ಛತ್ತೀಸ್‌ಗಢದಲ್ಲಿ ನರೇಂದ್ರ ಮೋದಿ
ರ‍್ಯಾಲಿ ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಸಭೆಯಲ್ಲಿ ಭಾಹವಹಿಸಿದ್ದ ಪುಟ್ಟ ಬಾಲಕಿಯೊಬ್ಬಳು ತಮ್ಮದೇ ರೇಖಾಚಿತ್ರವನ್ನು ಹಿಡಿದಿರುವುದನ್ನು ಗಮನಿಸಿದ ಪ್ರಧಾನಿ ಮೋದಿ, ಅದನ್ನು ತನ್ನ ಬಳಿಗೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಛತ್ತೀಸ್‌ಗಢ: ಪಂಚರಾಜ್ಯ ಚುನಾವಣೆ (Five States Election) ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸ್‌ಗಢದಲ್ಲಿ (Chhattisgarh) ಗುರುವಾರ ಚುನಾವಣಾ ರ‍್ಯಾಲಿ (Election Rally) ನಡೆಸಿದ್ದಾರೆ. ಈ ವೇಳೆ ರ್ಯಾಲಿ ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಸಭೆಯಲ್ಲಿ ಭಾಹವಹಿಸಿದ್ದ ಪುಟ್ಟ ಬಾಲಕಿಯೊಬ್ಬಳು ತಮ್ಮದೇ ರೇಖಾಚಿತ್ರವನ್ನು ಹಿಡಿದಿರುವುದನ್ನು ಗಮನಿಸಿದ ಪ್ರಧಾನಿ ಮೋದಿ, ಅದನ್ನು ತನ್ನ ಬಳಿಗೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆಆ ಬಾಲಕಿಗೆ ತನ್ನ ವಿಳಾಸವನ್ನು ಚಿತ್ರಪಟದ ಮೇಲೆ ಬರೆಯುವಂತೆ ಹೇಳಿದರು. ಅಲ್ಲದೆ ಆ ಬಾಲಕಿಗೆ ಪ್ರತಿಯಾಗಿ ಪತ್ರ ಬರೆಯುವುದಾಗಿ ಭರವಸೆ ನೀಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಬೃಹತ್ ಸಮಾವೇಶದಲ್ಲಿ ಬಾಲಕಿ ಗುರುತಿಸಿದ ಮೋದಿಕನ್ನಡ ರಾಜ್ಯೋತ್ಸವಕ್ಕೆ ಶುಭಾಶಯ ತಿಳಿಸಿದ ಪ್ರಧಾನಿ, ಏನ್ ಹೇಳಿದ್ರು ಗೊತ್ತಾ ಮೋದಿ?
ಉದ್ಯಮಿಗೆ ಲಾಗಿನ್ ಐಡಿ- ಪಾಸ್ವರ್ಡ್ ನೀಡಿದ್ದನ್ನು ಒಪ್ಪಿಕೊಂಡ ಮೊಯಿತ್ರಾ! ಉಡುಗೊರೆ ಪಡೆದಿದ್ದು ನಿಜವಂತೆ
ಇದೇ ಕಾರಣದಿಂದಾಗಿ ಭಾರೀ ಸಂಖ್ಯೆಯಲ್ಲಿ ಬಾಕಿ ಉಳಿದಿದೆ ವೀಸಾ ಪ್ರಕ್ರಿಯೆ!
India Mobile Congress 2023: ಕಳೆದ ವರ್ಷದಿಂದ ದೇಶದಲ್ಲಿ ಇಂಟರ್ನೆಟ್ ವೇಗ ಮೂರು ಪಟ್ಟು ಹೆಚ್ಚಾಗಿದೆ
ವೇದಿಕೆಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ ಬಾಲಕಿಯನ್ನ ಗಮನಿಸಿ, " ಮಗಳೇ, ನಾನು ನೀನು ಹಿಡಿದಿರುವ ಚಿತ್ರವನ್ನು ನೋಡಿದ್ದೇನೆ. ನೀನು ಅದ್ಭುತವಾದ ಕೆಲಸ ಮಾಡಿದ್ದೀಯಾ. ನಾನು ನಿನ್ನನ್ನು ಆಶೀರ್ವದಿಸುತ್ತೇನೆ. ಆದರೆ ನೀನು ಎಷ್ಟು ಸಮಯ ನಿಂತಿರುತ್ತೀಯಾ, ಸುಸ್ತಾಗಬಹುದು ಕುಳಿತುಕೊ “ಎಂದು ಹೇಳಿದ್ದಾರೆ.