Blood Sugar Maintenance: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವಂತೆ ಈ 3 ಪಾನೀಯಗಳು!


 ಸಂಗ್ರಹ ಚಿತ್ರ

ಕೆಲವರ ರಕ್ತದಲ್ಲಿನ ಸಕ್ಕರೆ ಮಟ್ಟ ಮಾತ್ರ ಕಿಂಚಿತ್ತೂ ಕಡಿಮೆಯಾಗುವುದಿಲ್ಲ. ಆರೋಗ್ಯಕರ ಜೀವನಶೈಲಿ ಮತ್ತು ಆಹಾರಕ್ರಮ ಅನುಸರಿಸಿದರೂ ಸಹ ರಕ್ತದಲ್ಲಿನ ಸಕ್ಕರೆ ಮಟ್ಟ ಮಾತ್ರ ಕಡಿಮೆ ಆಗುತ್ತಿಲ್ಲ, ನಿಯಂತ್ರಣಕ್ಕೆ ಬರುತ್ತಿಲ್ಲ ಅಂತ ಅನೇಕರು ಯೋಚನೆಯಲ್ಲಿರಬಹುದು. ಅಂಥವರಿಗಾಗಿ ಇಲ್ಲಿದೆ ಟಿಪ್ಸ್.ಈಗೆಲ್ಲಾ ಸಕ್ಕರೆ ಕಾಯಿಲೆ (Diabetes) ಎಂಬುದು ಅನೇಕ ಜನರನ್ನು ಕಾಡುತ್ತಿರುವ ದೊಡ್ಡ ಕಾಯಿಲೆಯಾಗಿ ಬೆಳೆದಿದೆ ಅಂತ ಹೇಳಬಹುದು. ಸಕ್ಕರೆ ಕಾಯಿಲೆಯನ್ನು ಎಂದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಜನರು ಅನೇಕ ರೀತಿಯ ಕಸರತ್ತುಗಳನ್ನು ಮಾಡುತ್ತಾರೆ. ಎಂದರೆ ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ವ್ಯಾಯಾಮ ಮಾಡುವುದು, ಧ್ಯಾನ ಮಾಡುವುದು, ಆರೋಗ್ಯಕರ (Health) ಆಹಾರಕ್ರಮವನ್ನು ಪಾಲಿಸುವುದು ಮತ್ತು ಉತ್ತಮವಾದ ಎಂದರೆ ಆರೋಗ್ಯಕರವಾದ ಜೀವನಶೈಲಿಯನ್ನು (Lifestyle) ಅನುಸರಿಸುವುದೆಲ್ಲವನ್ನು ಮಾಡುತ್ತಿರುತ್ತಾರೆ.ಆದರೂ ಸಹ ಎಲ್ಲೋ ಒಂದುಕಡೆ ಕೆಲವರ ರಕ್ತದಲ್ಲಿನ ಸಕ್ಕರೆ ಮಟ್ಟ ಮಾತ್ರ ಕಿಂಚಿತ್ತೂ ಕಡಿಮೆಯಾಗುವುದಿಲ್ಲ. ಆರೋಗ್ಯಕರ ಜೀವನಶೈಲಿ ಮತ್ತು ಆಹಾರಕ್ರಮ ಅನುಸರಿಸಿದರೂ ಸಹ ರಕ್ತದಲ್ಲಿನ ಸಕ್ಕರೆ ಮಟ್ಟ ಮಾತ್ರ ಕಡಿಮೆ ಆಗುತ್ತಿಲ್ಲ, ನಿಯಂತ್ರಣಕ್ಕೆ ಬರುತ್ತಿಲ್ಲ ಅಂತ ಅನೇಕರು ಯೋಚನೆಯಲ್ಲಿರಬಹುದು.ಸಂಬಂಧಿತ ಸುದ್ದಿಕತ್ತುನೋವು, ಉರಿಯೂತ, ತಲೆನೋವಿನ ನಡುವೆ ಕನೆಕ್ಷನ್! ಅಧ್ಯಯನದಲ್ಲಿ ಮಹತ್ವದ ವಿಚಾರ ಬಹಿರಂಗನಮಗೆ ನಾವೇ ಹೇಳಿಕೊಳ್ಳುವ ಈ ಎಂಟು ಮಾತುಗಳುಖಿನ್ನತೆಯನ್ನು ನಿವಾರಿಸುತ್ತದೆಯಂತೆFertility ಚಿಕಿತ್ಸೆ ಪಡೆಯುವಾಗ ಈ ಆಹಾರಗಳನ್ನ ಮಾತ್ರ ತಿನ್ನಬೇಕಂತೆಚಳಿಗಾಲದಲ್ಲಿ ತೂಕ ಇಳಿಸೋದು ಕಷ್ಟ ಎಂದೆನಿಸುತ್ತಿದೆಯೇ? ಈ ಟಿಪ್ಸ್‌ಗಳನ್ನು ಫಾಲೋ ಮಾಡಿದೇಹಕ್ಕೆ ಬೇಕಾಗಿರುವಷ್ಟು ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸದಿರುವುದು, ವ್ಯಾಯಾಮದ ಕೊರತೆ, ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳದೆ ಇರುವುದು, ಮಾನಸಿಕ ಒತ್ತಡ, ಧೂಮಪಾನ ಮತ್ತು ನಿರ್ಜಲೀಕರಣವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಕೆಲವು ಅಂಶಗಳಾಗಿವೆ.ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಸಕ್ಕರೆ ಬಯಕೆ ಕಡಿಮೆ ಮಾಡೋದು ಹೇಗೆ? ಇಲ್ಲಿದೆ ಮಾಹಿತಿನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಉತ್ತಮ ಮಾರ್ಗವೆಂದರೆ ಆರೋಗ್ಯಕರ ಆಹಾರ ಮತ್ತು ಪಾನೀಯಗಳನ್ನು ಸೇವಿಸುವುದಾಗಿದೆ. ಪ್ರಶಸ್ತಿ ವಿಜೇತ ಪೌಷ್ಟಿಕತಜ್ಞರಾದ ಡಾ ಲೊವ್ನೀತ್ ಬಾತ್ರಾ ಅವರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸೇವಿಸಬೇಕಾದ ಕೆಲವು ಆರೋಗ್ಯಕರ ಪಾನೀಯಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ನೋಡಿ.ಸಕ್ಕರೆ ಕಾಯಿಲೆಯನ್ನ ನಿಯಂತ್ರಣದಲ್ಲಿರಿಸಿಕೊಳ್ಳಲು ಸಹಾಯ ಮಾಡುತ್ತವಂತೆ ಈ ಪಾನೀಯಗಳು..ಡಾ ಬಾತ್ರಾ ಅವರ ಪ್ರಕಾರ, ಭಾರತದಲ್ಲಿ ಮಧುಮೇಹವು ತುಂಬಾನೇ ಪ್ರಚಲಿತವಾಗಿದೆ. ಭಾರತವನ್ನು ವಿಶ್ವದ ಮಧುಮೇಹ ರಾಜಧಾನಿ ಎಂದು ಪರಿಗಣಿಸಲಾಗಿದೆಯಂತೆ.ಒಟ್ಟು ಸಕ್ಕರೆ ಕಾಯಿಲೆ ಪ್ರಕರಣಗಳು ಸುಮಾರು 62 ಮಿಲಿಯನ್ ಇವೆಯಂತೆ. ಭಾರತದಲ್ಲಿ ಈ ಕಾಯಿಲೆ ತುಂಬಾನೇ ವೇಗವಾಗಿ ಹೆಚ್ಚುತ್ತಿದೆ, ಜೊತೆಗೆ ಅದರಿಂದ ಉಂಟಾಗುವ ತೊಡಕುಗಳು ಸಹ ದಿನೇ ದಿನೇ ಹೆಚ್ಚುತ್ತಲೇ ಇವೆ. ಸಂಗ್ರಹ ಚಿತ್ರಭಾರತದಲ್ಲಿ ಹೆಚ್ಚು ನಗರೀಕರಣಕ್ಕೆ ಸಂಬಂಧಿಸಿದ ಆನುವಂಶಿಕ, ಪರಿಸರ ಮತ್ತು ಜೀವನಶೈಲಿಯ ಬದಲಾವಣೆಗಳನ್ನು ಒಳಗೊಂಡಂತೆ ಮಧುಮೇಹಕ್ಕೆ ವಿವಿಧ ಕಾರಣಗಳನ್ನು ಹೇಳಲಾಗುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸುವ ವಿಷಯಕ್ಕೆ ಬಂದಾಗ, ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಮೂರು ಅದ್ಭುತ ಪಾನೀಯಗಳು ರಹಸ್ಯ ಅಸ್ತ್ರಗಳಾಗಿವೆ ನೋಡಿ.