ಸಿದ್ದರಾಮಯ್ಯ ವಿರುದ್ಧ ಅಶೋಕ್ ಆಕ್ರೋಶ
ನಾನೂ ರಾಮಜನ್ಮ ಭೂಮಿ ಹೋರಾಟದಲ್ಲಿ ಭಾಗಿಯಾಗಿದ್ದೆ. ನಿಮಗೆ ಧೈರ್ಯ ಇದ್ದರೆ ನನ್ನನ್ನೂ ಅರೆಸ್ಟ್ ಮಾಡಿ” ಅಂತ ಆರ್. ಅಶೋಕ್ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಇದರ ವಿರುದ್ಧ ಬಿಜೆಪಿ ಉಗ್ರ ಹೋರಾಟ ಮಾಡುತ್ತೆ ಅಂತ ಅಶೋಕ್ ಹೇಳಿದ್ರು.ಬೆಂಗಳೂರು: ಹುಬ್ಬಳ್ಳಿಯಲ್ಲಿ (BJP leader) ಕರಸೇವಕರ (karsevaka) ವಿರುದ್ಧದ 32 ವರ್ಷಗಳ ಹಿಂದಿನ ಕೇಸ್ ರೀ ಓಪನ್‌ಗೆ ಬಿಜೆಪಿ ನಾಯಕರು (BJP leader) ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ (Vidhansouda) ಸುದ್ದಿಗೋಷ್ಠಿ ನಡೆಸಿದ ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashok) ಅವರು ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಹಿಂದೆ ದ್ವೇಷದ ರಾಜಕಾರಣ ಮಾಡಿ ಹಿಂದೂ ಕಾರ್ಯಕರ್ತರ ಕಗ್ಗೊಲೆ ಆಯ್ತು, ಇದೀಗ ಕಾಂಗ್ರೆಸ್ ಸರ್ಕಾರ ಮತ್ತೆ ದ್ವೇಷದ ರಾಜಕಾರಣ ಶುರು ಮಾಡಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.ರಾಮಜನ್ಮಭೂಮಿ ಹೋರಾಟಗಾರರನ್ನು ಜೈಲಿಗೆ ಹಾಕಿದ್ರೆಸಂಬಂಧಿತ ಸುದ್ದಿHampi Temple: ಹಂಪಿಗೂ ಶ್ರೀರಾಮನಿಗೂ ಬಿಡಿಸಲಾಗದ ನಂಟು, ಏನದು ನೋಡಿ!Ram Mandir: ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದೆ, ಆದ್ರೆ ರಾಮನ ಗುಣ ಇದೆಯಾ? ಆಂಜನೇಯಗೆ ಸಿ.ಟಿ. ರವಿ ಟಾಂಗ್ಲಕ್ಷಾಂತರ ಮಂದಿ ದಕ್ಷಿಣ ಕೊರಿಯನ್ನರ ಪಾಲಿಗೆ ಅಯೋಧ್ಯೆಯೇ ಮಾತೃಭೂಮಿ, ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿMysuru: ಅಯೋಧ್ಯೆ ಶ್ರೀ ರಾಮನ ನೆಪದಲ್ಲಿ ಮೈಸೂರಿನ ಈ ಪುಟ್ಟ ಗ್ರಾಮದಲ್ಲಿ ಖುಷಿಯೋ ಖುಷಿ!ಚರಿತ್ರೆಯಲ್ಲಿ ದಾಖಲಾಗುವ ರೀತಿಯ ಅಯೋಧ್ಯೆ ಉದ್ಘಾಟನೆ ಆಗ್ತಿದೆ. ಹುಬ್ಬಳ್ಳಿಯಲ್ಲಿ ರಾಮಜನ್ಮ ಭೂಮಿಯಲ್ಲಿ ಹೋರಾಟದಲ್ಲಿ ಭಾಗಿಯಾಗಿದ್ರಲ್ಲ ಅವರ ಕೇಸ್ ಗಳನ್ನು ಓಪನ್ ಮಾಡಿ, ಇಬ್ಬರು ಕಾರ್ಯಕರ್ತ ರನ್ನು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ ಅಂತ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ರು. ಕಾಂಗ್ರೆಸ್ ತಕ್ಕ ಪರಿಣಾಮ ಎದುರಿಸಲಿದೆಇವಾಗ್ಲೂ ಕೂಡ ರಾಮಮಂದಿರ ಕಾರ್ಯಗಳು ಶುರುವಾಗಿವೆ. ಆದರೆ ಕಾಂಗ್ರೆಸ್ ರಾಮಭಕ್ತರ ಮೇಲೆ ಕೇಸ್ ಹಾಕಿ, ಭಯ ಪಡಿಸ್ತಿದೆ. ದ್ವೇಷದ ರಾಜಕಾರಣ ಮಾಡುವ ಕಾಂಗ್ರೆಸ್ ಮುಂದೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಅಂತ ಅಶೋಕ್ ಎಚ್ಚರಿಕೆ ನೀಡಿದ್ರು.ಇದನ್ನೂ ಓದಿ: Ram Mandir: ಒಂದೆಡೆ ರಾಮ ಬರ್ತಿರೋ ಸಂಭ್ರಮ; ಹುಬ್ಬಳ್ಳಿಯಲ್ಲಿ ಮಾತ್ರ 31 ವರ್ಷ ಹಳೇ ಕೇಸ್‌ಗೆ ಜೀವ! ಒಬ್ಬ ಬಂಧನ, ಕರಸೇವಕರೇ ಟಾರ್ಗೆಟ್!ಧೈರ್ಯವಿದ್ದರೆ ನನ್ನನ್ನೂ ಬಂಧಿಸಿನಾನು ರಾಮಜನ್ಮ ಭೂಮಿ ಹೋರಾಟದಲ್ಲಿ ಭಾಗಿಯಾಗಿದ್ದೆ. ನಿಮಗೆ ಧೈರ್ಯ ಇದ್ದರೆ ನನ್ನನ್ನೂ ಅರೆಸ್ಟ್ ಮಾಡಿ ಅಂತ ಆರ್ ಅಶೋಕ್ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಬಿಎಸ್ ಯಡಿಯೂರಪ್ಪ ಕೂಡ ಹೋರಾಟದಲ್ಲಿ ಭಾಗವಹಿಸಿದ್ರು. ಇದರ ವಿರುದ್ಧ ಬಿಜೆಪಿ ಉಗ್ರ ಹೋರಾಟ ಮಾಡ್ತೀವಿ ಅಂತ ಅಶೋಕ್ ಹೇಳಿದ್ರು ರಾಮರಥಯಾತ್ರೆಯಲ್ಲಿ ಗಲಾಟೆ ಆಯ್ತು ಅಂತಾ ನಮ್ಮ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದಾರೆ. 31 ವರ್ಷಗಳ ಹಿಂದೆ ಕೇಸ್ ಹಾಕಿದ್ದು ಇವಾಗ ಅದನ್ನು ಮತ್ತೆ ವಾಪಸ್ಸು ತೆರೆಯಲಾಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.ರಾಮನ ಹೆಸರು ಹೇಳಿದ್ರೆ ಭಯರಾಮನ ಆರಾಧನೆ ಮಾಡೋದಾದರೆ ರಾಮನ ಪೂಜೆ ಮಾಡಬೇಕಿತ್ತು. ಟಿಪ್ಪು ಜಯಂತಿಯನ್ನು ನಾಡಿನಾದ್ಯಂತ ಮಾಡ್ತೀವಿ ಅಂತಾರೆ. ಆದರೆ ರಾಮನ ಹೆಸರ ಹೇಳಿದ್ರೆ ಇವರಿಗೆ ಭಯ. ಕೇಸರಿ ಅಂದರೆ ಏನೋ ಇವರಿಗೆ, ಹಣೆಯಲ್ಲಿ ನಾಮ ಹಾಕಲಿ ಅಂತ ಸವಾಲು ಹಾಕಿದ್ರು. ಧರ್ಮ ಒಡೆಯುವ ಅಂಬಾಸಿಡರ್ ಅಂದ್ರೆ ಸಿದ್ದರಾಮಯ್ಯರೈತರ ಕೊರಳಿಗೆ ಕುಣಿಕೆ ಹಾಕ್ತಿದ್ದಾರೆ, ಅಲ್ಪಸಂಖ್ಯಾತರ ಓಲೈಸಲ್ಲು ಕಾಣಿಕೆ ಮೇಲೆ ಕಾಣಿಕೆ ಕೊಡ್ತಿದ್ದಾರೆ. ಮತಕ್ಕಾಗಿ ಪಾಲಿಟಿಕ್ಸ್ ಮಾಡೋದು ಸಿದ್ದರಾಮಯ್ಯ ರಕ್ತದ ಕಣದಲ್ಲಿ ಬಂದಿರೋದು. ಧರ್ಮ ಧರ್ಮ ಒಡೆಯುವ ಬ್ರಾಂಡ್ ಅಂಬಾಸಿಡರ್ ಅಂದರೆ ಅದು ಸಿದ್ದರಾಮಯ್ಯ ಅಂತ ಅಶೋಕ್ ಆರೋಪಿಸಿದ್ರು

Post a Comment