ಬಂಧಿತರು
ISIS terrorist: ದೆಹಲಿ ಪೊಲೀಸರು ಉಗ್ರರ ತನಿಖೆಯನ್ನು ಮುಂದುವರಿದಿದ್ದು, ನಿಖರವಾಗಿ ಯಾವ ಪ್ರದೇಶದಲ್ಲಿ ತರಬೇತಿ ಪಡೆಯಲಾಗಿತ್ತು ಎಂಬುದರ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಹುಬ್ಬಳ್ಳಿ: ದೆಹಲಿ ಪೊಲೀಸರು (Delhi Police) ಬಂಧಿಸಿರುವ ಉಗ್ರರು ಧಾರವಾಡ (Dharwad) ಜಿಲ್ಲೆಯ ಹೆಸರನ್ನು ಬಾಯಿ ಬಿಟ್ಟಿದ್ದಾರೆ. ಬಂಧಿತ ಉಗ್ರರು ಇಸ್ಲಾಮಿಕ್ ಸ್ಟೇಟ್ ಸಂಘಟನೆಯೊಂದಿಗೆ ನಂಟು ಹೊಂದಿರೋದನ್ನು ಪತ್ತೆ ಮಾಡಲಾಗಿದೆ. ಬಂಧಿತರು ಹುಬ್ಬಳ್ಳಿ, ಧಾರವಾಡ, ಪಶ್ಚಿಮ ಘಟ್ಟಗಳಲ್ಲಿ ತರಬೇತಿ ಪಡೆದಿರೋದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ. ದಕ್ಷಿಣ ಭಾರತದ (South India) ಹಲವು ಕಡೆ ತರಬೇಡಿ ಪಡೆದಿರೋ ಮಾಹಿತಿಯೂ ಲಭ್ಯವಾಗಿದೆ. ಅದಲ್ಲಿಯೂ ರಾಜ್ಯದ ಹುಬ್ಬಳ್ಳಿ ಮತ್ತು ಧಾರವಾಡದ ಹೆಸರುಗಳನ್ನು ಹೇಳಿರೋದು ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆ ಧಾರವಾಡ ಜಿಲ್ಲೆಯಲ್ಲಿ ಸಿಮಿ ಉಗ್ರರ ಬಂಧನವಾಗಿತ್ತು. ಇವರುಗಳೆಲ್ಲಾ ಧಾರವಾಡ ಜಿಲ್ಲೆಯ ಕಲಘಟಗಿ ಅರಣ್ಯ ಪ್ರದೇಶದಲ್ಲಿ ತರಬೇತಿ ತಾಣಗಳನ್ನು ಮಾಡಿಕೊಂಡಿದ್ದರು.ಸಿಮಿ ಉಗ್ರರ ಬಂಧನದ ನಂತರ ತರಬೇತಿ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿತ್ತು. ಅದರ ನಂತರ ಇದೀಗ ಜಿಲ್ಲೆಯಲ್ಲಿ ಉಗ್ರರ ತರಬೇತಿಯ ಮಾತು ಕೇಳಿ ಬಂದಿದೆ. ಧಾರವಾಡ ಜಿಲ್ಲೆ ಮತ್ತೆ ಉಗ್ರರ ತರಬೇತಿ ತಾಣವಾಗ್ತಿದೆಯಾ ಎಂಬ ಆತಂಕ ಎದುರಾಗಿದೆ. ಮುಂದುವರಿದ ತನಿಖೆದೆಹಲಿ ಪೊಲೀಸರು ಉಗ್ರರ ತನಿಖೆಯನ್ನು ಮುಂದುವರಿದಿದ್ದು, ನಿಖರವಾಗಿ ಯಾವ ಪ್ರದೇಶದಲ್ಲಿ ತರಬೇತಿ ಪಡೆಯಲಾಗಿತ್ತು ಎಂಬುದರ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಎಲ್ಲೆಲ್ಲಿ ಉಗ್ರರು ತರಬೇತಿ ಪಡೀತಿದ್ರೆಂಬ ನಿಖರ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ಈ ಕುರಿತು ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ಬಹಿರಂಗವಾಗುವ ಸಾಧ್ಯತೆಗಳಿವೆ. ಐಇಡಿ ಸ್ಪೋಟಿಸಲು ಸಂಚುಬಂಧಿತ ಮೂವರು ಉಗ್ರರು ಮುಂಬೈ, ಸೂರತ್, ವಡೋದರಾ, ಗಾಂಧಿನಗರ ಮತ್ತು ಅಹಮದಾಬಾದ್ ಭಾಗದ ಪ್ರಮುಖರ ಹತ್ಯೆಗೆ ಐಇಡಿ ಸ್ಪೋಟಿಸಲು ಸಂಚು ಹಾಕಿದ್ದರು. ವಿಚಾರಣೆ ವೇಳೆ ಭಯೋತ್ಪಾದಕ ಶಾನವಾಜ್ ತಾವು ಐಸಿಸ್ ಸಂಘಟನೆಯೊಂದಿಗೆ ನಂಟು ಹೊಂದಿರೋದನ್ನು ಒಪ್ಪಿಕೊಂಡಿದ್ದಾರೆ.ದೊಡ್ಡಮಟ್ಟದ ದಾಳಿಗೆ ಪ್ಲಾನ್ಗುಜರಾತಿನ ಅಕ್ಷರಧಾಮ ದೇವಾಲಯದ ಮೇಲೆ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಫರ್ತುಲ್ಲಾ ಗೌರಿ ಮತ್ತು ಆತನ ಅಳಿಯ ಶಾಹಿದ್ ಫೈಸಲ್ ಜೊತೆ ಸಂಪರ್ಕದಲ್ಲಿದ್ದರು. ಸದ್ಯ ಫರ್ತುಲ್ಲಾ ಗೌರಿ ಮತ್ತು ಶಾಹಿದ್ ಫೈಸಲ್ ಪಾಕಿಸ್ತಾನದ ರಕ್ಷಣೆಯಲ್ಲಿದ್ದಾರೆ.ಇದನ್ನೂ ಓದಿ: HDD-DKS: ವಾರ್ನಿಂಗ್ ಕೊಟ್ರೆ ನಾನು ಹೆದರಲ್ಲ ಅನ್ನೋದು ನಿಮಗೂ ಗೊತ್ತಿದೆ; ದೇವೇಗೌಡ್ರಿಗೆ ಡಿಕೆಶಿ ಟಾಂಗ್ಈ ಮೂವರ ಮೂಲಕ ದೆಹಲಿಯಲ್ಲಿ ದೊಡ್ಡಮಟ್ಟದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಪ್ಲಾನ್ ಮಾಡಿಕೊಂಡಿದ್ದರು ಎಂದು ವರದಿಯಾಗಿದೆ.
Post a Comment