Assembly Election: ಮೂರೂ ಹಿಂದಿ ರಾಜ್ಯಗಳಲ್ಲಿ ಕಾಂಗ್ರೆಸ್​ ಸೋಲಿಗೆ ಇದೊಂದೇ ಪ್ರಮುಖ ಕಾರಣ!


 ಕಾಂಗ್ರೆಸ್ ಸೋಲಿಗೆ ಕಾರಣ

ರಾಜಸ್ಥಾನ, ಛತ್ತೀಸ್‌ಘಡದಲ್ಲಿ ಕಾಂಗ್ರೆಸ್​ ಅಧಿಕಾರ ಕಳೆದುಕೊಂಡರೆ, ತೆಲಂಗಾಣದಲ್ಲಿ ದಿಗ್ವಿಜಯ ಸಾಧಿಸಿದೆ. ಆದರೆ ಉತ್ತರದ ಮೂರೂ ಹಿಂದಿ ಬೆಲ್ಟ್​ ರಾಜ್ಯಗಳನ್ನ ಕಾಂಗ್ರೆಸ್‌‌ ಕಳೆದುಕೊಳ್ಳಲು ಒಂದು ಕಾರಣ ಹೆಚ್ಚಾಗಿ ಕೇಳಿಬರುತ್ತಿದೆ.ಐದು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ (Assembly Election 2023) ಕಾಂಗ್ರೆಸ್‌ 2 ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡರೆ, ಒಂದು ರಾಜ್ಯದಲ್ಲಿ ಅಧಿಕಾರ ಪಡೆದಿದೆ. ರಾಜಸ್ಥಾನ, ಛತ್ತೀಸ್‌ಘಡ (Chhattisgarh) ಕಳೆದುಕೊಂಡ ಕಾಂಗ್ರೆಸ್ ತೆಲಂಗಾಣದಲ್ಲಿ (Telangana Election) ಜೈ ಜೈ ಅಂತಿದೆ. ರಾಜಸ್ಥಾನ, ಛತ್ತೀಸ್‌ಘಡ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌‌ಗೆ ಪಕ್ಷದೊಳಗಿನ ಒಳೇಟೇ ದೊಡ್ಡ ಪೆಟ್ಟು. ಮತದಾರರು ಮತ ಹಾಕಲಿಲ್ಲ ಅನ್ನೋದಕ್ಕಿಂತಲೂ ನಾಯಕರ ಕಚ್ಚಾಟ (Internal fight), ಬೀದಿ ರಂಪಾಟಗಳೇ ಕಾರ್ಯಕರ್ತರ ಮೇಲೂ ಮತದಾರರ ಮೇಲೂ ಪರಿಣಾಮ ಬೀರಿದೆ. ಹಾಗಾಗೇ ಅಧಿಕಾರ ಕಳೆದುಕೊಂಡಿದೆ.ಅಶೋಕ್‌ ಗೆಹ್ಲೋಟ್‌ V/S ಸಚಿನ್ ಪೈಲಟ್‌ಸಂಬಂಧಿತ ಸುದ್ದಿ40 ವರ್ಷ, 14 ಚುನಾವಣೆಗಳ ಬಳಿಕ ಮೊದಲ ಸೋಲುಕಂಡ ಕೆಸಿಆರ್! ಬಿಜೆಪಿ ಅಭ್ಯರ್ಥಿ ವಿರುದ್ಧ ಪರಾಜಯಕೆಟಿಆರ್​-ಕೆಸಿಆರ್ ಸಾಯೋವರೆಗೂ ನನ್ನ ನೆನಪಿಸಿಕೊಳ್ಳುವಂತೆ ಮಾಡ್ತೀನಿ? ಸವಾಲ್ ಹಾಕಿ ಗೆದ್ದ ಬಿಜೆಪಿ ಲೀಡರ್ಓವೈಸಿ ಕ್ಷೇತ್ರದಲ್ಲಿ ಬಿಜೆಪಿ ರಾಜಾ ಸಿಂಗ್ ದಾಖಲೆ! ಹಿಂದೂ ಫೈರ್​ ಬ್ರ್ಯಾಂಡ್​ಗೆ ಹ್ಯಾಟ್ರಿಕ್​ ಗೆಲುವುST Somashekhar: ಬಿಜೆಪಿ ಬಿಟ್ಟು ಹೋಗಲ್ಲ; ಫಲಿತಾಂಶದ ಬೆನ್ನಲ್ಲೇ ಎಸ್​​ಟಿಎಸ್​ ಯು ಟರ್ನ್​?