ಸಿಎಂ ಸಿದ್ದರಾಮಯ್ಯ
Muslim Community: ಯಾವುದೇ ಕಾರಣಕ್ಕೂ ಮುಸ್ಲಿಮರಿಗೆ ಅನ್ಯಾಯ ಆಗೋಕೆ ಬಿಡಲ್ಲ ಎಂದಿರೋ ಸಿಎಂ ಸಿದ್ದರಾಮಯ್ಯ, ದೇಶದ ಸಂಪತ್ತು ನಿಮಗೂ ಸೇರಬೇಕು ಎಂದಿದ್ದಾರೆ.ಹುಬ್ಬಳ್ಳಿ : ಈ ದೇಶದ ಸಂಪತ್ತು ಮುಸ್ಲಿಮರಿಗೂ (Muslim) ಸೇರಬೇಕು. ಮುಸ್ಲಿಮರಿಗೆ ಅನ್ಯಾಯ ಆಗೋಕೆ ಬಿಡಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಭರವಸೆ ನೀಡಿದ್ದಾರೆ. ಹುಬ್ಬಳ್ಳಿ (Hubballi) ತಾಲೂಕಿನ ಪಾಳ ಗ್ರಾಮದಲ್ಲಿ ದಕ್ಷಿಣ ಭಾರತದ ವಿವಿಧ ಧರ್ಮ ಗುರುಗಳ ಸಮಾವೇಶದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಸಿಎಂ ಸಿದ್ದರಾಮಯ್ಯ, ಭಾಷಾ ಪೀರಾ ದರ್ಗಾಕ್ಕೆ ಭೇಟಿ ನೀಡಿದರು. ಸಚಿವರಾದ ಎಚ್. ಕೆ. ಪಾಟೀಲ್, ಸಂತೋಷ್ ಲಾಡ್ ಸಾಥ್ ನೀಡಿದರು. ಶಾಂತಿ ಸೌಹಾರ್ದತೆ ನೆಲೆಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಸಮಾವೇಶ ದಕ್ಷಿಣ ಭಾರತದ ಮುಸ್ಲಿಂ ಧರ್ಮ ಗುರುಗಳು ಪಾಲ್ಗೊಂಡಿದ್ದರು.ಸಮಾವೇಶ ಉದ್ಘಾಟಿಸಿದ ಸಿದ್ಧರಾಮಯ್ಯ, ನನಗೆ ಸರಿ ಅನಿಸಿದ ಧರ್ಮ ಪಾಲನೆ ಮಾಡಲು ನಾವು ಸ್ವತಂತ್ರ ಎಂದರು. ಇಡೀ ಪ್ರಪಂಚದಲ್ಲೇ ಭಾರತ ವಿಶಿಷ್ಟವಾದ ದೇಶ. ಜಗತ್ತಿನಲ್ಲೇ ಹೆಚ್ಚು ಜನಸಂಖ್ಯೆ ಇರುವ ದೇಶ. ಹಲವು ಧರ್ಮಗಳ ಪಾಲನೆ ಮಾಡುವ ಜನ ದೇಶದಲ್ಲಿದ್ದಾರೆ. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಲ್ಲಿ ಧರ್ಮಗಳ ಪಾಲನೆ ಮಾಡಲು ಸ್ವತಂತ್ರರು ಅಂತಾ ಹೇಳಿದ್ದಾರೆ.