Lifestyle: ನಮಗೆ ನಾವೇ ಹೇಳಿಕೊಳ್ಳುವ ಈ ಎಂಟು ಮಾತುಗಳು ಖಿನ್ನತೆಯನ್ನು ನಿವಾರಿಸುತ್ತದೆಯಂತೆ..!


 [ಸಾಂದರ್ಭಿಕ ಚಿತ್ರ

ಮಾನಸಿಕ ಖಿನ್ನತೆಗೆ ಒಬ್ಬ ವ್ಯಕ್ತಿ ಒಳಗಾಗುವ ಸಮಯದಲ್ಲಿ ಆತ ತನಗೆ ತಾನೇ ರಕ್ಷಾ ಕವಚವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ತನ್ನ ಒಳಗಿನ ಧೈರ್ಯವನ್ನು ಕಂಗೆಡದಂತೆ ಆತ ನೋಡಿಕೊಳ್ಳಬೇಕಾಗುತ್ತದೆ. ಅದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.ಇಂದಿನ ದಿನಗಳಲ್ಲಿ ಮಾನಸಿಕ ಅಸಮತೋಲನ, ಖಿನ್ನತೆ (Depression), ಮಾನಸಿಕ ಅಸ್ವಸ್ಥತೆಗಳು ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಇದಕ್ಕೆ ಅನೇಕ ಔಷಧಗಳಿದ್ದರೂ ಸೂಕ್ತವಾದ ಔಷಧ (Medicine) ಎಂದರೆ ಸ್ವಯಂ ಆರೈಕೆಯಾಗಿದೆ. ಅಂದರೆ ನಮ್ಮ ಮೇಲೆ ನಾವು ನಿಯಂತ್ರಣವಿರಿಸಿಕೊಳ್ಳುವುದು, ನಮ್ಮ ಆರೋಗ್ಯದ (Health) ಮೇಲೆ ನಿಗಾ ಇರಿಸಿಕೊಳ್ಳುವುದು ಇದಕ್ಕೆ ತಕ್ಕ ಔಷಧ ಎಂದೆನಿಸಿದೆ. ಮನೆಯವರು ಹಾಗೂ ಸ್ನೇಹಿತರು ಪರಿಚಯಸ್ಥರು ಕೂಡ ಖಿನ್ನತೆಯುಳ್ಳ ವ್ಯಕ್ತಿಗೆ ಬೆಂಬಲ ನೀಡಬೇಕಾಗುತ್ತದೆ ಸಾಂತ್ವಾನ ಕೊಡಬೇಕಾಗುತ್ತದೆ.ಮಾನಸಿಕ ಖಿನ್ನತೆಗೆ ಒಬ್ಬ ವ್ಯಕ್ತಿ ಒಳಗಾಗುವ ಸಮಯದಲ್ಲಿ ಆತ ತನಗೆ ತಾನೇ ರಕ್ಷಾ ಕವಚವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ತನ್ನ ಒಳಗಿನ ಧೈರ್ಯವನ್ನು ಕಂಗೆಡದಂತೆ ಆತ ನೋಡಿಕೊಳ್ಳಬೇಕಾಗುತ್ತದೆ. ಅದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.ಸಂಬಂಧಿತ ಸುದ್ದಿಸಂಬಂಧದಲ್ಲಿ ದೈಹಿಕ ಆಕರ್ಷಣೆಯನ್ನು ಮತ್ತೆ ತರುವುದು ಹೇಗೆ? ಇಲ್ಲಿವೆ‌ ಸಂಗಾತಿಗಳಿಗೆ ಟಿಪ್ಸ್Fertility ಚಿಕಿತ್ಸೆ ಪಡೆಯುವಾಗ ಈ ಆಹಾರಗಳನ್ನ ಮಾತ್ರ ತಿನ್ನಬೇಕಂತೆಚಳಿಗಾಲದಲ್ಲಿ ತೂಕ ಇಳಿಸೋದು ಕಷ್ಟ ಎಂದೆನಿಸುತ್ತಿದೆಯೇ? ಈ ಟಿಪ್ಸ್‌ಗಳನ್ನು ಫಾಲೋ ಮಾಡಿಚಳಿಗಾಲದಲ್ಲಿ ಪಾಲಕ್‌ ತಿನ್ನುವಾಗ ಈ ಎಡವಟ್ಟು ಮಾಡ್ಲೇಬೇಡಿ!ನನ್ನ ಆಲೋಚನೆಗಳ ಮೇಲೆ ನನಗೆ ಹಿಡಿತವಿದೆಹೆಚ್ಚಿನ ಚಿಂತೆ, ಬೇಸರ ನಿಮ್ಮನ್ನು ಕಾಡಿದಾಗ ನಿಮಗೆ ನೀವೇ ಕೆಲವೊಂದು ಸೂಚನೆಗಳನ್ನು ನೀಡುವ ಮೂಲಕ ಖಿನ್ನತೆಯ ಲಕ್ಷಣಗಳಿಂದ ಹೊರಬಹುದಾಗಿದೆ. ನಿಮ್ಮ ಆಲೋಚನೆಗಳ ಮೇಲೆ ನಿಮಗೆ ನಿಯಂತ್ರಣವಿರಿಸಿಕೊಳ್ಳಬಹುದು. ನೀವು ಸಾಕಷ್ಟು ಶಕ್ತಿವಂತರು ಎಂಬುದನ್ನು ನೆನಪಿಸಿಕೊಳ್ಳಿ.ಇದನ್ನೂ ಓದಿ: ಚಳಿಗಾಲದಲ್ಲಿ ತೂಕ ಇಳಿಸೋದು ಕಷ್ಟ ಎಂದೆನಿಸುತ್ತಿದೆಯೇ? ಈ ಟಿಪ್ಸ್‌ಗಳನ್ನು ಫಾಲೋ ಮಾಡಿಕಷ್ಟದ ಕ್ಷಣ ಕೂಡ ಬೇಗ ಮುಗಿಯುತ್ತದೆಕಷ್ಟ ಬಂದಾಗ ನಾವು ಕಂಗೆಟ್ಟಾಗ ಇದು ಕೂಡ ಬೇಗನೇ ಮುಗಿದು ಹೋಗುತ್ತದೆ ಎಂದು ಹೇಳಿಕೊಳ್ಳುವುದು ನಮ್ಮನ್ನು ಧೈರ್ಯಶಾಲಿಯನ್ನಾಗಿಸುತ್ತದೆ. ಕಷ್ಟದ ಸಮಯಗಳು ಕೂಡ ಬೇಗನೇ ನಿವಾರಣೆಗೊಂಡು ಅದರ ಜಾಗದಲ್ಲಿ ಸುಖ ಸ್ಥಾನ ಪಡೆದುಕೊಳ್ಳುತ್ತದೆ. ನಮ್ಮನ್ನು ನಾವು ಬೆಂಬಲಿಸುವುದು ಮುಖ್ಯವಾಗಿದೆ.