[ಕಾರ್ ಪೂಲಿಂಗ್
[ Bengaluru Traffic And Car Polling: ಕಾರ್ ಪೂಲಿಂಗ್ ಅನ್ನೋದು ಸಾರ್ವಜನಿಕರೇ ಟ್ರಾಫಿಕ್ ನಿಯಂತ್ರಣ ಮತ್ತು ಪೆಟ್ರೋಲ್ ದರ ಉಳಿಸಲು ಕಂಡುಕೊಂಡ ಮಾರ್ಗ ಅಂತ ಹೇಳಬಹುದು.[ಬೆಂಗಳೂರು: ಕಾರ್ ಪೂಲಿಂಗ್ (Carpooling) ನಿಷೇಧಿಸಿಲ್ಲ. ಇದು ಸುಳ್ಳು ಸುದ್ದಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Minister Ramalingareddy) ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಕಾರ್‌ಪೂಲಿಂಗ್ ನಿಷೇಧಿಸಿಲ್ಲ, ಇದು ಸುಳ್ಳು ಸುದ್ದಿ. ಮೊದಲು ಅವರು ಸರ್ಕಾರದಿಂದ ಅನುಮತಿಯನ್ನು ಪಡೆದುಕೊಳ್ಳಲಿ. ಅವರು ಅನುಮತಿಯನ್ನು ತೆಗೆದುಕೊಳ್ಳದಿರುವಾಗ ನಿಷೇಧದ ಪ್ರಶ್ನೆ ಎಲ್ಲಿದೆ? ಪ್ರತಿಯೊಬ್ಬರೂ ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು. ಬಿಳಿ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಣಿಜ್ಯೇತರ ಖಾಸಗಿ ವಾಹನಗಳನ್ನು ಕಾರ್‌ಪೂಲಿಂಗ್ ಉದ್ದೇಶಗಳಿಗಾಗಿ ಬಳಸುವುದು ಕಾನೂನುಬಾಹಿರವಾಗಿದೆ. ಹಳದಿ ಬಣ್ಣದ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಣಿಜ್ಯ ವಾಹನಗಳನ್ನು ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಕಾರ್‌ಪೂಲಿಂಗ್‌ಗೆ ಬಳಸಬಹುದು ಎಂದು ಹೇಳಿದ್ದಾರೆ.ಕಾರ್ ಪೂಲಿಂಗ್ ಅನ್ನೋದು ಸಾರ್ವಜನಿಕರೇ ಟ್ರಾಫಿಕ್ ನಿಯಂತ್ರಣ ಮತ್ತು ಪೆಟ್ರೋಲ್ ದರ ಉಳಿಸಲು ಕಂಡುಕೊಂಡ ಮಾರ್ಗ ಅಂತ ಹೇಳಬಹುದು. ಕಾರ್ ಪೂಲಿಂಗ್ ಐಡಿಯಾ ಬೆಂಗಳೂರಿನಲ್ಲಿ ಹೆಚ್ಚು ವರ್ಕೌಟ್ ಆಗಿದೆ.ಏನಿದು ಕಾರ್ ಪೂಲಿಂಗ್?ನಾಲ್ಕು ಜನರು ತಮ್ಮ ಕಾರ್ ಗಳನ್ನು ರಸ್ತೆಗೆ ಇಳಿಯುವದಕ್ಕಿಂತ ತಮ್ಮದೇ ಮಾರ್ಗದಲ್ಲಿ ಹೋಗುತ್ತಿರುವ ಮತ್ತೋರ್ವ ವ್ಯಕ್ತಿಯ ಕಾರ್ ನಲ್ಲಿ ಪ್ರಯಾಣಿಸುವುದು. ಈ ಮೂಲಕ ಪೆಟ್ರೋಲ್ ಹಣ ಉಳಿಸಬಹುದು.