ಸಂಬಂಧಿತ ಸುದ್ದಿಶಬರಿಮಲೆ ರೈಲಿಗೆ ವಿಶೇಷ ಪೂಜೆ, ಹುಬ್ಬಳ್ಳಿಯಲ್ಲಿ ಅಯ್ಯಪ್ಪ ಮಾಲಾಧಾರಿಗಳ ಸಂಭ್ರಮ ನೋಡಿKarnataka Session: ಇಂದಿನಿಂದ ಚಳಿಗಾಲದ ಅಧಿವೇಶನ; ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸಿಗುತ್ತಾ ಮುಕ್ತಿ?ಬಹುಮತದತ್ತ ಕಾಂಗ್ರೆಸ್, ಶುರುವಾಯ್ತು ಡಿಕೆಶಿ ತಂತ್ರಗಾರಿಕೆ; ಹೋಟೆಲ್ ಬಳಿ ಬಂದ ಬಸ್ಗಳುಸಚಿವ ಮಧು ಬಂಗಾರಪ್ಪಗೆ ಅಹಂ ಜಾಸ್ತಿ ಆಗಿ ಅಧಿಕಾರದ ಪಿತ್ತ ನೆತ್ತಿಗೇರಿದೆ: ಸ್ವಪಕ್ಷದ ಶಾಸಕ ಕಿಡಿವೈವಿಧ್ಯತೆಯಲ್ಲಿ ಏಕತೆನನಗೆ ಸರಿ ಅನಿಸಿದ ಧರ್ಮ ಪಾಲನೆ ಮಾಡಬೇಕು. ಎಲ್ಲಾ ಧರ್ಮಗಳು ಮನುಷ್ಯತ್ವವನ್ನೇ ಪಾಲನೆ ಮಾಡ್ತವೆ. ಸರ್ವ ಜನಾಂಗದ ಶಾಂತಿಯ ತೋಟ ಅಂತ ಕುವೆಂಪು ಹೇಳಿದ್ದಾರೆ. ನಮ್ಮ ಸಮಾಜದಲ್ಲಿ ವೈವಿಧ್ಯತೆ ಇದೆ. ಅದ್ರಲ್ಲಿ ಏಕತೆ ಕಾಣಬೇಕು. ಸಹಿಷ್ಣತೆ, ಸಹಬಾಳ್ವೆ ಜೀವನದಲ್ಲಿ ಅಳವಡಿಸಿಕೊಂಡ್ರೆ ಬೇಧ ಭಾವ ಬರಲು ಸಾಧ್ಯವಿಲ್ಲ. ಹುಟ್ಟವಾಗ ವಿಶ್ವ ಮಾನವರು ಸಾಯುವಾಗ ಅಲ್ಪ ಮಾನವರು ಆಗ್ತೇವೆ.ದರ್ಗಾಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯಸೂಫಿ ಭಾಷಾ ಪೀರಾ ಅವರ ಜೀವಿತ ಕಾಲದಲ್ಲಿ ಹಿಂದೂ ಮುಸ್ಲಿಮರಲ್ಲಿ ಸಾಮರಸ್ಯ ಉಂಟುಮಾಡಲು ಪ್ರಯತ್ನ ಮಾಡ್ತಾ ಇದ್ರೂ. ಅವರ ಮಗ ಸೈಯದ್ ತಾಜುದ್ದಿನ್ ಖಾದ್ರಿ ಅವರ ತಂದೆ ಹಾಗೇ ಮಾಡ್ತಾ ಇದ್ದಾರೆ. ಅವರಿಗೆ ಕೋಟಿ ಕೋಟಿ ನಮನ ಎಂದರು. ಯಾರೂ ಕೂಡ ಇದೇ ಧರ್ಮ ಜಾತಿಯಲ್ಲಿ ಹುಟ್ಟೋಕೆ ಅರ್ಜಿ ಹಾಕಿರಲಿಲ್ಲ.ಜಾತಿ ರಹಿತ ಸಮಾಜ ನಿರ್ಮಾಣಗೌರವ ಕೊಟ್ಟು ಬಾಳುವುದೇ ಮನುಷ್ಯತ್ವ, ಕೊಡದೆ ಹೋದ್ರೆ ದ್ರೋಹ ಮಾಡಿದಂತೆ. ರಾಜಕೀಯಕ್ಕಾಗಿ ಧರ್ಮ, ಜಾತಿಗಳ ನಡುವೆ ಒಡಕು ಅದು ಕ್ಷಣಿಕ. ವೈಚಾರಿಕತೆಯಿಂದ ಕೂಡಿದ ಶಿಕ್ಷಣ ಸಿಗಬೇಕು. ಎಷ್ಟೇ ಕಲಿತು ಮತ್ತೆ ಜಾತಿ ಮಾಡಿದರೆ ಏನು ಪ್ರಯೋಜನ. ಬಸವಣ್ಣನವರು 850 ವರ್ಷಗಳ ಹಿಂದೆಯೇ ಅವರು ವಚನ ಹೇಳಿದ್ದಾರೆ. ಎಲ್ಲಾ ಧರ್ಮ ಗುರುಗಳು ವರ್ಗ, ಜಾತಿ ರಹಿತ ಸಮಾಜ ನಿರ್ಮಾಣ ಆಗಬೇಕು ಅಂತಾ ಹೇಳಿದ್ದು.