ಸಾಂದರ್ಭಿಕ ಚಿತ್ರ
I.N.D.I.A Meeting: ನಾಳೆ ನಡೆಯಬೇಕಿದ್ದ ವಿಪಕ್ಷಗಳ ಮೈತ್ರಿಕೂಟದ ಸಭೆಗೂ ಹಲವು ನಾಯಕರು ಗೈರು ಹಾಜರಾಗೋದಾಗಿ ಹೇಳಿದ್ದು, ಈ ಹಿನ್ನೆಲೆ ನಾಳೆ ನಡೆಯಬೇಕಿದ್ದ ವಿಪಕ್ಷಗಳ ಮೈತ್ರಿಕೂಟದ ಸಭೆಯನ್ನೇ ಮುಂದೂಡಲಾಗಿದೆ. ನಾಳೆ ಸಂಜೆ 6 ಗಂಟೆಗೆ ದೆಹಲಿಯಲ್ಲಿ ಇಂಡಿಯಾ ಒಕ್ಕೂಟದ ನಾಯಕರ ಸಭೆಯನ್ನು ಕರೆಯಲಾಗಿತ್ತು.ನವ ದೆಹಲಿ: ಪಂಚರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ (BJP) ಭರ್ಜರಿ ಜಯಭೇರಿ ಬಾರಿಸುವ ಮೂಲಕ ಕಾಂಗ್ರೆಸ್ (Congress) ಮುಖಭಂಗ ಉಂಟಾಗಿದೆ. ಈ ಚುನಾವಣಾ ಸೋಲಿನ ಬೆನ್ನಲ್ಲೇ ವಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ (I.N.D.I.A.) ಒಕ್ಕೂಟದಲ್ಲೂ ಅಸಮಾಧಾನ ಭುಗಿಲೆದ್ದಿದೆ.ಕಾಂಗ್ರೆಸ್‌ಗೆ ಹೀನಾಯ ಸೋಲುಂಟಾದ ಹಿನ್ನೆಲೆಯಲ್ಲಿ ‘ಇಂಡಿಯಾ’ ಮೈತ್ರಿ ಕೂಟದ ನಾಯಕರಲ್ಲಿ ಭಿನ್ನಾಭಿಪ್ರಾಯ ಮೂಡಿದ್ದು, ಇದೀಗ ನಾಳೆ ನಡೆಯಬೇಕಿದ್ದ ವಿಪಕ್ಷಗಳ ಮೈತ್ರಿಕೂಟದ ಸಭೆಗೂ ಹಲವು ನಾಯಕರು ಗೈರು ಹಾಜರಾಗೋದಾಗಿ ಹೇಳಿದ್ದು, ಈ ಹಿನ್ನೆಲೆ ನಾಳೆ ನಡೆಯಬೇಕಿದ್ದ ವಿಪಕ್ಷಗಳ ಮೈತ್ರಿಕೂಟದ ಸಭೆಯನ್ನೇ ಮುಂದೂಡಲಾಗಿದೆ. ನಾಳೆ ಸಂಜೆ 6 ಗಂಟೆಗೆ ದೆಹಲಿಯಲ್ಲಿ ಇಂಡಿಯಾ ಒಕ್ಕೂಟದ ನಾಯಕರ ಸಭೆಯನ್ನು ಕರೆಯಲಾಗಿತ್ತು. ಸಂಬಂಧಿತ ಸುದ್ದಿಮುಸ್ಲಿಂ ಸಮುದಾಯಕ್ಕೆ 10 ಸಾವಿರ ಕೋಟಿ ಅನುದಾನ ಘೋಷಣೆ; ಏನಂದ್ರು ಸಿಎಂ ಸಿದ್ದರಾಮಯ್ಯ?ಶಶಿ ತರೂರ್ ರೀತಿ ಸೂಪರ್ ಆಗಿ ಇಂಗ್ಲೀಷ್ ಮಾತನಾಡ್ಬೇಕಾ? ಇಲ್ಲಿ ಕಲಿಬೋದು ನೋಡಿಓವೈಸಿ ಕ್ಷೇತ್ರದಲ್ಲಿ ಬಿಜೆಪಿ ರಾಜಾ ಸಿಂಗ್ ದಾಖಲೆ! ಹಿಂದೂ ಫೈರ್ ಬ್ರ್ಯಾಂಡ್ಗೆ ಹ್ಯಾಟ್ರಿಕ್ ಗೆಲುವುST Somashekhar: ಬಿಜೆಪಿ ಬಿಟ್ಟು ಹೋಗಲ್ಲ; ಫಲಿತಾಂಶದ ಬೆನ್ನಲ್ಲೇ ಎಸ್ಟಿಎಸ್ ಯು ಟರ್ನ್?ಇದನ್ನೂ ಓದಿ: Sajid Mir: ಮೋಸ್ಟ್ ವಾಂಟೆಡ್ ಉಗ್ರರಿಗೆ ಪಾಕ್‌ನಲ್ಲಿಲ್ಲ ಭದ್ರತೆ, ಭಾರತಕ್ಕೆ ಬೇಕಾಗಿದ್ದ 26/11 ಮುಂಬೈ ದಾಳಿಕೋರನಿಗೆ ಜೈಲಲ್ಲೇ ವಿಷವಿಟ್ಟ Unknown Men!