾರೆ. ಕೊರೊನಾ ಅವಧಿಯಲ್ಲಿ, ಸರ್ಕಾರವು ಜನವರಿ 2020 ರಿಂದ ಜುಲೈ 2021 ರವರೆಗೆ 18 ತಿಂಗಳವರೆಗೆ ಡಿಎ ಅಂದರೆ ತುಟ್ಟಿಭತ್ಯೆಯನ್ನು ಹೆಚ್ಚಿಸಿರಲಿಲ್ಲ. ಆದರೆ ಅಂದಿನಿಂದ ತುಟ್ಟಿಭತ್ಯೆಯನ್ನು ಹಲವಾರು ಬಾರಿ ಹೆಚ್ಚಿಸಲಾಗಿದೆ. ಈ ಮಧ್ಯೆ 18 ತಿಂಗಳ ಫ್ರೀಜ್ ಮಾಡಿದ ಡಿಎ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾತುಕತೆ ನಡೆದಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಸರಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದು ಎಂದು ಅಂದಾಜಿಸಲಾಗಿದೆ.ಫಿಟ್‌ಮೆಂಟ್ ಅಂಶದಲ್ಲಿ ಬದಲಾವಣೆಸರ್ಕಾರಿ ನೌಕರರು ಬಹಳ ದಿನಗಳಿಂದ ಕಾಯುತ್ತಿರುವ ಎರಡನೆಯ ವಿಷಯವೆಂದರೆ ಫಿಟ್‌ಮೆಂಟ್ ಅಂಶ. ನೌಕರರ ಸಂಘಟನೆಗಳು ಕೂಡ ಫಿಟ್‌ಮೆಂಟ್ ಅಂಶದಲ್ಲಿ ಬದಲಾವಣೆಗೆ ದೀರ್ಘಕಾಲದಿಂದ ಒತ್ತಾಯಿಸುತ್ತಿವೆ. ಈಗಿರುವ ಶೇ.2.57ರಿಂದ ಶೇ.3.68ಕ್ಕೆ ಹೆಚ್ಚಿಸಬೇಕು ಎನ್ನುತ್ತಾರೆ. ಒಂದು ವೇಳೆ ಸರ್ಕಾರ ಈ ಬಗ್ಗೆ ನಿರ್ಧರಿಸಿದರೆ ಕನಿಷ್ಠ ಮೂಲ ವೇತನ 18 ಸಾವಿರದಿಂದ 26 ಸಾವಿರಕ್ಕೆ ಏರಿಕೆಯಾಗಲಿದೆ.ಇದನ್ನೂ ಓದಿ:   Bollywood Actress: ಖ್ಯಾತ ಕ್ರಿಕೆಟಿಗನ ಪ್ರೀತಿಗೆ ಬಿದ್ದು ಸಿನಿಲೈಫ್ ಪಣಕ್ಕಿಟ್ಟ ಪ್ರಸಿದ್ಧ ನಟಿ, ಅತ್ತ ಮನೆಯವರೂ ವಿಲನ್! ಪ್ರೇಮವೂ ಫೇಲ್! 8ನೇ ವೇತನ ಆಯೋಗಸರಕಾರಿ ನೌಕರರ ವೇತನ ಪರಿಷ್ಕರಣೆ ಹಾಗೂ ಪ್ರಸ್ತುತ ಮಾರುಕಟ್ಟೆಗೆ ಅನುಗುಣವಾಗಿ ಮಾಡಲು 8ನೇ ವೇತನ ಆಯೋಗವನ್ನು ಇನ್ನೂ ರಚಿಸಿಲ್ಲ. ಈ ಬಗ್ಗೆ ನೌಕರರ ಸಂಘಟನೆಗಳು ಬಹಳ ದಿನಗಳಿಂದ ಹೋರಾಟ ನಡೆಸುತ್ತಿವೆ. ಈಗ ಸರ್ಕಾರ 8ನೇ ವೇತನ ಆಯೋಗದ ಲೆಕ್ಕಾಚಾರವನ್ನು ಮಾಡಿ ಅದರ ಶಿಫಾರಸಿನ ಆಧಾರದ ಮೇಲೆ ವೇತನವನ್ನು ಹೆಚ್ಚಿಸುವ ಸಮಯ ಬಂದಿದೆ ಎಂದು ತಜ್ಞರು ಹೇಳುತ್ತಾರೆ.ಒಟ್ಟಿನಲ್ಲಿ ಕೊರೊನಾ ಲಾಕ್‌ಡೌನ್‌ ಕಾರಣದಿಂದಾಗಿ, ಕಳೆದ 3 ವರ್ಷಗಳು ಸರ್ಕಾರಕ್ಕೂ ತುಂಬಾ ಸವಾಲಾಗಿ ಪರಿಣಮಿಸಿತ್ತು. ಇದೇ ಕಾರಣಕ್ಕೆ ಸರ್ಕಾರಿ ನೌಕರರ ಹಿತದೃಷ್ಟಿಯಿಂದ ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಈ ಬಾರಿ ಸರ್ಕಾರ ತನ್ನ ಖಜಾನೆಯನ್ನು ತೆರೆಯುವ ಸಾಧ್ಯತೆ ಇದೆ.

Post a Comment

Previous Post Next Post