ಸಎಂ ಸಿದ್ದರಾಮಯ್ಯಕರ್ನಾಟಕದ ಏಳು ಕೋಟಿ ಜನರು ಒಂದೇ ತಾಯಿ ಮಕ್ಕಳು, ನಾವೆಲ್ಲಾ ಸೋದರರು. ನನಗೆ ರಕ್ತ ಬೇಕಾದಾಗ ಜಾತಿ ಕೇಳಿ ರಕ್ತ ಕೇಳ್ತಿವಾ? ಯಾರದೇ ಇದ್ರೂ ಕೊಡಿ ಅಂತೀವಿ. ಹಜರಾತ್ ಅವರು ಈ ದರ್ಗಾ ಅಭಿವೃದ್ಧಿಗೆ ದುಡ್ಡು ಕೇಳಿದ್ದಾರೆ. ಮುಂದಿನ ವರ್ಷ ಅನುದಾನ ಕೊಡ್ತೀನಿ. ನಾನು ಕೊಡ್ತೀನಿ, ಅಂದಮೇಲೆ ಕೊಟ್ಟೆ ಕೊಡ್ತೀನಿ ಎಂದರು.ಅನುದಾನದ ಭರವಸೆಬಡವರು ಎಲ್ಲಾ ಕಡೆಗಳಲ್ಲೂ ಇದ್ದಾರೆ, ನಾವು ಎಲ್ಲರಿಗೂ ಕೊಡ್ತೆವೆ. ಶಿಕ್ಷಣ ಅಂದ್ರೆ ಜ್ಞಾನ ವಿಕಾಸ ಆಗಬೇಕು. ಧರ್ಮ ಜಾತಿ ವೈರತ್ವ ಉಂಟುಮಾಡುವವರ ಬಗ್ಗೆ ಎಚ್ಚರಿಕೆ ವಹಿಸೋಣ. ಈ ವರ್ಷ 4000 ಕೋಟಿ ಅಲ್ಪಸಂಖ್ಯಾತ ಇಲಾಖೆಗೆ ಕೊಟ್ಟಿದ್ದೇವೆ. ಪ್ರತಿ ವರ್ಷ ಹೆಚ್ಚು ಮಾಡ್ತೇವೆ. ಕೊನೇದಾಗಿ 10 ಸಾವಿರ ಕೋಟಿ ಮಾಡಬೇಕು ಅನ್ಕೊಂಡಿದ್ದೀನಿ.ಇದನ್ನೂ ಓದಿ: Vijayapur: ಮೆಕ್ಕೆಜೋಳದ ಮೂಟೆಯಡಿ ಸಿಲುಕಿಕೊಂಡ 12 ಕಾರ್ಮಿಕರು, ಪ್ರಾಣ ಉಳಿಸಿಕೊಳ್ಳಲು ಹೋರಾಟ!ಎಲ್ಲರಿಗೂ ರಕ್ಷಣೆನೀವು ಭಾರತೀಯರಲ್ವಾ? ದೇಶದ ಸಂಪತ್ತು ನಿಮಗೂ ಸೇರಬೇಕು ನನಗೂ ಸೇರಬೇಕು. ನಿಮಗೆ ಯಾವುದೇ ಕಾರಣಕ್ಕೂ ಅನ್ಯಾಯ ಆಗೋಕೆ ಬಿಡಲ್ಲ. ರಕ್ಷಣೆ ಕೊಡ್ತೇವೆ. ಎಲ್ಲಾ ಧರ್ಮ, ಜಾತಿ ಅವರಿಗೂ ರಕ್ಷಣೆ ಕೊಡ್ತೇವೆ. ಕಾನೂನು ಎಲ್ಲರಿಗೂ ಒಂದೇ. ಸೌಹಾರ್ದತೆ ಉಂಟುಮಾಡಲು ಎಲ್ಲಾ ಪ್ರಯತ್ನ ನಮ್ಮ ಸರ್ಕಾರ ಮಾಡುತ್ತೆ ಎಂದರು.

Post a Comment