Lokayukta Raid: ರಾಜ್ಯದ ಹಲವೆಡೆ ಲೋಕಾ ರೇಡ್; 25 ಲಕ್ಷ ಮೌಲ್ಯದ ಡೈಮೆಂಡ್‌, ಭಾರಿ ನಗನಾಣ್ಯ ಪತ್ತೆ


 ಲೋಕಾಯುಕ್ತ ದಾಳಿ

Karnataka Lokayukta: ಚೆನ್ನಕೇಶವ ಸೋದರ ಮಾವ ತರುಣ್ ಎಂಬುವರ ಮನೆಯಲ್ಲಿ ಒಂದು ಕೆಜಿ 55 ಗ್ರಾಂ ಚಿನ್ನಾಭರಣ, 92,95,460 ನಗದು ಹಣ ಪತ್ತೆಯಾಗಿದೆ ಎಂದು ವರದಿಯಾಗಿದೆ.ಬೆಂಗಳೂರು: ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ (Karnataka Lokayukta) ಶಾಕ್ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ 13 ಸರ್ಕಾರಿ ಅಧಿಕಾರಿಗಳಿಗೆ (Government Employees) ಸೇರಿದ 63 ಕಡೆ ದಾಳಿ ನಡೆಸಲಾಗಿದೆ. ಬೆಂಗಳೂರಿನಲ್ಲಿ ಮೂರು ಕಡೆ ಸುಮಾರು 200ಕ್ಕೂ ಹೆಚ್ಚು ಅಧಿಕಾರಿ ಸಿಬ್ಬಂದಿಯಿಂದ ಪರಿಶೀಲನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮೂರು ಕಡೆ, ಕಲಬುರಗಿ, ಬೀದರ್ ನಲ್ಲಿ ತಲಾ 2 ಕಡೆ ಹಾಗೂ ಬಳ್ಳಾರಿ, ಕೊಪ್ಪಳ, ಚಿಕ್ಕಬಳ್ಳಾಪುರ, ಮೈಸೂರು, ಕೋಲಾರ, ಧಾರವಾಡದಲ್ಲಿ ಲೋಕಾಯುಕ್ತ ದಾಳಿ ನಡೆಸಿದೆ. 13 ಅಧಿಕಾರಿಗಳ ವಿರುದ್ಧ ಆದಾಯಕ್ಕೂ ಮೀರಿದ ಆಸ್ತಿ ಸಂಪಾದನೆಯ ಆರೋಪ ಕೇಳಿ ಬಂದಿದೆ.ಲೋಕಾಯುಕ್ತ ದಾಳಿಗೆ ಒಳಗಾದ ಅಧಿಕಾರಿಗಳ ವಿವರಸಂಬಂಧಿತ ಸುದ್ದಿನಿವೃತ್ತ ಶಿಕ್ಷಕರಿಗೆ ಪಿಂಚಣಿ ನೀಡಲು ಲಂಚ; ರೆಡ್​​​​ ಹ್ಯಾಂಡ್​ ಆಗಿ ಲೋಕಾ ಬಲೆಗೆ ಬಿದ್ದ ಬಿಇಓKarnataka Lokayukta: ಆಸ್ತಿ ವಿವರ ಸಲ್ಲಿಸದ ಶಾಸಕರ ಮಾಹಿತಿ ಪ್ರಕಟಿಸಿದ ಲೋಕಾಯುಕ್ತDK Shivakumar: ಸಿಬಿಐ ತನಿಖೆ ಆದೇಶ ವಾಪಸ್ ಪಡೆದಿದ್ದೇಕೆ? ರಾಜ್ಯ ಸರ್ಕಾರದ ಸಮಜಾಯಿಷಿ ಏನು?ಲಂಚ ಸ್ವೀಕರಿಸೋ ವೇಳೆ ರೆಡ್​​ಹ್ಯಾಂಡ್​ ಆಗಿ ಲೋಕಾ ಬಲೆಗೆ ಬಿದ್ದ ಮಹಿಳಾ ಎಎಸ್​​ಐ, ಗ್ರಾ ಪಂ ಸದಸ್ಯ1.ಹೆಚ್ಎಸ್ ಕೃಷ್ಣಮೂರ್ತಿ, ಚೀಪ್ ಎಕ್ಸಿಕ್ಯುಟಿವ್, ಕಣಿಮಿನಿಕೆಹಾಲು ಉತ್ಪಾದಕ ಕೋ ಆಪರೇಟಿವ್ ಸೊಸೈಟಿ, ಕುಂಬಳಗೋಡು.: ಇವರಿಗೆ ಸೇರಿದ ಐದು ಕಡೆ ದಾಳಿ ನಡೆದಿದೆ.2.ಟಿ.ಎನ್ ಸುಧಾಕರ್ ರೆಡ್ಡಿ, ಡಿಜಿಎಂ ವಿಜಿಲೇನ್ಸ್ ಇಇ ಬೆಸ್ಕಾಂ: ಐದು ಸ್ಥಳದಲ್ಲಿ ದಾಳಿ3.ಬಿ.ಮಾರುತಿ, ಆರ್​​​ಎಫ್​​ಓ, ಆನೆಗುಂದಿ ಕೊಪ್ಪಳ.4.ಚಂದ್ರಶೇಖರ್, ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಬಳ್ಳಾರಿ.5.ಶರಣಪ್ಪ, ಆಯುಕ್ತರು, ನಗರ ಪಾಲಿಕೆ ಯಾದಗಿರಿ.6.