Bengaluru: ಪ್ರೇಯಸಿ ಜೊತೆ ಸೇರಿ ಕೋಟಿ ಲೂಟಿ; ದೋಚಿದ ಹಣ ಅನಾಥಶ್ರಮಕ್ಕೂ ದಾನ! ಕೊನೆಗೆ ಖಾಕಿ ಕೈಲಿ ಲಾಕ್


 ಬಂಧಿತ ಆರೋಪಿಗಳು
 ಕಂತೆ ಕಂತೆ ಹಣ ನೋಡಿದರೆ ಯಾರ್‌ ತಾನೇ ಬಿಡ್ತಾರೆ. ಅಡಿಕೆ ವ್ಯಾಪಾರಿಯೊಬ್ಬನ ಕೋಟಿ ಹಣವನ್ನು ಬಹಳ ಸಲೀಸಾಗಿಯೇ ಲಪಾಟಾಯಿಸಿ ಬಿಟ್ಟಿದ್ದರು. ಇಲ್ಲಿ ಆಪರೇಷನ್ ಕೋಟಿ ಲೂಟಿ ಸಕ್ಸಸ್ ಆಗಿತ್ತು. ಆದರೆ ಕೇಸ್ ಆದ್ಮೇಲೆ ಇವರನ್ನ ಹಿಡಿಯೋದು ಸಖತ್ ಈಸಿಯಾಗಿತ್ತು. ಅದ್ಯಾಗೆ ಅಂತ ಹೇಳ್ತೀವಿ ಈ ಸ್ಟೋರಿ ಓದಿ.
ಬೆಂಗಳೂರು: ಅಂದು ಅಕ್ಟೋಬರ್ 7. ಚಿತ್ರದುರ್ಗದ (Chitradurga)  ಅಡಿಕೆ ಮಂಡಿಯ ಮಾಲೀಕ ಉಮೇಶ್ ಎಂಬಾತ ಅಡಿಕೆ ಖರೀದಿಗೆಂದು ತನ್ನ‌ ಕಾರು ಚಾಲಕ (Car driver**) ಸ್ವಾಮಿ ಎಂಬಾತನ ಜೊತೆ ಒಂದು ಕೋಟಿ ರೂಪಾಯಿ ಹಣದೊಂದಿಗೆ (Money) ತುಮಕೂರಿಗೆ (Tumakuru) ಬಂದಿದ್ದ. ಆದರೆ ಅಡಿಕೆ ಸಿಗದ ಕಾರಣಕ್ಕೆ ನೇರವಾಗಿ ಬೆಂಗಳೂರಿಗೆ (Bengaluru) ಬಂದಿದ್ದು, ಚಂದ್ರಲೇಔಟ್‌‌ನ (Chandra Layout) ಪಿಜಿಯಲ್ಲಿರೋ ಮಗಳನ್ನ ಮಾತನಾಡಿಸಿ ವಾಪಸ್ ಹೊರಟಿದರು‌.**
ದಾಬಸ್ ಪೇಟೆ ಸಮೀಪದ ಡಾಬಾ ಬಳಿ ಚಾಲಕ ಸ್ವಾಮಿ ಮತ್ತು ಮಾಲೀಕ ಉಮೇಶ್ ಇಬ್ಬರು ಊಟ ಮಾಡಿದರು. ನಂತರ ಚಿತ್ರದುರ್ಗಕ್ಕೆ ತೆರಳಿ ಮಂಡಿ ಬಳಿ ಕಾರಿನ ಡಿಕ್ಕಿ ತೆರೆದು ನೋಡಿದರೆ ಡಿಕ್ಕಿಯಲ್ಲಿ ಹಣವಿದ್ದ ಬ್ಯಾಗ್ ನಾಪತ್ತೆಯಾಗಿತ್ತು. ಹೀಗಾಗಿ ಡ್ರೈವರ್ ಮೇಲೆ‌ ಅನುಮಾನ ಬಂದು ಉಪ್ಪಾರಪೇಟೆ ಸ್ಟೇಷನ್‌‌ನಲ್ಲಿ ದೂರು ದಾಖಲಿಸಿದ್ದರು.
ಈ ಮೂರು ಮ್ಯೂಚುವಲ್ ಫಂಡ್‌ಗಳಲ್ಲಿ 1 ಲಕ್ಷ ಹೂಡಿಕೆ ಮಾಡಿದ್ರೆ ಸಾಕು, 5 ಲಕ್ಷ ನಿಮ್ಮ ಕೈ ಸೇರುತ್ತೆ
Hassan: ಮಾವನನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದ ಅಳಿಯ
ನಿವೃತ್ತಿಯ ನಂತರ ತಿಂಗಳಿಗೆ 1 ಲಕ್ಷ ಆದಾಯವನ್ನು ಗಳಿಸೋದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಕಡಿಮೆ ಹೂಡಿಕೆಯೊಂದಿಗೆ ಈ ಬ್ಯುಸಿನೆಸ್‌ ಆರಂಭಿಸಿ, ಅಧಿಕ ಲಾಭ ಪಡೆಯಿರಿ!