ರಾಜಸ್ಥಾನದಲ್ಲಿ ಅಶೊಕ್‌ ಗೆಹ್ಲೋಟ್‌ ಮತ್ತು ಸಚಿನ್ ಪೈಲಟ್ ನಡುವೆ ಮುಸುಕಿನ ಗುದ್ದಾಟ ಇತ್ತು. ಡಿಸಿಎಂ ಸ್ಥಾನ ಒಪ್ಪದೆ ಸಿಎಂ ಸ್ಥಾನಕ್ಕೆ ಸಚಿನ್‌ ಪೈಲಟ್ ಪಟ್ಟು ಹಿಡಿದಿದ್ದರು. ಯುವಮುಖವಾದ ಕಾರಣಕ್ಕೆ ನನ್ನನ್ನೇ ಸಿಎಂ ಮಾಡಿ ಎಂದು ಹಠ ಹಿಡಿದು ಕೂತಿದ್ದರು. ಅಷ್ಟೇ ಅಲ್ಲ, ಒಂದಷ್ಟು ಶಾಸಕರೊಂದಿಗೆ ಪಕ್ಷ ತೊರೆಯುವ ಸುಳಿವನ್ನು ನೀಡಿದ್ದರು ಸಚಿನ್ ಪೈಲಟ್‌. ರೆಬೆಲ್‌ ಆಗೋ ಸುಳಿವು ಸಿಗುತ್ತಲೇ ಹೈಕಮಾಂಡ್ ಅಲರ್ಟ್ ಆಯ್ತು. ದೆಹಲಿಗೆ ಕರೆದು ಪೈಲಟ್‌ ಸಂಧಾನ ಮಾಡಿದ್ದರು. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ನೇತೃತ್ವದಲ್ಲಿ ಸಂಧಾನದ ಬಳಿಕವೂ ತೆರೆಮರೆಯಲ್ಲೇ ಮುನಿಸಿ ಇದ್ದೇ ಇತ್ತು. ಆ ಮುನಿಸಿನಿಂದಲೇ ಇದೀಗ ಅಧಿಕಾರಕ್ಕೆ ಬ್ರೇಕ್‌ ಬಿದ್ದಿದೆ. ಇದನ್ನೂ ಓದಿ: Telangana Election: ಸಿಎಂ ಕೆಸಿಆರ್, ಭಾವಿ ಸಿಎಂ ರೇವಂತ್​ ರೆಡ್ಡಿ ಇಬ್ಬರನ್ನೂ ಸೋಲಿಸಿ ದಿಗ್ವಿಜಯ ಸಾಧಿಸಿದ ಬಿಜೆಪಿ ಅಭ್ಯರ್ಥಿ! ತೆಲಂಗಾಣ ಚುನಾವಣೆಯಲ್ಲಿ ಶಾಕಿಂಗ್ ರಿಸಲ್ಟ್​ಕಮಲ್‌ನಾಥ್‌‌ V/S ಜ್ಯೋತಿರಾದಿತ್ಯ ಸಿಂಧಿಯಾರಾಜಸ್ಥಾನದಂತೆಯೇ ಮಧ್ಯಪ್ರದೇಶದಲ್ಲೂ ಸೀನಿಯರ್‌ V/S ಜೂನಿಯರ್‌ ಫೈಟ್‌. ಅಲ್ಪ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸರ್ಕಾರ ರಚನೆ ಮಾಡಿತ್ತು. ಕಮಲ್‌ನಾಥ್‌ ಸಿಎಂ ಆದ್ರು. ಆದರೆ, ಕಮಲ್‌ನಾಥ್‌ ಹಾಗೂ ಯುವಮುಖ ಜ್ಯೋತಿರಾದಿತ್ಯ ಸಿಂಧಿಯಾ ಮಧ್ಯೆ ಮುನಿಸಿತ್ತು. ಕಮಲ್‌ನಾಥ್‌ ಸಿಎಂ ಸ್ಥಾನಕ್ಕೆ ಸಿಂಧಿಯಾ ಬಹಿರಂಗ ವಿರೋಧ ಇತ್ತು. ಸಚಿನ್ ಪೈಲಟ್‌ರಂತೆಯೇ ಸಿಂಧಿಯಾರನ್ನು ದೆಹಲಿಗೆ ಕರೆಸಿಕೊಂಡು ಸಂಧಾನ ಮಾಡಲಾಯಿತು. ಆದರೆ, ಹೈಕಮಾಂಡ್ ಸಂಧಾನಕ್ಕೆ ಬಗ್ಗದ ಸಿಂಧಿಯಾ ಬಿಜೆಪಿ ಕಡೆ ಮುಖ ಮಾಡಿದರು. ಸಿಂಧಿಯಾ ಜೊತೆ ಗುರುತಿಸಿಕೊಂಡಿದ್ದ ಒಂದಷ್ಟು ಶಾಸಕರು ಆಪರೇಷನ್ ಮೂಲಕ ಬಿಜೆಪಿಗೆ ಹೋದ್ರು, ಕೇಂದ್ರದಲ್ಲಿ ಸಚಿವರಾಗೋ ಮೂಲಕ ಸಿಂಧಿಯಾ ಕೂಡ ಕೈ ಕೊಟ್ಟರು. ಇದರ ಪರಿಣಾಮವಾಗಿ ಒಂದೇ ವರ್ಷದಲ್ಲಿ ಕೈ ಅಧಿಕಾರಕ್ಕೆ ಬ್ರೇಕ್‌ ಬಿತ್ತು, ಬಿಜೆಪಿ ಸರ್ಕಾರ ರಚನೆ ಆಯ್ತು.