Siddaramaiah: ದೇವಸ್ಥಾನಕ್ಕೆ ಹೋದಾಗ ಸಿದ್ದರಾಮಯ್ಯ ಏನು ಬೇಡಿಕೊಳ್ತಾರೆ? ಸನ್ಮಾನ ಸ್ವೀಕರಿಸಿ ಗುಟ್ಟು ಬಿಚ್ಚಿಟ್ಟ ಸಿಎಂ!


 ಸಮಾರಂಭದಲ್ಲಿ ಸಿದ್ದರಾಮಯ್ಯ

ಕುರುಬ ಸಮಾಜದ ಸನ್ಮಾನ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ, ತಾವು ದೇವಸ್ಥಾನಕ್ಕೆ ಹೋದಾಗ ದೇವರ ಮುಂದೆ ಏನನ್ನು ಬೇಡಿಕೊಳ್ಳುತ್ತೇನೆ ಎಂಬ ಗುಟ್ಟು ಬಹಿರಂಗ ಮಾಡಿದ್ದಾರೆ ಬೆಳಗಾವಿ: ಕುರುಬ ಸಮಾಜದ (Kuruba Samaja) ಸನ್ಮಾನ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ (CM Siddaramaiah), ತಾವು ದೇವಸ್ಥಾನಕ್ಕೆ (temple) ಹೋದಾಗ ದೇವರ (God) ಮುಂದೆ ಏನನ್ನು ಬೇಡಿಕೊಳ್ಳುತ್ತೇನೆ ಎಂಬ ಗುಟ್ಟು ಬಹಿರಂಗ ಮಾಡಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಎಂದೂ ಜಾತಿ ಬೇಧ ಮಾಡಿಲ್ಲ. ನನ್ನ ರಾಜಕೀಯದ ಕೊನೆಯವರೆಗೆ ಜಾತಿ ಬೇಧ ಮಾಡಲ್ಲ ಎಂದು ಹೇಳುತ್ತೇನೆ ಎಂದಿದ್ದಾರೆ. ನಾನು ದೇವಾಲಯಕ್ಕೆ ಹೋಗೊದು ಕಡಿಮೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.  ಹೋದರೆ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗೋ ಶಕ್ತಿ ಕೊಡು ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಅಂತ ಗುಟ್ಟು ಬಿಚ್ಚಿಟ್ಟಿದ್ದಾರೆ.ಕುರುಬ ಸಮಾಜ ಎಸ್‌ಟಿಗೆ ಸೇರಿಸಬೇಕುನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷ ಆಯಿತು. ಆದರೆ ಇನ್ನೂ ಅನೇಕ ಜಾತಿಗಳು ವಿಧಾನಸಭೆ ಮೆಟ್ಟಿಲು ಹತ್ತಿಲ್ಲ ಅಂತ ಸಿಎಂ ವಿಷಾದಿಸಿದ್ದಾರೆ. ಕುರುಬ ಸಮುದಾಯವನ್ನು ಎಸ್ಟಿ ಮಾಡಬೇಕು ಎಂದು ಶಿಫಾರಸ್ಸು ಮಾಡಿದ್ದಾರೆ. ಸದ್ಯ ವಿಚಾರಣೆ ಕೇಂದ್ರ ಸರ್ಕಾರದ ಬಳಿ ಇದೆ. ಕೋಳಿ ಸಮಾಜ ಸೇರಿ ಅನೇಕರು ಎಸ್ಟಿ ವಿಭಾಗಕ್ಕೆ ಸೇರಬೇಕಿದೆ. ನಾನು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ ಅಂತ ಸಿಎಂ ಹೇಳಿದ್ದಾರೆ.ಇದನ್ನೂ ಓದಿ: Siddaramaiah: ಕುಂಕುಮ ಧರಿಸಿ ಮಿಂಚಿದ ಸಿಎಂ, ಹರಕೆಯನ್ನೂ ತೀರಿಸಿದ ಸಿದ್ದರಾಮಯ್ಯ! ಏನಿದು ಅಚ್ಚರಿ ನಡೆ? ಸಿದ್ದರಾಮಯ್ಯ , ಡಿಕೆಶಿ ಅಮಿಷ ಒಡ್ಡುತ್ತಾರೆ ಎಂದು ಹೈಕೋರ್ಟ್ ನಲ್ಲಿ ಕೇಸ್ ಹಾಕಿದ್ದಾರೆ. ಮತಕ್ಕಾಗಿ ಆಮಿಷ ಎಂದು ಆರೋಪಿಸಿದ್ದಾರೆ. ಆದರೆ ಇದು ಆಮಿಷ ಅಲ್ಲ, ಜನರ, ಬಡವರ ಕಲ್ಯಾಣ ಅಂತ ಹೇಳಿದ್ದಾರೆ. ಕೆಲವರಿಗೆ ಬಡವರು ಕೈಮುಗಿದುಕೊಂಡು ನಿಲ್ಲಬೇಕು. ಆದರೆ ಕುರುಬರ ಸಮಾಜ ಸಹಬಾಳ್ವೆಗೆ ಹೆಸರು ಆಗಿದೆ. ಇನ್ನೊಂದು ಸಮಾಜದ ಮೇಲೆ ಎಂದು ದೌರ್ಜನ್ಯ ಮಾಡಿಲ್ಲ ಅಂತ ಅವರು ಹೇಳಿದ್ರು.

Post a Comment

Previous Post Next Post