ಡ್ಯೂಪ್ಲಿಕೇಟ್ ಕೀ ಮಾಡಿಸಿ ಪ್ರೇಯಸಿಗೆ ಕೊಟ್ಟಿದ್ದ ಚಾಲಕ!
ಅಂದಹಾಗೇ ಚಾಲಕ ಪ್ರೇಯಸಿ ಜೊತೆ ಸೇರಿ ಭರ್ಜರಿ ಪ್ಲಾನ್ ಮಾಡಿದ್ದ. ತನ್ನ ಮಾಲೀಕನ ಬಳಿ ಹಣ ಎಗರಿಸಬೇಕು ಅಂತ ಮೊದಲೇ‌ ಮಹದೇವಪುರಲ್ಲಿದ್ದ ಬ್ಯೂಟಿ‌ ಪಾರ್ಲರ್ ನಡೆಸ್ತಿದ್ದ ಪ್ರೇಯಸಿ‌ ಜೊತೆ ಪ್ಲ್ಯಾನ್ ಮಾಡಿ ಕಾರಿನ ಸ್ಟೇರಿಂಗ್ ಕೆಳಗೆ GPS ಅಳವಡಿಸಿದ್ದ.‌ ನಂತರ 3 ನಕಲಿ ಕೀಗಳನ್ನು‌ ಮಾಡಿಸಿ ಪ್ರೇಯಸಿಗೆ ಕೊಟ್ಟಿದ್ದ.
ಇದನ್ನೂ ಓದಿ: Zika Virus: ಡೇಂಘಿ ಸೈಲೆಂಟ್​​ ಆಗ್ತಿದ್ದಂತೆ ಜಿಕಾ ನಡುಕ; ಆರೋಗ್ಯ ಇಲಾಖೆಯಿಂದ ಜಿಕಾ ವೈರಸ್ ಮಾರ್ಗಸೂಚಿ ಬಿಡುಗಡೆ
 ಅದರಂತೆ ಪ್ರೇಯಸಿ ತನಗೆ ಪರಿಚಯವಿದ್ದ ಪವನ್, ಕಾರ್ತಿಕ್ ಜೊತೆ ಫ್ಲಾನ್ ಬಗ್ಗೆ ಮಾತಾಡಿ ಗ್ರೂಪ್‌ಗೆ ಸೇರಿಸಿಕೊಳ್ತಾಳೆ. ಇತ್ತ ಒಂದು ಕೋಟಿ ಜೊತೆ ಯಾವಾಗ ಬೆಂಗಳೂರಿಗೆ ಬರ್ತಾ ಇರುವ ಬಗ್ಗೆ ಡ್ರೈವರ್ ಹೇಳ್ತಾನೋ ಆಗಲೇ ಕಾರ್ತಿಕ್, ಪವನ್ ಬೈಕ್ ತಗೊಂಡು ರೆಡಿಯಾಗ್ತಾರೆ. ಬೆಂಗಳೂರು ಬಂದು ವಾಪಸ್ ಆಗುವಾಗ ಫ್ಲಾನ್‌ನಂತೆ ಫಾಲೋ ಮಾಡಿ ಡಾಬಾ ಬಳಿ ನಿಲ್ಲಿಸಿದಾಗ ನಕಲಿ ಕೀ ಬಳಸಿ ಹಣ ಎಗರಿಸಿದ್ದಾರೆ.
ಒಂದು ಕೋಟಿ ಹಣ ಬೆನ್ನತ್ತಿದ ಪೊಲೀಸರು
ಇನ್ನು ಪೊಲೀಸರು ಕಾರು ಚಾಲಕ ಸ್ವಾಮಿನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಆರೋಪಿ ದರೋಡೆ ಪ್ಲ್ಯಾನ್‌‌ ಇಂಚಿಂಚು ಮಾಹಿತಿ ಕೊಟ್ಟಿದ್ದಾನೆ. ಅಲ್ಲದೇ ಕದ್ದ ಹಣದಲ್ಲಿ‌ ಸಿಂಹಪಾಲು ಎಂಬಂತೆ ಅನುಪಮ 30 ಲಕ್ಷ ರೂಪಾಯಿ ಪಡೆದುಕೊಂಡಿದ್ದಳು. ಉಳಿದ ಆರೋಪಿಗಳು ಹಣ ಹಂಚಿಕೊಂಡು ಐಫೋನ್, ಚಿನ್ನಾಭರಣ ಖರೀದಿ ಜೊತೆಗೆ ತಮ್ಮ ಸಾಲ ತೀರಿಸಿಕೊಂಡಿದ್ದರು.
ಇದರ ಪೈಕಿ 3 ಲಕ್ಷ ರೂಪಾಯಿ ಹಣವನ್ನು ಪಾಪದ ಪರಿಹಾರ ಎಂಬಂತೆ ಅನಾಥಶ್ರಮಕ್ಕೂ‌ ಕೊಟ್ಟಿದ್ದರು. ಇದೀಗ ಇವರಿಂದ 90 ಲಕ್ಷ ರೂಪಾಯಿ ಹಣ ರಿಕವರಿ ಮಾಡಲಾಗಿದ್ದು, ಚಾಲಕ ಸ್ವಾಮಿ, ಅನುಪಮ, ಪವನ್, ಕಾರ್ತಿಕ್‌‌ನನ್ನು ಬಂಧಿಸಲಾಗಿದೆ. 

Post a Comment

Previous Post Next Post