ಈ ಮೂರು ಪಾನೀಯಗಳು ಯಾವುವು ಅಂತ ನೋಡಿ..ಮೇಥಿ ಬೀಜದ ಪಾನೀಯಗ್ಲುಕೋಮನ್ನನ್ ಫೈಬರ್ ಸೇರಿದಂತೆ ಮೆಂತ್ಯದಲ್ಲಿನ ಕರಗುವ ಫೈಬರ್‌ಗಳು ಸೇವಿಸಿದ ಸಕ್ಕರೆಗಳ ಕರುಳಿನ ಹೀರಿಕೊಳ್ಳುವಿಕೆಯನ್ನು ವಿಳಂಬಗೊಳಿಸುತ್ತದೆ ಮತ್ತು ಮೆಂತ್ಯ ಮತ್ತು ಟ್ರೈಗೋನೆಲಿನ್‌ನಂತಹ ಆಲ್ಕಲಾಯ್ಡ್‌ಗಳು ಹೈಪೊಗ್ಲಿಸಿಮಿಕ್ ಪರಿಣಾಮವನ್ನು ಹೊಂದಿವೆ ಮತ್ತು 4 ಹೈಡ್ರಾಕ್ಸಿ ಐಸೊಲ್ಯೂಸಿನ್ ಅಮೈನೋ ಆಮ್ಲಗಳು ಇನ್ಸುಲಿನ್ ಬಿಡುಗಡೆ ಮಾಡಲು ಮೇದೋಜ್ಜೀರಕ ಗ್ರಂಥಿಯ ಮೇಲೆ ಕಾರ್ಯ ನಿರ್ವಹಿಸುತ್ತವೆ ಎಂದು ಡಾ ಬಾತ್ರಾ ಹೇಳುತ್ತಾರೆಗಿಲೋಯ್ ಪಾನೀಯಗಿಲೋಯ್ ಪಾನೀಯ, ಮಧುಮೇಹ ರೋಗಿಗಳಿಗೆ ನಂಬಲಾಗದಷ್ಟು ಆರೋಗ್ಯಕರ ಪಾನೀಯವಾಗಿದೆ. ಡಾ ಬಾತ್ರಾ ಅವರ ಪ್ರಕಾರ, ಗಿಲೋಯ್‌ನಲ್ಲಿರುವ ಆಲ್ಕಲಾಯ್ಡ್ ಸಂಯುಕ್ತಗಳಲ್ಲಿ ಒಂದು ಬರ್ಬರೀನ್ ಆಗಿದೆ.ಇದು ಸಾಂಪ್ರದಾಯಿಕ ಗಿಡಮೂಲಿಕೆ ಪರಿಹಾರವಾಗಿದೆ, ಇದರ ಕುರಿತಾದ ಮಾನವ ಅಧ್ಯಯನಗಳು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿವೆ. ಮಧುಮೇಹ ಔಷಧಿ ಮೆಟ್‌ಫಾರ್ಮಿನ್‌ನಂತೆಯೇ ಬೆರ್ಬೆರಿನ್ ಸಹ ಕೆಲಸ ಮಾಡುತ್ತದೆಯಂತೆ.ದಾಲ್ಚಿನ್ನಿ ಚಹಾದಾಲ್ಚಿನ್ನಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಮತ್ತು ಮಧುಮೇಹವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.ದಾಲ್ಚಿನ್ನಿ ಗ್ಲೈಕೊಜೆನ್ ಸಂಶ್ಲೇಷಣೆಯ ಚಟುವಟಿಕೆಯ ಮೇಲೆ ಪರಿಣಾಮ ಬೀರುವ ಮೂಲಕ ಗ್ಲೈಕೊಜೆನ್ ಸಂಗ್ರಹವನ್ನು ಹೆಚ್ಚಿಸುತ್ತದೆ ಎಂದು ಡಾ ಬಾತ್ರಾ ಹೇಳುತ್ತಾರೆ. ದಾಲ್ಚಿನ್ನಿಯಲ್ಲಿರುವ ನೈಸರ್ಗಿಕ ಅಂಶವು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸ್ಥಿರವಾಗಿಡಲು ಇನ್ಸುಲಿನ್ ಆಗಿ ಕಾರ್ಯ ನಿರ್ವಹಿಸುತ್ತದೆ.

Post a Comment

Previous Post Next Post