Zika Virus: ಡೇಂಘಿ ಸೈಲೆಂಟ್​​ ಆಗ್ತಿದ್ದಂತೆ ಜಿಕಾ ನಡುಕ; ಆರೋಗ್ಯ ಇಲಾಖೆಯಿಂದ ಜಿಕಾ ವೈರಸ್ ಮಾರ್ಗಸೂಚಿ ಬಿಡುಗಡೆ


 ಜಿಕಾ ರೋಗದ ಲಕ್ಷಣಗಳು

ಕೇರಳದಲ್ಲಿ ಭಯ ಬೀಳಿಸಿದ್ದ ವೈರಸ್ ಈಗ ರಾಜ್ಯದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ. ಸರ್ಕಾರ ಎಲ್ಲವನ್ನೂ ನಿಭಾಯಿಸುತ್ತೆ ಅಂತ ಸುಮ್ಮನಾಗ್ಬೇಡಿ.ಬೆಂಗಳೂರು: ಕೆಲ ದಿನಗಳ ಹಿಂದೆಯಷ್ಟೇ ಕೇರಳದಲ್ಲಿ (Kerala) ಆತಂಕ ಮೂಡಿಸಿತ್ತು ಜಿಕಾ ವೈರಸ್ (Zika Virus). ಇದೇ ವೈರಸ್​ ರಾಜ್ಯದಲ್ಲಿ ಸೊಳ್ಳೆಗಳಲ್ಲಿ (Mosquito) ಪತ್ತೆಯಾಗಿದೆ. ಚಿಕ್ಕಬಳ್ಳಾಪುರದಲ್ಲಿ (Chikkaballapura) ಪತ್ತೆಯಾಗಿರುವ ಡೆಡ್ಲ ವೈರಸ್​​​ ಈಗ ರಾಜ್ಯದಲ್ಲೂ ಆತಂಕ ಹೆಚ್ಚಿಸಿದೆ. ನಿದ್ದೆಯಲ್ಲಿದ್ದ ಆರೋಗ್ಯ ಇಲಾಖೆಗೆ (Health Department) ಎಚ್ಚರಿಸಿ ಕೆಲಸ ಕೊಟ್ಟಿದೆ. ಚಿಕ್ಕಬಳ್ಳಾಪುರದಲ್ಲಿ ಮಾರಕ ಝಿಕಾ ವೈರಸ್‌ ಪತ್ತೆ ಆಗ್ತಿದ್ದಂತೆ ರಾಜ್ಯದ 68 ಕಡೆ ಸೊಳ್ಳೆಗಳ ಸ್ಯಾಂಪಲ್​ ಲ್ಯಾಬ್​ಗೆ ರವಾನಿಸಲಾಗಿದೆ.ಈ ಜಿಕಾ ವೈರಸ್​ ಜೀವ ತೆಗೆಯುವ ಮಾರಣಾಂತಿಕ ವೈರಸ್‌. ಅದರಲ್ಲೂ ಗರ್ಭಿಣಿಯರಿಗೆ ಸೋಂಕು ತಗುಲಿದರೆ ತುಂಬಾ ಕಷ್ಟ. ಏಕೆಂದರೆ ಹುಟ್ಟುವ ಮಗುವಿನ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತೆ.Maharani College Accident Case: ಅಪಘಾತ ಮಾಡಿ ಸುಮ್ಮನಾದ್ರು! ಬೋಗಸ್‌ ಭರವಸೆ, ಬಡವರ ವ್ಯಥೆ!Bengaluru: ನಗರದಲ್ಲಿ 800ಕ್ಕೂ ಹೆಚ್ಚು ಬೋರ್ ಬಂದ್! ಕಾವೇರಿ ನೀರು ನಂಬಿದ್ದವರಿಗೆ ‘ಜಲ ದಣಿವು’ಕನ್ನಡ ಅರಿಯದವರಿಗೆ ಓದಿಸೋ, ಮಾತನಾಡಿಸೋ ಪ್ರಯತ್ನ; ಬ್ರೋ ಗೌಡ ಸಾಥ್!ಕೇವಲ 2 ಸಾವಿರ ಹೂಡಿಕೆಯಿಂದ ಬಹುಕೋಟಿ ನಿವ್ವಳ ಮೌಲ್ಯ ನಿರ್ಮಿಸಿದ ಬೆಂಗಳೂರಿನ‌ ಈ ಅಕ್ಕ- ತಂಗಿಯ ಜೋಡಿಇದನ್ನೂ ಓದಿ: Zika Virus: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಝಿಕಾ ವೈರಸ್ ಪತ್ತೆ; ಹೈ ಅಲರ್ಟ್ ಘೋಷಣೆಇಂಥಾ ಮಾರಕ ವೈರಸ್​​ ಪತ್ತೆ ಆಗಿರೋದರಿಂದ ಆರೋಗ್ಯ ಇಲಾಖೆ ಕಟ್ಟೆಚ್ಚರವಹಿಸಿದ್ದು ಜಿಕಾ ವೈರಸ್‌ ಬಗ್ಗೆ ಗೈಡ್‌ಲೈನ್ಸ್ ಹೊರಡಿಸಲು ಸಿದ್ಧತೆ ಮಾಡಿಕೊಳ್ತಿದೆ. ಅಲ್ಲದೇ, ಆರೋಗ್ಯ ಇಲಾಖೆಯಿಂದ ಜಿಕಾ ವೈರಸ್ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ರೋಗದ ಲಕ್ಷಣಗಳುಕಣ್ಣು ಕೆಂಪಾಗುವಿಕೆತಲೆ ನೋವುಜ್ವರಕೀಲುಗಳಲ್ಲಿ ನೋವುಗಂಧೆಗಳುಸ್ನಾಯುಗಳಲ್ಲಿ ನೋವುಜಿಕಾ ವೈರಸ್ ತಡೆಗಟ್ಟಲು ಜನಸಾಮಾನ್ಯರ ಜವಾಬ್ದಾರಿನೀರು ಶೇಖರಣಾ ಪರಿಕರಗಳನ್ನು ಮುಚ್ಚಳದಿಂದ ಮುಚ್ಚಿಡಿ ಮತ್ತು ವಾರಕ್ಕೊಮ್ಮೆ ಸ್ವಚ್ಛಗೊಳಿಸಿಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿಘನತ್ಯಾಜ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಿ, ಮಕ್ಕಳು, ವಯೋವೃದ್ದರು ವಿಶ್ರಾಂತಿ ಪಡೆಯುವಾಗ ಸೊಳ್ಳೆ ಪರದೆ, ಸೊಳ್ಳೆ ನಿರೋಧಕಗಳನ್ನು ಬಳಸಿಸೊಳ್ಳೆಗಳು ಸಾಮಾನ್ಯವಾಗಿ ಸಂತಾನೋತ್ಪತ್ತಿ ಮಾಡುವುದು ನಿಂತ ನೀರಲ್ಲಿ, ಹೀಗಾಗಿ ಮನೆಯ ಸುತ್ತಲೂ ನೀರು ನಿಲ್ಲದಂತೆ ಮುಂಜಾಗ್ರತೆ ವಹಿಸಬೇಕುಪ್ರತಿಯೊಬ್ಬ ವ್ಯಕ್ತಿಯೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ, ವೈರಸ್ ಹರಡುವ ಸಾಧ್ಯತೆ ಕಡಿಮೆಯಾಗುತ್ತೆರೋಗ ಲಕ್ಷಣಗಳು ಸೌಮ್ಯ ಹಾಗೂ ಸಾಧಾರಣ ಸ್ವರೂಪವಾಗಿದ್ದು, 2 ರಿಂದ 7 ದಿನಗಳವರೆಗೆ ಇರುತ್ತದೆಗರ್ಭಿಣಿಯರು ವಿಶೇಷವಾಗಿ ಎಚ್ಚರಿಕೆ ವಹಿಸಬೇಕುರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆ/ವೈದ್ಯರನ್ನು ಸಂಪರ್ಕ ಮಾಡಿ.ಕೇರಳದಲ್ಲಿ ಭಯ ಬೀಳಿಸಿದ್ದ ವೈರಸ್ ಈಗ ರಾಜ್ಯದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ. ಸರ್ಕಾರ ಎಲ್ಲವನ್ನೂ ನಿಭಾಯಿಸುತ್ತೆ ಅಂತ ಸುಮ್ಮನಾಗ್ಬೇಡಿ. ಮನೆ ಅಕ್ಕಪಕ್ಕ ಸ್ವಚ್ಛತೆ ಕಾಪಾಡಿಕೊಳ್ಳಿ. ಬಿಸಿನೀರು ಸೇವಿಸಿ. ಜ್ವರ , ನೆಗಡಿ ಬಂದರೆ ತಕ್ಷಣ ವೈದ್ಯರನ್ನ ಸಂಪರ್ಕಿಸಿ.

Post a Comment

Previous Post Next Post