Putin -Modi: ನರೇಂದ್ರ ಮೋದಿ ಅತ್ಯಂತ ಬುದ್ದಿಶಾಲಿ ವ್ಯಕ್ತಿ! ರಷ್ಯಾಧ್ಯಕ್ಷ ಪುಟಿನ್ ಹೀಗೆ ಹೇಳಿದ್ದೇಕೆ?


 ಪುಟಿನ್-ಮೋದಿ

ಭಾರತದ ಪ್ರಧಾನಿ ಮೋದಿಯವರೊಂದಿಗೆ ನಾವು ಉತ್ತಮ ರಾಜಕೀಯ ಸಂಬಂಧವನ್ನು ಹಂಚಿಕೊಳ್ಳುತ್ತೇವೆ. ಅವರು ಬಹಳ ಬುದ್ಧಿವಂತ ವ್ಯಕ್ತಿ. ಮತ್ತು ಅವರ ನಾಯಕತ್ವದಲ್ಲಿ ಭಾರತವು ಅಭಿವೃದ್ಧಿಯಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಿದೆ ಎಂದಿದ್ದಾರೆ. ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Vladimir Putin) ಮತ್ತೊಮ್ಮೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು (Prime Minister Narendra Modi) ಶ್ಲಾಘಿಸಿದ್ದಾರೆ. ಪುಟಿನ್ ಮೋದಿಯವರನ್ನು ಅತ್ಯಂತ ಬುದ್ಧಿವಂತ ವ್ಯಕ್ತಿ (Very wise Man), ಅವರ ನಾಯಕತ್ವದಲ್ಲಿ ಭಾರತವು ಅಭಿವೃದ್ಧಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸುತ್ತಿದೆ ಎಂದು ಪ್ರಶಂಸಿಸಿದ್ದಾರೆಂದು ರಷ್ಯಾ ಮೂಲದ ಮಾಧ್ಯಮ ಆರ್‌ಟಿ ವರದಿ ಮಾಡಿದೆ. ವ್ಲಾಡಿಮಿರ್ ಪುಟಿನ್ ಅವರು ಆರ್ಥಿಕ ಭದ್ರತೆ ಮತ್ತು ಸೈಬರ್ ಅಪರಾಧದ ವಿರುದ್ಧದ ಹೋರಾಟದಲ್ಲಿ ರಷ್ಯಾ ಮತ್ತು ಭಾರತದ ನಡುವೆ ಮತ್ತಷ್ಟು ಸಹಕಾರದ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.ಮೋದಿ ನೇತೃತ್ವದಲ್ಲಿ ಭಾರತ ಅಭಿವೃದ್ಧಿ ಆರ್‌ಟಿ ನ್ಯೂಸ್ ಹಂಚಿಕೊಂಡಿರುವ ವೀಡಿಯೊದ ಪ್ರಕಾರ, ಕಾರ್ಯಕ್ರಮವೊಂದರಲ್ಲಿ ಭಾಹವಹಿಸಿದ್ದ ವ್ಲಾಡಿಮಿರ್ ಪುಟಿನ್, " ಭಾರತದ ಪ್ರಧಾನಿ ಮೋದಿಯವರೊಂದಿಗೆ ನಾವು ಉತ್ತಮ ರಾಜಕೀಯ ಸಂಬಂಧವನ್ನು ಹಂಚಿಕೊಳ್ಳುತ್ತೇವೆ. ಅವರು ಬಹಳ ಬುದ್ಧಿವಂತ ವ್ಯಕ್ತಿ. ಮತ್ತು ಅವರ ನಾಯಕತ್ವದಲ್ಲಿ ಭಾರತವು ಅಭಿವೃದ್ಧಿಯಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಿದೆ. ಇದು ಈ ಅಜೆಂಡಾದಲ್ಲಿ ಕೆಲಸ ಮಾಡಲು ಭಾರತ ಮತ್ತು ರಷ್ಯಾ ಎರಡೂ ರಾಷ್ಟ್ರಗಳು ಸಂಪೂರ್ಣ ಆಸಕ್ತಿಯನ್ನು ಹೊಂದಿವೆ " ಎಂದು ತಿಳಿಸಿದ್ದಾರೆ.ಇದನ್ನೂ ಓದಿ: Narendra Modi: ಕೆಸಿಆರ್ ಪ್ರಧಾನಿಯನ್ನ ಏಕೆ ಸ್ವಾಗತಿಸಲು ಹೋಗುತ್ತಿಲ್ಲ ಗೊತ್ತಾ? 2 ವರ್ಷಗಳ ಬಳಿಕ ಸ್ವತಃ ಮೋದಿಯಿಂದಲೇ ಬಹಿರಂಗ!ಜಿ20 ಶೃಂಗಸಭೆ ಬಗ್ಗೆ ಪ್ರಶಂಸೆಭಾರತದಲ್ಲಿ G20 ಶೃಂಗಸಭೆಯಲ್ಲಿ ನ್ಯೂ ಡೆಲ್ಲಿ ಡಿಕ್ಲರೇಷನ್ ಅಂಗೀಕರಿಸಿದ ಬೆನ್ನಲ್ಲೇ ಪುಟಿನ್ ಈ ರೀತಿ ಹೇಳಿಕೆ ನೀಡಿರುವುದು ಗಮನಾರ್ಹವಾದೆ. ಶೃಂಗಸಭೆಯ ಘೋಷಣೆಯು ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ಶಾಂತಿಯನ್ನು ಸ್ಥಾಪಿಸಲು ಕರೆ ನೀಡಿತ್ತು, ಆದರೆ ರಷ್ಯಾದ ಮೇಲೆ ಯಾವುದೇ ಆರೋಪವನ್ನು ಮಾಡಲಿಲ್ಲ. ಹಾಗಾಗಿ ನವದೆಹಲಿ ಘೋಷಣೆಯನ್ನು ಮಾಸ್ಕೋ ಸ್ವಾಗತಿಸಿತ್ತು. ಇದೊಂದು "ಮೈಲಿಗಲ್ಲು" ಎಂದು ಕರೆದಿತ್ತು. ಜಾಗತಿಕ ದಕ್ಷಿಣದಿಂದ G20 ದೇಶಗಳನ್ನು ಕ್ರೋಢೀಕರಿಸುವಲ್ಲಿ ಭಾರತವು ಅಧ್ಯಕ್ಷ ಸ್ಥಾನದ ಸಕ್ರಿಯ ಪಾತ್ರವನ್ನು ರಷ್ಯಾ ಶ್ಲಾಘಿಸಿತ್ತು.ಮೇಕ್ ಇನ್ ಇಂಡಿಯಾ ಬಗ್ಗೆ ಶ್ಲಾಘನೆಕಳೆದ ತಿಂಗಳು, ರಷ್ಯಾ ಅಧ್ಯಕ್ಷ ಪುಟಿನ್ ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಶ್ಲಾಘಿಸಿದ್ದರು. ಮೇಕ್ ಇನ್ ಇಂಡಿಯಾ ಅಭಿಯಾನದ ಮೂಲಕ ಅವರು ಸರಿಯಾದ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿಯನ್ನು ಹೊಗಳಿದ್ದರು.

