Mafia Movie: ಆರ್ಗನ್ ಮಾಫಿಯಾ ಮೇಲೆ ಪ್ರಜ್ವಲ್ ಸಿನಿಮಾ; ಟೀಸರ್‌ನಲ್ಲಿ ರಿವೀಲ್ ಆಯ್ತು ರಿಯಲ್ ಮ್ಯಾಟರ್!


  ಮಾಫಿಯಾ ಚಿತ್ರದಲ್ಲಿ ರೆಡ್ ಮಾರ್ಕೆಟ್ ಭೇದಿಸೋ ಪ್ರಜ್ವಲ್!

ಆರ್ಗನ್ ಮಾಫಿಯಾ ಮೇಲೆ ಸಿನಿಮಾ ಬಂದಿಲ್ಲ. ಮಮ್ಮಿ ಡೈರೆಕ್ಟ್ ಲೋಹಿತ್ ಈ ಕೆಲಸ ಮಾಡಿದ್ದಾರೆ. ಮಾಫಿಯಾ ಹೆಸರಲ್ಲಿಯೇ ಈ ವಿಷಯ ಹೇಳಿದ್ದಾರೆ. ಪ್ರಜ್ವಲ್ ದೇವರಾಜ್ ಇಲ್ಲಿ ಹಿಂದೆಂದೂ ಮಾಡದ ರೋಲ್ ಮಾಡಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.ಕನ್ನಡದಲ್ಲಿ ಡ್ರಗ್ ಮಾಫಿಯಾ, ಹ್ಯೂಮನ್ ಟ್ರಾಫಿಕಿಂಗ್, ಭೂಗತ ಜಗತ್ತು, ಹೀಗೆ ಅನೇಕರ ಸಿನಿಮಾ ಬಂದಿವೆ. ಆದರೆ ಆರ್ಗನ್ ಫಾಮಿಯಾ (Organ Mafia) ಮೇಲೆ ಸಿನಿಮಾ ಮಾಡಿರಲಿಲ್ಲ. ಎಗ್ಗಿಲ್ಲದೆ ನಡೆಯುತ್ತಿರೋ ಈ ಮಾಫಿಯಾವನ್ನ ರಿಯಲ್ ಆಗಿ ರೆಡ್ ಮಾರ್ಕೆಟ್ (Red Market) ಅಂತಲೂ ಕರೆಯುತ್ತಾರೆ. ಇದನ್ನ ತಡೆಯೋ ಕೆಲಸ ಅದೆಷ್ಟು ಆಗುತ್ತಿದಿಯೋ ಏನೋ, ಆದರೆ ಯುವ ನಿರ್ದೇಶಕ ಲೋಕೇಶ್ ಇದನ್ನ ಬೆಳ್ಳಿ ತೆರೆ ಮೇಲೆ ತರುತ್ತಿದ್ದಾರೆ. ತುಂಬಾನೆ ಸೂಕ್ಷ್ಮ ಹಾಗೂ ಭಯಾನಕವಾಗಿಯೇ ಇರೋ ಈ ಒಂದು ಮಾಫಿಯಾ ಮೇಲೆ ‘ಮಾಫಿಯಾ’ ಅನ್ನುವ ಸಿನಿಮಾನೇ ಮಾಡಿದ್ದಾರೆ. ಪ್ರಜ್ವಲ್ ದೇವರಾಜ್ (Prajwal Devaraj) ಈ ಚಿತ್ರದಲ್ಲಿ ನಾಯಕರಾಗಿಯೇ ಅಭಿನಯಿಸಿದ್ದಾರೆ. ಇವರ ಜೊತೆಗೆ ಅದಿತಿ ಪ್ರಭುದೇವ ಜೊತೆಯಾಗಿದ್ದಾರೆ.ಮೊನ್ನೆ ಈ ಚಿತ್ರದ ಟೀಸರ್ ರಿಲೀಸ್ ಆಗಿದೆ. ಇದನ್ನ ನೋಡಿದ್ರೆ ಇಡೀ ಸಿನಿಮಾದ ಒಂದು ಝಲಕ್ ಸಿಗುತ್ತದೆ. ಇದರ ಕುರಿತು ಒಂದು ಸ್ಟೋರಿ ಇಲ್ಲಿದೆ ಓದಿ.ಸಂಬಂಧಿತ ಸುದ್ದಿರಾಕಿಂಗ್ ಸ್ಟಾರ್ ಯಶ್ Yash-19 ಚಿತ್ರದ ಹೀರೋಯಿನ್ ಯಾರು? ಇಲ್ಲಿದೆ ಹೊಸ ಮ್ಯಾಟರ್!