Vijayendra-Lakshmi Hebbalkar: ಪೃಥ್ವಿ ಸಿಂಗ್ ಬೋಗಸ್ ಎಂದ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರನ ಬಂಧನಕ್ಕೆ ವಿಜಯೇಂದ್ರ ಆಗ್ರಹ


 ಲಕ್ಷ್ಮಿ ಹೆಬ್ಬಾಳ್ಕರ್-ಬಿವೈ ವಿಜಯೇಂದ್ರ (ಸಂಗ್ರಹ ಚಿತ್ರ)ಪೃಥ್ವಿ ಸಿಂಗ್ ಮೋಸ್ಟ್ ಬೋಗಸ್ ಎಂದಿದ್ದಾರೆ. ಇದೆಲ್ಲ ರಾಜಕೀಯ ಪ್ರೇರಿತ ಷಡ್ಯಂತ್ರ” ಅಂತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. “ವಿಧಾನ ಪರಿಷತ್ ಸದಸ್ಯ ಸೇರಿ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕು” ಅಂತ ಬಿವೈ ವಿಜಯೇಂದ್ರ ಆಗ್ರಹಿಸಿದ್ದಾರೆ.ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarakiholi) ಆಪ್ತ ಪೃಥ್ವಿ ಸಿಂಗ್ (Prithvi Singh) ಮೇಲೆ ಚಾಕು ಇರಿತ ಪ್ರಕರಣ ರಾಜಕೀಯ ತಿರುವು ಪಡೆಯುತ್ತಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಸಹೋದರ ಚನ್ನರಾಜ್ ಹಟ್ಟಿಹೊಳಿ (Channaraj Hattiholi) ಆಪ್ತರ ವಿರುದ್ಧ ಬಿಜೆಪಿ ನಾಯಕರು (BJP Leaders) ಆರೋಪಿಸಿದ್ದಾರೆ. ಇದೇ ವಿಚಾರಕ್ಕೆ ಬೆಳಗಾವಿ (Belagavi) ಸುವರ್ಣಸೌಧದಲ್ಲಿ (Suvarna Soudha) ಪ್ರತಿಕ್ರಿಯೆ ನೀಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, “ಪೃಥ್ವಿ ಸಿಂಗ್ ಮೋಸ್ಟ್ ಬೋಗಸ್” ಎಂದಿದ್ದಾರೆ. “ಇದೆಲ್ಲ ರಾಜಕೀಯ ಪ್ರೇರಿತ ಷಡ್ಯಂತ್ರ, ಇದರ ಹಿಂದೆ ಯಾರಿದ್ದಾರೆ ಗೊತ್ತಾಗಬೇಕು” ಎಂದಿದ್ದಾರೆ. “ತನಿಖೆ ಆಗಬೇಕು ಅಂತ ಎಸ್‌ಪಿ ಹತ್ತಿರವೂ ಮಾತಾಡಿದ್ದೇನೆ. ಯಾರ ಆಪ್ತ ಅನ್ನೋದಕ್ಕಿಂತ ನಮ್ಮ ಹೆಸರು ಬಂದ ತಕ್ಷಣ ಅದರ ಬಗ್ಗೆ ವಿಚಾರ ಮಾಡಿದ್ದೇನೆ. 24 ಗಂಟೆ ಒಳಗೆ ಸತ್ಯಾಸತ್ಯತೆ ಗೊತ್ತಾಗಬೇಕು” ಎಂದಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra), “ವಿಧಾನ ಪರಿಷತ್ ಸದಸ್ಯ ಸೇರಿ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕು” ಅಂತ ಆಗ್ರಹಿಸಿದ್ದಾರೆ.ಪೃಥ್ವಿ ಸಿಂಗ್ ಮೋಸ್ಟ್ ಬೋಗಸ್ ಎಂದ ಸಚಿವೆಸಂಬಂಧಿತ ಸುದ್ದಿರಮೇಶ್ ಜಾರಕಿಹೊಳಿ ಆಪ್ತನಿಗೆ ಚಾಕು ಇರಿತ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರನ ಆಪ್ತನ ಮೇಲೆ ಆರೋಪ!