ಲಾಲ್ದುಹೋಮಾ- ಮಿಜೋರಾಂ ನೂತನ ಸಿಎಂಮಿಜೋರಾಂನಲ್ಲಿ ಎಂಎನ್‌ಎಫ್ ಮತ್ತು ಕಾಂಗ್ರೆಸ್‌ನ ಪ್ರಾಬಲ್ಯಕ್ಕೆ ತೆರೆ ಎಳೆದು ಝಡ್‌ಪಿಎಂಗೆ ಅಧಿಕಾರ ನೀಡಿದ ನಾಯಕ ಲಾಲ್ದುಹೋಮ, ಎಲ್ಲೆಲ್ಲೂ ಅವರ ಹೆಸರು ಈಗ ಮಿಜೋರಾಂನಲ್ಲಿ ಸದ್ದು ಮಾಡುತ್ತಿದೆ.ಐಜ್ವಾಲ್: ಈಶಾನ್ಯ ರಾಜ್ಯವಾದ ಮಿಜೋರಾಂ ವಿಧಾನಸಭೆ ಚುನಾವಣೆಯಲ್ಲಿ ( Mizoram Election 2023) ಆಡಳಿತರೂಢ ಮಿಜೋ ನ್ಯಾಷನಲ್ ಫ್ರಂಟ್ (Mizo National Front)ಗೆ ಹೀನಾಯ ಸೋಲುಕಂಡಿದೆ. ಕಳೆದ ವರ್ಷ 40ರಲ್ಲಿ 27ರಲ್ಲಿ ಜಯ ಸಾಧಿಸಿದ್ದ ಪಕ್ಷ ಈ ಬಾರಿ 10ಕ್ಕೆ ಕುಸಿದಿದೆ. ಅದಲ್ಲದೆ ಮಿಜೋರಾಂನಲ್ಲಿ ಯಾವಾಗಲೂ ಒಮ್ಮೆ ಗೆದ್ದ ಪಕ್ಷ ಮುಂದಿನ ಚುನಾವಣೆಯಲ್ಲೂ ಗೆಲ್ಲುವ ಪರಂಪರ ಈ ಬಾರಿ ಬದಲಾಗಿದೆ. 1989ರ ನಂತರ ಕಾಂಗ್ರೆಸ್ ಮತ್ತು ಎಂಎನ್‌ಎಫ್ ಹೊರತುಪಡಿಸಿ ಮೊದಲ ಬಾರಿಗೆ ಬೇರೆ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದೆ. ಮಾಜಿ ಐಪಿಎಲ್ ಅಧಿಕಾರಿ ಲಾಲ್ದುಹೋಮ ನೇತೃತ್ವದ ಪ್ರತಿಪಕ್ಷ ಝೋರಾಮ್ ಪೀಪಲ್ಸ್ ಮೂವ್‌ಮೆಂಟ್ (Zoram’s People Movement) ಸ್ಪಷ್ಟ ಬಹುಮತದೊಂದಿಗೆ ಅದ್ವಿತೀಯ ಜಯ ಸಾಧಿಸಿದೆ. ಒಟ್ಟು 40 ಸ್ಥಾನಗಳಲ್ಲಿ ಝೋರಾಮ್ ಪೀಪಲ್ಸ್ ಮೂವ್‌ಮೆಂಟ್ ಪಾರ್ಟಿ 27 ಸ್ಥಾನಗಳನ್ನು ಗೆದ್ದಿದೆ. ಯಾರೀ ಲಾಲ್ದುಹೋಮ?ಸಂಬಂಧಿತ ಸುದ್ದಿMizoram Election: ಆಡಳಿತರೂಢ ಪಕ್ಷಕ್ಕೆ ಹೀನಾಯ ಸೋಲುಣಿಸಿದ ZNP!ಮಾಜಿ ಐಪಿಎಸ್ ಅಧಿಕಾರಿಗೆ ಸಿಎಂ ಪಟ್ಟ40 ವರ್ಷ, 14 ಚುನಾವಣೆಗಳ ಬಳಿಕ ಮೊದಲ ಸೋಲುಕಂಡ ಕೆಸಿಆರ್! ಬಿಜೆಪಿ ಅಭ್ಯರ್ಥಿ ವಿರುದ್ಧ ಪರಾಜಯಕೆಟಿಆರ್-ಕೆಸಿಆರ್ ಸಾಯೋವರೆಗೂ ನನ್ನ ನೆನಪಿಸಿಕೊಳ್ಳುವಂತೆ ಮಾಡ್ತೀನಿ? ಸವಾಲ್ ಹಾಕಿ ಗೆದ್ದ ಬಿಜೆಪಿ ಲೀಡರ್ಓವೈಸಿ ಕ್ಷೇತ್ರದಲ್ಲಿ ಬಿಜೆಪಿ ರಾಜಾ ಸಿಂಗ್ ದಾಖಲೆ! ಹಿಂದೂ ಫೈರ್ ಬ್ರ್ಯಾಂಡ್ಗೆ ಹ್ಯಾಟ್ರಿಕ್ ಗೆಲುವುಮಿಜೋರಾಂನಲ್ಲಿ ಎಂಎನ್‌ಎಫ್ ಮತ್ತು ಕಾಂಗ್ರೆಸ್‌ನ ಪ್ರಾಬಲ್ಯಕ್ಕೆ ತೆರೆ ಎಳೆದು ಝಡ್‌ಪಿಎಂಗೆ ಅಧಿಕಾರ ನೀಡಿದ ನಾಯಕ ಲಾಲ್ದುಹೋಮ, ಎಲ್ಲೆಲ್ಲೂ ಅವರ ಹೆಸರು ಈಗ ಮಿಜೋರಾಂನಲ್ಲಿ ಸದ್ದು ಮಾಡುತ್ತಿದೆ. ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಲಾಲ್ದುಹೋಮ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಭದ್ರತೆಯ ಉಸ್ತುವಾರಿವಾಗಿ ಕಾರ್ಯ ನಿರ್ವಹಿಸಿದ್ದರು. ಆಕೆಯ ಪ್ರೇರಣೆಯಿಂದಲೇ ರಾಜಕೀಯ ಪ್ರವೇಶಿಸಿದ್ದ ಲಾಲ್ದುಹೋಮ ಅವರು ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಅನೇಕ ಏರಿಳಿತಗಳನ್ನು ಅನುಭವಿಸಿದ್ದಾರೆ.ಇದನ್ನೂ ಓದಿ: ಆಡಳಿತರೂಢ ಪಕ್ಷಕ್ಕೆ ಹೀನಾಯ ಸೋಲುಣಿಸಿದ ZNP! ಮಾಜಿ ಐಪಿಎಸ್ ಅಧಿಕಾರಿಗೆ ಸಿಎಂ ಪಟ್ಟಪಕ್ಷಾಂತರ ಕಾಯ್ದೆಯಡಿ ಅನರ್ಹರಾದ ಮೊದಲ ಸಂಸದ1988 ರಲ್ಲಿ ಕಾಂಗ್ರೆಸ್ ತೊರೆದ ಲಾಲ್ದುಹೋಮಾ ಅವರು ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಅನರ್ಹಗೊಂಡಿದ್ದರು. ಈ ಮೂಲಕ ಪಕ್ಷಾಂತರ-ವಿರೋಧಿ ಕಾನೂನಿನಡಿಯಲ್ಲಿ ಅನರ್ಹಗೊಂಡ ಮೊದಲ ಸಂಸದ ಎಂಬ ಕುಖ್ಯಾತಿಗೆ ಪಾತ್ರರಾದರು. 2017ರಲ್ಲಿ ಝೋರಾಮ್ ನ್ಯಾಶನಲಿಸ್ಟ್ ಪಾರ್ಟಿ ಸ್ಥಾಪಿಸಿದರು. ಅದನ್ನು 2018ರ ಚುನಾವಣೆ ಸಂದರ್ಭದಲ್ಲಿ ಝೆಡ್ಪಿಎಂ ಜೊತೆ ವಿಲೀನಗೊಳಿಸಿದರು.4 ಬಾರಿ ಸಿಎಂ ಆಗಿದ್ದ ಕಾಂಗ್ರೆಸ್ ನಾಯಕನ ವಿರುದ್ಧ ಗೆಲುವುಆ ಭಾರಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದರು. ಐಜೋಲ್ 1 ಕ್ಷೇತ್ರದಲ್ಲಿ ನಾಲ್ಕು ಬಾರಿ ಕಾಂಗ್ರೆಸ್ನಿಂದ ಸಿಎಂ ಆಗಿದ್ದ ಲಾಲ್ ಥನ್ಹಾವಾಲಾರನ್ನ ಸೋಲಿಸಿದರು. ಆದರೆ 2020ರಲ್ಲಿ ಪಕ್ಷಾಂತರ ಕಾಯ್ದೆಯಡಿ ಅವರನ್ನು ಅನರ್ಹಗೊಳಿಸಲಾಗಿತ್ತು. 