ಖಿನ್ನತೆಯ ಬದಲಿಗೆ ಶಾಂತಿಯನ್ನು ಆರಿಸುವೆನಿಮ್ಮನ್ನು ಒತ್ತಡ, ಹಾಗೂ ಆಲೋಚನೆಗಳು ಕಂಗೆಡಿಸುತ್ತಿವೆ ಎಂದಾದಲ್ಲಿ ಮನಸ್ಸಿನಲ್ಲಿಯೇ ನಾನು ಶಾಂತಿಯನ್ನು ಬಯಸುತ್ತೇನೆ ಎಂದು ಹೇಳಿ. ಮೆಲುವಾದ ಸಂಗೀತ ಆಲಿಸುವುದು, ಪುಸ್ತಕ ಓದುವುದು, ಧಾರ್ಮಿಕ ವಿಷಯಗಳನ್ನು ಆಲಿಸುವುದು ಮೊದಲಾದ ಶಾಂತಿಯನ್ನುಂಟು ಮಾಡುವ ಕೆಲಸಗಳಲ್ಲಿ ತೊಡಗಿಕೊಳ್ಳಿ.ನಾನು ಯೋಚಿಸುವುದಕ್ಕಿಂತಲೂ ಶಕ್ತಿಶಾಲನಮ್ಮನ್ನು ನಾವು ಧೈರ್ಯವಂತರು ಹಾಗೂ ಶಕ್ತಿಶಾಲಿಗಳು ಎಂದು ಹೇಳಿಕೊಂಡಾಗ ನಮಗೆ ಅರಿವಿಲ್ಲದೆ ಒಂದು ಆಂತರ್ಯ ಶಕ್ತಿ ಒಡಮೂಡುತ್ತದೆ. ಇದು ನಮ್ಮನ್ನು ಹೆಚ್ಚು ಪರಾಕ್ರಮಿಗಳನ್ನಾಗಿ ಮಾಡುತ್ತದೆ. ಖಿನ್ನತೆಯಿಂದ ನಮ್ಮನ್ನು ರಕ್ಷಿಸುತ್ತದೆ. ನಮ್ಮನ್ನು ನಾವು ಶಕ್ತಿಶಾಲಿ ಎಂದು ಭಾವಿಸಿಕೊಳ್ಳುವುದು ನಮಗೆ ಹೆಚ್ಚಿನ ಬಲವನ್ನು ಒದಗಿಸುತ್ತದೆ.ನಾನು ಪ್ರಗತಿಗೆ ಗಮನ ಹರಿಸುವೆನಿಮ್ಮನ್ನು ನೀವು ಸದಾ ಬೆಂಬಲಿಸುತ್ತಿರಿ. ನೀವು ಮಾಡುವ ಕೆಲಸದಲ್ಲಿ ನಿಮಗೆ ಸೂಕ್ತ ಪ್ರತಿಫಲ ದೊರೆಯದೇ ಇದ್ದರೂ ನೀವು ಎಷ್ಟು ಪ್ರಗತಿ ಸಾಧಿಸಿರುವಿರಿ ಎಂಬುದಕ್ಕೆ ಗಮನಹರಿಸಿ ನಿಮ್ಮನ್ನು ನೀವು ಸಶಕ್ತಗೊಳಿಸಿ. ಪ್ರತಿಫಲ ಈಗ ದೊರೆಯದೇ ಇದ್ದರೂ ನಿಮ್ಮ ಶ್ರಮ ನಿಲ್ಲಿಸದಿರಿ.ನಾನು ಕೃತಜ್ಞ ಎಂಬ ಭಾವನೆ ತೋರ್ಪಡಿಸುವೆನಮ್ಮ ಜೀವನದಲ್ಲಿ ನಾವು ಒಂದಿಲ್ಲೊಂದು ವಿಷಯಗಳಲ್ಲಿ ಒಬ್ಬರಿಗೆ ಋಣಿಯಾಗಿರುತ್ತೇವೆ. ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಇದನ್ನು ಮರೆತಿರುತ್ತೇವೆ. ನಾವು ಈ ಭೂಮಿಯಲ್ಲಿನ ಪ್ರತಿಯೊಂದು ಚರಾಚರ ವಸ್ತುಗಳಿಗೂ ಋಣಿಯಾಗಿರಬೇಕು ಎಂಬುದನ್ನು ಮರೆಯದಿರಿ.ನವು ಕೃತಜ್ಞರಾಗಿರುವುದು ನಮ್ಮ ಜೀವನವನ್ನು ಸಂಪೂರ್ಣಗೊಳಿಸುತ್ತದೆ ಹಾಗೂ ನಮ್ಮ ಒಳಗಿನ ಚೇತನವನ್ನು ಚುರುಕಾಗಿಸುತ್ತದೆ.ನನಗೆ ನಾನೇ ಸ್ಫೂರ್ತಿನಾವು ಮಾಡುವ ಎಷ್ಟೋ ಕೆಲಸಗಳಲ್ಲಿ ಸಾಕಷ್ಟು ಅಡೆತಡೆಗಳು ಉಂಟಾಗುತ್ತವೆ. ಆ ಸಮಯದಲ್ಲಿ ನಾವು ಕುಗ್ಗಿ ಹೋಗುತ್ತೇವೆ ಹಾಗೂ ಧೈರ್ಯಕಳೆದುಕೊಳ್ಳುತ್ತೇವೆ. ಆಗ ನಮ್ಮನ್ನು ನಾವು ಮೇಲೆತ್ತಬೇಕು ಹಾಗೂ ಸವಾಲುಗಳನ್ನು ಎದುರಿಸುವ ಶಕ್ತಿ ನಮ್ಮಲ್ಲಿ ಎಂಬುದನ್ನು ನಮಗೆ ನಾವೇ ನೆನಪಿಸಿಕೊಳ್ಳಬೇಕು.ಫಲಿತಾಂಶ ಏನೇ ಇರಲಿ ಮುಂದುವರಿಯುವ ನಮ್ಮ ಕೌಶಲ್ಯವನ್ನು ನಾವೇ ಎಚ್ಚರಗೊಳಿಸಬೇಕು ಹಾಗೂ ಈ ಕ್ಷಣ ಇದು ನನ್ನಿಂದ ಸಾಧ್ಯ ಎಂಬುದನ್ನು ನೆನಪಿಸಿಕೊಳ್ಳಬೇಕು.

