Arjuna Elephant Died: 8 ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಇನ್ನಿಲ್ಲ


  ಅರ್ಜುನ ಆನೆ

ಸಕಲೇಶಪುರ ತಾಲೂಕಿನ ಯಸಳೂರು ವಲಯದ ಬಾಳೆಕೆರೆ ಫಾರೆಸ್ಟ್‌ನಲ್ಲಿ ಈ ದುರ್ಘಟನೆ ನಡೆದಿದ್ದು, ಕಾಡಾನೆ ಸೆರೆ ಕಾರ್ಯಾಚರಣೆಯ ವೇಳೆ ಅರ್ಜುನನ್ನು ಬಳಸಲಾಗಿತ್ತು.ಹಾಸನ: ಎಂಟು ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಆನೆ (Arjuna Elephant) ಕಾಡಾನೆ ಕಾರ್ಯಾಚರಣೆ ವೇಳೆ ಅಸುನೀಗಿದೆ. ಸಕಲೇಶಪುರ ತಾಲೂಕಿನ ಯಸಳೂರು ವಲಯದ ಬಾಳೆಕೆರೆ ಫಾರೆಸ್ಟ್‌ನಲ್ಲಿ ಈ ದುರ್ಘಟನೆ ನಡೆದಿದ್ದು, ಕಾಡಾನೆ ಸೆರೆ ಕಾರ್ಯಾಚರಣೆಯ (Wild Elephant Capturing) ವೇಳೆ ಅರ್ಜುನನ್ನು ಬಳಸಲಾಗಿತ್ತು.ಆದರೆ ಈ ಕಾರ್ಯಾಚರಣೆಯ ವೇಳೆ ಕಾಡಾನೆ ಅರ್ಜುನನ ಹೊಟ್ಟೆ ಭಾಗಕ್ಕೆ ತಿವಿದು ಸಾಯಿಸಿದೆ. ಈ ಭಾಗದಲ್ಲಿ ನವೆಂಬರ್ 24 ರಿಂದಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ, ಕಾಡಾನೆ ಸ್ಥಳಾಂತರ ಕಾರ್ಯಾಚರಣೆ ಆರಂಭವಾಗಿತ್ತು.ಸಂಬಂಧಿತ ಸುದ್ದಿCyclone Michaung: ಚಂಡಮಾರುತ ಎಫೆಕ್ಟ್; ರದ್ದುಗೊಂಡಿದ್ದ ರೈಲುಗಳ ಓಡಾಟ ಆರಂಭದ ಮಾಹಿತಿ ಇಲ್ಲಿದೆ!Security To Chilli: ಜಮೀನಿನಲ್ಲಿ ಬೆಳೆದ ಮೆಣಸಿಕಾಯಿಗೆ ಕಾವಲು, ರಾತ್ರಿ ಸೆಕ್ಯುರಿಟಿ ನೀಡ್ತಿರೋ ರೈತರು!Bedara Kannappa Temple: ಸಾಂಸ್ಕೃತಿಕ ನಗರಿಯಲ್ಲಿದೆ ಬೇಡರ ಕಣ್ಣಪ್ಪ ದೇಗುಲ!ಅರ್ಜುನ ಆನೆಯ ಸಾವು, ದುಃಖದಿಂದ ಪ್ರಜ್ಞೆತಪ್ಪಿದ ಮಾವುತಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆದಸರಾದಿಂದ ನಿವೃತ್ತಿ ಪಡೆದ ನಂತರ ಅರ್ಜುನ ಆನೆ ಪುಂಡಾನೆ ಹಿಡಿಯುವ ಕಾಯಕದಲ್ಲಿ ನಿರತವಾಗಿತ್ತು. ಹಾಸನ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಮಾಡಲಾಗುತ್ತಿದೆ.  ಇದನ್ನೂ ಓದಿ: Radio Collars: ಹೆಣ್ಣು ಆನೆಗಳಿಗೆ ರೇಡಿಯೋ ಕಾಲರ್ ಏಕೆ ಅಳವಡಿಕೆ ಮಾಡ್ತಾರೆ? ಇಲ್ಲಿದೆ ನೋಡಿ ಮಾಹಿತಿರೇಡಿಯೋ ಕಾಲರ್‌ನಿಂದ ಏನು ಪ್ರಯೋಜನ?ಅತಿ ಹೆಚ್ಚು ಆನೆಗಳು ಗುಂಪು ಗುಂಪಾಗಿ ಇರುವ ಕಡೆ ಮತ್ತು ಮನುಷ್ಯರ ಮೇಲೆ ದಾಳಿ ನಡೆಸುವ ಸಂಭವವಿರುತ್ತದೆ. ಅದನ್ನು ತಡೆಗಟ್ಟಲು ಈ ರೇಡಿಯೋ ಕಾಲರ್ ಅಳವಡಿಕೆ ಸಹಕಾರಿಯಾಗುತ್ತದೆ. ಆನೆಗಳಿಗೆ ರೇಡಿಯೋ ಕಲರ್ ಅಳವಡಿಕೆ ಮಾಡುವುದರಿಂದ ಆನೆಗಳು ಎಲ್ಲಿವೆ ಮತ್ತು ಎಷ್ಟು ಅಂತರದಲ್ಲಿರುತ್ತವೆ ಎಂಬುದು ತಿಳಿಯುತ್ತದೆ. ಇದರಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಸಾರ್ವಜನಿಕರಿಗೆ ಆನೆಗಳು ಇಂತಹ ಕಡೆ ಇದೆ ಎಂದು ತಿಳಿಸಿ ಎಚ್ಚರಿಕೆ ವಹಿಸುವಂತೆ ಹೇಳುತ್ತಾರೆ. ಹೀಗೆ ಮಾಹಿತಿ ನೀಡುವುದಕ್ಕೆ ಅನುಕೂಲವಾಗುವ ರೀತಿಯಲ್ಲಿ ಈ ರೇಡಿಯೋ ಕಾಲರ್ ಕೆಲಸ ಮಾಡುತ್ತದೆ.ಮಲೆನಾಡು ಭಾಗದಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷ ಹೆಚ್ಚಾಗುತ್ತಿರುವ ಹಿನ್ನೆಲೆ, ಅರಣ್ಯ ಇಲಾಖೆ ರೇಡಿಯೋ ಕಾಲರ್ ಅಳವಡಿಕೆ ಮಾಡಲು ಮುಂದಾಗಿದೆ. ಬೇಲೂರು, ಆಲೂರು, ಸಕಲೇಶಪುರ, ಅರಕಲಗೂಡು ಈ ಭಾಗಗಳಲ್ಲಿ ಅತಿ ಹೆಚ್ಚು ಆನೆಗಳು ಗುಂಪು ಗುಂಪಾಗಿ ಇರುವುದನ್ನು ಕಂಡು ಅರಣ್ಯ ಇಲಾಖೆಯು ಮೇಲಧಿಕಾರಿಗಳ ಮಾರ್ಗದರ್ಶನದಂತೆ ರೇಡಿಯೋ ಕಾಲರ್ ಅಳವಡಿಕೆ ಮಾಡುತ್ತಿದ್ದಾರೆ.

Post a Comment

Previous Post Next Post