Karnataka Politics: ಗ್ಯಾರಂಟಿ ಯೋಜನೆಗಳ ವಿರುದ್ಧ ರಂಭಾಪುರಿ ಶ್ರೀಗಳ ಪರೋಕ್ಷ ಆಕ್ರೋಶ! ಹೌದು ಗದಗ ಜಿಲ್ಲೆ ಲಕ್ಷ್ಮೇಶ್ವರದ ಮುಕ್ತಿಮಂದಿರದ ಕಾರ್ಯಕ್ರಮದ ಭಾಷಣದಲ್ಲಿ ಈ ಬಗ್ಗೆ ಮಾತನಾಡಿದ ಬಾಳೆಹೊನ್ನೂರಿನ ಪೀಠದ ಶ್ರೀಮದ್ ರಂಭಾಪುರಿ ಡಾ. ವೀರಸೋಮೇಶ್ವರ ಶ್ರೀಗಳು ಜನರಿಗೆ ಅತೀ ಹೆಚ್ಚು ಸೌಕರ್ಯ ಕಲ್ಪಿಸಿ ಸೋಮಾರಿ ಮಾಡಬೇಡಿ ಎಂದಿದ್ದಾರೆ.


 ಸಿಎಂ ಸಿದ್ದರಾಮಯ್ಯ

ಗದಗ(ನ.03): ಅಧಿಕಾರಕ್ಕೇರಿದಾಗಿನಿಂದಲೂ ರಾಜ್ಯ ಸರ್ಕಾರ ಒಂದಾದ ಬಳಿಕ ಮತ್ತೊಂದು ವಿಚಾರಕ್ಕೆ ಸಂಬಂಧಿಸಿದಂತೆ ಸದ್ದು ಮಾಡುತ್ತಲೇ ಇದೆ. ಆರಂಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ವಿಳಂಬ ವಿಚಾರವಾಗಿ ಸಿದ್ದು ಸರ್ಕಾರದ ವಿರುದ್ಧ ಅನೇಕರು ಕಿಡಿ ಕಾಋಇದ್ದರು. ಇದಾದ ಬಳಿಕ ಪಕ್ಷದೊಳಗಿನ ಶೀತಲ ಸಮರ ಹಾಗೂ ಬಣ ರಾಜಕೀಯವೂ ಸದ್ದು ಮಾಡಿತ್ತು. ಸದ್ಯ ಸಿಎಂ ಬದಲಾವಣೆ ಬಗೆಗಿನ ಮಾತುಗಳು ಜೋರಾಗುತ್ತಿದ್ದು, ಈ ನಡುವೆಯೇ ಗ್ಯಾರಂಟಿ ಯೋಜನೆಗಳ ವಿರುದ್ಧ ರಂಭಾಪುರಿ ಶ್ರೀಗಳು ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹೌದು ಗದಗ ಜಿಲ್ಲೆ ಲಕ್ಷ್ಮೇಶ್ವರದ ಮುಕ್ತಿಮಂದಿರದ ಕಾರ್ಯಕ್ರಮದ ಭಾಷಣದಲ್ಲಿ ಈ ಬಗ್ಗೆ ಮಾತನಾಡಿದ ಬಾಳೆಹೊನ್ನೂರಿನ ಪೀಠದ ಶ್ರೀಮದ್ ರಂಭಾಪುರಿ ಡಾ. ವೀರಸೋಮೇಶ್ವರ ಶ್ರೀಗಳು ಜನರಿಗೆ ಅತೀ ಹೆಚ್ಚು ಸೌಕರ್ಯ ಕಲ್ಪಿಸಿ ಸೋಮಾರಿ ಮಾಡಬೇಡಿ ಎಂದಿದ್ದಾರೆ. ಅಲ್ಲದೇ ಸೌಲಭ್ಯಗಳಿಗೆ ಅನುದಾನ ಕೊಡದೇ ಇರುವ ಕಾರಣ ಅಭಿವೃದ್ಧಿ ಕುಂಠಿತವಾಗಿದೆ. ಮುಂದಿನ ದಿನಗಳಲ್ಲಿ ಯೋಚನೆ ಮಾಡಿ ಎಷ್ಟು ಕೊಡಬೇಕು ಕೊಟ್ಟು ಜನ್ರಿಗೆ ಅನುವಾಗುವಂತೆ ಮಾಡಬೇಕು. ಕೆಲಸ ಮಾಡುವಂತಹ ಪ್ರವೃತ್ತಿ ಬೆಳೆಸಿರಿ ಎಂದು ಕಿವಿ ಮಾತು ಹೇಳಿದ್ದಾರೆ.