ಪ್ರಧಾನಿ ನರೇಂದ್ರ ಮೋದಿ
ನನ್ನ ಪ್ರಕಾರ ದೇಶದಲ್ಲಿ ಇರುವುದು ನಾಲ್ಕೇ ನಾಲ್ಕು ಜಾತಿ, ಅವು ಯಾವುದು ಎಂದರೆ ನಾರಿಶಕ್ತಿ, ಯುವಶಕ್ತಿ, ಬಡ ಕುಟುಂಬ ಶಕ್ತಿ ಮತ್ತು ರೈತ ಶಕ್ತಿ” ಅಂತ ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ನವದೆಹಲಿ: ಪಂಚರಾಜ್ಯಗಳ ವಿಧಾನಸಭಾ ಚುನಾವಣೆ (five states assembly elections) ಪೈಕಿ 3 ರಾಜ್ಯಗಳನ್ನು ಗೆದ್ದಿರುವ ಬಿಜೆಪಿಯ (BJP) ಸಂಭ್ರಮ ಮುಗಿಲು ಮುಟ್ಟಿದೆ. ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ನವದೆಹಲಿಯಲ್ಲಿರುವ (New Delhi) ಬಿಜೆಪಿ ಕೇಂದ್ರ ಕಚೇರಿಯಲ್ಲೂ (BJP headquarters) ವಿಜಯೋತ್ಸವ ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi), ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah), ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ (BJP National President) ಜೆ.ಪಿ. ನಡ್ಡಾ (JP Nadda) ಸೇರಿದಂತೆ ಪ್ರಮುಖರು ಭಾಗಿಯಾಗಿದ್ದಾರು. ವೇದಿಕೆ ಮೇಲಿ ಮಾತನಾಡಿದ ನರೇಂದ್ರ ಮೋದಿ, “ಜಾತಿ ವ್ಯವಸ್ಥೆಯಿಂದಾಗಿ (caste system) ದೇಶವನ್ನು ವಿಭಜಿಸೋ ಯತ್ನ ಮಾಡಲಾಗುತ್ತಿದೆ” ಅಂತ ವಿಷಾದ ವ್ಯಕ್ತಪಡಿಸಿದ್ದಾರೆ. “ನನ್ನ ಪ್ರಕಾರ ದೇಶದಲ್ಲಿ ಇರುವುದು ನಾಲ್ಕೇ ನಾಲ್ಕು ಜಾತಿ, ಅವು ಯಾವುದು ಎಂದರೆ ನಾರಿಶಕ್ತಿ, ಯುವಶಕ್ತಿ, ಬಡ ಕುಟುಂಬ ಶಕ್ತಿ ಮತ್ತು ರೈತ ಶಕ್ತಿ” ಅಂತ ಪ್ರಧಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ನನ್ನ ಪ್ರಕಾರ ದೇಶದಲ್ಲಿರೋದು ನಾಲ್ಕೇ ಜಾತಿಸಂಬಂಧಿತ ಸುದ್ದಿ40 ವರ್ಷ, 14 ಚುನಾವಣೆಗಳ ಬಳಿಕ ಮೊದಲ ಸೋಲುಕಂಡ ಕೆಸಿಆರ್! ಬಿಜೆಪಿ ಅಭ್ಯರ್ಥಿ ವಿರುದ್ಧ ಪರಾಜಯಕೆಟಿಆರ್-ಕೆಸಿಆರ್ ಸಾಯೋವರೆಗೂ ನನ್ನ ನೆನಪಿಸಿಕೊಳ್ಳುವಂತೆ ಮಾಡ್ತೀನಿ? ಸವಾಲ್ ಹಾಕಿ ಗೆದ್ದ ಬಿಜೆಪಿ ಲೀಡರ್ಓವೈಸಿ ಕ್ಷೇತ್ರದಲ್ಲಿ ಬಿಜೆಪಿ ರಾಜಾ ಸಿಂಗ್ ದಾಖಲೆ! ಹಿಂದೂ ಫೈರ್ ಬ್ರ್ಯಾಂಡ್ಗೆ ಹ್ಯಾಟ್ರಿಕ್ ಗೆಲುವು3 ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ, ಸಂಸತ್ ಕಲಾಪದಲ್ಲಿ ಮೋದಿ ಮೋದಿ ಘೋಷಣೆ ಕೂಗಿದ ಕಮಲ ಸಂಸದರುಹೀಗಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೇಶವನ್ನು ಜಾತಿಯ ಆಧಾರದ ಮೇಲೆ ವಿಭಜಿಸಲು ಹಲವಾರು ಪ್ರಯತ್ನಗಳನ್ನು ಮಾಡಲಾಗಿದೆ ಅಂತ ವಿರೋಧ ಪಕ್ಷಗಳಿಗೆ ಟಾಂಗ್ ಕೊಟ್ಟ ಪ್ರಧಾನಿ, ದೇಶದಲ್ಲಿ ಮಹಿಳೆಯರು, ಯುವಕರು, ಬಡವರು ಮತ್ತು ರೈತರು ಮಾತ್ರ ಜಾತಿಗಳಾಗಿವೆ ಎಂದಿದ್ದಾರೆ. ಈ ನಾಲ್ಕು ಜಾತಿಗಳ ಸಬಲೀಕರಣ, ಅಭಿವೃದ್ಧಿಗೆ ಕೇಂದ್ರ ಸರ್ಕಾರ ಒತ್ತು ಕೊಡುತ್ತಿದೆ ಎಂದಿದ್ದಾರೆ.