ನಾಲ್ವರು ನಾಲ್ಕು ಕಾರ್ ತೆಗೆದುಕೊಂಡು ರಸ್ತೆಗೆ ಬಂದ್ರೆ ಸಹಜವಾಗಿಯೇ ಟ್ರಾಫಿಕ್ ಹೆಚ್ಚಳವಾಗಬಹುದು. ಆದ್ರೆ ಕಾರ್ ಪೂಲಿಂಗ್ ಮೂಲಕ ಒಂದೇ ಕಾರ್ ನಲ್ಲಿ ಶೇರ್ ಮಾಡಿಕೊಂಡು ಪ್ರಯಾಣ ಮಾಡೋದರಿಂದ ಹಣ ಸೇವ್ ಮಾಡಬಹುದಾಗಿದೆ. ಈ ಲಾಭಗಳಿಂದಾಗಿ ಬಹುತೇಕರು ಕಾರ್ ಪೂಲಿಂಗ್ ಬಳಸಲು ಮುಂದಾಗಿದ್ದಾರೆ. ಸದಾ ಟ್ರಾಫಿಕ್ ಜಾಮ್ನಿಂದ ಸದ್ದು ಮಾಡುವ ರಾಜಧಾನಿಯಲ್ಲಿ ಕಾರ್ ಪೊಲಿಂಗ್ ಯಶಸ್ವಿಯಾಗಿತ್ತು.ಕಾರ್‌ಪೂಲಿಂಗ್ ನಿಷೇಧಿಸಿಲ್ಲ,ಇದು ಸುಳ್ಳು ಸುದ್ದಿ.ಮೊದಲು ಅವರು ಸರ್ಕಾರದಿಂದ ಅನುಮತಿಯನ್ನು ಪಡೆದುಕೊಳ್ಳಲಿ. ಅವರು ಅನುಮತಿಯನ್ನು ತೆಗೆದುಕೊಳ್ಳದಿರುವಾಗ ನಿಷೇಧದ ಪ್ರಶ್ನೆ ಎಲ್ಲಿದೆ?ಪ್ರತಿಯೊಬ್ಬರೂ ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು.ಬಿಳಿ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಣಿಜ್ಯೇತರ ಖಾಸಗಿ ವಾಹನಗಳನ್ನು…
— Ramalinga Reddy (@RLR_BTM) October 2, 2023
ಕಾರ್ ಬುಕ್ ಮಾಡೋದು ಹೇಗೆ?ಕಾರ್ ಪೂಲಿಂಗ್ ಅಥವಾ ಕಾರ್ ಶೇರಿಂಗ್ ಮಾಹಿತಿ ಪಡೆದುಕೊಳ್ಳಲು ಆನ್ಲೈನ್ ಹಲವು ಆಪ್ ಗಳಿವೆ. ಕ್ವಿಕ್ ರೈಡ್, ಬ್ಲಾ ಬ್ಲಾ ಕಾರ್, ಕಮ್ಯೂಟ್ ಈಸಿ, ರೈಡ್ ಶೇರ್, ಕಾರ್ ಪೂಲ್ ಅಡ್ಡಾ ಸೇರಿದಂತೆ ಹಲವು ಆಪ್ ಗಳು ನಿಮಗೆ ಪ್ಲೇಸ್ಟೋರ್ ನಲ್ಲಿ ಸಿಗುತ್ತವೆ.ಈ ಆಪ್ ಗಳನ್ನು ಡೌನ್ಲೋಡ್ ಮಾಡ್ಕೊಂಡು ನಿಮ್ಮ ಲೋಕೇಶನ್ ಬಳಿ ಯಾವುದಾದರೂ ಕಾರ್ ಇದೆಯಾ ಎಂದು ಚೆಕ್ ಮಾಡಿ ಬುಕ್ ಮಾಡಿಕೊಳ್ಳಬಹುದು. ಕಾರ್ ಚಾಲಕನಿಗೆ ನಿಗದಿತ ಮೊತ್ತವನ್ನು ನೀಡಬೇಕು. ಒಂದು ರೀತಿ ಓಲಾ, ಊಬರ್ ರೀತಿಯಲ್ಲಿ ಕಾರ್ ಪೂಲಿಂಗ್ ನಡೆಯುತ್ತದೆ.ಇದನ್ನೂ ಓದಿ: Bengaluru Rose Onion: ರಾಜಧಾನಿಯ ಸುತ್ತಲಿನ ರೈತರಿಗೆ ಶುಭಸುದ್ದಿ, ಸುಂಕವಿಲ್ಲದೇ ರಫ್ತಿಗೆ ಕೇಂದ್ರ ಅಸ್ತುಕಾರ್ ಪೂಲಿಂಗ್ ವೈಟ್ ಬೋರ್ಡ್ ವಾಹನ ಬಳಕೆಇನ್ನು ಕಾರ್ ಪೂಲಿಂಗ್ಗೆ ವೈಟ್ ಬೋರ್ಡ್ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಕಾರ್ ಪೂಲಿಂಗ್ ನೇರ ಪರಿಣಾಮ ಆಟೋ, ಓಲಾ, ಊಬರ್ ಗಳ ಮೇಲೆ ಹೊಡೆತ ಬೀಳುತ್ತದೆ. ಈ ಹಿನ್ನೆಲೆ ಕಾರ್ ಪೂಲಿಂಗ್ ಮೇಲೆ ನಿಷೇಧ ವಿಧಿಸಬೇಕೆಂದು ಆಟೋ ಸಂಘಟನೆಗಳು ಒತ್ತಾಯಿಸುತ್ತಿವೆ.
Post a Comment