ಮುಲ್ಫೋರ್ಡ್-ಮೋದಿ-ಮನ್ಮೋಹನ್ ಸಿಂಗ್
ಭಾರತದಲ್ಲಿ ನರೇಂದ್ರ ಮೋದಿಯವರ ನಾಯಕತ್ವದ ಆಗಮನದೊಂದಿಗೆ ಇಂತಹ ದಾಳಿಗಳಿಗೆ ಕೌಂಟರ್ ದಾಳಿಗಳು ಹೆಚ್ಚಾದವು. ಉಗ್ರರ ಬೆದರಿಕೆಗಳ ವಿರುದ್ಧ ಮೋದಿ ಅವರ ದೃಢವಾದ ಮತ್ತು ಮಣಿಯದ ನಿಲುವಿಗಾಗಿ ಅವರನ್ನ ಮೆಚ್ಚಲೇಬೇಕು ಎಂದು ಮುಲ್ಫೋರ್ಡ್ ತಿಳಿಸಿದ್ದಾರೆ.ನವದೆಹಲಿ: ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಗೆ ಸರ್ಜಿಕಲ್ ಸ್ಟ್ರೈಕ್ಗಳ (Surgical Strikes) ಮೂಲಕ ಭಾರತ ಸರಿಯಾದ ಪ್ರತಿಕ್ರಿಯೆ ನೀಡಿದೆ. ಈ ಮೂಲಕ ರನ್ನ ಭದ್ರತಾ ಹಿತಾಸಕ್ತಿಗಳನ್ನು ಕಾಪಾಡಿಕೊಂಡಿದೆ ಎಂದು ಭಾರತದಲ್ಲಿನ ಮಾಜಿ ಯುಎಸ್ ರಾಯಭಾರಿ ಡೇವಿಡ್ ಮುಲ್ಫೋರ್ಡ್ (Former US Ambassador David Mulford) ಹೇಳಿರುವ ಹಳೆಯ ವೀಡಿಯೊ ವೈರಲ್ ಆಗುತ್ತಿದೆ. ಅದರಲ್ಲೂ ಇಂತಹ ಸಮಸ್ಯೆಯನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ತೆಗೆದುಕೊಂಡ ನಿರ್ಧಾರಗಳು ಸರಿಯಾಗಿದ್ದವು ಎಂದು ಶ್ಲಾಘಿಸಿದ್ದಾರೆ. ಕೆಲವು ದುಷ್ಟರನ್ನು ನಿಯಂತ್ರಿಸಬೇಕಾದರೆ ತಡೆಯಲು ಅವನ ಮುಖದ ಮೇಲೆ ಪಂಚ್ ನೀಡಬೇಕೆಂದು ವೈರಲ್ ವಿಡಿಯೋದಲ್ಲಿ ಹೇಳಿದ್ದಾರೆ.ಹಳೆ ವಿಡಿಯೋ ವೈರಲ್ಸಂಬಂಧಿತ ಸುದ್ದಿಪ್ರಧಾನಿ ಮೋದಿಯ 'ಮಿಷನ್ ಸೌತ್', 2024 ರ ಲೋಕಸಭೆ ಚುನಾವಣೆಗೆ 'ಮಾಸ್ಟರ್ ರ್ಸ್ಟ್ರೋಕ್'!ಈ 10 ವರ್ಷಗಳಲ್ಲಿ ಭಾರತದ ಸಾಧನೆ ಹೇಗಿತ್ತು? ಪ್ರಧಾನಿ ಮೋದಿಗೇ ನೇರವಾಗಿ ನಿಮ್ಮ ಅಭಿಪ್ರಾಯ ತಿಳಿಸಿ!New Year 2024: ದೇಶವಾಸಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿದ ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್Mann Ki Baat: ಮೋದಿ ನಮ್ಮ ಭಾಯಿಜಾನ್, ಮುಸ್ಲಿಂ ಮಹಿಳೆಯಿಂದ ಪ್ರಧಾನಿ ಗುಣಗಾನ!ಇದು ಹಳೆಯ ವಿಡಿಯೋ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಗಮನಾರ್ಹ ಪ್ರತಿಕ್ರಿಯೆಯನ್ನು ಹುಟ್ಟುಹಾಕಿದೆ. ಈ ವಿಡಿಯೋದಲ್ಲಿ ಹಿಂದಿನ ಪಿಎಂ ಮನ್ ಮೋಹನ್ ಸಿಂಗ್ ಮತ್ತು ಮೋದಿ ಸರ್ಕಾರದ ಕಾರ್ಯತಂತ್ರದ ನಿರ್ಧಾರಗಳ ಪ್ರಸ್ತುತತೆ ಮತ್ತು ಪ್ರಭಾವವನ್ನು ಎತ್ತಿ ತೋರಿಸುತ್ತಿದೆ.