Telangana Election: ಕೆಟಿಆರ್​-ಕೆಸಿಆರ್ ಸಾಯೋವರೆಗೂ ನನ್ನ ನೆನಪಿಸಿಕೊಳ್ಳುವಂತೆ ಮಾಡ್ತೀನಿ? ಚಾಲೆಂಜ್​ ಮಾಡಿದಂತೆ ಗೆದ್ದು ತೋರಿಸಿದ ಬಿಜೆಪಿ ಅಭ್ಯರ್ಥಿ


 ವೆಂಕಟರಮಣ ರೆಡ್ಡಿ- ಕೆಟಿಆರ್-ಕೆಸಿಆರ್

ಕಾಮರೆಡ್ಡಿ ಕ್ಷೇತ್ರದಲ್ಲಿ ವೆಂಕಟ ರಮಣ ರೆಡ್ಡಿ 66,532 ಮತಗಳನ್ನು ಪಡೆದು ಕೆಸಿಆರ್ ವಿರುದ್ಧ 6 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ (Telangana Assembly Election) ಕಾಂಗ್ರೆಸ್ ಜಯಬೇರಿ ಬಾರಿಸಿದೆ. 10 ವರ್ಷಗಳ ನಂತರ ಬಿಆರ್​ಎಸ್ (BRS)​ ಅಧಿಕಾರ ಕಳೆದುಕೊಂಡಿದೆ. ಆದರೆ ತೆಲಂಗಾಣ 119 ಕ್ಷೇತ್ರಗಳಲ್ಲಿ ಹೆಚ್ಚು ಸದ್ದು ಮಾಡಿದ ಕ್ಷೇತ್ರವೆಂದರೆ ಕಾಮರೆಡ್ಡಿ (Kamareddy). ಏಕೆಂದರೆ ಇದು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (K Chandrashekar Rao) ಸ್ಪರ್ಧಿಸಿದ್ದರು. ಈ ಕ್ಷೇತ್ರದಲ್ಲಿ ರೇವಂತ್​ ರೆಡ್ಡಿ (Revanth Reddy) ಗೆಲ್ಲಬಹುದು ಎನ್ನಲಾಗಿತ್ತು. ಆದರೆ ಬಿಜೆಪಿ ಅಭ್ಯರ್ಥಿ ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ (Venkataramana Reddy) ಅವರು ಇಬ್ಬರು ಸಿಎಂ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ದಿಗ್ವಿಜಯ ಸಾಧಿಸಿದ್ದಾರೆ. ತೆಲಂಗಾಣದಲ್ಲೇ ಈ ವಿಜಯ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇದೀಗ ಚುನಾವಣೆಗೂ ಮುನ್ನ ಕೆಸಿಆರ್ ಮತ್ತು ಕೆಟಿಆರ್​ಗೆ ಸವಾಲ್ ಹಾಕಿದ್ದ ವಿಡಿಯೋ ವೈರಲ್ ಆಗುತ್ತಿದೆ.ಯಾರವನು ಬಿಜೆಪಿ ಅಭ್ಯರ್ಥಿ ಎಂದಿದ್ದ ಕೆಟಿಆರ್ ಸಂಬಂಧಿತ ಸುದ್ದಿಓವೈಸಿ ಕ್ಷೇತ್ರದಲ್ಲಿ ಬಿಜೆಪಿ ರಾಜಾ ಸಿಂಗ್ ದಾಖಲೆ! ಹಿಂದೂ ಫೈರ್​ ಬ್ರ್ಯಾಂಡ್​ಗೆ ಹ್ಯಾಟ್ರಿಕ್​ ಗೆಲುವುಮಗನ ಸಾವಿಗೆ ಸಿಗದ ನ್ಯಾಯ, 7 ಬಾರಿ ಗೆದ್ದಿದ್ದ ಕಾಂಗ್ರೆಸ್‌ ಸಚಿವನ ವಿರುದ್ಧ ಗೆದ್ದು ಸೇಡು ತೀರಿಸಿದ ತಂದೆ!