PSI ಪರೀಕ್ಷೆ ಅಭ್ಯರ್ಥಿಗಳಿಗೆ ಇಲ್ಲಿದೆ ಸಿಹಿ ಸುದ್ದಿ; ಪರೀಕ್ಷಾ ದಿನಾಂಕ ಮುಂದೂಡಿಕೆ


 ಪ್ರಾತಿನಿಧಿಕ ಚಿತ್ರ

ಗಂಭೀರ ವಿಷಯವೂ ಇದರಲ್ಲಿ ಅಡಕವಾಗಿದೆ. ಪರೀಕ್ಷೆ ಮುಂದೂಡುತ್ತಿದ್ದಂತೆ ವಯೋಮಿತಿ ನಿಗದಿ ಪಡಿಸಿರುವುದಕ್ಕಿಂತ ಹೆಚ್ಚಾದ ಅಭ್ಯರ್ಥಿಗಳು ಏನು ಮಾಡಬೇಕು ಎಂಬ ಪ್ರಶ್ನೆ ಉದ್ಭವವಾಗುತ್ತದೆ.ಪಿಎಸ್‌ಐ ಪರೀಕ್ಷೆ (PSI Exam) ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಹೊರ ಬಿದ್ದಿದೆ. ಯಾರೆಲ್ಲಾ ಪರೀಕ್ಷೆ ಸಿದ್ಧತೆಗೆ ಸಮಯ ಸಾಲುವುದಿಲ್ಲ ಅಂದುಕೊಂಡಿದ್ದೀರೋ ಅವರೆಲ್ಲರಿಗೂ ಸಹ ಇದು ಒಂದು ಶುಭ ಸಮಾಚಾರವಾಗಿದೆ. ಯಾಕೆಂದರೆ ಪರೀಕ್ಷಾ ದಿನಾಂಕವನ್ನು ಮುಂದೂಡಲಾಗಿದೆ. ಒಂದು ತಿಂಗಳ ಅವಧಿಗೆ ಇದನ್ನು ಮುಂದೂಡಿಕೆ ಮಾಡಲಾಗಿದೆ. ಒಂದು ತಿಂಗಳು ಪರೀಕ್ಷೆ (Exam Date) ದಿನಾಂಕ ಮುಂದೂಡಿಕೆ ಹಲವು ಪರೀಕ್ಷಾರ್ಥಿಗಳಿಗೆ ಸಹಾಯವಾಗುತ್ತದೆ. ಮಾಜಿ ಸಚಿವ ಆರಗ ಜ್ಞಾನೇಂದ್ರ ಈ ಕುರಿತು ಒತ್ತಾಯ ಮಾಡಿದ್ದಾರೆ. ದಿನಾಂಕ ಬದಲಾವಣೆ ಆಗಬೇಕು ಎಂದು ಹೇಳಿದ್ದಾರೆ. ಎರಡು ತಿಂಗಳ ಬಳಿಕ ಮಾಡಿ, ಸಮಸ್ಯೆ ಏನೂ ಆಗಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ. ಸಚಿವ ಪರಮೇಶ್ವರ್ ಇದಕ್ಕೆ ಪ್ರತಿಯಾಗಿ ಹೇಳಿಕೆ ನೀಡಿದ್ದಾರೆ.ಸಂಬಂಧಿತ ಸುದ್ದಿJEE Main 2024 Session 1ಕ್ಕೆ ಅರ್ಜಿ ಸಲ್ಲಿಕೆ ಇಂದು ಮುಕ್ತಾಯ; ಈ ಕೂಡಲೇ ಅಪ್ಲೈ ಮಾಡಿISRO: ವಿಜ್ಞಾನ ಮತ್ತು ಬಾಹ್ಯಾಕಾಶದ ಬಗ್ಗೆ ಆಸಕ್ತಿ ಇದ್ಯಾ? ಹಾಗಾದ್ರೆ ಈ ಕೋರ್ಸ್​ ಮಾಡಿApplication Verification: ಸ್ನಾತಕೋತ್ತರ ವಿದ್ಯಾರ್ಥಿಗಳ ಗಮನಕ್ಕೆ; ಈ ತಿಂಗಳ 5ರಿಂದ ದಾಖಲಾತಿಗಳ ಪರಿಶೀಲNEET UG 2024: ಬದಲಾಯ್ತು ಪಠ್ಯಕ್ರಮ; ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಇದನ್ನೊಮ್ಮೆ ಗಮನಿಸಿಪರೀಕ್ಷೆ ನಡೆಸುವಾಗ ಜಾಗ್ರತೆ ವಹಿಸಿದ್ರೆ ಇದೆಲ್ಲಾ ಆಗ್ತಿರಲಿಲ್ಲ ಎಂದು ಯತ್ನಾಳ್​ ಹೇಳಿದ್ದಾರೆ. ಆ ಸರ್ಕಾರ, ಈ ಸರ್ಕಾರ ಅಂತಲ್ಲ. ಲಾ ಆಂಡ್ ಆರ್ಡರ್ ಇಲ್ಲದೆ, ಕಾನೂನು ಸುವ್ಯವಸ್ಥೆ ಕಷ್ಟ ಆಗಿದೆ. ಒಂದುವರೆ ಸಾವಿರ ಪಿಎಸ್‌ಐ ನೇಮಕ ಆಗಬೇಕು ಎಂದಿದ್ದಾರೆ.ಇದನ್ನೂ ಓದಿ: LR Shivaramegowda: ಬ್ಯಾಂಕ್​ಗೆ 12 ಕೋಟಿ ವಂಚನೆ ಆರೋಪ; ಶಿವರಾಮೇಗೌಡ ವಿರುದ್ಧ ಎಫ್ಐಆರ್ಇದರಿಂದ ಲಾ ಆಂಡ್ ಆರ್ಡರ್ ಸಮಸ್ಯೆ ಆಗಿದೆ. ನಮ್ಮ ಶಾಸಕರೇ ಇವರು ಸರಿ ಇಲ್ಲ, ಅವರು ಸರಿ ಇಲ್ಲ ಅಂತಾರೆ. ಈ ಮದ್ಯದಲ್ಲಿ ಖಾಲಿ ಇದೆ, ಇವರನ್ನ ಕೊಡಿ, ಅವರನ್ನ ಕೊಡಿ ಅಂತಾರೆ. ಅಶೋಕ್, ಆರಗ ಜ್ಞಾನೇಂದ್ರ ಅವರು ಗೃಹ ಸಚಿವರಿದ್ರು ಅವರಿಗೂ ಗೊತ್ತಿದೆ. ಷಡ್ಯೂಲ್ ಅನ್ನ‌ 23/12/2023ಕ್ಕೆ ಮಾಡಿದ್ದೆವು ಎಂದು ಅವರು ಪ್ರತ್ಯುತ್ತರ ನೀಡಿದ್ದಾರೆ. ಒಂದು ತಿಂಗಳು ಪರೀಕ್ಷೆ ಮುಂದೂಡಿದ ಗೃಹಸಚಿವ ಪರಮೇಶ್ವರ್23/1/2024ಕ್ಕೆ ಪರೀಕ್ಷೆ ನಡೆಸೋದಾಗಿ ಸದನಕ್ಕೆ ಉತ್ತರ ನೀಡಿದ್ದಾರೆ. ಆದರೆ ಇನ್ನು ಕೆಲವು ಗಂಭೀರ ವಿಷಯವೂ ಇದರಲ್ಲಿ ಅಡಕವಾಗಿದೆ. ಪರೀಕ್ಷೆ ಮುಂದೂಡುತ್ತಿದ್ದಂತೆ ವಯೋಮಿತಿ ನಿಗದಿ ಪಡಿಸಿರುವುದಕ್ಕಿಂತ ಹೆಚ್ಚಾದ ಅಭ್ಯರ್ಥಿಗಳು ಏನು ಮಾಡಬೇಕು ಎಂಬ ಪ್ರಶ್ನೆ ಉದ್ಭವವಾಗುತ್ತದೆ.

Post a Comment

Previous Post Next Post