[12/4, 5:05 PM] mannjunath bmb: ನಾನು ಶಾಂತಿ ಹಾಗೂ ಸಂತೋಷಕ್ಕೆ ಅರ್ಹನು


ನಮಗೆ ಯಾವುದು ಒಳಿತು ಹಾಗೂ ಯಾವುದು ಕೆಡುಕು ಎಂಬುದನ್ನು ನಿರ್ಧರಿಸುವ ಶಕ್ತಿ ಇದೆ. ಹಾಗಾಗಿ ಶಾಂತಿ, ಸಂತೋಷವೇ ನಮ್ಮ ಆದ್ಯತೆಯಾಗಿರಬೇಕು. ನಾನು ಅದಕ್ಕೆ ಅರ್ಹನು ಎಂಬುದನ್ನು ಮನಸ್ಸಿಗೆ ಆಗಾಗ ನೆನಪಿಸುತ್ತಿರಿ. ಇದರಿಂದ ಮನಸ್ಸು ಖಿನ್ನತೆಯ ಕಡೆಗೆ ನಡೆಯುವುದಿಲ್ಲ. ಸದಾ ಸುಖ ಶಾಂತಿ ನೆಮ್ಮದಿಯನ್ನರಸುತ್ತದೆ.

Post a Comment

Previous Post Next Post