ಕಾಂಗ್ರೆಸ್ ಮೂಲಗಳ ಪ್ರಕಾರ, ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ಕೆಲವು ಪಕ್ಷಗಳ ಪ್ರಮುಖ ನಾಯಕರಿಗೆ ಸಮಯ ಹೊಂದಾಣಿಕೆ ಮಾಡೋದು ಕಷ್ಟವಾಗಿರೋದ್ರಿಂದ ಸಭೆಯನ್ನ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಸದ್ಯ ‘ಇಂಡಿಯಾ; ಮೈತ್ರಿಕೂಟದ ‘ಅನೌಪಚಾರಿಕ ಸಮನ್ವಯ ಸಭೆ’ ಮಾತ್ರ ನಡೆಯಲಿದ್ದು, ಇದರಲ್ಲಿ ಪಕ್ಷಗಳ ಸಂಸದೀಯ ಪಕ್ಷದ ನಾಯಕರನ್ನು ಸೇರಿಸಿಕೊಳ್ಳಲಾಗುವುದು ಎಂದು ತಿಳಿದು ಬಂದಿದೆ.ಸಭೆ ರದ್ದಾಗುವುದಕ್ಕೆ ಮುನ್ನ ಡಿಸೆಂಬರ್ 6 ರಂದು ನಡೆಯಬೇಕಿದ್ದ ವಿಪಕ್ಷಗಳ ಮೈತ್ರಿಕೂಟ ಸಭೆಯ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪತ್ರಕರ್ತರು ಪ್ರಶ್ನೆ ಮಾಡಿದರು. ಈ ವೇಳೆ ಉತ್ತರಿಸಿದ ಅವರು ‘ನನಗೆ ಈ ಸಭೆಯ ಬಗ್ಗೆ ತಿಳಿದಿಲ್ಲ. ಅದಕ್ಕೂ ಮೊದಲೇ ಉತ್ತರ ಬಂಗಾಳದಲ್ಲಿ ನಡೆಯಲಿರುವ ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಾಗಿ ಸಮಯ ನಿಗದಿಪಡಿಸಲಾಗಿದೆ. ಈ ವಿಷಯ ಗೊತ್ತಿದ್ದರೆ ಉತ್ತರ ಬಂಗಾಳದ ಕಾರ್ಯಕ್ರಮಕ್ಕೆ ಹೋಗುತ್ತಿರಲಿಲ್ಲ. ಸದ್ಯ ನಾನು ಉತ್ತರ ಬಂಗಾಳದ ಪ್ರವಾಸಕ್ಕೆ ಹೋಗುತ್ತಿದ್ದೇನೆ’ ಎಂದು ಹೇಳುವ ಮೂಲಕ ಸಭೆಯಲ್ಲಿ ಪಾಲ್ಗೊಳ್ಳಲ್ಲ ಎಂದು ಹೇಳಿದ್ದರು.ಅತ್ತ ಸಮಾಜವಾದಿ ಪಕ್ಷದ (ಎಸ್‌ಪಿ) ವಕ್ತಾರ ರಾಜೇಂದ್ರ ಚೌಧರಿ, ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಬುಧವಾರ ದೆಹಲಿಯಲ್ಲಿ ನಡೆಯಲಿರುವ ಪ್ರತಿಪಕ್ಷಗಳ ಒಕ್ಕೂಟದ (ಇಂಡಿಯಾ) ಸಭೆಯಲ್ಲಿ ಭಾಗವಹಿಸುವ ಬಗ್ಗೆ ಯಾವುದೇ ಯೋಜನೆ ಹೊಂದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನೂ ಓದಿ: Bollywood Actress: 11 ಮಂದಿ ಜೊತೆ ಡೇಟಿಂಗ್, 24 ವರ್ಷಕ್ಕೆ ತಾಯಿ! 47 ವರ್ಷವಾದರೂ ಮದ್ವೆಯಾಗದ ಪ್ರಸಿದ್ಧ ನಟಿ ಯಾರು ಗೊತ್ತಾ?