ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕಿದೆ. ಆದರೆ ಶಾಸಕರು, ಸರ್ಕಾರ, ವಿಪಕ್ಷಗಳ ಸಹಕಾರ ಸಿಗುತ್ತಾ ಅನ್ನೋದೇಕರ್ನಾಟಕ ಚಳಿಗಾಲದ ಅಧಿವೇಶನಬೆಂಗಳೂರು: ಇಂದಿನಿಂದ ಬೆಳಗಾವಿಯ (Belagavi) ಸುವರ್ಣಸೌಧದದಲ್ಲಿ (Suvarna Soudha) ಚಳಿಗಾಲದ ಅಧಿವೇಶನ (Winter Session) ಶುರುವಾಗುತ್ತಿದೆ. ಸರ್ಕಾರದ ವೈಫಲ್ಯಗಳನ್ನ (Government failure) ಎತ್ತಿಹಿಡಿಯಲು ಮೈತ್ರಿಕೂಟ ಸಜ್ಜಾಗಿದೆ. ಸದನದಲ್ಲೇ ಪ್ರತಿಪಕ್ಷಗಳಿಗೆ ಉತ್ತರದ ಮೂಲಕ ಕಟ್ಟಿಹಾಕಲು ಕಾಂಗ್ರೆಸ್ (Congress) ಕೂಡ ಸಿದ್ಧತೆ ಮಾಡಿಕೊಂಡಿದೆ. ಆದರೆ ಪ್ರಶ್ನೆ ಇರೋದು ರಾಜ್ಯದ ಜ್ವಲಂತ ಸಮಸ್ಯೆಗಳು, ಉತ್ತರ ಕರ್ನಾಟಕದ (North Karnataka) ಸಮಸ್ಯೆಗಳಿಗೆ ಮುಕ್ತಿ ಸಿಗುತ್ತಾ ಅನ್ನೋದು.ವಿಪಕ್ಷಗಳ ಅಸ್ತ್ರಬೆಳಗಾವಿಯಲ್ಲಿ ನಡೆಯುವ ಈ ಬಾರಿಯ ಚಳಿಗಾಲದ ಅಧಿವೇಶನ ತೀವ್ರ ಕುತೂಹಲ ಮೂಡಿಸಿದೆ, ಸರ್ಕಾರದ ವೈಫಲ್ಯಗಳನ್ನ ಮುಂದಿಟ್ಟುಕೊಂಡು ಕಾಂಗ್ರೆಸ್‌ನ ಇಕ್ಕಟ್ಟಿಗೆ ಸಿಲುಕಿಸಲು ಜೆಡಿಎಸ್ ಬಿಜೆಪಿ ಜಂಟಿ ಹೋರಾಟಕ್ಕೆ ಸಜ್ಜಾಗಿವೆ. ವರ್ಗಾವಣೆ ದಂಧೆ, ಗ್ಯಾರಂಟಿಗಳ ವೈಫಲ್ಯ, ಅನುದಾನ ಕೊರತೆ, ಭ್ರಷ್ಟಾಚಾರದ ಆರೋಪಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ಬಿಜೆಪಿ ಹಾಗೂ ಜೆಡಿಎಸ್ ಮುಂದಾಗಿದೆ.ಸಂಬಂಧಿತ ಸುದ್ದಿ3 ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ, ಸಂಸತ್ ಕಲಾಪದಲ್ಲಿ ಮೋದಿ ಮೋದಿ ಘೋಷಣೆ ಕೂಗಿದ ಕಮಲ ಸಂಸದರುSuvarna Soudha: 10 ದಿನಗಳ ಕಾಲ ಚಳಿಗಾಲದ ಅಧಿವೇಶನ, ಕಂಗೊಳಿಸುತ್ತಿದೆ ಬೆಳಗಾವಿ!Suvarna Soudha: ಅಧಿವೇಶನಕ್ಕೆ ಸಜ್ಜಾದ ಕುಂದಾನಗರಿ ಬೆಳಗಾವಿBelagavi Session: ಪ್ರತಿ ದಿನ ಸದನಕ್ಕೆ ಬಂದ್ರೆ ಈ ಸಲ ಕಪ್ ನಿಮ್ದೇ! ಶಾಸಕರಿಗೆ ಸ್ಪೀಕರ್ ಖಾದರ್ ಆಫರ್ ಇದನ್ನೂ ಓದಿ: Siddaramaiah: ಮುಖ್ಯಮಂತ್ರಿಯಾಗಿ ಸ್ವಾತಂತ್ರ್ಯ ಕಳೆದುಕೊಂಡ್ರಾ ಸಿದ್ದು? ಹೊಸ ಬಾಂಬ್ ಸಿಡಿಸಿದ ಕೈ ಮಾಜಿ ಸಚಿವ ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಸರ್ಕಾರ ಪರಿಹಾರ ಕೊಡಲು ವಿಫಲವಾಗಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡದಿರುವುದು ಸೇರಿದಂತೆ ಕೆಲವು ಪ್ರಚಲಿತ ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ ಬಿಜೆಪಿ-ಜೆಡಿಎಸ್ ಸಜ್ಜಾಗಿವೆ. ರಾಜ್ಯಸರ್ಕಾರ ಬರನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಪ್ರತಿಪಕ್ಷಗಳು ದೂರುತ್ತಲೇ ಬಂದಿವೆ. ಸದನದಲ್ಲಿ ಇದನ್ನು ಚರ್ಚಿಸಲು ಆರ್.