Rajasthan CM: ಸಿಎಂ ರೇಸ್​ನಲ್ಲಿ ಇಬ್ಬರು ಮಹಿಳಾ ನಾಯಕಿಯರು ಸೇರಿ 8ಕ್ಕೂ ಮಂದಿಯಿಂದ ಪೈಪೋಟಿ! ಯುಪಿಯಂತೆ ಟ್ವಿಸ್ಟ್​ ಕೊಡುತ್ತಾ ಬಿಜೆಪಿ?


 ರಾಜಸ್ಥಾನ್ ಸಿಎಂ ರೇಸ್​ನಲ್ಲಿ ದಿಯಾ ಕುಮಾರಿ, ಬಾಲಕ್ ನಾಥ್, ವಸುಂದರಾ ರಾಜೆವಸುಂಧರಾ ರಾಜೆ, ದಿಯಾ ಕುಮಾರಿ ಸೇರಿದಂತೆ ರಾಜಸ್ಥಾನದ ಯೋಗಿ ಅಂತಾನೇ ಖ್ಯಾತಿ ಪಡೆದುಕೊಂಡಿರುವ ಬಾಲಕನಾಥ್ ಸಿಎಂ ಹುದ್ದೆಗೆ ರೇಸ್​ನಲ್ಲಿದ್ದಾರೆ.ಜೈಪುರ: ರಾಜಸ್ಥಾನದಲ್ಲಿ ಯಾರು ಸಿಎಂ (Rajasthan CM) ಆಗ್ಬೋದು ಅನ್ನೋ ಲೆಕ್ಕಾಚಾರಗಳು ಎಲ್ಲರನ್ನೂ ಕಾಡುತ್ತಿವೆ. ಈ ಹಿಂದೆ ಸಿಎಂ ಆಗಿದ್ದ ಹಿರಿಯ ನಾಯಕಿ ವಸುಂಧರಾ ರಾಜೇ (Vasundhara Raje) ಅವ್ರಿಗೆ ಸಿಎಂ ಪಟ್ಟ ಕಟ್ಟೋಕೆ ಹೈಕಮಾಂಡ್‌ಗೆ (BJP High command) ಒಂಚೂರು ಇಷ್ಟವಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಬಿಜೆಪಿಗೆ ಆಗಾಗ ಕಿರಿ ಕಿರಿ ಮಾಡ್ತಿದ್ದ ಅವರಿಗೆ ಈ ಬಾರಿ ಸಿಎಂ ಪೋಸ್ಟ್ ಸಿಗೋದೆ ಇಲ್ಲ ಅಂತ ರಾಜಕೀಯ ವಲಯ ಚರ್ಚೆಯಾಗುತ್ತಿದೆ. ಇವರ ಜೊತೆಗೆ ಕೇಳಿ ಬರ್ತಿರೊ ಮತ್ತೊಂದು ಹೆಸರು ದಿಯಾ ಕುಮಾರಿ (Diya Kumari). ರಾಜಮನೆತನದವರಾದ ದಿಯಾ ಕುಮಾರಿ ಹಾಲಿ ಸಂಸದೆಯಾಗಿದ್ದರೂ ಕೂಡಾ ವಿದ್ಯಾಧರ ನಗರ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಸ್ಪರ್ಧಿಸಿದ್ದರು. ರಜಪೂತ ಸಮುದಾಯದಿಂದ ಬಂದ ಅವರು ಈಗ ರಾಜಸ್ಥಾನ ಸಿಎಂ ರೇಸ್‌‌ನಲ್ಲಿ ಫೇವರಿಟ್ ಅಂತ ಹೇಳಲಾಗುತ್ತಿದೆ.ಮರುಭೂಮಿ ರಾಜ್ಯದಲ್ಲಿ ಮತ್ತೊಬ್ಬ ಯೋಗಿ ಸೃಷ್ಟಿ?ಸಂಬಂಧಿತ ಸುದ್ದಿತೆಲಂಗಾಣದಲ್ಲಿ ಮತ್ತೆ ಕೆಸಿಆರ್‌-ಕೆಟಿಆರ್ ಕಾಂಬೋ ಕಾರುಬಾರು!? ಘಟಾನುಘಟಿಗಳ ಭವಿಷ್ಯ ಮತಗಟ್ಟೆಯಲ್ಲಿ ಭದ್ರ!ವಿವಾಹೇತರ ಸಂಬಂಧ ಉಳಿಸಿಕೊಳ್ಳಲು 30 ಸಾವಿರ ನೀಡಿ ಪತಿಯನ್ನು ಮುಗಿಸಲು ಸುಪಾರಿ ನೀಡಿದ ಪತ್ನಿ!ರೈಲ್ವೆ ಟ್ರ್ಯಾಕ್‌ಗೆ ಬಸ್ ಉರುಳಿ ಬಿದ್ದು ನಾಲ್ವರು ಸಾವು, 24 ಮಂದಿ ಗಂಭೀರ!ಮೈ ಲಾರ್ಡ್' ಅಂತ ಹೇಳಬೇಕಿಲ್ಲ, 'ಸರ್' ಅಂದ್ರೆ ಸಾಕು! ವಕೀಲರಿಗೆ ಸುಪ್ರೀಂ ನ್ಯಾಯಮೂರ್ತಿಗಳ ಸಲಹೆರಾಜಸ್ಥಾನದ ಯೋಗಿ ಅಂತಾನೇ ಖ್ಯಾತಿ ಪಡ್ಕೊಂಡಿರೋ ಬಾಲಕನಾಥ್ ಸಿಎಂ ಹುದ್ದೆಗೆ ಕೇಳಿಬರುತ್ತಿರುವ ಮತ್ತೊಂದು ಪ್ರಮುಖ ಹೆಸರಾಗಿದೆ. ಮಹಂತ ಬಾಲಕನಾಥ್ ಅವರು ಅಲ್ವಾರ್‌ನಿಂದ ಸಂಸದರಾಗಿದ್ದರೂ ಕೂಡಾ ತಿಜಾರಾ ಕ್ಷೇತ್ರದ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ರಾಜಸ್ಥಾನದಲ್ಲಿ ಯುಪಿ ಶೈಲಿಯ ರಾಜಕೀಯವನ್ನು ಪರಿಚಯಿಸುವುದಕ್ಕೆ ಏನಾದ್ರೂ ಬಿಜೆಪಿ ಹೈಕಮಾಂಡ್‌ ಮುಂದಾದರೆ ಬಾಲಕನಾಥ್ ಅವ್ರೇ ಸಿಎಂ ಆಗೋ ಸಾಧ್ಯತೆ ದಟ್ಟವಾಗಿದೆ.