ಚಂದ್ರಶೇಖರ್ ರಾವ್- ನರೇಂದ್ರ ಮೋದಿ
ಹಲವು ತ್ಯಾಗ ಬಲಿದಾನಗಳಿಂದ ಸೃಷ್ಟಿಯಾದ ತೆಲಂಗಾಣವನ್ನು ಕುಟುಂಬವೊಂದು ಲೂಟಿ ಮಾಡುತ್ತಿದೆ. ತೆಲಂಗಾಣಲ್ಲಿ ಹಣವನ್ನು ಚೆಲ್ಲಿ ಚುನಾವಣೆ ಗೆಲ್ಲಬೇಕೆಂದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ ಮತ್ತು ಬಿಆರ್‌ಎಸ್ ನಡುವೆ ಒಳ ಒಪ್ಪಂದವಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಬಿಆರ್‌ಎಸ್ ಹಣ ಕಳುಹಿಸಿದೆ ಎಂದು ಆರೋಪಿಸಿದರುಹೈದರಾಬಾದ್: ತೆಲಂಗಾಣ (Telangana) ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಭಾರತ್ ರಾಷ್ಟ್ರ ಸಮಿತಿ ಮುಖ್ಯಸ್ಥ (BRS) ಹಾಗೂ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ (KCR) ಬಗ್ಗೆ ಅಚ್ಚರಿ ಹೇಳಿಕೆ ನೀಡಿದ್ದಾರೆ. ಹೈದರಾಬಾದ್ ಮುನ್ಸಿಪಲ್ ಚುನಾವಣೆ ನಂತರ ಎನ್‌ಡಿಎಗೆ (NDA) ಸೇರಲು ಬಯಸಿದ್ದರು, ಆದರೆ ಸೇರ್ಪಡೆಗೆ ನಾನು ಒಪ್ಪಿರಲಿಲ್ಲ ಎಂದು ತಿಳಿಸಿದ್ದಾರೆ. ಮಂಗಳವಾರ ನಿಜಾಮಾಬಾದ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಪ್ರಧಾನಿ ಮೋದಿ ನಿಜಾಮಾಬಾದ್ ಸಭೆಯಲ್ಲಿ ಕೆಸಿಆರ್ರನ್ನು ಗುರಿಯಾಗಿಸಿಕೊಂಡು ನೀಡಿದ ಹೇಳಿಕೆಗಳು ಸಂಚಲನ ಮೂಡಿಸುತ್ತಿವೆ.ಮೇಯರ್ ಸ್ಥಾನ ನೀಡುವುದಾಗಿ ಕೆಸಿಆರ್ ಆಫರ್ಜಿಎಚ್ಎಂಸಿ ಮಹಾ ಚುನಾವಣೆ ಮುಗಿದ ಮರುದಿನ ಕೆಸಿಆರ್ ದೆಹಲಿಗೆ ಆಗಮಿಸಿದ್ದರು. ಯಾಕೆ ಹೋಗಿದ್ದರೆಂದು ಯಾರಿಗೂ ತಿಳಿದಿರಲಿಲ್ಲ. ಆದರೆ ಅಂದು ಕೆಎಸ್ಆರ್ ತಮ್ಮನ್ನು ಭೇಟಿ ಮಾಡಿದ್ದರೆಂದು ಮೋದಿ ಹೇಳಿದ್ದಾರೆ. ಕೆಸಿಆರ್ ಅಂದು ನಮ್ಮನ್ನು ಭೇಟಿ ಮಾಡಿ, ಟಿಆರ್ಎಸ್ ಪಕ್ಷವನ್ನು ಎನ್ಡಿಎ ಜೊತೆಗೆ ಸೇರಿಸಿಕೊಳ್ಳುವಂತೆ ಪ್ರಸ್ತಾಪಿಸಿದ್ದರು. ಆದರೆ ನಾವು ಸಿದ್ಧರಿಲ್ಲ, ನಾವು ವಿರೋಧ ಪಕ್ಷದಲ್ಲಿಯೂ ಕುಳಿತುಕೊಳ್ಳುತ್ತೇವೆ, ಆದರೆ ಬಿಆರ್‌ಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾಗಿ ಮೋದಿ ಸಭೆಯಲ್ಲಿ ಬಹಿರಂಗಪಡಿಸಿದ್ದಾರೆ. ಬಿಆರ್‌ಎಸ್ ಜಿಎಸ್ಎಂಸಿ ಚುನಾವಣೆಯಲ್ಲಿ 56 ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿ 48 ಸ್ಥಾನಗಳಲ್ಲಿ ಎರಡನೇ ಸ್ಥಾನದಲ್ಲಿತ್ತು. ಮೇಯರ್ ಸ್ಥಾನಕ್ಕೆ ಅಗತ್ಯ ಬಹುಮತ ಯಾವ ಪಕ್ಷಕ್ಕೂ ಸಿಕ್ಕಿರಲಿಲ್ಲ.ಇದನ್ನೂ ಓದಿ: Bihar Caste Survey Report: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದ ಸಿಎಂ ನಿತೀಶ್ ಕುಮಾರ್!ಈ ಭೇಟಿ ನಂತರ ನನ್ನನ್ನು ಸ್ವಾಗತಿಸಲು ಕೆಸಿಆರ್ ಬರಲಿಲ್ಲ ಕೆಸಿಆರ್ ಅವರ ಮೈತ್ರಿ ಆಶಯವನ್ನು ತಿರಸ್ಕರಿಸಿದೆ. ಅಂದಿನಿಂದ ಕೆಸಿಆರ್ ತಮ್ಮನ್ನು ಭೇಟಿ ಮಾಡುವುದನ್ನು ನಿಲ್ಲಿಸಿದ್ದಾರೆ. ಆ ಚುನಾವಣೆಗೂ ಮುನ್ನ ಕೆಸಿಆರ್ ತಮ್ಮನ್ನು ಸ್ವಾಗತಿಸಲು ಬರುತ್ತಿದ್ದರು. ಆದರೆ ಜಿಎಚ್ಎಂಸಿ ಫಲಿತಾಂಶದ ನಂತರ ಕೆಸಿಆರ್ ತಮ್ಮನ್ನು ಭೇಟಿ ಸ್ವಾಗತಿಸಲು ಬರುತ್ತಿಲ್ಲ, ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಅವರಿಗೆ ಭಯವಾಗುತ್ತಿರಬೇಕು ಎಂದು ಮೋದಿ ಹೇಳಿದ್ದಾರೆ.ಕೆಸಿಆರ್ ಕುಟುಂಬ ತೆಲಂಗಾಣವನ್ನು ದೋಚುತ್ತಿದೆಹಲವು ತ್ಯಾಗ ಬಲಿದಾನಗಳಿಂದ ಸೃಷ್ಟಿಯಾದ ತೆಲಂಗಾಣವನ್ನು ಕುಟುಂಬವೊಂದು ಲೂಟಿ ಮಾಡುತ್ತಿದೆ. ತೆಲಂಗಾಣಲ್ಲಿ ಹಣವನ್ನು ಚೆಲ್ಲಿ ಚುನಾವಣೆ ಗೆಲ್ಲಬೇಕೆಂದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ ಮತ್ತು ಬಿಆರ್‌ಎಸ್ ನಡುವೆ ಒಳ ಒಪ್ಪಂದವಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಬಿಆರ್‌ಎಸ್ ಹಣ ಕಳುಹಿಸಿದೆ ಎಂದು ಆರೋಪಿಸಿದರು.