ಮುಂದುವರಿದು ರಾಜೇಂದ್ರ ಚೌಧರಿ, ‘ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ನಾಳೆ ‘ಇಂಡಿಯಾ’ ಮೈತ್ರಿಕೂಟದ ಸಭೆಯಲ್ಲಿ ಪಾಲ್ಗೊಳ್ಳುವ ಯಾವುದೇ ಕಾರ್ಯಕ್ರಮವಿಲ್ಲ. ಪಕ್ಷದ ಮುಖ್ಯ ಪ್ರಧಾನ ಕಾರ್ಯದರ್ಶಿ, ಪ್ರೊಫೆಸರ್ ರಾಮ್ ಗೋಪಾಲ್ ಯಾದವ್ ಅಥವಾ ರಾಷ್ಟ್ರೀಯ ಅಧ್ಯಕ್ಷರಿಂದ ಅನುಮತಿ ಪಡೆದ ಯಾವುದಾದರೂ ನಾಯಕರು ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹೇಳಿದ್ದರು. 4 ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಅಖಿಲೇಶ್ ಯಾದವ್ ಅವರು ಸಭೆಗೆ ಹಾಜರಾಗುವುದಿಲ್ಲ ಎಂಬುದು ಖಚಿತವೇ ಎಂಬ ಪ್ರಶ್ನೆಗೆ ಅವರು ಖಚಿತ ಉತ್ತರ ನೀಡಲಿಲ್ಲ.ಇನ್ನೊಂದೆಡೆ ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ಅವರು ಚಂಡಮಾರುತದಿಂದ ಉಂಟಾಗಿರುವ ಪರಿಸ್ಥಿತಿಯಿಂದಾಗಿ ಮೈತ್ರಿಕೂಟದ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಅನಾರೋಗ್ಯದ ಕಾರಣ ಭಾಗವಹಿಸುತ್ತಿಲ್ಲ ಎನ್ನಲಾಗಿದೆ.ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ನಡುವೆ ಡಿಸೆಂಬರ್ 6 ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯ ತಮ್ಮ ನಿವಾಸದಲ್ಲಿ ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ನಾಯಕರ ಸಭೆಯನ್ನು ಕರೆದಿದ್ದರು.ಈ ಹಿಂದೆ ‘ಇಂಇಯಾ’ ಮೈತ್ರಿಕೂಟದ ಮೂರು ಸಭೆಗಳು ಪಾಟ್ನಾ, ಬೆಂಗಳೂರು ಮತ್ತು ಮುಂಬೈನಲ್ಲಿ ನಡೆದಿತ್ತು. ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದ ಮೈತ್ರಿಕೂಟದ ಘಟಕ ಪಕ್ಷಗಳ ಮುಖಂಡರ ಸಭೆಯಲ್ಲಿ ಮೈತ್ರಿಕೂಟದ ಭವಿಷ್ಯದ ಕಾರ್ಯಕ್ರಮಗಳ ರೂಪುರೇಷೆ ಸಿದ್ಧಪಡಿಸಲು 14 ಸದಸ್ಯರ ಸಮನ್ವಯ ಸಮಿತಿಯನ್ನು ರಚಿಸಲಾಗಿತ್ತು. ಸಮನ್ವಯ ಸಮಿತಿಯು ವಿರೋಧ ಪಕ್ಷದ ಮೈತ್ರಿಯ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

Post a Comment