ಬಘೇಲ್‌ ಸಿಂಗ್ V/S TS ಸಿಂಗ್ ಡಿಯೋಛತ್ತೀಸ್‌ಘಡಲ್ಲಿ ಡಾ. ರಮಣ್‌ಸಿಂಗ್ ಸರ್ಕಾರದ ಪತನದ ಬಳಿಕ ಬಂದಿದ್ದೇ ಕಾಂಗ್ರೆಸ್ ಸರ್ಕಾರ. ಇಲ್ಲಿ ಇಬ್ಬರು ಹಿರಿಯರ ನಡುವೆ ಸಿಎಂ ಪಟ್ಟಕ್ಕಾಗಿ ಆರಂಭದಿಂದಲೇ ಪೈಪೋಟಿ ಇತ್ತು. ಹಿರಿಯರಾದ ಬಘೇಲ್‌ ಸಿಂಗ್ ಹಾಗೂ ಟಿ ಎಸ್‌ ಸಿಂಗ್ ಡಿಯೋ ಮನಸ್ತಾಪ ಮೇಲ್ಪಂಕ್ತಿಯಲ್ಲಿತ್ತು. ಬಘೇಲ್‌ ಸಿಎಂ ಆಗಿದ್ದಕ್ಕೆ ಡಿಯೋ ಕೆಲ ದಿನ ತಟಸ್ಥರಾಗೂ ಉಳಿದಿದ್ದರು. ಆಗ ಹೈಕಮಾಂಡ್‌ ಎರಡೂವರೆ ವರ್ಷಗಳ ಸಿಎಂ ಅಧಿಕಾರ ಹಂಚಿಕೆ ಸೂತ್ರವನ್ನು ಇಬ್ಬರ ಮುಂದೆ ಇಟ್ಟಾಗ ಬಘೇಲ್ ಒಪ್ಪಿದರೂ ಡಿಯೋ ಒಪ್ಪಲಿಲ್ಲ. ಕಡೆಗೆ,ಡಿಸಿಎಂ ಸ್ಥಾನ ಕೊಟ್ಟು ಸಿಂಗ್ ಡಿಯೋ ಮನವೊಲಿಸಿತ್ತು ಹೈಕಮಾಂಡ್‌. ಆದರೂ, ಸೀನಿಯರ್‌‌ಗಳ ಸಿಟ್ಟು, ಕಾರ್ಯಕರ್ತರ ಗೊಂದಲದಿಂದಾಗಿ ಒಂದೇ ಅವಧಿಗೆ ಕೈ ಅಧಿಕಾರಕ್ಕೆ ಬ್ರೇಕ್‌ ಬಿದ್ದಂತಾಗಿದೆ.ಆದರೆ ತೆಲಂಗಾಣದಲ್ಲಿ ಮಾತ್ರ ಅದ್ಭುತ ಜಯ ಸಾಧಿಸಿದೆ. ಬಹುಮತದೊಂದಿಗೆ ಸರ್ಕಾರ ರಚಿಸುವ ಅವಕಾಶ ಬಂದೊದಗಿದೆ. ಇಲ್ಲೂ ಕೂಡ ಸಿಎಂ ಸ್ಥಾನಕ್ಕೆ ಹಲವರ ನಡುವೆ ಪೈಪೋಟಿ ಇದೆ. ಆದರೆ ಹೆಸರಿಲ್ಲದಂತಾಗಿದ್ದ ಪಕ್ಷವನ್ನು ಸಂಘಟನೆ ಮಾಡಿದ್ದು, ಇಲ್ಲಿವರೆಗೆ ತಂದಿದ್ದು ರೇವಂತ್​ ರೆಡ್ಡಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಪಕ್ಷ ರೇವಂತ್​ ರೆಡ್ಡಿಗೆ ಸಿಎಂ ಪಟ್ಟ ಕಟ್ಟುವ ಎಲ್ಲಾ ಲಕ್ಷಣಗಳಿವೆ. ಇಲ್ಲೂ ಹಿರಿಯ-ಕಿರಿಯ, ವಲಸಿಗ -ಮೂಲ ಎಂದು ಕಿತ್ತಾಡಿಕೊಂಡರೆ ಕಾಂಗ್ರೆಸ್​ಗೆ ಕಷ್ಟ ತಪ್ಪಿದ್ದಲ್ಲ ಎನ್ನಲಾಗುತ್ತಿದೆ.

Post a Comment

Previous Post Next Post