ಮೋದಿ ಗ್ಯಾರಂಟಿ ಲೆಕ್ಕ
ಕೇಂದ್ರ ಬಜೆಟ್ ಅಧಿವೇಶನ ನಿನ್ನೆ ಶುರುವಾಗಿದೆ. ಅಧಿವೇಶನದ ಮೊದಲ ದಿನವೇ ಪ್ರಧಾನಿ ಮೋದಿ ವಿಪಕ್ಷಗಳ ಸಂಸದರಿಗೆ ಮಾತಲ್ಲೇ ಚಾಟಿಏಟು ಬೀಸಿದ್ದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಸರ್ಕಾರವನ್ನ ಹಾಡಿಹೊಗಳಿದರು. ಇಂದು ಪ್ರಧಾನಿ ಮೋದಿ ಸರ್ಕಾರದ 2ನೇ ಅವಧಿಯ ಕೊನೇ ಬಜೆಟ್ ಮಂಡನೆ ಆಗ್ತಿದೆ.ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ಸರ್ಕಾರದ 2ನೇ ಅವಧಿಯ ಕೊನೆಯ ಬಜೆಟ್. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಇಂದು 7ನೇ ಬಜೆಟ್ (7th Budget) ಮಂಡಿಸಲಿದ್ದಾರೆ. ಇಂದಿನಿಂದ ಬಜೆಟ್ ಅಧಿವೇಶನ ಆರಂಭನೂ ಆಯ್ತು. ಸಂಸತ್ ಅಧಿವೇಶನ (Budget Session 2024) ಆರಂಭಕ್ಕೂ ಮುನ್ನ ಪ್ರಧಾನಿ ಮೋದಿ ವಿಪಕ್ಷದವರಿಗೆ ಚಾಟಿ ಬೀಸಿದರು. ನಾರಿಶಕ್ತಿಯ ಗುಣಗಾನ ಮಾಡಿದರು‘ಮರ್ಯಾದೆ ತೆಗೆದ ಸಂಸದರೇ ಎಚ್ಚರ’10 ವರ್ಷದಲ್ಲಿ ಇಷ್ಟ ಬಂದಂತೆ ಆಡಿದ್ದಾರೆ. ಇವರನ್ನು ಅಪರಾಧಿಗಳಂತ ನಾನು ಕರೆಯಬೇಕೆ? ಅನೇಕರು ಪ್ರಜಾಪ್ರಭುತ್ವದ ಮರ್ಯಾದೆ ಕಳೆದಿದ್ದಾರೆ. ಇದು ಅಭ್ಯಾಸ. ಆದರೆ ಆತ್ಮಾವಲೋಕನ ಮಾಡ್ಕೊಳ್ಳಿ. ನಿಮ್ಮ ಕ್ಷೇತ್ರದಲ್ಲಿ 100 ಜನರನ್ನ ಕೇಳಿ ಸರಿನಾ ಅಂತ. ಮುಂದಿನ ದಿನದಲ್ಲಿ ನಿಮ್ಮ ಕ್ಷೇತ್ರದಲ್ಲಿ ಪ್ರಶ್ನೆ ಮಾಡ್ತಾರೆ. ಪ್ರಜಾಪ್ರಭುತ್ವದ ಮರ್ಯಾದೆ ಕಳೆದ ಸಂಸದರು, ಇಂದಲ್ಲ-ನಾಳೆ ಪಶ್ಚಾತಾಪ ಪಡಲೇಬೇಕು ಎಂದಿದ್ದಾರೆ.