ಮಸೂದ್ ಅಜರ್
ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬವಾಲ್‌ಪುರದಲ್ಲಿ ಬೆಳಿಗ್ಗೆ 5 ಗಂಟೆಗೆ ಮಸೀದಿಯಿಂದ ಹಿಂದಿರುಗುತ್ತಿದ್ದಾಗ ಬಾಂಬ್ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾನೆಂದು ಎಂದು ಹಲವಾರು ಸೋಶಿಯಲ್ ಹ್ಯಾಂಡಲ್‌ಗಳು ಪೋಸ್ಟ್ ಮಾಡಿದ್ದವು.ಲಾಹೋರ್: ಪಾಕಿಸ್ತಾನದಲ್ಲಿ (Pakistan) ಅಪರಿಚಿತ ವ್ಯಕ್ತಿಗಳ ದಾಳಿಯಲ್ಲಿ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ (Most Wanted Terrorist) ಮಸೂದ್ ಅಜರ್ (Masood Azar) ಹತನಾಗಿದ್ದಾನೆ ಎಂಬ ಸುದ್ದಿಗಳು ಹೊರಡಿದ್ದವು. ಇತ್ತೀಚೆಗೆ ಪಾಕಿಸ್ತಾನದಾದ್ಯಂತ ಅಪರಿಚಿತ ವ್ಯಕ್ತಿಗಳಿಂದ (Unkown men) ಭಾರತ ಬೇಕಿರುವ ಭಯೋತ್ಪಾದಕರ ಹತ್ಯೆಗಳ ಸಂದರ್ಭದಲ್ಲಿ ಇದು ನಿಜವೆಂದು ಅನೇಕ ಜನರು ಭಾವಿಸಿದ್ದಾರೆ. ವಿಶೇಷವಾಗಿ ಭಾರತದ ಅನೇಕ ಜನರು ಈ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಮೊದಲು ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮತ್ತು ಮಾಫಿಯಾ ಡಾನ್ ದಾವೂದ್ ಇಬ್ರಾಹಿಂ ಇತ್ತೀಚೆಗೆ ಅಪರಿಚಿತರು ವಿಷವುಣಿಸಿದ್ದಾರೆ ಎಂಬ ವದಂತಿ ಎಲ್ಲೆಡೆ ಹಬ್ಬಿತ್ತು. ನಂತರ ಅದು ಸುಳ್ಳೆಂದು ತಿಳಿದುಬಂದಿತ್ತು. ನಕಲಿ ಸ್ಕ್ರೀನ್ ಶಾಟ್ ವೈರಲ್ಸಂಬಂಧಿತ ಸುದ್ದಿಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಾಲ್ಯದ ಮನೆ ಹರಾಜು! ಕಳೆದ 9 ವರ್ಷಗಳಲ್ಲಿ ಇದು ಎಷ್ಟನೇ ಆಸ್ತಿ ಗೊತ್ತಾ?BIG ‘UNKNOWN' BLAST! ವರ್ಷದ ಮೊದಲ ದಿನವೇ ಭಾರತದ ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್ ಉಡೀಸ್?ಈ ನಟಿ 5 ಮದುವೆಯಾಗಿದ್ದಾರಂತೆ! ಈಗ ನಟನೆ ಬಿಟ್ಟು, ಪಾಲಿಟಿಕ್ಸ್‌ಗೆ ಎಂಟ್ರಿಮುಂಬೈ ದಾಳಿ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನಮಗೆ ಒಪ್ಪಿಸಿ; ಪಾಕ್ಗೆ ಅಧಿಕೃತವಾಗಿ ಭಾರತ ಮನವಿಆದರೆ, ಮಸೂದ್ ಅಜರ್ ಸಾವನ್ನಪ್ಪಿದ್ದಾನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಫೋಟೋಗಳು ಮತ್ತು ವಿಡಿಯೋಗಳು ನಕಲಿ ಎಂದು ತಿಳಿದುಬಂದಿದೆ. ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರುಲ್ ಹಕ್ ಕಾಕರ್ ಮತ್ತು ಅಜರ್ ಸಾವನ್ನು ಖಚಿತಪಡಿಸುವ ಸ್ಕ್ರೀನ್‌ಶಾಟ್‌ಗಳು ಸಹ ನಕಲಿ ಎಂದು ತಿಳಿದುಬಂದಿದೆ.