ಕಾಟೇರ ಚಿತ್ರದ 'ಪಸಂದಾಗವನೆ' ಹಾಡಿಗೆ ಮಿಲಿಯನ್ ಗಟ್ಟಲೆ ವೀವ್ಸ್; ಲೈಕ್ಸ್ ಮಿಲಿಯನ್ ಪ್ಲಸ್!Yash19: ಯಶ್​​ ಯೂನಿವರ್ಸ್​​​ನಲ್ಲಿ ಡಿ ಬಾಸ್​​, KVN​​ ಮಾಡುತ್ತಾ ಕಮಾಲ್?Ashika Rangnath: ಫ್ಯಾಷನ್ ಲೋಕದಲ್ಲಿ ಮಿಂಚಿದ ಚುಟು ಚುಟು ಚೆಲುವೆಆರ್ಗನ್ ಮಾಫಿಯಾ ಹಿಂದೆ ಬಿದ್ದ ಪ್ರಜ್ವಲ್ ದೇವರಾಜ್!ಆರ್ಗನ್ ಮಾಫಿಯಾ ಹಿಂದೆ ಬಿದ್ದ ಪ್ರಜ್ವಲ್ ದೇವರಾಜ್!ಆರ್ಗನ್ ಮಾಫಿಯಾ ಹೇಗೆ ನಡೆಯುತ್ತದೆ? ಇದರಲ್ಲಿ ಜನರನ್ನ ಟ್ರ್ಯಾಪ್ ಮಾಡುವುದು ಹೇಗೆ? ವ್ಯವಸ್ಥಿತಿವಾಗಿ ಇದೆಲ್ಲ ಹೇಗೆ ನಡೆಯುತ್ತದೆ. ಈ ಮಾಹಿತಿ ಬಹುಶಃ ಶ್ರೀ ಸಾಮಾನ್ಯನಿಗೆ ತಿಳಿಯೋದೇ ಇಲ್ಲ. ಆದರೆ ಕನ್ನಡದ ಮಾಫಿಯಾ ಸಿನಿಮಾದ ಇದಕ್ಕೆಲ್ಲೆ ಒಂದು ಕನ್ನಡಿ ಆಗುವಂತಿದೆ. ಸಿನಿಮಾ ಮಾಧ್ಯಮದ ಮೂಲಕ ಇದನ್ನ ಹೇಳಿದ್ರೆ ಅತಿ ಹೆಚ್ಚು ರೀಚ್ ಆಗುವ ಚಾನ್ಸಸ್ ಜಾಸ್ತಿ ಇರುತ್ತದೆ.ಡೈರೆಕ್ಟರ್ ಲೋಹಿತ್ ಇದೀಗ ಅದನ್ನೆ ಮಾಡಿದ್ದಾರೆ ಅನಿಸುತ್ತಿದೆ. ಆರ್ಗನ್ ಮಾಫಿಯಾ ಚಟುವಟಿಕೆಯನ್ನ ಅಧ್ಯಯನ ಮಾಡಿದ್ದಾರೆ. ಅದಕ್ಕೆ ಸೂಕ್ತ ಅನಿಸೋ ಸಿನಿಮ್ಯಾಟಿಕ್ ಟಚ್ ಕೂಡ ಕೊಟ್ಟಿದ್ದಾರೆ. ಅದರ ಸಂಕ್ಷಿಪ್ತ ಚಿತ್ರಣ ನಮಗೆ ಈಗ ಟೀಸರ್‌ನಲ್ಲಿ ಸಿಗುತ್ತದೆ.ರೆಡ್ ಮಾರ್ಕೆಟ್ ಜಾಲದ ನೆಟ್‌ವರ್ಕ್ ರಿವೀಲ್ !ಈ ಮೊದಲೇ ಹೇಳಿದಂತೆ ಆರ್ಗನ್ ಮಾರ್ಕೆಟಿಂಗ್ ಅನ್ನ ರೆಡ್ ಮಾರ್ಕೆಟ್ ಅಂತಲೂ ಕರೆಯುತ್ತಾರೆ. ಈ ಒಂದು ಮಾರ್ಕೆಟ್‌ನಲ್ಲಿ ಎಲ್ಲವೂ ವ್ಯವಸ್ಥಿತವಾಗಿಯೇ ನಡೆಯುತ್ತದೆ. ವಿದ್ಯಾವಂತ ವೈದ್ಯರು ಈ ಒಂದು ಕೆಲಸದಲ್ಲಿ ಬೇಕಾಗುತ್ತದೆ. ಹಾಗಾಗಿಯೇ ಅವರ ಇನ್ವಾಲ್ವ್‌ಮೆಂಟ್ ಹೇಗಿರುತ್ತದೆ ಅನ್ನೋದು ಇದೀಗ ಕುತೂಹ ಮೂಡಿಸುತ್ತಿದೆ. ಆರ್ಗನ್ ಮಾಫಿಯಾ ಮೇಲೆ ಪ್ರಜ್ವಲ್ ಸಿನಿಮಾ; ಟೀಸರ್‌ನಲ್ಲಿ ರಿವೀಲ್ ಆಯ್ತು ರಿಯಲ್ ಮ್ಯಾಟರ್!