ಪತ್ರ ಬರೆಯುವುದಾಗಿ ಭರವಸೆಇದಾದ ನಂತರ ಅಲ್ಲಿ ನೆರೆದಿದ್ದ ಪೊಲೀಸರ ಕಡೆಗೆ ಕೈ ತೋರಿಸಿದ ಪ್ರಧಾನಿ ಮೋದಿ, " ಆ ಮಗುವಿನ ಬಳಿ ಇರುವ ಚಿತ್ರವನ್ನು ತೆಗೆದುಕೊಂಡು ಬರಲು ಸೂಚಿಸಿದ್ದಾರೆ. ಆಕೆ ಅದನ್ನು ನನಗೆ ಕೊಡಲು ತಂದಿದ್ದಾಳೆ ಎಂದು ನಾನು ನಂಬುತ್ತೇನೆ. ಧನ್ಯವಾದಗಳು ಬೇಟಿ, ಆ ಚಿತ್ರದಲ್ಲಿ ನಿನ್ನ ವಿಳಾಸವನ್ನು ಬರೆದು ಕಳಿಹಿಸು, ನಾನು ಖಂಡಿತವಾಗಿ ನಿನಗೆ ಪತ್ರ ಬರೆಯುತ್ತೇನೆ” ಎಂದು ತಿಳಿಸಿದ್ದಾರೆ
ಇದನ್ನೂ ಓದಿ: Rakshitha Raju: ಪ್ರಧಾನಿ ಮೋದಿಗೆ ಅತ್ಯಂತ ಅಮೂಲ್ಯ ಉಡುಗೊರೆ ನೀಡಿದ ಮೂಡಿಗೆರೆಯ ಪ್ರತಿಭೆ!ಕಾಂಗ್ರೆಸ್ ವಿರುದ್ಧ ವಾಗ್ದಾಳಿಇದಾದ ಬಳಿಕ ಅಲ್ಲಿ ನೆರೆದಿದ್ದ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ನೀವು ನೋಡಿದ್ದೀರಿ, ಈ ಐದು ವರ್ಷಗಳಲ್ಲಿ ಕಾಂಗ್ರೆಸ್ ನಾಯಕರ ಮನೆ, ಮಹಲು, ವಾಹನಗಳು ಮಾತ್ರ ಅಭಿವೃದ್ಧಿ ಕಂಡಿವೆ ಹೊರೆತು, ರಾಜ್ಯದ ಅಭಿವೃದ್ಧಿಯಾಗಿಲ್ಲ ಎಂದರು.ಛತ್ತೀಸ್‌ಗಢದಲ್ಲಿ ಬಿಜೆಪಿಯ ಅಲೆಕಾಂಗ್ರೆಸ್ ಸರ್ಕಾರ ದೆಹಲಿಯಲ್ಲಿದ್ದಾಗ ಛತ್ತೀಸ್‌ಗಢ ರಾಜ್ಯವನ್ನು ಕಡೆಗಣಿಸಿತ್ತು, ಆದರೆ ಛತ್ತೀಸ್‌ಗಢದ ಅಭಿವೃದ್ಧಿಗೆ ನಾವು ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಬಿಜೆಪಿ ಯಾವಾಗಲೂ ಛತ್ತೀಸ್‌ಗಢದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಪ್ರತಿಯೊಬ್ಬ ಬಡ, ಬುಡಕಟ್ಟು ಮತ್ತು ಹಿಂದುಳಿದ ವರ್ಗವನ್ನು ರಕ್ಷಿಸಲು ಬಿಜೆಪಿ ಬದ್ಧವಾಗಿದೆ. ಛತ್ತೀಸ್‌ಗಢದಲ್ಲಿ ಬಿಜೆಪಿಗೆ ಅಲೆ ಎದಿದ್ದೆ, ಅದರ ಒಂದು ನೋಟ ಇಂದು ಕಂಕೇರ್‌ನಲ್ಲಿಯೂ ಗೋಚರಿಸುತ್ತಿದೆ ಎಂದರು. " ಕಾಂಗ್ರೆಸ್ ನಿಮಗೆ ಅನಾರೋಗ್ಯ ಮತ್ತು ಶಿಥಿಲವಾದ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನೀಡಿದೆ. ಕಾಂಗ್ರೆಸ್ ಸರ್ಕಾರಿ ಕಚೇರಿಗಳಲ್ಲಿ ಲಂಚದ ಹೊಸ ದಾಖಲೆಯನ್ನು ಸೃಷ್ಟಿಸಿದೆ. ನಾನು ಇಂದು ನಿಮಗೆ ಭರವಸೆ ನೀಡುತ್ತೇನೆ, ಇದು ಮೋದಿಯವರ ಗ್ಯಾರಂಟಿ. ಬಿಜೆಪಿ ಸರ್ಕಾರ ರಚನೆಯಾಗುತ್ತಿದ್ದಂತೆ ಛತ್ತೀಸ್‌ಗಢದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಕಾರ್ಯವನ್ನು ಮತ್ತಷ್ಟು ವೇಗಗೊಳಿಸಲಾಗುವುದು" ಎಂದರು.
Post a Comment