ಭವಾನಿ ಯಾರಿಗೂ ನೋವು ಮಾಡಿಲ್ಲ, ನೋವಾಗಿದ್ದರೆ ಕ್ಷಮೆ ಕೇಳುವೆ! ಪತ್ನಿ ಪರ ಎಚ್‌ಡಿ ರೇವಣ್ಣ ಸಮಜಾಯಿಷಿSuvarna Soudha: 10 ದಿನಗಳ ಕಾಲ ಚಳಿಗಾಲದ ಅಧಿವೇಶನ, ಕಂಗೊಳಿಸುತ್ತಿದೆ ಬೆಳಗಾವಿ!Karnataka Session: ಇಂದಿನಿಂದ ಚಳಿಗಾಲದ ಅಧಿವೇಶನ; ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸಿಗುತ್ತಾ ಮುಕ್ತಿ?ಪೃಥ್ವಿ ಸಿಂಗ್ ಹೆಸರು ಬರೆದಿಟ್ಟು ಹುಡುಗರು ಆತ್ಮಹತ್ಯೆ ಮಾಡಿಕೊಂಡಿದ್ದರು, ಮೋಸ್ಟ್ ಬೋಗಸ್ ಅವನು ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಪೃಥ್ವಿ ಸಿಂಗ್‌ನನ್ನೂ ವಿಚಾರಣೆ ಮಾಡಬೇಕು, 24 ಗಂಟೆಗಳ ಒಳಗೆ ಘಟನೆಯ ಸತ್ಯಾಸತ್ಯತೆ ಗೊತ್ತಾಗಬೇಕು ಎಂದಿದ್ದಾರೆ. ಇನ್ನು ಈ ಘಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ ಅಂತ ಅವರು ಸ್ಪಷ್ಟಪಡಿಸಿದ್ದಾರೆ. ದುರದ್ದೇಶಪೂರ್ವಕವಾಗಿ ನಮ್ಮ ಮೇಲೆ ಆರೋಪಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಲಕ್ಷ್ಮಿ ಹೆಬ್ಬಾಳ್ಕರ್, ದುರುದ್ದೇಶಪೂರ್ವಕವಾಗಿ ಆತ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾನೆ. ಒಂದು ದಾಖಲೆ ಸಲುವಾಗಿ ಅವರ ಮನೆಗೆ ನಮ್ಮ ಕಡೆಯವರು ಹೋಗಿ ಮಾತುಕತೆ ನಡೆಸಿದ್ದಾರೆ. ಈ ಕುರಿತು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದಿದ್ದಾರೆ.ಇದನ್ನೂ ಓದಿ: Lakshmi Hebbalkar: ರಮೇಶ್ ಜಾರಕಿಹೊಳಿ ಆಪ್ತನಿಗೆ ಚಾಕು ಇರಿತ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರನ ಆಪ್ತನ ಮೇಲೆ ಆರೋಪ!ಶರ್ಟ್‌ನ ಬಣ್ಣವೇ ಬದಲಾಗಿದೆ!ನಮ್ಮ ಕಡೆಯವರು ಆತನೊಂದಿಗೆ ಮಾತನಾಡುವಾಗ ಆತ ಕೇಸರಿ ಬಣ್ಣದ ಟೀ ಶರ್ಟ್‌ ಹಾಕಿದ್ದು ಸೆರೆಯಾಗಿದೆ. ಆದರೆ ರಕ್ತ ಅಂಟಿಕೊಂಡಿದ್ದ ಬಿಳಿ ಬಣ್ಣದ ಅಂಗಿಯನ್ನು ಧರಿಸಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾನೆ. ಈತ ದುರದ್ದೇಶಪೂರ್ವವಾಗಿ ಆರೋಪ ಮಾಡುತ್ತಿರುವುದು ಸ್ಪಷ್ಟವಾಗಿದೆ. ಪೊಲೀಸರು ತನಿಖೆ ನಡೆಸಿ ಈ ಕೃತ್ಯದ ಹಿಂದೆ ಯಾರಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲಿ ಎಂದು ಸಚಿವೆ ಆಗ್ರಹಿಸಿದ್ದಾರೆ.