2021 ರ ಉಪಚುನಾವಣೆಯಲ್ಲಿ ಅವರು ಅದೇ ಕ್ಷೇತ್ರದಿಂದ ಮತ್ತೆ ಗೆದ್ದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದರು. ಈ ಬಾರಿ ತಮ್ಮ ನೇತೃತ್ವದಲ್ಲಿ ZPM ಪಕ್ಷಕ್ಕೆ ಬಹುಮತಕ್ಕಿಂತ ಹೆಚ್ಚುಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.ಇದನ್ನೂ ಓದಿ: Telangana Election: ಓವೈಸಿ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಬಿಜೆಪಿ ರಾಜಾ ಸಿಂಗ್ ದಾಖಲೆ! ಹಿಂದೂ ಫೈರ್ ಬ್ರ್ಯಾಂಡ್ಗೆ ಹ್ಯಾಟ್ರಿಕ್ ಗೆಲುವುಸಿಎಂ ಆಗಲಿರುವ ಲಾಲ್ದುಹೋಮಾ1989 ರಿಂದ ಸತತ ಎರಡು ಬಾರಿ ಒಂದು ಪಕ್ಷ ಅಧಿಕಾರಕ್ಕೆ ಬರುವ ಸಂಪ್ರದಾಯವನ್ನು ಮುರಿದು ಮಿಜೋರಾಂನಲ್ಲಿ ZPM ಅನ್ನು ಅಧಿಕಾರಕ್ಕೆ ತಂದಿರುವ ಲಾಲ್ದುಹೋಮ ಅವರ ಮಿಜೋರಾಂ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈಗಾಗಲೇ ಅಪಾರ ಅಭಿಮಾನಿಗಳು ಲಾಲ್ದುಹೋಮ ಮನೆ ಮುಂದೆ ಸಂಭ್ರಮಾಚರಣೆ ಆಚರಿಸುತ್ತಿದ್ದಾರೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಲಾಲ್ದುಹೋಮ ಅವರ ನಿವಾಸಕ್ಕೆ ಆಗಮಿಸಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಚುನಾವಣೆಯಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಪಕ್ಷ 10 ಸ್ಥಾನಗಳನ್ನು ಪಡೆದುಕೊಂಡಿದೆ. ಬಿಜೆಪಿಗೆ 2 ಮತ್ತು ಕಾಂಗ್ರೆಸ್‌ಗೆ 1ಮಾತ್ರ ಸಿಕ್ಕಿದೆ. ಇದೇ ಮೊದಲ ಬಾರಿಗೆ ಬಿಜೆಪಿ ಕಾಂಗ್ರೆಸ್ಗಿಂತ ಹೆಚ್ಚು ಸ್ಥಾನದಲ್ಲಿ ಗೆಲುವು ಸಾಧಿಸಿದೆ.

Post a Comment