ಸಿಟಿ ರವಿ ಆಕ್ರೋಶ ನಿಮ್ಮ ಹೆಸರು ಅಂಜನೇಯ, ನೀವು ಹೇಳಿದ್ರಿ ಸಿದ್ದರಾಮಯ್ಯ ಅವರ ಹೆಸರಲ್ಲಿ ರಾಮ ಇದ್ದಾನೆ ಅಂತ. ರಾಮ ಎಲ್ಲರಿಗೂ ನ್ಯಾಯ ಕೊಟ್ಟು, ಧರ್ಮದ ಪರ ಕೆಲಸ ಮಾಡಿದ್ದ. ಆದರೆ ನಿಮ್ಮ ಸಿದ್ದರಾಮಯ್ಯ ಎಲ್ಲರಿಗೂ ನ್ಯಾಯ ಕೊಟ್ರಾ?” ಅಂತ ಸಿಟಿ ರವಿ ಖಾರವಾಗಿ ಪ್ರಶ್ನಿಸಿದ್ದಾರೆ.ಚಿಕ್ಕಮಗಳೂರು: ಅಯೋಧ್ಯೆಯಲ್ಲಿ (Ayodhya) ಇರುವುದು ಬಿಜೆಪಿಯವರ (BJP) ರಾಮ, ನಮಗೆ ಸಿದ್ದರಾಮಯ್ಯನವರೇ (Siddaramaiah) ಶ್ರೀರಾಮ (Sri Rama), ಹೀಗಾಗಿ ಸಿದ್ದರಾಮಯ್ಯ ಯಾಕೆ ಅಲ್ಲಿಗೆ ಹೋಗಬೇಕು? ಇದು ಮಾಜಿ ಸಚಿವ ಎಚ್ ಆಂಜನೇಯ (H. Anjaneya) ನಿನ್ನೆ ನೀಡಿದ್ದ ಹೇಳಿಕೆ. ಮಾಜಿ ಸಚಿವರ ಈ ಉದ್ಧಟತನದ ಮಾತಿಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿತ್ತು. ಇದೀಗ ಮಾಜಿ ಸಚಿವ ಸಿ.ಟಿ. ರವಿ (C.T. Ravi) ಕೂಡ ಆಂಜನೇಯ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. “ನಿಮ್ಮ ಹೆಸರು ಅಂಜನೇಯ, ನೀವು ಹೇಳಿದ್ರಿ ಸಿದ್ದರಾಮಯ್ಯ ಅವರ ಹೆಸರಲ್ಲಿ ರಾಮ ಇದ್ದಾನೆ ಅಂತ. ರಾಮ ಎಲ್ಲರಿಗೂ ನ್ಯಾಯ ಕೊಟ್ಟು, ಧರ್ಮದ ಪರ ಕೆಲಸ ಮಾಡಿದ್ದ. ಆದರೆ ನಿಮ್ಮ ಸಿದ್ದರಾಮಯ್ಯ ಎಲ್ಲರಿಗೂ ನ್ಯಾಯ ಕೊಟ್ರಾ?” ಅಂತ ಸಿಟಿ ರವಿ ಖಾರವಾಗಿ ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ರಾಮನಿಗೆ ಸಮನಾಗಲು ಸಾಧ್ಯನಾ?ಸಂಬಂಧಿತ ಸುದ್ದಿಲಕ್ಷಾಂತರ ಮಂದಿ ದಕ್ಷಿಣ ಕೊರಿಯನ್ನರ ಪಾಲಿಗೆ ಅಯೋಧ್ಯೆಯೇ ಮಾತೃಭೂಮಿ, ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿMysuru: ಅಯೋಧ್ಯೆ ಶ್ರೀ ರಾಮನ ನೆಪದಲ್ಲಿ ಮೈಸೂರಿನ ಈ ಪುಟ್ಟ ಗ್ರಾಮದಲ್ಲಿ ಖುಷಿಯೋ ಖುಷಿ!Siddaramaiah: ಹುಬ್ಬಳ್ಳಿ ಕರಸೇವಕರ ಬಂಧನ; ತಪ್ಪು ಮಾಡಿದವರನ್ನು ಬಿಟ್ಟು ಬಿಡಬೇಕಾ? ಸಿಎಂ ಪ್ರಶ್ನೆArun Yogiraj: ಅಯೋಧ್ಯೆ ಬಾಲರಾಮನ ವಿಗ್ರಹ ಮಾತ್ರವಲ್ಲ, ಈ ಪ್ರತಿಮೆಗಳ ಹಿಂದೆಯೂ ಅರುಣ್ ಯೋಗಿರಾಜ್ ಕೈಚಳಕ!ಸಿದ್ದರಾಮಯ್ಯ ಅವರು ದಲಿತರಿಗೆ ಅಂತ ಇಟ್ಟ 11 ಸಾವಿರ ಕೋಟಿ ವಾಪಸ್ಸು ತೆಗೆದುಕೊಂಡ್ರು, ವೋಟ್ ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಇಟ್ರು. ಒಬ್ಬರಿಗೆ ಆನ್ಯಾಯ ಮಾಡುವವರೂ ರಾಮನಿಗೆ ಸಮಾನಾಗಲು ಸಾಧ್ಯನಾ? ಅಂತ ಸಿಟಿ ರವಿ ಪ್ರಶ್ನಿಸಿದ್ರು. ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದೆ, ಆದ್ರೆ ಗುಣ ಇದೆಯಾ?ಅಯೋಧ್ಯೆ ಹೋರಾಟದಲ್ಲಿ ಪಾಲ್ಗೊಂಡ್ರು ಅಂತಾ 31 ವರ್ಷದ ನಂತ್ರ ಆ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದಾರೆ.ರಾಮನ ಹೆಸ್ರು ಇಟ್ಕೊಂಡಿದಕ್ಕೆ ರಾಮನ ಗುಣ ಬಂದಿದೆ ಅಂತಾ ಭಾವಿಸೋಕೆ ಅಗುತ್ತಾ? ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದೆ ಆದ್ರೆ ಗುಣ ಇದೆಯಾ? ಅಂತ ಸಿಟಿ ರವಿ ಖಾರವಾಗಿ ಪ್ರಶ್ನಿಸಿದ್ದಾರೆ.ಇದನ್ನೂ ಓದಿ: Rama Rajya: ರಾಮ-ರಾವಣ ಯುದ್ಧದ ಬಳಿಕ ವಾನರ ಸೇನೆ ಏನಾಯ್ತು? ರಾಮರಾಜ್ಯಕ್ಕೆ ಬಂದರಾ ಹನುಮ ಸೈನಿಕರು?ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ. ರವಿ, 1992ರ ಕರ ಸೇವೆಯಲ್ಲಿ ನಾವೂ ಭಾಗವಹಿಸಿದ್ದೆವು. ನಾನು, ಸುನಿಲ್ ಕುಮಾರ್ ಸೇರಿದಂತೆ ಸಾಕಷ್ಟು ಜನ ಭಾಗವಹಿಸಿದ್ದೆವು. ಆದರೆ ನಮಗೆ ಇನ್ನೂ ಆಮಂತ್ರಣ ಬಂದಿಲ್ಲ. ಯಾರಿಗೆ ಆಮಂತ್ರಣ ಕೊಡಬೇಕು ಎಂಬ ನಿರ್ಧಾರ ಮಾಡುವ ಅಧಿಕಾರ ರಾಮ ಮಂದಿರ ನಿರ್ಮಾಣ ಟ್ರಸ್ಟಿಗೆ ಮಾತ್ರ ಇದೆ ಅಂತ ಸಿಟಿ ರವಿ ಹೇಳಿದ್ರು.ಮಂದಿರಕ್ಕಾಗಿ ಹೋರಾಡಿದವರಿಗೂ ಇನ್ನೂ ಆಮಂತ್ರಣ ಬಂದಿಲ್ಲಆಮಂತ್ರಣ ನೀಡುವ ಅಧಿಕಾರ ಪ್ರಧಾನ ಮಂತ್ರಿಗಳಿಗೂ ಇಲ್ಲ. ಅವರು ಈ ಬಗ್ಗೆ ನಿರ್ಣಯ ಮಾಡುತ್ತಾರೆ. ಇನ್ನೂ ಕಾಲಾವಕಾಶ ಇದೆ, ಆಮಂತ್ರಣ ಪತ್ರಿಕೆ ಬರ ಬಹುದು. ಬರದೇ ಇರಬಹುದು. ಮಂದಿರ ನಿರ್ಮಾಣಕ್ಕಾಗಿ ಹೋರಾಟ ಮಾಡಿದವರಿಗೆ ಇನ್ನು ಆಮಂತ್ರಣ ಬಂದಿಲ್ಲ ಅಂತ ಸಿಟಿ ರವಿ ಹೇಳಿದ್ರು.ಸ್ವಾತಂತ್ರ್ಯದ ನಂತರ ಹೋರಾಡುವ ಪರಿಸ್ಥಿತಿ ಬರುತ್ತಿರಲಿಲ್ಲರಾಮ ಮಂದಿರ ನಿರ್ಮಾಣ ಆಗಬೇಕು ಎಂದು ಕಾಂಗ್ರೆಸ್ ಯಾವಾಗ ಬಯಸಿತ್ತು? ಅವರು ಬಯಸಿದ್ರೆ ಸ್ವತಂತ್ರ ಭಾರತದಲ್ಲಿ ಹೋರಾಟ ಮಾಡುವ ಪ್ರಮೇಯವೇ ಇರುತ್ತಿರಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಮಂದಿರ ನಿರ್ಮಾಣ ಆಗುತ್ತಿತ್ತು. ಹೋರಾಟ ಹಾಗೂ ಕರ ಸೇವೆ ಮಾಡುವ ಸಂದರ್ಭ ಬರುತ್ತಿರಲಿಲ್ಲ ಅಂತ ಸಿಟಿ ರವಿ ಹೇಳಿದ್ರು. ಸಿದ್ದರಾಮಯ್ಯ ಮಂದಿರ ನಿರ್ಮಾಣ ಹೋರಾಟದ ಸಂದರ್ಭದಲ್ಲಿ, ಒಂದು ಹೇಳಿಕೆಯೂ ಕೊಟ್ಟಿಲ್ಲ ಅಂತ ಸಿಟಿ ರವಿ ಆರೋಪಿಸಿದ್ರು.

Post a Comment