H ಆಂಜನೇಯ
ಅಲ್ಲಿರೋದು ಬಿಜೆಪಿ ರಾಮ, ಬಿಜೆಪಿಯವರನ್ನು ಕರೆದುಕೊಂಡು ಹೋಗಿ ಭಜನೆ ಮಾಡಲಿ ಎಂದು ವ್ಯಂಗ್ಯವಾಡಿದರು.ಚಿತ್ರದುರ್ಗ (ಜ.1): ಸಿದ್ದರಾಮಯ್ಯನೇ ‘ರಾಮ’, ಅವರು ಯಾಕೆ ಅಲ್ಲಿಗೆ ಹೋಗಬೇಕು? ಅಂತ ಮಾಜಿ ಸಚಿವ ಹೆಚ್. ಆಂಜನೇಯ ರಾಮಮಂದಿರ ಲೋಕಾರ್ಪಣೆಗೆ ಸಿಎಂ ಸಿದ್ದರಾಮಯ್ಯಗೆ ಆಹ್ವಾನ ನೀಡದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರಿಗೆ ಆಹ್ವಾನ ನೀಡದಿರುವುದು ಒಳ್ಳೆಯದೇ ಆಯ್ತು. ಯಾಕಂದ್ರೆ ಸ್ವತಃ ಸಿದ್ದರಾಮಯ್ಯನೇ ರಾಮ. ಅವರು ಯಾಕೆ ರಾಮ ಮಂದಿರಕ್ಕೆ ಹೋಗಿ ಪೂಜೆ ಮಾಡ್ಬೇಕು? ಅವರ ಊರಲ್ಲಿ ರಾಮ ಮಂದಿರ ಇದೆ. ಅಲ್ಲಿ ಪೂಜೆ ಮಾಡ್ತಾರೆ. ಅಲ್ಲಿರೋದು ಬಿಜೆಪಿ ರಾಮ, ಬಿಜೆಪಿಯವರನ್ನು ಕರೆದುಕೊಂಡು ಹೋಗಿ ಭಜನೆ ಮಾಡಲಿ ಎಂದು ವ್ಯಂಗ್ಯವಾಡಿದರು. ಸಂಬಂಧಿತ ಸುದ್ದಿJob Interview: ನಾಳೆ ಬೆಂಗಳೂರಿನಲ್ಲಿ ಉದ್ಯೋಗ ಸಂದರ್ಶನ- ಆಸಕ್ತರು ಪಾಲ್ಗೊಳ್ಳಿJOBS: ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ನಾಳೆ ಸಂದರ್ಶನ- ಆಸಕ್ತರು ಪಾಲ್ಗೊಳ್ಳಿGovernment Jobs: ಯಾದಗಿರಿ ಡಿಸಿ ಕಚೇರಿ ನೇಮಕಾತಿ- ಈ ಹುದ್ದೆಗಳಿಗೆ ನಾಳೆಯೊಳಗೆ ಅಪ್ಲೈ ಮಾಡಿJOBS: ಬೆಂಗಳೂರಿನಲ್ಲಿ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಹಾಕಿ-ಇವತ್ತೇ ಕೊನೆಯ ದಿನನಮ್ಮ ರಾಮ ಎಲ್ಲಾ ಕಡೆ ಇದಾನೆ, ನಮ್ಮ ಎದೆಯಲ್ಲೇ ಇದಾನೆ. ನಾನು ಆಂಜನೇಯ, ಆಂಜನೇಯ ಏನು ಮಾಡ್ದ ಅಂತ ಗೊತ್ತಲ್ಲ. ನಮ್ಮ ಸಮುದಾಯದವರು ಹೆಚ್ಚಾಗಿ ರಾಮ, ಆಂಜನೇಯ ಅಂತಾ ಹೆಸರಿಟ್ಟುಕೊಳ್ತೀವಿ. ಅವರ ಮೇಲೆ ಪ್ರೀತಿ, ಗೌರವ ಇದೆ. ಒಂದು ಧರ್ಮವನ್ನು ಟೀಕೆ ಮಾಡಿದ್ರೆ ಇತರ ಧರ್ಮೀಯರು ಓಟು ಹಾಕ್ತಾರೆ ಅಂತಾ ತಿಳ್ಕೊಂಡಿದಾರೆ. ಅವ್ರು 14 ವರ್ಷದಲ್ಲಿ ಹಿಂದೂ ಯುವಕರಿಗಾದ್ರೂ ಮಾಡ್ಬೇಕಲ್ಲ. ನಾವೆಲ್ಲ ಹಿಂದೂಗಳೇ, ಬಿಜೆಪಿಯವರು ಹಿಂದೂಗಳನ್ನು ಕೊಂಡುಕೊಂಡಿಲ್ಲ. ನಾನು ಮಂದಿರ ಸಾಕು, ಜನರ ಮನೆ ಮನ ಕಟ್ಟಿ ಅಂದೆ. ಆದ್ರೆ ಇವ್ರು ಓಟಿಗಾಗಿ ರಾಮನನ್ನು ನೋಡೋದು ಬೇಡ ಎಂದು ತಿರುಗೇಟು ನೀಡಿದರು.ಮುಂದುವರೆದ ಅವರು, ಚಿತ್ರದುರ್ಗ ಎಂಪಿ ಟಿಕೆಟ್ ಆಕಾಂಕ್ಷಿಯಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಿದರು. ಪಕ್ಷ ಸಮರ್ಥರು, ಜನಪರ ಕಾಳಜಿ ಇರುವವರನ್ನು ಆಯ್ಕೆ ಮಾಡುತ್ತೆ. ಪಕ್ಷ ಸರ್ವೆ ಮಾಡಿಸಿ, ಸ್ಥಳೀಯ ನಾಯಕರ ಅಭಿಪ್ರಾಯ ಪಡೆದು ಅಭ್ಯರ್ಥಿ ಆಯ್ಕೆ ಮಾಡುತ್ತದೆ. ನಾವೆಲ್ಲ ಅವರನ್ನು ಗೆಲ್ಲಿಸುವ ಕೆಲಸ ಮಾಡ್ತೀವಿ. ನಾನು ಟಿಕೆಟ್ ಕೊಡ್ರಿ ಅಂತಾನೂ ಹೇಳಲ್ಲ. ಇದು ಕಾಂಗ್ರೆಸ್ ಕ್ಷೇತ್ರ ಇಲ್ಲಿ ಕಾಂಗ್ರೆಸ್ ಗೆಲ್ಲಬೇಕು, ಗೆಲ್ಲಿಸ್ತೀವಿ ಎಂದು ಆತ್ಮವಿಶ್ವಾಸದ ನುಡಿಗಳನ್ನಾಡಿದರು.ಕಾಂಗ್ರೆಸ್ ಟಿಕೆಟ್ ಸ್ಥಳೀಯರಿಗೆ ನೀಡಬೇಕೆಂಬ ಕೂಗಿಗೆ ಪ್ರತಿಕ್ರಿಯೆ ನೀಡಿದ ಹೆಚ್. ಆಂಜನೇಯ, ಇಲ್ಲಿ ಎಲ್ಲರೂ ಸ್ಥಳೀಯರೇ ಪಾಕಿಸ್ತಾನದವರು ಯಾರೂ ಇಲ್ಲ. ಪಕ್ಷ ಯಾರಿಗೇ ಟಿಕೆಟ್ ಕೊಟ್ರು ಗೆಲ್ಲಿಸುತ್ತೇವೆ ಎಂದರು.

Post a Comment