ಉಗ್ರರನ್ನು ಹತ್ಯೆಗೈದ ಸೇನೆ
ಬುಧವಾರ ಬೆಳಗ್ಗೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಚಲನವಲನವನ್ನು ಪತ್ತೆಹಚ್ಚುವ ಪ್ರಯತ್ನದ ಭಾಗವಾಗಿ ಭದ್ರತಾ ಪಡೆಗಳು ಕುಲ್ಗಾಮ್ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ದಾಳಿ ನಡೆಸಿದವು.ಜಮ್ಮು: ಬುಧವಾರ ಜಮ್ಮು ಕಾಶ್ಮೀರದ (Jammu and Kashmir) ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ (Encounter) ಭದ್ರತಾ ಪಡೆಗಳು (Security Forces) ಇಬ್ಬರು ಭಯೋತ್ಪಾದಕರನ್ನು ( Terrorists) ಹೊಡೆದುರುಳಿಸಿದ್ದಾರೆ. ಎನ್‌ಕೌಂಟರ್ ನಡೆದ ಪ್ರದೇಶದಿಂದ ಮೃತದೇಹಗಳನ್ನು ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಎನ್‌ಕೌಂಟರ್ ನಡೆದ ಸ್ಥಳದಿಂದ ಹತರಾದ ಉಗ್ರರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಬುಧವಾರ ಮುಂಜಾನೆ ಉಗ್ರರು ಅಡಗಿರುವ ಮಾಹಿತಿ ತಿಳಿದು ಕಾರ್ಡನ್ ಸರ್ಚ್ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಕಾಶ್ಮೀರ ಪೊಲೀಸ್ ಟ್ವಿಟರ್ (X) ನಲ್ಲಿ ಪೋಸ್ಟ್ ಮಾಡಿದೆ.ಕುಜ್ಜರ್ ಪ್ರದೇಶದಲ್ಲಿ ಎನ್ಕೌಂಟರ್ ಬುಧವಾರ ಬೆಳಗ್ಗೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಚಲನವಲನವನ್ನು ಪತ್ತೆಹಚ್ಚುವ ಪ್ರಯತ್ನದ ಭಾಗವಾಗಿ ಭದ್ರತಾ ಪಡೆಗಳು ಕುಲ್ಗಾಮ್ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ದಾಳಿ ನಡೆಸಿದವು. ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯಿತು. ಕುಲ್ಗಾಮ್‌ನ ಕುಜ್ಜರ್ ಪ್ರದೇಶದಲ್ಲಿ ಎನ್‌ಕೌಂಟರ್ ಆರಂಭವಾಗಿದೆ. ಈ ಕಾರ್ಯಾಚರಣೆಯಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳು ಭಾಗವಹಿಸಿವೆ ಎಂದು ಕಾಶ್ಮೀರ ವಲಯ ಪೊಲೀಸ್ ಇಲಾಖೆ ತಿಳಿಸಿದೆ.ಇದನ್ನೂ ಓದಿ; Viral Video: ಆಸ್ಪತ್ರೆಯಲ್ಲಿ ರಿವಾಲ್ವರ್ ಹಿಡಿದು ಆಡಳಿತ ಪಕ್ಷದ ಎಂಎಲ್ಎ ಸುತ್ತಾಟ! ಕೇಳಿದ್ದಕ್ಕೆ ಇದು ನನ್ನ ಸ್ಟೈಲ್ ಎಂದ ಶಾಸಕಸೇನಾ ಸಿಬ್ಬಂದಿ ಗಾಯಗೊಳಿಸಿದ್ದ ಉಗ್ರರುರಜೌರಿ ಜಿಲ್ಲೆಯ ಕಲ್ಕೋಟೆ ಅರಣ್ಯ ಪ್ರದೇಶದಲ್ಲಿ ಅಡಗಿರುವ ಶಂಕಿತ ಉಗ್ರರಿಗಾಗಿ ಭದ್ರತಾ ಪಡೆ ಮೂರು ದಿನಗಳಿಂದ ಶೋಧ ನಡೆಸುತ್ತಿದೆ. ಸೋಮವಾರ ಉಗ್ರರು ಗುಂಡಿನ ದಾಳಿ ನಡೆಸಿದ್ದರಿಂದ ಇಬ್ಬರು ಸೇನಾ ಸಿಬ್ಬಂದಿ ಗಾಯಗೊಂಡಿದ್ದರು. ಹೀಗಾಗಿ ಭಯೋತ್ಪಾದಕರ ಬೇಟೆ ಆರಂಭವಾಗಿದೆ. ಅದಕ್ಕಾಗಿ ಸುಧಾರಿತ ತಂತ್ರಜ್ಞಾನ ಮತ್ತು ಕಣ್ಗಾವಲು ಉಪಕರಣಗಳನ್ನು ಬಳಸಲಾಗುತ್ತಿದೆ ಎಂದು ತಿಳಿದುಬಂದಿದೆ.ಕಳೆದ ತಿಂಗಳು ಮೂರು ಉಗ್ರರ ಹತ್ಯೆಇದೇ ಪ್ರದೇಶದಲ್ಲಿ ಉಗ್ರರ ವಿರುದ್ಧ ಜಮ್ಮುಕಾಶ್ಮೀರ ಪೊಲೀಸ್ ಹಾಗೂ ಸೇನೆ ಸೆಪ್ಟೆಂಬರ್ 13 ರಂದು ಜಂಟಿ ಕಾರ್ಯಾಚರಣೆ ನಡೆಸಿತ್ತು. ಆ ಯಶಸ್ವಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹೊಡೆದುರಿಳಿಸಲಾಗಿತ್ತು. ಮೇಜರ್ ಸೇರಿ ಮೂವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು. ಆದರೆ ಸ್ಥಳದಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳ ನಡೆ ಬಗ್ಗೆ ಗುಪ್ತಚರ ಇಲಾಖೆ ಅಕ್ಟೋಬರ್ 1 ರಂದು ಜಮ್ಮು ಮತ್ತು ಕಾಶ್ಮೀರ ಪೋಲೀಸ್ಗೆ ಮಾಹಿತಿ ನೀಡಿದ ನಂತರ ಈ ಕಾರ್ಯಾಚರಣೆ ನಡೆದಿದೆ.ಭದ್ರತಾ ಪಡೆಯಿಂದ ತಪ್ಪಿಸಿಕೊಳ್ಳು ತಪ್ಪಿಸಿಕೊಳ್ಳಲು ಭಯೋತ್ಪಾದಕರು ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ಚಕಮಕಿ ನಡೆದಂತಹ ಸಂದರ್ಭದಲ್ಲಿ ಇಬ್ಬರು ಸೇನಾ ಸಿಬ್ಬಂದಿಗೆ ಗಾಯಗಳಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
Post a Comment