"PM Modi is a wise man & India has been making great strides in its development under his leadership", says Russian President Vladimir Putin; Highlights "good & positive relationship with PM Modi", & how both countries share "decades old tradition of cooperation" pic.twitter.com/Hct0r45cn3

— Sidhant Sibal (@sidhant) October 4, 2023

8 ನೇ ಈಸ್ಟರ್ನ್ ಎಕನಾಮಿಕ್ ಫೋರಮ್ (EEF) ನಲ್ಲಿ ಅಧ್ಯಕ್ಷ ಪುಟಿನ್ ಅವರು ಭಾಷಣದಲ್ಲಿ, " ನಮ್ಮಲ್ಲಿ ದೇಶೀಯವಾಗಿ ತಯಾರಿಸಿದ ಕಾರುಗಳು ಇರಲಿಲ್ಲ, ಆದರೆ ಈಗ ನಾವು ತಯಾರಿಸುದ್ದೇವೆ. ಅವು ನಾವು 1990 ರ ದಶಕದಲ್ಲಿ ಹೆಚ್ಚಿನ ಮೊತ್ತದಲ್ಲಿ ಖರೀದಿಸಿದ ಮರ್ಸಿಡಿಸ್ ಅಥವಾ ಆಡಿ ಕಾರುಗಳಿಗಿಂತ ಹೆಚ್ಚು ಸಾಧಾರಣವಾಗಿ ಕಾಣುತ್ತವೆ ಎಂಬುದು ನಿಜ. ಆದರೆ ಇದು ಸಮಸ್ಯೆಯಲ್ಲ. ಭಾರತದಂತಹ ನಮ್ಮ ಅನೇಕ ಪಾಲುದಾರರನ್ನು ನಾವು ಅನುಕರಿಸಬೇಕು ಎಂದು ನಾನು ಭಾವಿಸುತ್ತೇನೆ, ದೇಶಿಯ ವಸ್ತುಗಳನ್ನು ಪ್ರೋತ್ಸಾಹಿಸಬೇಕೆಂದು" ಪ್ರತಿಪಾದಿಸಿದ್ದರು.

Post a Comment

Previous Post Next Post