ಮಿಜೋರಾಂನಲ್ಲಿ ಮತ ಎಣಿಕೆಗೆ ಕೌಂಟ್‌ಡೌನ್, ಯಾರಿಗೆ ಸಿಗುತ್ತೆ ಮ್ಯಾಜಿಕ್ ನಂಬರ್? ತ್ರಿಕೋನ ಫೈಟ್‌!ABVPಯಲ್ಲಿ ಹೋರಾಟ, TDPಯಲ್ಲಿ ಪಾಲಿಟಿಕ್ಸ್, ಕಾಂಗ್ರೆಸ್​ನಿಂದ ಸಿಎಂ! ಇಲ್ಲಿದೆ ರೇವಂತ್ ರೆಡ್ಡಿ ಪಯಣ​ಕೆಟಿಆರ್ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಯಾರವನು? ಅವನ ಹೆಸರೇನು? ಎಂದು ತಾತ್ಸಾರವಾಗಿ ಮಾತನಾಡಿದ್ದರಂತೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ವೆಂಕಟರಮಣ, " ಕೆಟಿಆರ್​ ನನ್ನ ಹೆಸರನ್ನು ಹೇಳಲು ಅವರಿಗೆ ಸಂಸ್ಕಾರ ಬರಲಿಲ್ಲ. ಪ್ರತಿಪಕ್ಷದ ನಾಯಕರನ್ನು ಗೌರವಿಸುವ ಮನಸ್ಸು ಅವರಿಗಿಲ್ಲ. ಆತ್ಮಾಭಿಮಾನ, ಆತ್ಮಗೌರವ ಏನೆಂದು ತಿಳಿದಿಲ್ಲ. ಅವರ ಪಕ್ಷ ಇರುವ ಹುಚ್ಚರ ಬಳಿ ಕೇಳಿ ತಿಳಿದುಕೊಳ್ತಾರೆ.ಯಾರೋ ಅವನು ಬಿಜೆಪಿಯವನೂ ಅಂದಿದ್ದೀರಾ!, ಆದರೆ ನನ್ನ ಹೆಸರು ಯಾವಾಗಲೂ ನಿಮ್ಮ ತಲೆಯಲ್ಲಿ ಇರುವಂತೆ ಮಾಡ್ತೇನೆ. ನಿಮಗೂ, ನಿಮ್ಮ ಅಪ್ಪನಿಗೂ ಸಾಯೋವರೆಗೂ ನಾನು ನೆನಪಿರುವಂತೆ ಮಾಡುತ್ತೇನೆ. ನೀವು ಸಾಯುವ ದಿನ ಕೂಡ ನನ್ನ ಹೆಸರನ್ನು ನೆನಪಿಸಿಕೊಳ್ಳುವ ದಿನ ಬರುತ್ತದೆ. ಆ ರೀತಿ ಮಾಡೇ ಮಾಡುತ್ತೇನೆ. ನನ್ನ ಮೇಲೆ ನನಗೆ ನಂಬಿಕೆಯಿದೆ, ಕಾಮರೆಡ್ಡಿ ಕ್ಷೇತ್ರದ ಜನರ ಮೇಲೆ ನನಗೆ ನಂಬಿಕೆಯಿದೆ" ಎಂದು ಸವಾಲ್ ಎಸೆದಿದ್ದರು. ಇದನ್ನೂ ಓದಿ: ಓವೈಸಿ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಬಿಜೆಪಿ ರಾಜಾ ಸಿಂಗ್ ದಾಖಲೆ! ಹಿಂದೂ ಫೈರ್​ ಬ್ರ್ಯಾಂಡ್​ಗೆ ಹ್ಯಾಟ್ರಿಕ್ ಗೆಲುವುಸಾವಲ್ ಹಾಕಿದಂತೆ ಗೆದ್ದ ಬಿಜೆಪಿ ಅಭ್ಯರ್ಥಿಇದೀಗ ಸವಾಲ್ ಹಾಕಿದಂತೆ ಗೆದ್ದು ತೋರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಿಜೆಪಿ ಕಾರ್ಯಕರ್ತರು ಈ ವಿಡಿಯೋ ಶೇರ್ ಮಾಡಿಕೊಂಡು ಅಪ್ಪ-ಮಕ್ಕಳಿಗೆ ಸರಿಯಾಗಿ ಪಾಠ ಕಲಿಸಿದ್ದೀರಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕಾಮರೆಡ್ಡಿ ಕ್ಷೇತ್ರದಲ್ಲಿ ವೆಂಕಟ ರಮಣ ರೆಡ್ಡಿ 66,532 ಮತಗಳನ್ನು ಪಡೆದು ಕೆಸಿಆರ್ ವಿರುದ್ಧ 6 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕೆಸಿಆರ್ 59,911 ಮತ ಪಡೆದರೆ, ಕಾಂಗ್ರೆಸ್ ಸಿಎಂ ಅಭ್ಯರ್ಥಿ ರೆವಂತ್ ರೆಡ್ಡಿ 54,916 ಮತಗಳನ್ನು ಪಡೆದಿದ್ದರು.

Post a Comment

Previous Post Next Post