ಮತದಾರ ತಾನೇ ಗೆದ್ದ ಖುಷಿಯಲ್ಲಿದ್ದಾನೆಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಸಂತಸ ವ್ಯಕ್ತಪಡಿಸಿದ ಅವರು, ಇಂದು ಪ್ರತಿ ಪ್ರಥಮ ಬಾರಿಗೆ ಮತದಾನ ಮಾಡಿರುವ ಮತದಾರ ನಾನೇ ಗೆದ್ದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಈ ಗೆಲುವಿನಲ್ಲಿ ಪ್ರತಿಯೊಬ್ಬ ಮಹಿಳೆಯೂ ತನ್ನ ಗೆಲುವನ್ನು ಕಾಣುತ್ತಿದ್ದಾಳೆ. ಈ ಗೆಲುವಿನಲ್ಲಿ ಉತ್ತಮ ಭವಿಷ್ಯದ ಕನಸು ಕಾಣುವ ಪ್ರತಿಯೊಬ್ಬ ಯುವಕನೂ ತನ್ನ ಗೆಲುವನ್ನು ಕಾಣುತ್ತಿದ್ದಾನೆ ಅಂತ ಶ್ಲಾಘಿಸಿದರು.: ಇದನ್ನೂ ಓದಿ: Assembly Elections Results 2023: ಮಧ್ಯಪ್ರದೇಶದಲ್ಲಿ ಮತ್ತೆ ‘ಮಾಮಾ’ ಮ್ಯಾಜಿಕ್! ಸೋಲಿನ ಲೆಕ್ಕದಿಂದ ದಾಖಲೆ ಗೆಲುವು ಸಿಕ್ಕಿದ್ದು ಹೇಗೆ?ಇದು ಪ್ರತಿಯೊಬ್ಬ ನಾಗರಿಕನ ಯಶಸ್ಸುಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ನೋಡಲು ಬಯಸುವ ಪ್ರತಿಯೊಬ್ಬ ನಾಗರಿಕನು ಅದನ್ನು ಯಶಸ್ಸು ಎಂದು ಪರಿಗಣಿಸುತ್ತಾನೆ. ಇಂದು ಪ್ರತಿಯೊಬ್ಬ ಬಡವನೂ ಸ್ವಂತವಾಗಿ ಬದುಕುತ್ತೇನೆ ಎಂದು ಹೇಳುತ್ತಿದ್ದಾರೆ ಅಂತ ಪ್ರಧಾನಿ ಹೇಳಿದ್ರು.ಮಹಿಳಾ ಶಕ್ತಿಯ ಅಭಿವೃದ್ಧಿ ಬಿಜೆಪಿಯ ಅಭಿವೃದ್ಧಿ ಮಾದರಿಯ ಮುಖ್ಯ ಆಧಾರವಾಗಿದೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಮಹಿಳೆಯರು, ಸಹೋದರಿಯರು, ಹೆಣ್ಣು ಮಕ್ಕಳು ಸಾಕಷ್ಟು ಆಶೀರ್ವಾದ ಮಾಡಿದ್ದಾರೆ ಅಂತ ಮೋದಿ ಹೇಳಿದ್ದಾರೆ.ಭರವಸೆಗಳು 100 ಪರ್ಸೆಂಟ್ ಈಡೇರಿಸುತ್ತೇವೆಇಂದು ನಾನು ದೇಶದ ಪ್ರತಿಯೊಬ್ಬ ಸಹೋದರಿ ಮತ್ತು ಮಗಳಿಗೆ ವಿನಮ್ರವಾಗಿ ಹೇಳುತ್ತೇನೆ, ಬಿಜೆಪಿ ನಿಮಗೆ ನೀಡಿದ ಭರವಸೆಗಳನ್ನು 100 ಪರ್ಸೆಂಟ್ ಈಡೇರಿಸುತ್ತೇವೆ ಮತ್ತು ಇದು ಮೋದಿಯವರ ಭರವಸೆ ಅಂತ ಪ್ರಧಾನಿ ಹೇಳಿದ್ರು.ಬಿಜೆಪಿ ಸರ್ಕಾರದ ಬಗ್ಗೆ ಯುವಕರಿಗೆ ಗೊತ್ತಿದೆಇಂದು ಬಿಜೆಪಿ ಮಾತ್ರ ಅವರ ಆಕಾಂಕ್ಷೆಗಳನ್ನು ಅರಿತು ಕೆಲಸ ಮಾಡುತ್ತದೆ ಎಂಬ ವಿಶ್ವಾಸ ದೇಶದ ಯುವಕರಲ್ಲಿ ನಿರಂತರವಾಗಿ ಹೆಚ್ಚುತ್ತಿದೆ. ಬಿಜೆಪಿ ಸರ್ಕಾರ ಯುವ ಸ್ನೇಹಿ ಮತ್ತು ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ಹೊರಟಿದೆ ಎಂಬುದು ದೇಶದ ಯುವಕರಿಗೆ ತಿಳಿದಿದೆ.2024ರ ವೀಕ್ಷಿತ್ ಭಾರತ್ ಗೆಲುವುಇಂದು ಬಡವರು, ರೈತರು, ಹಿಂದುಳಿದವರ ದನಿಯೇ ‘ನಾನು ಗೆದ್ದೆ’ ಎಂದು ಹೇಳುತ್ತಿದೆ ಈ ಗೆಲುವು ಅವರ ವೈಯಕ್ತಿಕ. ಈ ಗೆಲುವು 2024 ರಲ್ಲಿ ‘ವಿಕ್ಷಿತ್ ಭಾರತ್’ ಅನ್ನು ನೋಡಲು ಬಯಸುವ ಪ್ರತಿಯೊಬ್ಬ ವ್ಯಕ್ತಿಗೂ ಸೇರಿದೆ ಅಂತ ಮೋದಿ ವಿಶ್ವಾಸದ ಮಾತುಗಳನ್ನು ಆಡಿದರು.

Post a Comment