ಹೆಚ್​​ಡಿ ನಾರಾಯಣ ಸ್ವಾಮಿ, ನಿವೃತ್ತ ವೈಸ್ ಚಾನ್ಸಲರ್, ಪಶು ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯ, ಬೀದರ್‌7.ಸುನೀಲ್ ಕುಮಾರ್, ಸಹಾಯಕ (ಔಟ್ ಸೋರ್ಸ್), ಹಣಕಾಸು ಕಚೇರಿಯ ನಿಯಂತ್ರಕರು, ಪಶು ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯ, ಬೀದರ್.8.ಡಾ.ಪ್ರಭುಲಿಂಗ, DHO ಯಾದಗಿರಿ9.ಮಹದೇವಸ್ವಾಮಿ, ಉಪನ್ಯಾಸಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನಂಜನಗೂಡು, ಮೈಸೂರು.10.ತಿಮ್ಮರಾಜಪ್ಪ, ಎಕ್ಸಿಕ್ಯೂಟಿವ್ ಇಂಜಿನಿಯರ್, ಕೆಆರ್‌ಐಡಿಎಲ್, ವಿಜಯಪುರ ಜಿಲ್ಲೆ. (ಪ್ರಸ್ತುತ ಬೆಳಗಾವಿಯಲ್ಲಿ ಇಇ) ಕ್ಯಾಸಂಬಳ್ಳಿ ಹೋಬಳಿ, ಮಹದೇವಪುರ ಗ್ರಾಮ. ಕೆಜಿಎಫ್, ಕೋಲಾರ11.ಮುನೇಗೌಡ ಎನ್, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ರಾಮನಗರ12.ಬಸವರಾಜ, ಸ್ಟೋರ್ ಕೀಪರ್, ಗ್ರೇಡ್-2, ಓ & ಎಂ ಸಿಟಿ ವಿಭಾಗ ಅಂಗಡಿ, ಹೆಸ್ಕಾಂ, ಹುಬ್ಬಳ್ಳಿ, (ನಿವೃತ್ತ) 1.5 ಕೋಟಿ ಮೌಲ್ಯದ ನಗನಾಣ್ಯ ಪತ್ತೆಬೆಸ್ಕಾಂ ಅಧಿಕಾರಿ ಚನ್ನಕೇಶವ ಮನೆಯಲ್ಲಿ 1.5 ಕೋಟಿ ಮೌಲ್ಯದ ನಗನಾಣ್ಯ ಪತ್ತೆಯಾಗಿದೆ. ಚನ್ನಕೇಶವ ನಿವಾಸದಲ್ಲಿ ಪರಿಶೀಲನೆ ವೇಳೆ ಆರು ಲಕ್ಷ ನಗದು, 3 ಕೆಜಿ ಚಿನ್ನ, 28 ಕೆಜಿ ಬೆಳ್ಳಿ, 25 ಲಕ್ಷ ಮೌಲ್ಯದ ಡೈಮಂಡ್, ಐದು ಲಕ್ಷ ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ.ಸಹಕಾರನಗರದಲ್ಲಿರುವ ಚೆನ್ನಕೇಶವ ಸೋದರ ಮಾವ ತರುಣ್ ಎಂಬುವರ ಮನೆಯಲ್ಲಿ ಒಂದು ಕೆಜಿ 55 ಗ್ರಾಂ ಚಿನ್ನಾಭರಣ, 92,95,460 ನಗದು ಹಣ ಪತ್ತೆಯಾಗಿದೆ ಎಂದು ವರದಿಯಾಗಿದೆ. ಅಮೃತಹಳ್ಳಿಯ ಮಿತುನ್ ಅಪಾರ್ಟ್​ಮೆಂಟ್​ ಫ್ಲ್ಯಾಟ್ ಲೀಸ್ ಪಡೆದುಕೊಂಡು ವಾಸವಾಗಿರುವ ಚನ್ನಕೇಶವ, ಯಲಹಂಕದ ಬಳಿ ಕಮರ್ಷಿಯಲ್ ಕಟ್ಟಡ ನಿರ್ಮಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.ಇದನ್ನೂ ಓದಿ: Siddaramaiah: ಯಾವುದೇ ಕಾರಣಕ್ಕೂ ಅನ್ಯಾಯ ಆಗೋಕೆ ಬಿಡಲ್ಲ: ಮುಸ್ಲಿಮರಿಗೆ ಸಿಎಂ ಭರವಸೆ13 ಅಧಿಕಾರಿಗಳು ಮನೆಯಲ್ಲಿ ಶೋಧ ಕಾರ್ಯ ನಡೆಸುತ್ತಿರುವ ವೇಳೆ ಚನ್ನಕೇಶವ ಬಿಪಿ ಹೆಚ್ಚಾಗಿದೆ ಎಂದು ಸುಸ್ತಾಗಿದೆ ಎಂದು ಹೇಳಿದ್ದು, ಕುಟುಂಬಸ್ಥರು ನೀಡಿರುವ ಮಾತ್ರೆ ಸೇವಿಸಿದ್ದರಿಂದ ಆರೋಗ್ಯ ಸುಧಾರಣೆ ಆಗಿದೆ.

Post a Comment

Previous Post Next Post