Muniratna: ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಆಲಿಂಗನಕ್ಕೆ ಸಚಿವರ ವ್ಯಂಗ್ಯ, ಅದು ಅಕ್ರಮ ಸಂಬಂಧ ಎಂದ ಮುನಿರತ್ನ!


  ಕೋಲಾರ ಜಿಲ್ಲೆಯ ಯರಗೋಳ ಡ್ಯಾಂ ಭರ್ತಿ ಹಿನ್ನಲೆ ಬಾಗಿನ ಅರ್ಪಿಸಿದ ಉಸ್ತುವಾರಿ ಸಚಿವ ಮುನಿರತ್ನ, ಯರಗೋಳ ಜಲಾಶಯ ನಿರ್ಮಾಣ  ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ಮಾಜಿ ಶಾಸಕರ ಸಾಧನೆ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು. ಸಿದ್ದರಾಮೋತ್ಸವದ ಬಗ್ಗೆಯೂ ವ್ಯಂಗ್ಯವಾಡಿದ್ರು.ಕೋಲಾರ: ಜಿಲ್ಲೆಯ ಬಂಗಾರಪೇಟೆ (Bangarapet) ತಾಲೂಕಿನ ಯರಗೋಳ ಡ್ಯಾಂ (Yaragola Dam) ಭರ್ತಿ ಹಿನ್ನಲೆಯಲ್ಲಿ ಉಸ್ತುವಾರಿ ಸಚಿವ ಮುನಿರತ್ನ (In-charge Minister Muniratna) ಹಾಗೂ ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜ್ (Bairati Basavaraj), ಸಂಸದ ಮುನಿಸ್ವಾಮಿ ಯರಗೋಳ ಜಲಾಶಯಕ್ಕೆ ಬಾಗೀನ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ (DC) ವೆಂಕಟ್ ರಾಜಾ, ಸಿಇಒ (CEO) ಯುಕೇಶ್ ಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಡ್ಯಾಂ ಮೇಲೆ ಆಯೋಜಿಸಿದ್ದ ಬಾಗೀನ ಕಾರ್ಯಕ್ರಮದಲ್ಲಿ ಶಾಸ್ತ್ರೋಕ್ತ್ರ ಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿದರು, ಬಳಿಕ ಡ್ಯಾಂ ಪಕ್ಕದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಸಚಿವರು ಭಾಗಿಯಾಗಿದ್ದರು

ಇದು ಬಿಜೆಪಿ ಸರ್ಕಾರದ ಸಾಧನೆ ಎಂದ ಬೈ

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಭೈರತಿ ಬಸವರಾಜ್, ಡ್ಯಾಂ ತುಂಬಿ ಕೋಡಿ ಹರಿಯುತ್ತಿದ್ದು, ನಿಗದಿಯಂತೆ ಕೋಲಾರ, ಬಂಗಾರಪೇಟೆ, ಮಾಲೂರು ನಗರಗಳು ಸೇರಿ 45 ಹಳ್ಳಿಗಳಿಗೆ ಕುಡಿಯುವ ನೀರನ್ನು, ಇನ್ನು 4 ತಿಂಗಳ ಒಳಗಾಗಿ ಪ್ರತಿ ಮನೆಗೆ ನಲ್ಲಿಯ ಮೂಲಕ ಪೂರೈಸಲಾಗುವುದು ಎಂದರು, ಅಲ್ಲದೆ ಯರಗೋಳ ಡ್ಯಾಂ ನಿರ್ಮಾಣ ಆರಂಭವಾಗಿದ್ದು, ಬಿಜೆಪಿ ಶಾಸಕರು ಇದ್ದ ಕಾಲದಲ್ಲಿ, ಈಗ ನಮ್ಮ ಸರ್ಕಾರ ಸಾಕಷ್ಟು ಅನುದಾನ ನೀಡಿದೆಯೆಂದರು. ರತಿ.ದರು.

ಜಲಾಶಯಕ್ಕೆ ಬಾಗೀನ ಅರ್ಪಣೆ

ಕಾಂಗ್ರೆಸ್ ವಿರುದ್ಧ ಕಿಡಿಕಿಡಿ

ಇನ್ನು ವೇದಿಕೆಯಲ್ಲಿ ಮಾತನಾಡಿದ ಸಂಸದ ಮುನಿಸ್ವಾಮಿ, ಸ್ಥಳೀಯ ಕೈ ಶಾಸಕ ನಾರಾಯಣಸ್ವಾಮಿ ವಿರುದ್ದ ಕಿಡಿಕಾರಿದರು, ಡ್ಯಾಂ ನಿರ್ಮಾಣ ಕಾರ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆ ಇಲ್ಲದಿದ್ದರು, ವಿನಾಕಾರಣ ನಮ್ಮ ಸಾಧನೆಯೆಂದು ಹೇಳುವುದು ಸರಿಯಲ್ಲ, ಯರಗೋಳ ಡ್ಯಾಂ ಮಾಜಿ ಸಿಎಂ ಕುಮಾರಸ್ವಾಮಿ, ಯಡಿಯೂರಪ್ಪ ಹಾಗು ಬಿಜೆಪಿ ಮಾಜಿ ಶಾಸಕರ ಸಾಧನೆಯಾಗಿದೆ, ಮಾಹಿತಿ ಇಲ್ಲದೆ ರಾಜಕೀಯ ಮಾಡುವುದನ್ನ ನಿಲ್ಲಿಸಬೇಕು ಎಂದರು.