ಇದೇ ಸಂದರ್ಭದಲ್ಲಿ ಬಸವಣ್ಣನವರ ವಚನ ಉಲ್ಲೇಖಿಸಿದ ಶ್ರೀಗಳು ಕಾಯಕವೇ ಕೈಲಾಸ ಅಂತಾ ಬಸವಣ್ಣನವರು ಹೇಳಿದ್ದಾರೆ. ಶ್ರಮವಿಲ್ಲದ, ದುಡ್ಡಿಮೆ ಇಲ್ಲದ ಸಂಪತ್ತು ಬಯಸಿ ಕೆಲವು ಜನರಿಂದ ರಾಜ್ಯದ ಅಭಿವೃದ್ಧಿ ಕಾರ್ಯ ಕುಂಠಿತವಾಗಿವೆ. ಇಂತಹ ಸಂದರ್ಭದಲ್ಲಿ ನಮ್ಮನ್ನು ಆಳುವ ರಾಜಕಾರಣಿಗಳು ಯಾರೆ ಇರಲಿ..ಪೂರಪರ ಯೋಚನೆ ಮಾಡಲಿ ಎಂದಿದ್ದಾರೆ.ಮುಂದುವರೆಸಿ ಮಾತನಾಡಿದ ಅವರು ಕೇವಲ ಕೆಲವೇ ಜಾತಿ,ಜನಾಂಗಗಳಿಗೆ ಅಷ್ಟೇ ಸವಲತ್ತುಗಳನ್ನು ಕೊಡದೆ ಬಡತನ ರೇಖೆಗಿಂತ ಕಡಿಮೆ ಯಾರು ಇದ್ದಾರೆ ಅವರೆಲ್ಲರಿಗೂ ನೀಡಬೇಕು. ಅವರಿಗೆ ದೇವರು ಬಡತನ, ಶ್ರೀಮಂತರಾಗಿ ಅಂತಾ ಬರೆದು ಕಳುಹಿಸಿಲ್ಲ. ಉನ್ನತ ಜಾತಿಯಲ್ಲಿ ಹುಟ್ಟಿದ್ದರು ಕೂಡಾ ಎಷ್ಟೋ ಜನ್ರಿಗೆ ತಿನ್ನಲು ಅನ್ನವಿಲ್ಲ..ಇರಲು ಮನೆಯಿಲ್ಲ. ಮುಂದುವರಿದ ಜನಾಂಗದಲ್ಲಿ ಹುಟ್ಟಿದ್ದಾರೆ ಎನ್ನುವ ಕಾರಣಕ್ಕೆ ಸರ್ಕಾರದ ಸವಲತ್ತುಗಳಿಂದ ವಂಚಿತರನ್ನಾಗಿ ಮಾಡೋದು ಬೇಡ ಎಂದಿದ್ದಾರೆ.ಕಾಂಗ್ರೆಸ್​ಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಅವರು ರಅಜ್ಯವನ್ನು ಆಳುವ ಯಾವುದೇ ಪಕ್ಷ ಆಗಿರಬಹುದು. ರಾಜಕಾರಣಿಗಳು ಆಗಿರಬಹುದು ಎಲ್ಲರನ್ನೂ ಸಮಾನ ದೃಷ್ಟಿಯಿಂದ ಕಂಡು, ಆ ಸಮಸ್ಯೆ ಪರಿಹಾರ ಮಾಡಲಿಕ್ಕೆ ಪ್ರಮಾಣಿಕ ಪ್ರಯತ್ನ ಮಾಡಿದರೆ ಜಾತಿ ಜಾತಿಗಳ, ಧರ್ಮ- ಧರ್ಮಗಳ ನಡುವೆ ನಡೆದಿರುವ ಸಂಘರ್ಷಕ್ಕೆ ತೆರೆ ಎಳೆಯ;ಉ ಸಾಧ್ಯ ಎಂದು ಸೂಚನೆ ನೀಡುತ್ತೇನೆ ಎಂದಿದ್ದಾರೆ.

Post a Comment

Previous Post Next Post