ಶಿವಮೊಗ್ಗದಲ್ಲಿ ಸೆಕ್ಷನ್ 144 ಮುಂದುರಿಕೆ
Shivamogga Eid Milad: ಜಿಲ್ಲಾಧಿಕಾರಿ ಸೆಲ್ವಮಣಿ, ಎಲ್ಲಾ ಕಡೆ ಪೊಲೀಸ್ ಸರ್ಪಗಾವಲಿದೆ. ಎಲ್ಲೂ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಹೇಳಿದರು.ಶಿವಮೊಗ್ಗ: ಶಿವಮೊಗ್ಗದಲ್ಲಿ ಉದ್ವಿಗ್ನ ವಾತಾವರಣ ತಣ್ಣಗಾಗಿದೆ. ಗಲಭೆ ಪ್ರಕರಣದಲ್ಲಿ ಈಗಾಗಲೇ 60 ಜನರನ್ನು ಬಂಧಿಸಲಾಗಿದ್ದು, 24 ಎಫ್‌ಐಆರ್ (FIR) ದಾಖಲಾಗಿದೆ. ಇಂದೂ ಕೂಡ 144 ಸೆಕ್ಷನ್ ಮುಂದುವರಿಯಲಿದೆ. ಆರೋಪಿಗಳನ್ನ ಶಿವಮೊಗ್ಗ, ಚಿತ್ರದುರ್ಗದ ಜೈಲಿಗೆ ಶಿಫ್ಟ್ ಮಾಡಲಾಗಿದೆ. 1 ಕಾರು, 1 ತ್ರಿಚಕ್ರ ವಾಹನ, 2 ದ್ವಿಚಕ್ರ ವಾಹನಗಳನ್ನು ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ. ರಾತ್ರಿಯಿಡೀ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರ ಸರ್ಪಗಾವಲು ಹಾಕಿದ್ದು, ಇಂದು ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಶಿವಮೊಗ್ಗದಲ್ಲಿ (Shivamogga) ಬೀಡುಬಿಟ್ಟಿದ್ದು, ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕೆ ತಂದಿದ್ದಾರೆ.ಮಾತನಾಡಿದ ಶಿವಮೊಗ್ಗ ಜಿಲ್ಲಾಧಿಕಾರಿ ಸೆಲ್ವಮಣಿ, ಎಲ್ಲಾ ಕಡೆ ಪೊಲೀಸ್ ಸರ್ಪಗಾವಲಿದೆ. ಎಲ್ಲೂ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಹೇಳಿದರು.ಗಲಭೆ ಬಗ್ಗೆ ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ADGP ಹಿತೇಂದ್ರ ಕುಮಾರ್ ಜೊತೆ ಮಾತನಾಡಿದ್ದು, ಕೆಲವರನ್ನು ವಶಕ್ಕೆ ಪಡೆದಿದ್ದೀವಿ. ಅಪರಾಧಿಗಳಾಗಿದ್ದಲ್ಲಿ ಅಂತವರಿಗೆ ಶಿಕ್ಷೆ ನೀಡಲಾಗುವುದು. ಎಲ್ಲದರ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಲಾಗ್ತಿದೆ ಅಂತಾ ಪೂರ್ವ ವಲಯ ಐಜಿಪಿ ತ್ಯಾಗರಾಜನ್ ಹೇಳಿದ್ದಾರೆ.ರಾಗಿಗುಡ್ಡಕ್ಕಷ್ಟೇ ನಿಷೇಧಾಜ್ಞೆ ಹಾಕಿಈ ಮಧ್ಯೆ, ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ಅವರನ್ನ ಬಿಜೆಪಿ ನಿಯೋಗ ಹಾಗೂ ಕಾಂಗ್ರೆಸ್ ನಿಯೋಗಗಳು ಭೇಟಿ ಮಾಡಿವೆ. ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್ ಚನ್ನಬಸಪ್ಪ, ಎಂಎಲ್‌ಸಿಗಳಾದ ರುದ್ರೇಗೌಡ, ಡಿ.ಎಸ್.ಅರುಣ್ ಸೇರಿದಂತೆ ಪ್ರಮುಖರ ಬಿಜೆಪಿ ನಿಯೋಗ, ಎಸ್‌ಪಿ ಅವರನ್ನ ಭೇಟಿಯಾಗಿ, ಇಡೀ ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಬೇಡ, ಗಲಾಟೆ ನಡೆದಿದ್ದ ರಾಗಿಗುಡ್ಡ ಪ್ರದೇಶದಲ್ಲಿ ಮಾತ್ರ ನಿಷೇಧಾಜ್ಞೆ ಹಾಕಿ ಅಂತ ಮನವಿ ಮಾಡಿದರು.ತಲ್ವಾರ್ ಬೋರ್ಡ್ ದುರದೃಷ್ಟಕರ ಇದೇ ವೇಳೆ ಭೇಟಿ ಮಾಡಿದ ಕಾಂಗ್ರೆಸ್ ನಿಯೋಗ ಕೂಡ ಇಡೀ ನಗರದಲ್ಲಿ ನಿಷೇಧಾಜ್ಞೆ ಹೇರದಂತೆ ಮನವಿ ಮಾಡಿದರು. ಎಸ್‌ಪಿ ಭೇಟಿ ಬಳಿಕ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ, ಮಲೆನಾಡಿನಲ್ಲಿ ಹೂವು ಹಾರಗಳ ಮೂಲಕ ಸ್ವಾಗತಿಸಲಾಗುತ್ತೆ. ಆದ್ರೆ ತಲ್ವಾರ್ ರೀತಿಯ ವೆಲ್ಕಮ್ ಬೋರ್ಡ್ ಗಳನ್ನು ಹಾಕಿರುವುದು ದುರದೃಷ್ಟಕರ ಎಂದು ಹೇಳಿದರು. ಇದನ್ನೂ ಓದಿ: Shivamogga Violence: ಇದೆಲ್ಲಾ ಏನ್ ಹೊಸದಾಗಿ ಮಾಡ್ತಾರಾ? ಇದೊಂದು ಸಣ್ಣ ಗಲಾಟೆ ಎಂದ ಸಚಿವ ಪರಮೇಶ್ವರ್!ಕಾನೂನು ಎಲ್ಲರಿಗೂ ಒಂದೇಶಿವಮೊಗ್ಗದಲ್ಲಿ ನಡೆದ ಗಲಾಟೆ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಎಲ್ಲರೂ ಶಾಂತಿಯುತವಾಗಿ ಹೋಗಬೇಕು. ಕಾನೂನು ಎಲ್ಲರಿಗೂ ಒಂದೇ, ಇದು ಶಾಂತಿಯ ತೋಟ, ಶಾಂತಿ ಕದಡುವವರನ್ನ ಸಹಿಸಲ್ಲ ಎಂದಿದ್ದಾರೆ. ಯಾವುದೇ ಕಾರಣಕ್ಕೂ ಯಾರಿಗೂ ಕಾನೂನು ಕೈಗೆತ್ತಿಕೊಳ್ಳಲು ಬಿಡಲ್ಲ ಎಂದಿದ್ದಾರೆ.
Post a Comment