ಇದನ್ನೂ ಓದಿ: Iran Blast: ಇರಾನ್ನ ಹುತಾತ್ಮ ಜನರಲ್ ಖಾಸಿಂ ಸೂಲೈಮಾನಿ ಸಮಾಧಿ ಬಳಿ ಅವಳಿ ಬಾಂಬ್ ಸ್ಫೋಟ! 103 ಹೆಚ್ಚು ಮಂದಿ ಸಾವುಸಿಂಗ್ ಕಾಲದಲ್ಲಿ ಹಲವು ದಾಳಿಗಳ ಸ್ಮರಣೆಮನ್ಮೋಹನ್ ಸಿಂಗ್ ಕಾಲದಲ್ಲಿ ಭಯೋತ್ಪಾದಕ ದಾಳಿಗಳು ಭಾರತದಾದ್ಯಂತ ನಿಯಮಿತ ಘಟನೆಗಳಾಗಿದ್ದವು. 2005 ರ ಭಯೋತ್ಪಾದಕ ದಾಳಿಗಳು, 2006 ರ ಮುಂಬೈ ರೈಲು ಬಾಂಬ್ ಸ್ಫೋಟ ಮತ್ತು 2008 ರಲ್ಲಿ 26/11 ಮುಂಬೈ ಭಯೋತ್ಪಾದಕ ದಾಳಿಗಳು ಪ್ರಮುಖ ಘಟನೆಗಳನ್ನು ಇದರಲ್ಲಿ ಸೇರಿವೆ. ಈ ಆಕ್ರಮಣಗಳು ದೇಶದಲ್ಲಿ ವ್ಯಾಪಕ ಅವ್ಯವಸ್ಥೆಗೆ ಕಾರಣವಾಗಿದ್ದವು. ಭಯ ಮತ್ತು ಅನಿಶ್ಚಿತತೆಯ ವಾತಾವರಣವನ್ನು ಹುಟ್ಟುಹಾಕಿತ್ತು ಮತ್ತು ಗಣನೀಯ ಪ್ರಮಾಣದ ಜೀವಹಾನಿಗೆ ಕಾರಣವಾಗಿತ್ತು ಎಂದು ಮುಲ್ಫೋರ್ಡ್ ತಿಳಿಸಿದ್ದಾರೆ. ಮೋದಿ ಕಾಲದಲ್ಲಿ ಭಯೋತ್ಪಾಕರ ವಿರುದ್ಧ ಕೌಂಟರ್ ಅಟ್ಯಾಕ್ಭಾರತದಲ್ಲಿ ನರೇಂದ್ರ ಮೋದಿಯವರ ನಾಯಕತ್ವದ ಆಗಮನದೊಂದಿಗೆ ಇಂತಹ ದಾಳಿಗಳಿಗೆ ಕೌಂಟರ್ ದಾಳಿಗಳು ಹೆಚ್ಚಾದವು. ಉಗ್ರರ ಬೆದರಿಕೆಗಳ ವಿರುದ್ಧ ಮೋದಿ ಅವರ ದೃಢವಾದ ಮತ್ತು ಮಣಿಯದ ನಿಲುವಿಗಾಗಿ ಅವರನ್ನ ಮೆಚ್ಚಲೇಬೇಕು. ಸರ್ಜಿಕಲ್ ಸ್ಟ್ರೈಕ್ ಮೂಲಕ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಭಯೋತ್ಪಾದಕ ಲಾಂಚ್ ಪ್ಯಾಡ್‌ಗಳ ವಿರುದ್ಧ ಭಾರತದ ಸೇನಾ ಕ್ರಮವನ್ನು ಮೋದಿಯವರ ದೃಢವಾದ ಭಯೋತ್ಪಾದನಾ ನಿಗ್ರಹ ನೀತಿಗೆ ಒಂದು ಪ್ರಮುಖ ಉದಾಹರಣೆ ಎಂದು ಅವರು ತಿಳಿಸಿದ್ದಾರೆ. ಸರ್ಜಿಕಲ್ ಸ್ಟ್ರೈಕ್ನ ಪರಿಣಾಮಉರಿ ದಾಳಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಹಿಂದೆ ನಡೆದ ದಾಳಿಗೆ ಪ್ರತೀಕಾರವಾಗಿ ನಡೆದ ಸರ್ಜಿಕಲ್ ಸ್ಟ್ರೈಕ್, ದೇಶದಲ್ಲಿ ಇನ್ಮುಂದೆ ಬೆದರಿಕೆಗಳನ್ನು ನಿಭಾಯಿಸುವ ಭಾರತದ ವಿಧಾನದಲ್ಲಿ ಗಮನಾರ್ಹ ಬದಲಾವಣೆಯನ್ನು ಗುರುತಿಸಿತು. ಈ ಬದಲಾವಣೆಯು ಮೋದಿಯವರ ನಾಯಕತ್ವವೇ ಕಾರಣ ಎಂದು ಮುಲ್ಫೋರ್ಡ್ ತಿಳಿಸಿದ್ದಾರೆ. ಈ ಮಿಲಿಟರಿ ಕ್ರಮವು ಜಗತ್ತನ್ನು ಆಶ್ಚರ್ಯಗೊಳಿಸಿತು ಮಾತ್ರವಲ್ಲದೆ ತನ್ನ ಸಾರ್ವಭೌಮತ್ವ ಮತ್ತು ತನ್ನ ಜನರನ್ನು ರಕ್ಷಿಸುವ ಭಾರತದ ಸಂಕಲ್ಪವನ್ನು ಪುನರುಚ್ಚರಿಸಿತ್ತು.

Post a Comment