ಸಂಬಂಧಿತ ಸುದ್ದಿUnion Budget 2024: ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್! ಕೇಂದ್ರ ಬಜೆಟ್‌ನಲ್ಲಿ ಬಂಪರ್ ಉಡುಗೊರೆ ಸಾಧ್ಯತೆUnion Budget 2024: ಇಂದು ಕೇಂದ್ರ ಬಜೆಟ್ ಮಂಡನೆ, ಕರ್ನಾಟಕದ ನಿರೀಕ್ಷೆಗಳುಹಳೆಯ ಮತ್ತು ಹೊಸ ತೆರಿಗೆ ಪದ್ಧತಿ, ಇವೆರಡರಲ್ಲಿ ಸಂಬಳ ಪಡೆಯುವ ಉದ್ಯೋಗಿಗಳಿಗೆ ಯಾವುದು ಉತ್ತಮ?PM Kisan: ರೈತರಿಗೆ ಕೇಂದ್ರ ಸರ್ಕಾರದಿಂದ ಗುಡ್‌ನ್ಯೂಸ್; ಪಿಎಂ ಕಿಸಾನ್ ಹಣ ಶೇಕಡಾ 50ರಷ್ಟು ಹೆಚ್ಚಳ!ಇದನ್ನೂ ಓದಿ: Mandya: ಕೆರಗೋಡು ಕಲಹ: ಫೆಬ್ರವರಿ 7ಕ್ಕೆ ಮಂಡ್ಯ ಬಂದ್ಗೆ ಕರೆ, ಬೆಂಗಳೂರಲ್ಲೂ ಜೋರಾಯ್ತು ಧ್ವಜದಂಗಲ್!ಬಜೆಟ್ ಅಧಿವೇಶನದ ಮೊದಲ ದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ರಾಷ್ಟ್ರಪತಿ ಭವನದಿಂದ ಸಾರೋಟಿನಲ್ಲೇ ಸಂಸತ್ ಭವನಕ್ಕೆ ಬಂದರು. ಸಂಸತ್ ಕಲಾಪವನ್ನ ಉದ್ದೇಶಿಸಿ ಭಾಷಣ ಮಾಡಿದರು. ರಾಮ ಮಂದಿರ, ನಾರಿಶಕ್ತಿಯನ್ನ ಹಾಡಿ ಹೊಗಳಿದರು. ಕೇಂದ್ರ ಸರ್ಕಾರದ ಸಾಧನೆಯನ್ನೂ ಕೊಂಡಾಡಿದರು. ಇಂದು ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಚುನಾವಣೆ ಹೊತ್ತಲ್ಲಿ ನಿರ್ಮಲಾ ಮೇಡಂ ಮಂಡಿಸ್ತಿರೋ ಈ ಬಜೆಟ್ ವಿರೋಧಪಕ್ಷದವರಿಗೆ ಬೇಕಾಗಿಲ್ಲ. ಆದರೆ 3ನೇ ಸಲವೂ ನಮ್ಮದೇ ಸರ್ಕಾರ ಅಂತಿರೋ ಬಿಜೆಪಿ ನೇತೃತ್ವದ ಎನ್ಡಿಎಕೂಟಕ್ಕೆ ಮಧ್ಯಂತರ ಬಜೆಟ್ ಅತೀಮುಖ್ಯ. ಏಕೆಂದರೆ ಲೋಕಸಭೆ ಚುನಾವಣೆ ಹೊತ್ತಲ್ಲಿ ಜನರಿಗೆ ಒಂದಷ್ಟು ಗಿಫ್ಟ್ ಸಿಗುವ ನಿರೀಕ್ಷೆಗಳಿವೆ.ಮಧ್ಯಂತರ ಬಜೆಟ್ ನಿರೀಕ್ಷೆಗಳುಭಾರತವು 2027-28ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ ಘೋಷಣೆ ಆಗಲಿದೆ.. 