ಇದನ್ನೂ ಓದಿ: Lalduhoma: ಒಂದು ಕಾಲದಲ್ಲಿ ಇಂದಿರಾ ಗಾಂಧಿಗೆ ಭದ್ರತಾ ಅಧಿಕಾರಿ! ಈಗ ಮಿಜೋರಾಂ ಸಿಎಂ ಜವಾಬ್ದಾರಿಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ಇವರ ಜೊತೆಗೆ ಕೇಂದ್ರ ಸಚಿವರಾಗಿರುವ ಗಜೇಂದ್ರ ಸಿಂಗ್ ಶೇಖಾವತ್ ಕೂಡಾ ರಾಜಸ್ಥಾನದ ಸಿಎಂ ರೇಸ್‌‌ನಲ್ಲಿದ್ದಾರೆ. ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಹಗರಣದಲ್ಲಿ ಸಿಲುಕಿದ್ದ ಅವರು ಸಾಕಷ್ಟು ವಿವಾದಕ್ಕೆ ಒಳಗಾಗಿದ್ದರು. ಶೇಖಾವತ್ ಈಗ ಕೇಂದ್ರ ಸಚಿವರಾಗಿದ್ದು ರಾಜ್ಯ ರಾಜಕಾರಣಕ್ಕೆ ದುಮುಕ್ತಾರಾ ಅನ್ನೋ ಮತ್ತೊಂದು ಪ್ರಶ್ನೆ ಕೂಡಾ ಇದೆ. ಸಿಎಂ ರೇಸ್​ನಲ್ಲಿ ಅರ್ಜುನ್ ಮೇಘವಾಲ್ರಾಜಸ್ಥಾನದ ಹಿರಿಯ ರಾಜಕಾರಣಿಯಾಗಿರೋ ಅರ್ಜುನ್ ಮೇಘವಾಲ್ ಕೂಡಾ ರಾಜಸ್ಥಾನ ಸಿಎಂ ರೇಸ್​ನಲ್ಲಿದ್ದಾರೆ. ಈಗ ಕೇಂದ್ರ ಸಚಿವರಾಗಿರುವ ಇವರು ಮೂರು ಬಾರಿ ಸಂಸದರಾಗಿದ್ದರು. ದಲಿತ ನಾಯಕರೂ ಆಗಿರೋ ಅರ್ಜುನ್ ಅವರು ಪ್ರಧಾನಿ ಮೋದಿಗೆ ಆಪ್ತರೂ ಆಗಿದ್ದಾರೆ. ಇದೇ ಕಾರಣದಿಂದ ಇವರು ಸಿಎಂ ರೇಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿಎಂ ಆಕಾಂಕ್ಷಿಗಳಾಗಿರುವ ಮತ್ತಷ್ಟು ನಾಯಕರುಇವರ ಜೊತೆಗೆ ಕಿರೋಡಿ ಲಾಲ್ ಮೀನಾ ಕೂಡಾ ಸಂಸದಾರಾಗಿದ್ದು ಇವ್ರ ಹೆಸರೂ ಸಿಎಂ ಹುದ್ದೆಗೆ ಕೇಳಿಬರ್ತಿದೆ. ಸವಾಯಿ ಮಾಧೋಪುರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇವ್ರು ರಾಜಸ್ತಾನ ರಾಜಕೀಯದಲ್ಲಿ ದೊಡ್ಡ ಹೆಸರಾಗಿದ್ದಾರೆ. ಇನ್ನುಳಿದಂತೆ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸಿಪಿ ಜೋಷಿ ಸಿಎಂ ಹುದ್ದೆಯ ಪ್ರಬಲ ಆಕಾಂಕ್ಷಿಗಳಾಗಿದ್ದು, ಕಾಂಗ್ರೆಸ್ ವಿರುದ್ಧ ದೊಡ್ಡ ರಣತಂತ್ರ ರೂಪಿಸೋದ್ರಲ್ಲಿ ಇವ್ರ ಪಾತ್ರ ದೊಡ್ಡದಾಗಿತ್ತು. ಲೋಕಸಭಾ ಸ್ಪೀಕರ್ ಆಗಿರೋ ಓಂ ಬಿರ್ಲಾ ಹೆಸರೂ ಕೂಡಾ ರಾಜಸ್ಥಾನ ಸಿಎಂ ರೇಸ್​ನಲ್ಲಿ ಕೇಳಿಬರ್ತಿದೆ.

Post a Comment

Previous Post Next Post