ಬಾಂಬ್ ದಾಳಿಯಲ್ಲಿ ಸತ್ತ ಎಂಬ ಸುದ್ದಿ ವೈರಲ್ಇತ್ತೀಚಿನ ವರದಿಯಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬವಾಲ್‌ಪುರದಲ್ಲಿ ಬೆಳಿಗ್ಗೆ 5 ಗಂಟೆಗೆ ಮಸೀದಿಯಿಂದ ಹಿಂದಿರುಗುತ್ತಿದ್ದಾಗ ಬಾಂಬ್ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾನೆಂದು ಎಂದು ಹಲವಾರು ಸೋಶಿಯಲ್ ಹ್ಯಾಂಡಲ್‌ಗಳು ಪೋಸ್ಟ್ ಮಾಡಿವೆ. ಅಪರಿಚಿತ ಗ್ಯಾಂಗ್ ಸ್ಫೋಟ ನಡೆಸಿರುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಪಾಕಿಸ್ತಾನದ ಯಾವುದೇ ಪ್ರಮುಖ ಮಾಧ್ಯಮಗಳು ಇದನ್ನು ವರದಿ ಮಾಡಿಲ್ಲ. ಟೈಮ್ ಆಲ್ಜೀಬ್ರಾ ಎಂಬ ಎಕ್ಸ್ ಖಾತೆ ಕಾರು ಬ್ಲಾಸ್ಟ್ ಆಗುವ ವಿಡಿಯೋ ಪೋಸ್ಟ್ ಮಾಡಿತ್ತು, ಇದನ್ನೇ ಕೆಲವು ಮಾಧ್ಯಮಗಳು ಮೂಲವಾಗಿಟ್ಟುಕೊಂಡು ಸುದ್ದಿ ಮಾಡಿದ್ದವು. ಇದೀಗ ಅದು ಸುಳ್ಳು ಎಂದು ತಿಳಿದುಬಂದಿದೆ.ಱಇದನ್ನೂ ಓದಿ: Dawood Ibrahim:ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಾಲ್ಯದ ಮನೆ ಹರಾಜು! ಕಳೆದ 9 ವರ್ಷಗಳಲ್ಲಿ ಇದು ಎಷ್ಟನೇ ಆಸ್ತಿ ಗೊತ್ತಾ?ಹಳೇ ವಿಡಿಯೋ ಬಳಕೆವೈರಲ್ ಆಗಿರುವ ಈ ಫೋಟೋಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ನವೆಂಬರ್ 3ರಂದು ಪಾಕಿಸ್ತಾನದ ಡೇರಾ ಇಸ್ಮಾಯಿಲ್ ಖಾನ್ ಎಂಬಲ್ಲಿ ಪೊಲೀಸ್ ವ್ಯಾನ್ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿತ್ತು. ಈ ಘಟನೆಯಲ್ಲಿ 6 ಜನರು ಸಾವನ್ನಪ್ಪಿದ್ದರು ಮತ್ತು 25 ಜನರು ಗಾಯಗೊಂಡಿದ್ದರೆಂದು ಟ್ವಿಟರ್ ಹ್ಯಾಂಡಲ್ OSINT ಪೋಸ್ಟ್ ಮಾಡಿತ್ತು. ಈಗ ಅದೇ ಪೋಸ್ಟ್‌ನಲ್ಲಿರುವ ಫೋಟೋಗಳನ್ನು ಮರುಬಳಕೆ ಮಾಡಲಾಗಿದೆ ಮಾಡಲಾಗಿದೆ . ಇವುಗಳನ್ನು ಮೊದಲು ಹಸನ್ ಅಲಿ ಎಂಬ ಹ್ಯಾಂಡಲ್ನಿಂದ 2019 ರಲ್ಲಿ ಪೋಸ್ಟ್ ಮಾಡಲಾಗಿತ್ತು. ಸ್ಫೋಟದಲ್ಲಿ ಮೂವರು ಟಿಕ್ ಟಾಕರ್‌ಗಳು ಸಾವನ್ನಪ್ಪಿದ್ದಾರೆ ಎಂದು ಸಹ ಶೀರ್ಷಿಕೆ ನೀಡಲಾಗಿದೆ. ಇದೀಗ ಮತ್ತೆ ವೈರಲ್ ಮಾಡಿ ಮಸೂದ್ ಹತ್ಯೆಯಾಗಿದೆ ಎಂದು ಸುಳ್ಳು ಸುದ್ದಿಗೆ ಬಳಸಿಕೊಳ್ಳಲಾಗಿದೆ.ಮಸೂದ್ ಅಜರ್ ಯಾರು?ಮಸೂದ್ ಅಜರ್ ಭಾರತಕ್ಕೆ ಬೇಕಾಗಿರುವ ಭಯೋತ್ಪಾದಕ. ಭಾರತದಲ್ಲಿ ನಡೆದ ಹಲವು ಭಯೋತ್ಪಾದಕ ದಾಳಿಗಳಲ್ಲಿ ಈತ ಭಾಗಿಯಾಗಿದ್ದಾನೆ. 2001ರ ಸಂಸತ್ ದಾಳಿ, 2005ರ ಅಯೋಧ್ಯೆ ದಾಳಿ, 2019ರ ಪುಲ್ವಾಮಾ ದಾಳಿಯ ಹೊರತಾಗಿ ಮುಂಬೈ ದಾಳಿಯಲ್ಲೂ ಈತನ ಕೈವಾಡವಿದೆ. ಜನವರಿ 2016 ರಲ್ಲಿ, ಆತ ಅಫ್ಘಾನಿಸ್ತಾನದ ಮಜಾರ್-ಎ ಷರೀಫ್‌ನಲ್ಲಿರುವ ಭಾರತೀಯ ದೂತಾವಾಸದ ಮೇಲಿನ ದಾಳಿಯಲ್ಲೂ ಭಾಗಿಯಾಗಿದ್ದ ಎನ್ನಲಾಗಿದೆ.

Post a Comment