ಅಶೋಕ್ ಅವರು ಮುಂದಾಗಿದ್ದಾರೆ.ವಿಪಕ್ಷಗಳಿಗೆ ಕೌಂಟರ್ ಕೊಡಲು ಸಿಎಂ ಸಿದ್ದರಾಮಯ್ಯ ಹಾಗೂ ಸಂಪುಟ ಸದಸ್ಯರು ಸಜ್ಜಾಗುತ್ತಿದ್ದಾರೆ. ಯಾವ ಯಾವ ಸರ್ಕಾರದ ಅವಧಿಯಲ್ಲಿ ಎಷ್ಟೆಷ್ಟು ವರ್ಗಾವಣೆಗಳು ನಡೆದಿವೆ ಎಂಬ ನಿಟ್ಟಿನಲ್ಲಿ ಅಂಕಿ- ಅಂಶಗಳನ್ನು ಸಂಗ್ರಹ ಮಾಡಲು ಸೂಚನೆ ನೀಡಿದ್ದಾರೆ. ಜೊತೆಗೆ ಗ್ಯಾರಂಟಿ ಯೋಜನೆಗಳು ಎಷ್ಟರ ಮಟ್ಟಿಗೆ ಜಾರಿಯಲ್ಲಿ ಯಶಸ್ವಿಯಾಗಿದೆ? ಹಾಗೂ ಅದರಿಂದ ಲಾಭವನ್ನು ಪಡೆದ ಫಲಾನುಭವಿಗಳೆಷ್ಟು? ಈ ಎಲ್ಲವನ್ನು ಅಂಕಿ- ಅಂಶಗಳ ಜೊತೆಗೆ ಸದನದಲ್ಲಿ ವಿರೋಧ ಪಕ್ಷಗಳ ಆರೋಪದ ಸಂದರ್ಭದಲ್ಲಿ ತಿರುಗೇಟು ನೀಡಲು ಸರ್ಕಾರ ಬಳಕೆ ಮಾಡಲಿದೆ. ಹಾಗೇ ಬರ ವಿಷ್ಯದಲ್ಲಿ ಕೇಂದ್ರದ ಮೇಲೆ ಆರೋಪ ಮಾಡೋದಂತೂ ನಿಶ್ಚಿತವಾಗಿದೆ.ಜಮೀರ್ ಅಹ್ಮದ್ ವಿರುದ್ಧ ಹಕ್ಕುಚ್ಯುತಿತೆಲಂಗಾಣ ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ವಿಧಾನಸಭೆಯ ಸ್ಪೀಕರ್ ಸ್ಥಾನಮಾನದ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ವಸತಿ ಸಚಿವ ಜಮೀರ್ ಅಹಮ್ಮದ್ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಪ್ರತಿಪಕ್ಷಗಳು ತೀರ್ಮಾನಿಸಿವೆ. ಸ್ಪೀಕರ್ ಸ್ಥಾನಕ್ಕೆ ಅವಮಾನ ಮಾಡಿರುವ ಜಮೀರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಲಿವೆಯಂತೆ.ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತಾ?ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕಿದೆ. ಆದರೆ ಶಾಸಕರು, ಸರ್ಕಾರ, ವಿಪಕ್ಷಗಳ ಸಹಕಾರ ಸಿಗುತ್ತಾ ಅನ್ನೋದೇ ಯಕ್ಷಪ್ರಶ್ನೆ. ಪ್ರತಿಭಟನೆ, ಗಲಾಟೆ ಬಿಟ್ಟು ಚರ್ಚೆಗೆ ಸಹಕರಿಸಲಿ ಅನ್ನೋದು ಉಪಸಭಾಪತಿಗಳ ಮನವಿ. ಇಂದಿನಿಂದ ಬೆಳಗಾವಿ ಅಧಿವೇಶನ ಶುರುವಾಗ್ತಿದೆ. ಆದರೆ 5 ರಾಜ್ಯಗಳ ಚುನಾವಣಾ ಫಲಿತಾಂಶ, ಸರ್ಕಾರ ರಚನೆಯಲ್ಲಿ ನಮ್ಮ ಸಚಿವರು, ಶಾಸಕರು ಬ್ಯುಸಿಯಾಗಿದ್ದಾರೆ. ಹೀಗಾಗಿ ಮೊದಲ ದಿನವೇ ಮಂತ್ರಿಗಳು ಚಕ್ಕರ್ ಹಾಕ್ತಾರ ಅನ್ನೋ ಪ್ರಶ್ನೆಗಳು ಉದ್ಭವಿಸಿವೆ.

Post a Comment