ಸಂಸದ ಮುನಿಸ್ವಾಮಿ ಭಾಷಣ

ಇದನ್ನೂ ಓದಿ: Dam Full: ಡ್ಯಾಂ ಭರ್ತಿಯಾಗಿದ್ದೇ ನಮ್ಮಿಂದ ಅಂತಾರೆ ರಾಜಕಾರಣಿಗಳು! ಕ್ರೆಡಿಟ್‌ ಪಡೆಯಲು ನಾಯಕರ ಪೈಪೋಟಿ

 ಸಚಿವ ಮುನಿರತ್ನ ಆಕ್ರೋಶ

ಕಾರ್ಯಕ್ರಮದಲ್ಲಿ ಮಾತನಾಡಿದ ಉಸ್ತುವಾರಿ ಸಚಿವ ಮುನಿರತ್ನ, ಯಾರೋ ಹುಟ್ಟಿಸಿದ ಮಕ್ಕಳಿಗೆ ಅಪ್ಪ ಆಗೋಕೆ ಕೆಲವರು ಹೊರಟಿದ್ದಾರೆ, ಅಪ್ಪ ಅಪ್ಪ ಅಂದವರಿಗೆಲ್ಲ ನಾವು ಡಿ.ಎನ್.ಎ ಟೆಸ್ಟ್ ಮಾಡಿಸಲು ಸಾಧ್ಯವಿಲ್ಲ, ಯರಗೋಳ ಡ್ಯಾಂ ನಮ್ಮ ಬಿಜೆಪಿ ಸರ್ಕಾರದ ಸಾಧನೆ ಎಂದರು.

ಸಿದ್ದರಾಮೋತ್ಸವಕ್ಕೆ ವ್ಯಂಗ್ಯ

ಕಾರ್ಯಕ್ರಮದಲ್ಲಿ ಮಾತನಾಡಿದ ಉಸ್ತುವಾರಿ ಸಚಿವ ಮುನಿರತ್ನ, ಸಮ್ಮಿಶ್ರ ಸರ್ಕಾರದಲ್ಲಿ ನಮ್ಮನ್ನು ಸರಿಯಾಗಿ ನಡೆಸಿಕೊಂಡು ಉಳಿಸಿಕೊಳ್ಳೋಕೆ ಆಗದವರು ಮತ್ತೊಮ್ಮೆ ಸರ್ಕಾರ ನಡೆಸೊಕೆ ಆಗುತ್ತಾ ? ಡೊಳ್ಳು ಕುಣಿತ, ಬಾಜಾ ಭಜಂತ್ರಿ ಬಾರಿಸಿದರೆ ಅಧಿಕಾರ ಸಿಗಲ್ಲ ಎಂದು ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಪರೋಕ್ಷವಾಗಿ ಮುನಿರತ್ನ ಟಾಂಗ್ ಕೊಟ್ಟರು.

ಇದನ್ನೂ ಓದಿ: Karnataka Weather Report: ಮುಂದುವರಿಯಲಿದೆ ಮಳೆ; 10 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

 ಡಿಕೆಶಿ- ಸಿದ್ದರಾಮಯ್ಯ ಅಕ್ರಮ ಸಂಬಂಧದ ಅಪ್ಪುಗೆ!

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವ್ರ ಸಿದ್ದರಾಮೊತ್ಸವ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಆಲಿಂಗನ ಕುರಿತು ವ್ಯಂಗ್ಯವಾಡಿದ ಮುನಿರತ್ನ, ಇದೊಂದು ಅಕ್ರಮ ಸಂಬಂಧ, ಇನ್ನೊಬ್ಬರು ಹೇಳಿ ತಬ್ಬಿಕೊಳ್ಳೊದನ್ನ ಏನಂತಾರೆ, ಪಕ್ಕದಲ್ಲಿ ಕುಳಿತುಕೊಂಡು ಒಳಗೆ ಹೋಗು ಎನ್ನುವಂತಾಗಿದೆ, ನಾನು ಮಹಾಭಾರತ ಕುರುಕ್ಷೇತ್ರ ನಿರ್ಮಾಪಕ, ಇವರು ಮಹಾಭಾರತಕ್ಕೆ ಸಂಬಂದ ಪಟ್ಟವರಲ್ಲ, ಇವರೆಲ್ಲ ಬೃಹನ್ನಳೆ ಗೆ ಸಂಬಂದ ಪಟ್ಟವರು ಎಂದ್ರು, ರಾಜ್ಯದಲ್ಲಿ ನಾನು,,ನಾನು,, ಎಂದು ಸಿಎಂ ಸ್ತಾನಕ್ಕೆ ಪೈಪೋಟಿಗೆ ಇಳಿದ್ದಾರೆ, ಕಾಂಗ್ರೆಸ್ ಅಧಿಕಾರಕ್ಕೆ ಬರೊಲ್ಲ ಕೇವಲ 40 ಸ್ತಾನಕ್ಕೆ ಸೀಮಿತವಾಗಲಿದೆ ಎಂದು ವ್ಯಂಗ್ಯವಾಡಿದರು.

Post a Comment

Previous Post Next Post