ಕೆಸಿಆರ್ ಆಳ್ವಿಕೆಯಲ್ಲಿ ಭ್ರಷ್ಟಾಚಾರ ಹೆಚ್ಚಿದ್ದು, ಕುಟುಂಬದವರೆಲ್ಲಾ ಶೋಷಣೆ ಮಾಡುತ್ತಿದ್ದಾರೆ. ತಮ್ಮ ಮೇಲೆ ನಂಬಿಕೆ ಇಟ್ಟು ತೆಲಂಗಾಣದಲ್ಲಿ ಬಿಜೆಪಿಗೆ ಒಂದು ಅವಕಾಶ ಕೊಟ್ಟರೆ, ಕೆಸಿಆರ್ ಕುಟುಂಬದವರು ದೋಚಿರುವುದನ್ನೆಲ್ಲಾ ವಾಪಸ್ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಕೆಸಿಆರ್, ಅವರ ಮಗ, ಮಗಳು ಮತ್ತು ಅಳಿಯ ಮಾತ್ರ ಶ್ರೀಮಂತರಾಗಿದ್ದಾರೆ. ತೆಲಂಗಾಣ ಸರಕಾರ ಸರ್ಕಾರದ ಹಣವನ್ನು ಲೂಟಿ ಮಾಡುತ್ತಿದೆ ಎಂದು ಮೋದಿ ಟೀಕಿಸಿದರು.ಇದನ್ನೂ ಓದಿ: Nara Bhuvaneshwari: ಚಂದ್ರಬಾಬು ನಾಯ್ಡು ಪತ್ನಿಯಿಂದ ಬಸ್ ಯಾತ್ರೆ! ಎದ್ದೇಳಿ ತೆಲುಗು ಜನರೇ ಎಂದು ರಾಜ್ಯಾದ್ಯಂತ ಪರ್ಯಟನೆ!ಒಳ್ಳೆ ಸಿನಿಮಾ ಕಥೆಯಾಗುತ್ತದೆ ಎಂದ ಕೆಟಿಆರ್ಮೋದಿ ಕಾಮೆಂಟ್ ಬಗ್ಗೆ ಪ್ರತಿಕ್ರಿಯಿಸಿದ ಕೆಸಿಆರ್ ಪುತ್ರ ಕೆಟಿ ರಾಮರಾವ್, ಮೋದಿ ಅವರ ಹೇಳಿಕೆಗಳೆಲ್ಲಾ ಸುಳ್ಳು. ಬಿಜೆಪಿ ಅತಿದೊಡ್ಡ ಭ್ರಷ್ಟಪಕ್ಷ. ಮೋದಿಯವರು ಸ್ಕ್ರಿಪ್ಟ್ ಬರೆಯಲು ಶುರು ಮಾಡಿದರೆ, ಒಂದು ಸಿನಿಮಾ ಮಾಡಬಹುದು ಎಂದು ವ್ಯಂಗ್ಯವಾಡಿದ್ದಾರೆ.ಅಲ್ಲದೆ ಎನ್ಡಿಎ ಸೇರುವುದಕ್ಕೆ ನಾವೇನು ಹುಚ್ಚು ನಾಯಿ ಕಚ್ಚಿಲ್ಲ, ಕೆಸಿಆರ್ ಒಬ್ಬ ಹೋರಾಟಗಾರ ಎಂದ ಕೆಟಿಆರ್, ಎನ್ಡಿಎ ಮುಳುಗುವ ದೋಣಿ. ಈಗಾಗಲೇ ಎನ್ಡಿಎ ಇಂದ ಅಣ್ಣಾಡಿಎಂಕೆ, ಟಿಡಿಪಿ, ಅಕಾಲಿಕ ದಳ, ಪಿಡಪಿ, ಜೆಡಿಯು ಅಂತಹ ಪಕ್ಷಗಳು ಹೊರ ಬಂದಿವೆ. ಪ್ರಸ್ತುತ ಎನ್ಡಿಎ ಮೈತ್ರಿಕೂಟದಲ್ಲಿ ಸಿಬಿಐ, ಇಡಿ ಮತ್ತು ಐಟಿ ಮಾತ್ರ ಇವೆ. ಪ್ರತಿ ಬಾರಿಯೂ ಕುಟುಂಬ ಆಡಳಿತ ಎಂದು ಟೀಕಿಸುತ್ತಾರೆ. ಜೊತೆಗಿದ್ದರೆ ಒಳ್ಳೆಯವರು ಎಂದು ಹೇಳುವ ಅಭ್ಯಾಸ ಮೋದಿಗಿದೆ. ಎನ್‌ಡಿಎ ಮೈತ್ರಿಕೂಟದಲ್ಲಿದ್ದ ಅಕಾಲಿದಳ, ಪಿಡಿಪಿ, ಟಿಡಿಪಿ, ಜೆಡಿಎಸ್ ಮತ್ತು ಶಿವಸೇನೆಯಲ್ಲೂ ವಂಶ ಪಾರಂಪರ್ಯ ರಾಜಕಾರಣ ಇದೆ, ಅವರಿಗೆ ನಮ್ಮ ಪಕ್ಷ ಮಾತ್ರ ಕಾಣುತ್ತೆ, ಆ ಪಕ್ಷಗಳು ಕಾಣುವುದಿಲ್ಲ ಎಂದು ಕೆಟಿಆರ್ ಕಿಡಿ ಕಾರಿದ್ದಾರೆ.
Post a Comment