ಪೃಥ್ವಿ ಸಿಂಗ್ ಆರೋಗ್ಯ ವಿಚಾರಿಸಿದ ವಿಜಯೇಂದ್ರಇನ್ನು ಕೆಎಲ್‌ಇ ಆಸ್ಪತ್ರೆಗೆ ಭೇಟಿ ನೀಡಿದ ಬಿವೈ ವಿಜಯೇಂದ್ರ, ಪೃಥ್ವಿ ಸಿಂಗ್ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಪಿಎ, ಆಪ್ತರು ಸೇರಿ ಪೃಥ್ವಿ ಸಿಂಗ್ ಮನೆಗೆ ಹೋಗಿದ್ದಾರೆ. ಪೃಥ್ವಿ ಸಿಂಗ್‌ರನ್ನು ಹೊರಗೆ ಕರೆಸಿ ಮಾತುಕತೆ ಮಾಡಿದ್ದಾರೆ. ಪೃಥ್ವಿ ಸಿಂಗ್ ‌ವಿಡಿಯೋ ರೆಕಾರ್ಡಿಂಗ್ ಮಾಡೋ ಪ್ರಯತ್ನ ಮಾಡಿದ್ದಾರೆ. ಆ ವೇಳೆ ಕಪ್ಪು ಬಣ್ಣದ ಇನ್ನೋವಾ ಕಾರಿನಲ್ಲಿ ಚನ್ನರಾಜ್ ಹಟ್ಟಿಹೊಳಿ ಇದ್ರು. ಇದೇ ವೇಳೆ ಕಾರ್ಯಕರ್ತರು ಪೃಥ್ವಿ ಸಿಂಗ್ ಮೇಲೆ ಹಲ್ಲೆ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ. ಹಾಡಹಗಲೇ ಹಲ್ಲೆ ಮಾಡೋ ಪ್ರಯತ್ನಎಂಎಲ್‌ಸಿ ಬಹಳ ಪ್ರಭಾವಿ ವ್ಯಕ್ತಿ, ಈ ಜಿಲ್ಲೆಯ ಶಾಸಕರು. ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ. ಪ್ರಭಾವ ಇರೋ ಹಿನ್ನೆಲೆಯಲ್ಲಿ ಹಾಡ ಹಗಲೇ ಹಲ್ಲೆ ಮಾಡೋ ಪ್ರಯತ್ನ ಮಾಡಿದ್ದಾರೆ ಅಂತ ವಿಜಯೇಂದ್ರ ಆರೋಪಿಸಿದ್ದಾರೆ. ಪೃಥ್ವಿ ಸಿಂಗ್ ಮೇಲೆ ಹಲ್ಲೆ ಮಾಡಿ ಮೊಬೈಲ್ ಕಿತ್ತುಕೊಂಡು ಹೋಗಿದ್ದಾರೆ‌. ಅಧಿವೇಶನ ಸಂದರ್ಭದಲ್ಲಿ ಆಡಳಿತ ಪಕ್ಷದ ಪರಿಷತ್ ಸದಸ್ಯ ದರ್ಪ ತೋರಿಸಿದ್ದಾರೆ ಅಂತ ಅವರು ಆಕ್ರೋಶ ವ್ಯಕ್ತಪಡಿಸಿದ್ರು.ಪರಿಷತ್ ಸದಸ್ಯನನ್ನು ಇಂದೇ ಬಂಧಿಸಿದಲಿತ ಮುಖಂಡರ ಮೇಲೆ ಹಲ್ಲೆ ಮಾಡಿದ್ದಾರೆ‌. ತಕ್ಷಣ ತಡ ಮಾಡದೇ ಎಫ್ಐಆರ್ ದಾಖಲು ಮಾಡಬೇಕು, ಪರಿಷತ್ ಸದಸ್ಯ ಸೇರಿ ಆಪ್ತರನ್ನು ಇವತ್ತೇ ಬಂಧಿಸಬೇಕು ಅಂತ ವಿಜಯೇಂದ್ರ ಆಗ್ರಹಿಸಿದ್ದಾರೆ. ಪೃಥ್ವಿ ಸಿಂಗ್ ಭಯಭೀತರಾಗಿದ್ದಾರೆ, ಕುಟುಂಬ ಸದಸ್ಯರನ್ನು ಕಾಪಾಡಿ ಎಂದು ಮನವಿ ಮಾಡಿದ್ದಾರೆ. ಪೊಲೀಸ ವ್ಯವಸ್ಥೆ ಬಗ್ಗೆ ನಮಗೆ ವಿಶ್ವಾಸ ಇಲ್ಲ ಅಂತ ಹೇಳಿದ್ದಾರೆ.ಪರಿಷತ್ ಸದಸ್ಯನ ನಡವಳಿಕೆಗೆ ತಕ್ಕ ಪಾಠ ಕಲಿಸಲಿಅಧಿಕಾರಿಯ ದರ್ಪದಿಂದ ಸಚಿವರು, ಶಾಸಕರು ಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದು ರಾಜ್ಯ ನೋಡಿದೆ. ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡು ದುಷ್ಟರನ್ನು ಬಂಧಿಸಬೇಕು ಅಂತ ಸಿಎಂಗೆ ಒತ್ತಾಯ ಮಾಡುತ್ತೇನೆ. ಆಡಳಿತ ಪಕ್ಷದ ಪರಿಷತ್ ಸದಸ್ಯ ಮಾರಣಾಂತಿಕ ಹಲ್ಲೆ ಮಾಡುತ್ತಾನೆ. ಕಾನೂನು ಸುವ್ಯವಸ್ಥೆ ಯಾವ ರೀತಿ ಕುಸಿದಿದೆ ಎಂಬುದು ನೋಡಿದ್ದೇವೆ. ಎಂ ಎಲ್ ಸಿ ಸೇರಿ ಎಲ್ಲರನ್ನೂ ಬಂಧಿಸಬೇಕು. ಪರಿಷತ್ ಸದಸ್ಯನ ನಡುವಳಿಕೆ ತಕ್ಕ ಪಾಠ ಆಗಬೇಕು ಅಂತ ವಿಜಯೇಂದ್ರ ಆಗ್ರಹಿಸಿದ್ದಾರೆ.

Post a Comment

Previous Post Next Post