2047ರ ವೇಳೆಗೆ 30 ಟ್ರಿಲಿಯನ್ ಡಾಲರ್ ಭಾರತದ ಆರ್ಥಿಕತೆ ಗುರಿ ಘೋಷಣೆಯೂ ಆಗಲಿದೆ. ಮೊಬೈಲ್ ಕಂಪನಿ ಆಮದು ಸುಂಕವನ್ನ 15ರಿಂದ 10%ಗೆ ಇಳಿಸಬಹುದು. ಇದರಿಂದ ಮೊಬೈಲ್ಗಳು, ಸ್ಪೇರ್ ಪಾರ್ಟ್ಗಳ ಬೆಲೆ ಇಳಿಕೆ ಆಗುವ ಆಧ್ಯತೆಯಿದೆ. ಆಟೊಮೊಬೈಲ್ ಕ್ಷೇತ್ರಗಳಿಗೆ ಕನಿಷ್ಠ ತೆರಿಗೆ ವಿನಾಯ್ತಿ ಘೋಷಿಸಬಹುದು. ಇದರಿಂದ ಎಲೆಕ್ಟ್ರಿಕ್ ವಾಹನಗಳ ಬೆಲೆ ಇಳಿಕೆಗೆ ನೆರವಾಗಲಿದೆ ಅನ್ನೋ ಲೆಕ್ಕಾಚಾರವಿದೆ. ಕೈಗಾರಿಕೆಗಳಲ್ಲಿ ಸ್ವಾವಲಂಬನೆ FDI ಹೂಡಿಕೆಗೆ ಒತ್ತು ನೀಡುವ ಮೂಲಕ ದೇಶದಲ್ಲಿ ಉದ್ಯೋಗ ಪ್ರಮಾಣವನ್ನ 61% ಏರಿಕೆ ಗುರಿ ಘೋಷಿಸಬಹುದು.ಹೊಸ ಘೋಷಣೆ ಕೊಟ್ಟು ವಿಪಕ್ಷಗಳಿಗೆ ಶಾಕ್ ಕೊಡ್ತಾರಾ?ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಬಡವರಿಗೆ ಮನೆಗಳು. ಹಾಗೇ ಹೊಸ ಏರ್ಪೋರ್ಟ್, ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ನೆರವು ಘೋಷಿಸಬಹುದು. ನಾರಿಶಕ್ತಿ ಉತ್ತೇಜನಕ್ಕೆ ಮಹಿಳೆಯರಿಗೆ ಹೊಸ ಉಡುಗೊರೆ ಘೋಷಣೆ ಆಗಬಹುದು. ಉದ್ಯೋಗಸ್ಥರ ಟ್ಯಾಕ್ಸ್ ಸ್ಲ್ಯಾಬ್ ಯಥಾಸ್ಥಿತಿ ಸಾಧ್ಯತೆಯಿದೆ. ಹೊಸ ತೆರಿಗೆ ಪದ್ಧತಿಯಲ್ಲಿ, 80D ಬದಲಾವಣೆ ಸಾಧ್ಯತೆಯಿದೆ. ಹೊಸ ಉತ್ಪಾದನಾ ಘಟಕಗಳಿಗೆ ತೆರಿಗೆ ವಿನಾಯ್ತಿ ಸಾಧ್ಯತೆಯೂ ಇದೆ. ಆನ್‌ಲೈನ್ ಗೇಮಿಂಗ್ ಡಿಜಿಟಲ್ ಉದ್ಯಮಕ್ಕೆ ಉತ್ತೇಜನ ಹಾಗು ಉದ್ಯೋಗಿಗಳ PF ಮತ್ತು ಟಿಡಿಎಸ್ ಪ್ರಮಾಣ ಸಡಿಲಿಕೆ ಮಾಡುವ ಸಾಧ್ಯತೆಯಿದೆ.ಮಧ್ಯಂತರ ಬಜೆಟ್ನಲ್ಲೂ ನಿರ್ಮಲಾ ಸೀತಾರಾಮನ್ ಹೊಸ ಘೋಷಣೆ ಕೊಟ್ಟು ವಿಪಕ್ಷಗಳಿಗೆ ಶಾಕ್ ಕೊಡ್ತಾರಾ? ಮತದಾರರಿಗೆ ಹಲ್ವಾ ತಿನ್ನಿಸ್ತಾರಾ ಅನ್ನೋದು ಸದ್ಯಕ್ಕಿರುವ ಕುತೂಹಲ.
Post a Comment