ಸಿನಿಮಾದ ಮೊದಲ ಟೀಸರ್‌ನಲ್ಲಿ ಈ ವಿಷಯ ಏನೂ ಇಲ್ಲ. ಆದರೆ ಆರ್ಗನ್ Transplant ವ್ಯವಸ್ಥಿತವಾಗಿಯೇ ನಡೆಯುತ್ತಿದೆ ಅನ್ನೋದನ್ನ ಇಲ್ಲಿ ಹೇಳಲಾಗುತ್ತಿದೆ. ಹೆಣ್ಣುಮಕ್ಕಳು ಹೇಗಲ್ಲ ಟ್ರ್ಯಾಪ್ ಆಗುತ್ತಾರೆ ಅನ್ನೋ ಚಿತ್ರಣ ಕೂಡ ಇದೇ ಟೀಸರ್‌ನಲ್ಲಿಯೇ ಕಾಣಿಸುತ್ತದೆ. ಮಾಫಿಯಾ ಚಿತ್ರದಲ್ಲಿ ರೆಡ್ ಮಾರ್ಕೆಟ್ ಭೇದಿಸೋ ಪ್ರಜ್ವಲ್ಪ್ರಜ್ವಲ್ ದೇವರಾಜ್ ಇಲ್ಲಿ ಪೊಲೀಸ್ ಅನ್ನುವುದು ಸ್ಪಷ್ಟವಾಗಿಯೇ ಅರ್ಥ ಆಗುತ್ತದೆ. ರೆಡ್ ಮಾರ್ಕೆಟ್ ಭೇದಿಸಲು ಹೊರಡೋ ನಿಷ್ಠಾವಂತ ಅಧಿಕಾರಿಯಾಗಿಯೂ ಕಾಣಿಸುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ಫೈಟ್ಸ್ ಕೂಡ ಇಲ್ಲಿ ಗಮನ ಸೆಳೆಯುತ್ತವೆ.ಇದನ್ನೂ ಓದಿ: Ashika Rangnath: ಫ್ಯಾಷನ್ ಲೋಕದಲ್ಲಿ ಮಿಂಚಿದ ಚುಟು ಚುಟು ಚೆಲುವೆಪ್ರಜ್ವಲ್ ದೇವರಾಜ್ ಚಿತ್ರ ಜೀವನದಲ್ಲಿ ಇದು 35 ನೇ ಸಿನಿಮಾ ಆಗಿದೆ. ಇಲ್ಲಿವರೆಗೂ ಈ ರೀತಿಯ ಪಾತ್ರವನ್ನ ಮಾಡಿಯೇ ಇಲ್ಲ ಅನ್ನುವ ಅಭಿಪ್ರಾಯವನ್ನು ಪ್ರಜ್ವಲ್ ಹೇಳಿಕೊಂಡಿದ್ದಾರೆ. ನಾಯಕಿ ಅದಿತಿ ಪ್ರಭುದೇವಾ ಇಲ್ಲಿ ಪಟ ಪಟ ಮಾತನಾಡೋ ಹುಡುಗಿಯ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದಾರೆ.ಶೈನ್ ಶೆಟ್ಟಿ ಈ ಚಿತ್ರದಲ್ಲಿದ್ದಾರೆ. ಜಾಲಿ ಬಾಸ್ಟಿನ್ ಸಾಹಸ ಚಿತ್ರಕ್ಕಿದೆ. ಅನೂಪ್ ಸೀಳಿನ್ ಸಂಗೀತ ಕೊಟ್ಟಿದ್ದಾರೆ. ಪಾಂಡಿಕುಮಾರ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಮುಂದಿನ ವರ್ಷ ಜನವರಿ ತಿಂಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಸದ್ಯಕ್ಕೆ ಸಿನಿಮಾ ತಂಡ ಈ ಒಂದಷ್ಟು ಮಾಹಿತಿ ಕೊಟ್ಟಿದೆ. ಜೊತೆಗ ಟೀಸರ್ ಮೂಲಕ ಗಮನ ಕೂಡ ಸೆಳೆಯತ್ತಿದೆ.

Post a Comment

Previous Post Next Post